ಆರ್ಥಿಕ ನೆರವು: ಕರ್ಣಾಟಕ ಬ್ಯಾಂಕ್‌-ಹ್ಯುಂಡೈ ಸಂಸ್ಥೆ ಜತೆ ಒಡಂಬಡಿಕೆ

By Kannadaprabha News  |  First Published Nov 26, 2022, 9:00 AM IST

ವಿವಿಧ ಶ್ರೇಣಿಯ ನಿರ್ಮಾಣ ಯಂತ್ರ, ಸಲಕರಣೆ ಖರೀದಿಗೆ ಆರ್ಥಿಕ ನೆರವು


ಮಂಗಳೂರು(ನ.26):  ದೇಶದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ ತನ್ನ ಎಂಎಸ್‌ಎಂಇ ಗ್ರಾಹಕರ ಅನುಕೂಲಕ್ಕಾಗಿ ನಿರ್ಮಾಣ ಯಂತ್ರ/ಸಲಕರಣೆ ಹಾಗೂ ಭೂಮಿ ಅಗೆತಕ್ಕೆ ಸಂಬಂಧಿಸಿದ ಬೃಹತ್‌ ಯಂತ್ರ ತಯಾರಕ ಸಲಕರಣೆಯನ್ನು ಉತ್ಪಾದಿಸುತ್ತಿರುವ ‘ಹ್ಯುಂಡೈ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಜತೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿದೆ. ಈ ಒಡಂಬಡಿಕೆಯಿಂದಾಗಿ ಕರ್ಣಾಟಕ ಬ್ಯಾಂಕ್‌, ಹ್ಯುಂಡೈ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಆದ್ಯತೆಯ ಹಣಕಾಸುದಾರ ಬ್ಯಾಂಕ್‌ ಆಗಿ ಸ್ಪರ್ಧಾತ್ಮಕ ಬಡ್ಡಿ ದರದ ಮೂಲಕ ಈ ಸಂಸ್ಥೆಯ ವಿವಿಧ ಶ್ರೇಣಿಯ ನಿರ್ಮಾಣ ಯಂತ್ರ/ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಿದೆ.

ಒಡಂಬಡಿಕೆಯನ್ನು ಅಂಗೀಕರಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ ಎಂ.ಎಸ್‌. ಅವರು ಶ್ರೇಷ್ಠತೆ, ಸಮಗ್ರತೆ, ದೀರ್ಘಾವಧಿ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಬದ್ಧತೆಗೆ ಹೆಸರು ವಾಸಿಯಾಗಿರುವ ಕರ್ಣಾಟಕ ಬ್ಯಾಂಕ್‌, ಅದೇ ರೀತಿಯ ತತ್ವ್ವಗಳನ್ನು ಅಳವಡಿಸಿಕೊಂಡಿರುವ ಹ್ಯುಂಡೈ ಸಂಸ್ಥೆ ಜತೆ ಒಡಂಬಡಿಕೆಯನ್ನು ಮಾಡಿಕೊಂಡಿರುವುದು ಸಂತಸ ತಂದಿದೆ. ನಮ್ಮ ಬ್ಯಾಂಕ್‌ ಎಂಎಸ್‌ಎಂಇ ಗ್ರಾಹಕರಿಗೆ ನೆರವು ನೀಡುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ಎಂಎಸ್‌ಎಂಇ ಗ್ರಾಹಕರಿಗೆ ನಿರ್ಮಾಣ ಯಂತ್ರ/ಸಲಕರಣೆ ಹಾಗೂ ಭೂಮಿ ಅಗೆತಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಖರೀದಿಸುವಲ್ಲಿ ಈ ಒಡಂಬಡಿಕೆಯು ಮತ್ತಷ್ಟುಸಹಕಾರಿಯಾಗಲಿದೆ. 

Tap to resize

Latest Videos

Karnataka Bank ಗೆ ₹412 ಕೋಟಿ ನಿವ್ವಳ ಲಾಭ!

ಕರ್ಣಾಟಕ ಬ್ಯಾಂಕ್‌ ವಿವಿಧ ಹಣಕಾಸು ಯೋಜನೆಗಳನ್ನು ಒದಗಿಸಿ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ ಮೂಲಕ ಆಕರ್ಷಕ ಬಡ್ಡಿದರ ಮತ್ತು ತ್ವರಿತ ಸಾಲ ಮಂಜೂರಾತಿಯ ವ್ಯವಸ್ಥೆಯನ್ನು ಮಾಡಿದ್ದು ಗ್ರಾಹಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ಬ್ಯಾಂಕಿನ ಚೀಫ್‌ ಬಿಸಿನೆಸ್‌ ಆಫೀಸರ್‌ ಗೋಕುಲ್‌ದಾಸ್‌ ಪೈ, ಜನರಲ್‌ ಮ್ಯಾನೇಜರ್‌ಗಳು, ಹ್ಯುಂಡೈ ಸಂಸ್ಥೆಯ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ವಿಭಾಗದ ಉಪಾಧ್ಯಕ್ಷ ರಾಜೀವ ಚತುರ್ವೇದಿ ಹಾಗೂ ಬ್ಯಾಂಕಿನ ಮತ್ತು ಹ್ಯುಂಡೈನ ಇತರ ಉನ್ನತ ಅಧಿಕಾರಿಗಳು ಇದ್ದರು.

click me!