How To Cut Down Expenses: ಹೊಸ ವರ್ಷದಲ್ಲಿ ಖರ್ಚು ಕಡಿಮೆ ಮಾಡಿ ಸಾಲದ ಹೊರೆ ತಗ್ಗಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

By Suvarna NewsFirst Published Jan 11, 2022, 10:52 AM IST
Highlights

ಹೊಸ ವರ್ಷಕ್ಕೆ ನೀವು ಖರ್ಚು ತಗ್ಗಿಸೋ ರೆಸಲ್ಯೂಷನ್ ಕೈಗೊಂಡಿರಬಹುದು ಇಲ್ಲವೇ ಸಾಲದ ಹೊರೆ ತಗ್ಗಿಸಿಕೊಳ್ಳಲು ನಿರ್ಧರಿಸಿರಬಹುದು. ಆದ್ರೆ ಅದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ.

Business Desk: ಹೊಸ ವರ್ಷಕ್ಕೆ ಒಂದಿಷ್ಟು ರೆಸಲ್ಯೂಷನ್ ಗಳನ್ನು (Resolutions)ನೀವು ಕೈಗೊಂಡಿರಬಹುದು. ಅವುಗಳಲ್ಲಿ ಈ ವರ್ಷ ಖರ್ಚು (expenditure)  ತಗ್ಗಿಸಿ ಸಾಲವನ್ನು (Loan) ಕಡಿಮೆ ಮಾಡಿಕೊಳ್ಳೋದು ಕೂಡ ಸೇರಿರಬಹುದು. ಕೊರೋನಾ (Corona) ಅನೇಕರ ಆರ್ಥಿಕ (Economical) ಸ್ಥಿತಿಗತಿಯನ್ನೇ ಬದಲಾಯಿಸಿ ಬಿಟ್ಟಿದೆ. ಹೀಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟ  ಹೇಗೆ ಬೇಕಾದ್ರೂ ಯಾವ ರೂಪದಲ್ಲಿ ಬೇಕಾದ್ರೂ ನಮ್ಮನ್ನು ಆವರಿಸಿಕೊಳ್ಳೋ ಸಾಧ್ಯತೆಯಿದೆ. ಹೀಗಾಗಿ ಅನಗತ್ಯ ವೆಚ್ಚಗಳನ್ನು (Expenses)ತಗ್ಗಿಸಿ ಹಣವನ್ನು ಉಳಿತಾಯ ಮಾಡೋ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಹಣಕಾಸು ತಜ್ಞರು (Financial experts)ಸಲಹೆ ನೀಡಿದ್ದಾರೆ. 

ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯ (Hospital) ದುಬಾರಿ ವೆಚ್ಚವನ್ನು ಭರಿಸೋದು ಮಾತ್ರ ಆರ್ಥಿಕ ಸಂಕಷ್ಟವೆಂದು ಭಾವಿಸಬೇಡಿ. ಕಳೆದೆರಡು ವರ್ಷಗಳಿಂದ ಅದೆಷ್ಟು ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿಲ್ಲ ಹೇಳಿ? ಅದೆಷ್ಟು ವ್ಯಾಪಾರಿಗಳು (Businessman)ನಷ್ಟ(Loss) ಅನುಭವಿಸಿಲ್ಲ? ಇವೆಲ್ಲವೂ ಕೊರೋನಾದ ಮೂರನೇ ಅಲೆ ಸಂದರ್ಭದಲ್ಲೂ ಮರುಕಳಿಸಬಹುದು. ಹಾಗಾಗಿ ಸಾಲ ಮರುಪಾವತಿ Debt repayment), ಮಕ್ಕಳ ಶೈಕ್ಷಣಿಕ ವೆಚ್ಚ (Educational expenses) ಕಡಿತ ಮುಂತಾದ ಪ್ರಮುಖ ಆರ್ಥಿಕ ಜವಾಬ್ದಾರಿಗಳ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ. ತಿಂಗಳ ವೇತನ (Salar)ಅಥವಾ ಆದಾಯ (Income) ಬರಲಿ ಬಿಡಲಿ ಆದ್ರೆ ಈ ಆರ್ಥಿಕ ಜವಾಬ್ದಾರಿಗಳನ್ನುಸಮಯಕ್ಕೆ ಸರಿಯಾಗಿ ನಿರ್ವಹಿಸುವಂತೆ ವ್ಯವಸ್ಥೆ ಮಾಡಿಡೋದು ಅಗತ್ಯ.

Sovereign Gold Bond Scheme: 9ನೇ ಸರಣಿಯಲ್ಲಿ ಹೂಡಿಕೆಗೆ ಇಂದಿನಿಂದ ಅವಕಾಶ; ಪ್ರತಿ ಗ್ರಾಂ ಚಿನ್ನದ ದರ 4,786ರೂ

ಲೈಫ್ ಸ್ಟೈಲ್ ವೆಚ್ಚ ತಗ್ಗಿಸಿದ್ರೆ ಸಾಕಾಗಲ್ಲ
ಇತ್ತೀಚಿನ ದಿನಗಳಲ್ಲಿ ಲೈಫ್ ಸ್ಟೈಲ್ (Lifestyle) ವೆಚ್ಚ ಹೆಚ್ಚಿರೋದೇನೂ ನಿಜ. ಬಟ್ಟೆ (Clothes), ದುಬಾರಿ ವಸ್ತುಗಳು (expensive items), ಅಲಂಕಾರಿಕಾ ಸಾಮಗ್ರಿಗಳಿಗೆ ಕೆಲವರು ಸಿಕ್ಕಾಪಟ್ಟೆ ಹಣ ವ್ಯಯಿಸುತ್ತಾರೆ. ಇಂಥ ವೆಚ್ಚವನ್ನು ಖಂಡಿತವಾಗಲೂ ತಗ್ಗಿಸಬೇಕು. ಆದ್ರೆ ಇದರ ಜೊತೆಗೆ ನಿಮ್ಮ ಆದಾಯದಲ್ಲಿ ದೊಡ್ಡ ಪಾಲನ್ನು ಉಳಿತಾಯ ಮಾಡಲು ಉಳಿದ ಕೆಲವು ವೆಚ್ಚಗಳ ಬಗ್ಗೆಯೂ ಗಮನ ಹರಿಸೋದು ಅಗತ್ಯ. ಹಾಗಾದ್ರೆ ಅಂಥ ವೆಚ್ಚಗಳು ಯಾವುವು? ಅವುಗಳನ್ನು ತಗ್ಗಿಸೋದು ಹೇಗೆ? 

ಮನೆ ಬಾಡಿಗೆ ಹಣ ಉಳಿಸಿ
ತಜ್ಞರ ಪ್ರಕಾರ ಮನೆ ಬಾಡಿಗೆ (Rent) ಬಹುತೇಕರ ತಿಂಗಳ ದೊಡ್ಡ ವೆಚ್ಚದಲ್ಲಿ ಒಂದಾಗಿದೆ. ಹೀಗಾಗಿ ಮನೆ ಬಾಡಿಗೆಯಲ್ಲಿ ಒಂದಿಷ್ಟು ಉಳಿತಾಯ (Saving) ಮಾಡಲು ಯೋಜನೆ ರೂಪಿಸಬಹುದು. ಈಗ ಕೊರೋನಾ (Corona) ಕಾರಣಕ್ಕೆ ಬಹುತೇಕರಿಗೆ ಮನೆಯಿಂದಲೇ ಕೆಲಸ. ಹೀಗಾಗಿ ನಗರದ ಮಧ್ಯ ಭಾಗದಲ್ಲಿ ಹೆಚ್ಚು ಬಾಡಿಗೆ (Rent) ಪಾವತಿಸೋ ಬದಲು ನಗರದ (city) ಹೊರಭಾಗದಲ್ಲಿ (Outskirt) ಕಡಿಮೆ ಬಾಡಿಗೆಯ ಮನೆಗೆ ಶಿಫ್ಟ್ ಆಗಬಹುದು. ಇಲ್ಲವೇ ಊರಿನಲ್ಲಿರೋ ತಮದೆ-ತಾಯಿ ಮನೆಗೆ ಶಿಫ್ಟ್ ಆಗೋದು ಕೂಡ ಉತ್ತಮ ನಿರ್ಧಾರವೇ. ಇದ್ರಿಂದ ಮನೆ ಬಾಡಿಗೆಗೆ ವ್ಯಯಿಸೋ ಹಣ ಉಳಿತಾಯವಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸೋ ತನಕ ಇಂಥ ನಿರ್ಧಾರಗಳನ್ನು ಕೈಗೊಳ್ಳೋದು ಉತ್ತಮ ಎನ್ನುತ್ತಾರೆ ಆರ್ಥಿಕ ತಜ್ಞರು.

Republic Day Sales: ಲಾಕ್ಡೌನ್‌ ಭೀತಿ: 10 ದಿನ ಮುಂಚೆಯೇ ಸೇಲ್‌ ಆರಂಭಿಸಲಿರುವ ಅಮೆಝಾನ್, ಫ್ಲಿಪ್‌ಕಾರ್ಟ್!

ಕಡಿಮೆ ಬಡ್ಡಿ ಸಾಲ
ಒಂದು ವೇಳೆ ನೀವು ಅಧಿಕ ಬಡ್ಡಿಯ (Interest rate) ಸಾಲ ಹೊಂದಿದ್ರೆ ಬಡ್ಡಿದರವನ್ನು ಕಡಿಮೆಗೊಳಿಸೋ ಮಾರ್ಗದ ಬಗ್ಗೆ ಯೋಚಿಸಿ. ಉದಾಹರಣೆಗೆ ಕ್ರೆಡಿಟ್ ಕಾರ್ಡ್ (Credit card) ಸಾಲ, ವೈಯಕ್ತಿಕ ಸಾಲ (Personal loan) ಇತ್ಯಾದಿಗಳಿಗೆ ಹೆಚ್ಚಿನ ಬಡ್ಡಿ ಇರುತ್ತದೆ. ಇಂಥ ಸಮಯದಲ್ಲಿ ಕಡಿಮೆ ಬಡ್ಡಿದರ ಹೊಂದಿರೋ ಸಾಲಗಳನ್ನು (Debts) ಪಡೆಯೋದು ಉತ್ತಮ. ಇದ್ರಿಂದ ನಿಮ್ಮ ಮಾಸಿಕ ಇಎಂಐ (EMI) ಮೊತ್ತ ತಗ್ಗೋದರ ಜೊತೆ ಬಡ್ಡಿ ಹೊರೆಯೂ ಕಡಿಮೆಯಾಗುತ್ತದೆ. ಉದಾಹರಣೆಗೆ ಚಿನ್ನದ ಸಾಲ (Gold loan),  ಎಫ್ ಡಿ ಮೇಲೆ ಸಾಲ (FD loan), ವಾಹನ ಮುಂತಾದವುಗಳ ಮೇಲೆ ಸಾಲ ಪಡೆದು ಕ್ರೆಡಿಟ್ ಕಾರ್ಡ್ (Credit card) ಬಾಕಿಯಿರೋ ಬಿಲ್ ಅನ್ನು ಒಮ್ಮೆಗೆ ಪಾವತಿಸಿ ಬಿಡೋದು ಉತ್ತಮ. ಇದ್ರಿಂದ ಬಡ್ಡಿ ಹೊರೆ ಕಡಿಮೆಯಾಗುತ್ತದೆ.

ರೆಪೋ ಆಧಾರಿತ ಗೃಹ ಸಾಲಕ್ಕೆ ಬದಲಾಯಿಸಿ
ಒಂದು ವೇಳೆ ನೀವು ಎಂಸಿಎಲ್ ಆರ್ (MCLR) ಆಧಾರಿತ ಗೃಹಸಾಲದ (home loan) ಇಎಂಐ ಹೊಂದಿದ್ರೆ, ರೆಪೋ (Repo) ಲಿಂಕ್ಡ್ ಸಾಲಕ್ಕೆ ತಕ್ಷಣ ಬದಲಾಯಿಸಿಕೊಳ್ಳಿ. ಈ ಬಗ್ಗೆ ನೀವು ಸಾಲ ಪಡೆಯೋ ಬ್ಯಾಂಕಿಗೆ (Bank) ಒಂದು ಮನವಿ ಪತ್ರ ನೀಡಿದರೆ ಸಾಕು, ಅವರು ಬದಲಾಯಿಸಿ ಕೊಡುತ್ತಾರೆ. ಇಲ್ಲವಾದ್ರೆ ರೆಪೋ ಲಿಂಕ್ಡ್ ಸಾಲ ನೀಡೋ ಬೇರೆ ಬ್ಯಾಂಕಿಗೂ ನಿಮ್ಮ ಗೃಹ ಸಾಲವನ್ನು ವರ್ಗಾಯಿಸಬಹುದು. ಇದ್ರಿಂದ ಇಎಂಐ ಮೊತ್ತ ತಗ್ಗೋ ಜೊತೆ ಬಡ್ಡಿ ಹೊರೆಯೂ ಕಡಿಮೆಯಾಗುತ್ತದೆ. 
 

click me!