
ತಿರುಮಲ[ಫೆ.01]: ಭಾರತದ ಅತ್ಯಂತ ಶ್ರೀಮಂತ ದೇಗುಲವಾದ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ 2019ನೇ ಸಾಲಿನಲ್ಲಿ ಪ್ರತಿ ದಿನ 3.18 ಕೋಟಿ ರು.ನಷ್ಟುಆದಾಯ ಬಂದಿದೆ.
ದೇಗುಲ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಟಿಟಿಡಿ ಬಿಡುಗಡೆ ಮಾಡಿರುವ ಲೆಕ್ಕಪತ್ರದ ಅನ್ವಯ 2019ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ದೇಗುಲಕ್ಕೆ 1161.74 ಕೋಟಿ ರು. ಹುಂಡಿ ಆದಾಯ ಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ 95 ಕೋಟಿ ರು. ನಷ್ಟುಏರಿಕೆಯಾಗಿದೆ. 2018ರಲ್ಲಿ ಪ್ರತಿ ನಿಮಿಷಕ್ಕೆ ದೇಗುಲಕ್ಕೆ 20290 ರು. ಆದಾಯ ಬಂದಿದ್ದರೆ, 2019ರಲ್ಲಿ ಅದು 22103 ರು.ಗೆ ಏರಿದೆ.
ಹುಂಡಿ ಆದಾಯದ ಹೊರತಾಗಿ ದೇಗುಲಕ್ಕೆ ಬ್ಯಾಂಕ್‌ನಲ್ಲಿ ಇಟ್ಟಠೇವಣಿಗೆ ಸಿಗುವ ಬಡ್ಡಿ ರೂಪದಲ್ಲಿ 857 ಕೋಟಿ ರು., ಪ್ರಸಾದ ಮಾರಾಟ ಮೂಲಕ 330 ಕೋಟಿ ರು., ದರ್ಶನ ಟಿಕೆಟ್ ಮೂಲಕ 233 ಕೋಟಿ ರು. ಆದಾಯ ಬಂದಿದೆ. 2019ನೇ ಸಾಲಿನಲ್ಲಿ ದೇಗುಲವು 6.45 ಕೋಟಿ ಭಕ್ತರಿಗೆ ಅನ್ನದಾನ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.