ಮಾರ್ಚ್ ಮುಗಿಯುತ್ತಿದೆ, ತೆರಿಗೆ ಉಳಿಸಲು ನೀವೇನು ಮಾಡಿದ್ದೀರಿ?

By Web DeskFirst Published Mar 25, 2019, 5:40 PM IST
Highlights

ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್ 61 ನ ಸೆಕ್ಷನ್ 80 ಸಿ ಪ್ರಕಾರ ನೀವು ಹೂಡಿಕೆ ಮಾಡಿದರೆ ತೆರಿಗೆ ಉಳಿಸಬಹುದು. ಉದಾಹರಣೆಗೆ ನಿಮ್ಮ ಆದಾಯ 6.50 ಲಕ್ಷ ಅಂತಿಟ್ಟುಕೊಳ್ಳಿ. ನೀವು 1.50 ಲಕ್ಷವನ್ನು ನಿಗದಿತ ಹೂಡಿಕೆಗಳಲ್ಲಿ ಹೂಡಿದರೆ ತೆರಿಗೆ ಕಟ್ಟಬೇಕಾದ ಆದಾಯ 5.00 ಲಕ್ಷ ಆಗುತ್ತದೆ.

ಬೆಂಗಳೂರು (ಮಾ. 25): ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಫೈನಾನ್ಷಿಯಲ್ ಇಯರ್ ಅಂತ ಕರೆಯಲಾಗುತ್ತದೆ ಅನ್ನುವುದು ಬಹುತೇಕರಿಗೆ ಗೊತ್ತಿದೆ. ನಾವು ಸಾಮಾನ್ಯ ಜನ ಈ ಫೈನಾನ್ಷಿಯಲ್ ವರ್ಷದಲ್ಲಿ ಎಷ್ಟು ಆದಾಯ ಗಳಿಸುತ್ತೇವೆ ಅದಕ್ಕೆ ತಕ್ಕಂತೆ ಆದಾಯ ತೆರಿಗೆಯನ್ನು ಇಲಾಖೆಗೆ ಕಟ್ಟಬೇಕು. ಇದಕ್ಕೆ ತಪ್ಪಿದರೆ ಶಿಕ್ಷೆ ಅಥವಾ ದಂಡ ಸಿಗುತ್ತದೆ.

ಸದ್ಯ ಎರಡೂವರೆ ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಮುಂದಿನ ವರ್ಷದಿಂದ ಐದು ಲಕ್ಷ ಆದಾಯಕ್ಕೆ ತೆರಿಗೆ ವಿನಾಯತಿ ದೊರೆಯಲಿದೆ. ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ಆದಾಯ ಇದ್ದವರು ತೆರಿಗೆ ಕಟ್ಟಬೇಕು. ಆದರೆ ಅದರಲ್ಲೂ ನಾವು ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಇದೆ. ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಅಷ್ಟು ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದು. ಅದಕ್ಕೂ ಮಿತಿಗಳಿವೆ.

ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್ 61ನ ಸೆಕ್ಷನ್ 80 ಸಿ ಪ್ರಕಾರ ನೀವು ಹೂಡಿಕೆ ಮಾಡಿದರೆ ತೆರಿಗೆ ಉಳಿಸಬಹುದು. ಉದಾಹರಣೆಗೆ ನಿಮ್ಮ ಆದಾಯ 6.50 ಲಕ್ಷ ಅಂತಿಟ್ಟುಕೊಳ್ಳಿ. ನೀವು 1.50 ಲಕ್ಷವನ್ನು ನಿಗದಿತ ಹೂಡಿಕೆಗಳಲ್ಲಿ
ಹೂಡಿದರೆ ನಿಮ್ಮ ತೆರಿಗೆ ಕಟ್ಟಬೇಕಾದ ಆದಾಯ 5.00 ಲಕ್ಷ ಆಗುತ್ತದೆ.

ಯಾವ ಥರದ ಹೂಡಿಕೆ ಮಾಡಬಹುದು?

ಜನರಲ್ ಇನ್ಷುರೆನ್ಸ್- ಮೆಡಿಕಲ್ ಇನ್ಷುರೆನ್ಸ್ ಜನರಲ್ ಇನ್ಷುರೆನ್ಸ್ ಪಾಲಿಸಿ ತೆಗೆದುಕೊಳ್ಳುವುದು ಕೂಡ ಹೂಡಿಕೆ. ಅಲ್ಲದೇ ಮೆಡಿಕಲ್ ಇನ್ಷುರೆನ್ಸ್ ಕೂಡ ಹೂಡಿಕೆ ಅನ್ನಿಸಿಕೊಳ್ಳುತ್ತದೆ. ವರ್ಷಕ್ಕೆ 40 ಸಾವಿರದಷ್ಟು ಮೆಡಿಕಲ್ ಇನ್ಷುರೆನ್ಸ್ ಪಾಲಿಸಿ ಮಾಡಬಹುದು.

ನ್ಯಾಷನಲ್ ಪೆನ್ಷನ್ ಸ್ಕೀಮ್‌ಗಳು

ಸುಮಾರು ೫೦ ಸಾವಿರ ರೂಪಾಯಿಯಷ್ಟು ಹಣವನ್ನು ನ್ಯಾಷನಲ್ ಪೆನ್ಷನ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬಹುದು. ಅಷ್ಟು ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.

ಮನೆ ಸಾಲ

ಮನೆ ಸಾಲ ಪಡೆದುಕೊಂಡಿದ್ದರೆ ಅದರ ಅಸಲು ಹಣದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಅಲ್ಲದೇ 2 ಲಕ್ಷ ಬಡ್ಡಿ ಕಟ್ಟಿದ್ದರೆ ಅದರ ಮೇಲೆಯೂ ತೆರಿಗೆ ವಿನಾಯಿತಿ ಸಿಗುತ್ತದೆ.

ಬಾಂಡ್‌ಗಳು

ಬ್ಯಾಂಕ್‌ಗಳಲ್ಲಿ, ಅಂಚೆ ಕಚೇರಿಗಳಲ್ಲಿ ಸೇವಿಂಗ್ಸ್ ಬಾಂಡ್‌ಗಳನ್ನು ತೆಗೆದುಕೊಳ್ಳಬಹುದು. ಈಗ ಎಸ್‌ಬಿಐ ಬ್ಯಾಂಕ್‌ನಲ್ಲಿಯೂ ತೆರಿಗೆ ಉಳಿಸಲು ಬಾಂಡ್ ಪಡೆಯಬಹುದು. ಇಂತಿಷ್ಟು ವರ್ಷಗಳಿಗೆ ದುಡ್ಡು ಈ ಬಾಂಡ್‌ಗಳ ಮೂಲಕ ಹೂಡಿಕೆ ಮಾಡಿಡಬೇಕು.

ಪಿಪಿಎಫ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಳ್ಳೆಯ ಆಯ್ಕೆ.

ಈ ಒಂದು ವಾರದಲ್ಲಿ ಏನು ಮಾಡಬಹುದು?

ಈ ಫೈನಾನ್ಷಿಯಲ್ ಇಯರ್ ಮುಗಿಯುವುದಕ್ಕೆ ಇನ್ನು ಒಂದು ವಾರ ಬಾಕಿ ಇದೆ. ಈ ಮೇಲೆ ಹೇಳಿದ ಯಾವುದನ್ನೂ ಮಾಡದೇ ಇರುವವರು ನಮ್ಮ ನಿಮ್ಮಲ್ಲೇ ಸುಮಾರು ಮಂದಿ ಇರುತ್ತಾರೆ. ಈಗ ಅರ್ಜೆಂಟಾಗಿ ಏನಾದರೂ ಹೂಡಿಕೆ ಮಾಡಲೇಬೇಕು ಅಂದುಕೊಳ್ಳುತ್ತಿರುವವರಿಗೆ ಈಗಲೂ ಕೆಲವು ಆಯ್ಕೆಗಳಿವೆ.

1. ತಕ್ಷಣಕ್ಕೆ ಇನ್ಸುರೆನ್ಸ್ ಪಾಲಿಸಿಗಳನ್ನು ಮಾಡಬಹುದು. ಮೆಡಿಕಲ್ ಇನ್ಸುರೆನ್ಸ್ ಕೂಡ ಒಳ್ಳೆಯ ಆಯ್ಕೆಯೇ.
2. ಬ್ಯಾಂಕ್‌ಗಳಲ್ಲಿ, ಅಂಚೆ ಕಚೇರಿಗಳಲ್ಲಿ ತಕ್ಷಣವೇ ಬಾಂಡ್‌ಗಳನ್ನು ಖರೀದಿಸಬಹುದು.
3. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ಗಳಲ್ಲೂ ಹೂಡಿಕೆ ಮಾಡಬಹುದು.
4. ಬ್ಯಾಂಕುಗಳಲ್ಲಿ ಫಿಕ್ಸ್‌ಡ್ ಡಿಪಾಸಿಟ್ ಇಡಬಹುದು.

ಹೆಚ್ಚಿನ ಮಾಹಿತಿಗೆ  9341652630

click me!