ಸಾವಿರಾರು ರೂ. ಕ್ರಿಡಿಟ್ ಬಿಲ್ ಪೇ ಮಾಡಿದವನಿಗೆ ಇಷ್ಟು ಕ್ಯಾಶ್ ಬ್ಯಾಕ್ ಸಿಗೋದಾ? ಏನು ಹೇಳ್ಬೇಕು ಇದಕ್ಕೆ?

Published : May 15, 2024, 03:11 PM IST
ಸಾವಿರಾರು ರೂ. ಕ್ರಿಡಿಟ್ ಬಿಲ್ ಪೇ ಮಾಡಿದವನಿಗೆ ಇಷ್ಟು ಕ್ಯಾಶ್ ಬ್ಯಾಕ್ ಸಿಗೋದಾ? ಏನು ಹೇಳ್ಬೇಕು ಇದಕ್ಕೆ?

ಸಾರಾಂಶ

ಆನ್ಲೈನ್ ಅಪ್ಲಿಕೇಷನ್ ನಲ್ಲಿ ಹಣ ಪಾವತಿ ಮಾಡೋದು ಸಾಮಾನ್ಯ ಸಂಗತಿ. ಜನರು ಇದಕ್ಕೆ ಕ್ಯಾಶ್ಬ್ಯಾಕ್ ಪಡೆಯುತ್ತಾರೆ ಎಂಬ ಜಾಹೀರಾತನ್ನು ಕಂಪನಿ ನೀಡುತ್ತೆ ನಿಜ ಆದ್ರೆ ಬೆಟರ್ ಲಕ್ ನೆಕ್ಸ್ಟ್ ಟೈಂ ಅಂತ ಬರೋದೇ ಹೆಚ್ಚು. ಈ ಕಂಪನಿ ಮಾತ್ರ ಮಹಾ ಕ್ಯಾಶ್ಬ್ಯಾಕ್ ನೀಡಿದೆ.  

ಡಿಜಿಟಲ್ ಯುಗದಲ್ಲಿ ಜನರು ಕ್ಯಾಶ್ ಇಟ್ಟು ಕೊಳ್ಳೋದು ಅಪರೂಪ. ಹಾಲಿಗಿರಲಿ ಇಲ್ಲಿ ತರಕಾರಿ, ದುಬಾರಿ ಬೆಲೆ ವಸ್ತುಗಳನ್ನು ಖರೀದಿ ಮಾಡಿರಲಿ ಇಲ್ಲವೇ ಮನೆ ಬಾಡಿಗೆ, ಕ್ರೆಡಿಟ್ ಕಾರ್ಡ್ ಪಾವತಿ ಇರಲಿ ಜನರು ಆನ್ಲೈನ್ ಅಪ್ಲಿಕೇಷನ್ ಬಳಕೆ ಮಾಡ್ತಾರೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ನಾನಾ ಆನ್ಲೈನ್ ವಹಿವಾಟಿಗೆ ಅನೇಕ ಅಪ್ಲಿಕೇಶನ್ ಲಭ್ಯವಿದೆ. ಜನರು ಆನ್ಲೈನ್ ಅಪ್ಲಿಕೇಷನ್ ಮೂಲಕ ವಹಿವಾಟು ನಡೆಸಿದಾಗ ಕಂಪನಿಗಳು ಕ್ಯಾಶ್ಬ್ಯಾಕ್ ನೀಡುತ್ತವೆ.

ಅಪ್ಲಿಕೇಷನ್ (Application) ಆರಂಭದಲ್ಲಿ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಅನೇಕ ಅಪ್ಲಿಕೇಷನ್ ಗಳು ದೊಡ್ಡ ಮಟ್ಟದಲ್ಲೇ ಕ್ಯಾಶ್ಬ್ಯಾಕ್ (Cashback) ನೀಡಿದ್ದವು. ಆದ್ರೀಗ ಕ್ಯಾಶ್ಬ್ಯಾಕ್ ಬದಲು ಆಫರ್ ಗಳ ಅಬ್ಬರ ಜಾಸ್ತಿಯಾಗಿದೆ. ನೀವು ಸಾಕಷ್ಟು ವೋಚರ್ ಗಳನ್ನು ಇದ್ರಲ್ಲಿ ಪಡೆಯಬಹುದು. ದೊಡ್ಡ ಮಟ್ಟದ ಹಣ ಪಾವತಿಯಾದಾಗ ಕ್ಯಾಶ್ಬ್ಯಾಕ್ ಆಸೆಯೊಂದು ಮನಸ್ಸಿನಲ್ಲಿರುತ್ತದೆ. ಈ ವ್ಯಕ್ತಿ ಕೂಡ ಕ್ರೆಡಿಟ್ ಕಾರ್ಡ್ (Credit Card)  ಬಿಲ್ ಪಾವತಿಸಲು 87 ಸಾವಿರ ರೂಪಾಯಿಯನ್ನು ಆನ್ಲೈನ್ ಅಪ್ಲಿಕೇಷನ್ ಸಹಾಯದಿಂದ ಪಾವತಿ ಮಾಡಿದ್ದಾನೆ. ಆದ್ರೆ ಆತನಿಗೆ ಸಿಕ್ಕ ಕ್ಯಾಶ್ಬ್ಯಾಕ್ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಳಕೆದಾರರು ನಾನಾ ಕಮೆಂಟ್ ಮಾಡಿದ್ದಾರೆ. ಕಂಪನಿ ಕೆಲಸವನ್ನು ಅವರು ವಿರೋಧಿಸಿದ್ದಲ್ಲದೆ ಅದ್ರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮೊಬೈಲ್ ಕರೆ ಭಾರೀ ದುಬಾರಿ..?

ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಪಾವತಿಸಲು ವ್ಯಕ್ತಿ ಫಿನ್‌ಟೆಕ್ ಕಂಪನಿ ಕ್ರೆಡ್ ಅಪ್ಲಿಕೇಷನ್ ಬಳಸಿದ್ದಾನೆ. ಕ್ರೆಡಿಟ್ ಕಾರ್ಡ್ ಬಿಲ್ 87000 ರೂಪಾಯಿಯನ್ನು ಕ್ರೆಡ್ ಅಪ್ಲಿಕೇಷನ್ ಮೂಲಕ ಪಾವತಿಸಿದ್ದಾನೆ. ಆದ್ರೆ ಆತನಿಗೆ ಇಷ್ಟೊಂದು ಹಣ ಪಾವತಿ ಮಾಡಿದ್ರೂ ಕೇವಲ ಒಂದು ರೂಪಾಯಿ ಕ್ಯಾಶ್ಬ್ಯಾಕ್ ಸಿಕ್ಕಿದೆ. 

ಎಕ್ಸ್ ನ ಗುರ್ಜೋತ್ ಅಹ್ಲುವಾಲಿಯಾ (Gurjot Ahluwalia) ಖಾತೆಯಲ್ಲಿ ವ್ಯಕ್ತಿ ಈ ವಿಷ್ಯವನ್ನು ಹಂಚಿಕೊಂಡಿದ್ದಾನೆ. 87,000 ರೂಪಾಯಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದ ನಂತ್ರ ಬಂದ ಮಹಾ ಕ್ಯಾಶ್ಬ್ಯಾಕ್ ಒಂದು ರೂಪಾಯಿ. ಕ್ರೆಡಿಟ್‌ನೊಂದಿಗೆ ಡೇಟಾ ಹಂಚಿಕೊಳ್ಳುವುದನ್ನು ನಿಲ್ಲಿಸಲು ಮತ್ತು ಬ್ಯಾಂಕ್ ಪೋರ್ಟಲ್‌ನಿಂದ ನೇರವಾಗಿ ಪಾವತಿಸಲು ಸಮಯ ಇದು ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. 

ಎಕ್ಸ್ ನಲ್ಲಿ ಅವರ ಈ ಪೋಸ್ಟ್ ವೈರಲ್ ಆಗಿದೆ. ಈವರೆಗೆ 7.2 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬಳಕೆದಾರರು ಕ್ರೆಡ್ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಅಪ್ಲಿಕೇಷನ್ ನಿಂದ ನಗಣ್ಯ ಕ್ಯಾಶ್ಬ್ಯಾಕ್ ಪಡೆದಿರೋದಾಗಿ ಬಳಕೆದಾರರೊಬ್ಬರು ಹೇಳಿದ್ದಾರೆ. ಕ್ರೆಡ್, ಬಳಕೆದಾರರ ಡೇಟಾ ಸಂಗ್ರಹ ಮಾಡುತ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಬಳಕೆದಾರರ ಇಮೇಲ್ ಐಡಿಯನ್ನು ಕಂಪನಿ ಕೇಳುತ್ತಿದೆ. ಇಮೇಲ್ ಏಕೆ ಬೇಕು ಎಂದು ನಾನು ಪ್ರಶ್ನೆ ಮಾಡಿದ್ದೆ. ನೀವು ಇಮೇಲ್ ಐಡಿ ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಅಪ್ಲಿಕೇಷನ್ ಡೌನ್ಲೋಡ್ (Application Download) ಮಾಡ್ತಿದ್ದಂತೆ ಅನುಮಾನ ವ್ಯಕ್ತವಾಯ್ತು. ಹಾಗಾಗಿ ಅದನ್ನು ಅನ್ ಇನ್ಸ್ಟಾಲ್ (Uninstall) ಮಾಡಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಜನರ ಡೇಟಾವನ್ನು ಕಂಪನಿ ಮಾರುತ್ತಿದೆ ಎಂಬ ಆರೋಪವೂ ಕಮೆಂಟ್ ನಲ್ಲಿ ಕೇಳಿ ಬಂದಿದೆ. ಕಂಪನಿಯ ಪ್ರೀಮಿಯಂ ಗ್ರಾಹಕ ನಾನಾಗಿದ್ದು, ನನಗೆ ನಾಲ್ಕು ರೂಪಾಯಿ ಕ್ಯಾಶ್ಬ್ಯಾಕ್ ಬಂದಿದೆ. ಥ್ಯಾಂಕ್ಯೂ ಗಾಡ್ ಎಂದು ಇನ್ನೊಬ್ಬ ಬಳಕೆದಾರ ತಮಾಷೆ ಮಾಡಿದ್ದಾನೆ. 

ದಿನಕ್ಕೆ 7ರೂ.ಗಳಿಸುತ್ತಿದ್ದ ವ್ಯಕ್ತಿ ಈಗ 3 ಕೋಟಿ ವಹಿವಾಟು ನಡೆಸೋ ಸಂಸ್ಥೆ ಒಡೆಯ;ಈತನ ಕಥೆ ಸಿನಿಮಾಕ್ಕಿಂತಲೂ ರೋಚಕ

ಕ್ರೆಡ್ ಒಂದು ಅಪ್ಲಿಕೇಷನ್ ಆಗಿದೆ. ಈ ಆ್ಯಪ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬಹುದು. ಇದ್ರಿಂದ ನಿಮಗೆ ಕ್ಯಾಶ್‌ಬ್ಯಾಕ್ ಹೊರತುಪಡಿಸಿ  ಅನೇಕ ಬಹುಮಾನ ಸಿಗುತ್ತದೆ ಎಂದು ಕಂಪನಿ ಹೇಳಿದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನೀವು ಪಾವತಿಸುವಷ್ಟು ಕ್ರೆಡಿಟ್ ನಾಣ್ಯಗಳನ್ನು ನೀವು ಪಡೆಯಬಹುದು ಮತ್ತು ವಿವಿಧ ಕಂಪನಿಗಳಿಂದ ಉಚಿತ ಅಥವಾ ರಿಯಾಯಿತಿಯ ಬಹುಮಾನಗಳನ್ನು ಪಡೆಯಬಹುದು.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್
ಸ್ಟಾರ್‌ಲಿಂಕ್‌ ಇಂಟರ್ನೆಂಟ್‌ ವೆಬ್‌ಸೈಟ್‌ ಆರಂಭ, 30 ದಿನದ ಫ್ರೀ ಟ್ರಯಲ್‌ ಜೊತೆ ರಿಚಾರ್ಜ್‌ ಘೋಷಿಸಿದ ಮಸ್ಕ್‌ ಕಂಪನಿ!