ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ

Suvarna News   | Asianet News
Published : Mar 20, 2022, 09:24 PM IST
ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ  ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ

ಸಾರಾಂಶ

*ವಿಶಿಷ್ಟ ನಾಣ್ಯ, ನೋಟಿಗೆ ಆನ್ ಲೈನ್ ಹರಾಜಿನಲ್ಲಿ ಭಾರೀ ಬೇಡಿಕೆ *ಮನೆಯಲ್ಲೇ ಕುಳಿತು ಹಳೆಯ ವಿಶೇಷ ನಾಣ್ಯ ಅಥವಾ ನೋಟು ಮಾರಿ ಕೋಟ್ಯಂತರ ರೂ. ಗಳಿಸಬಹುದು *ಆನ್ ಲೈನ್ ನಲ್ಲಿ ಹಳೆಯ ನೋಟು, ನಾಣ್ಯ ಮಾರಾಟ ತುಂಬಾ ಸುಲಭ

ನವದೆಹಲಿ (ಮಾ.20): ನಾಣ್ಯ ಸಂಗ್ರಹಿಸೋ ಹವ್ಯಾಸ ನಿಮಗೆ ಆದಾಯದ ಮೂಲವೂ ಆಗಬಲ್ಲದು. ಹೌದು, ಇತ್ತೀಚಿನ ದಿನಗಳಲ್ಲಿ ವಿಶೇಷ ನಾಣ್ಯಗಳಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಅಪರೂಪದ ನಾಣ್ಯಗಳು ಹಾಗೂ ನೋಟುಗಳನ್ನು ಹರಾಜು ಹಾಕೋ ಮೂಲಕ ಲಕ್ಷಾಂತರ ರೂಪಾಯಿ ಗಳಿಸಬಹುದು. ಕೆಲವು ತಿಂಗಳ ಹಿಂದೆ 1 ರೂ. ನಾಣ್ಯ ಹರಾಜಿನಲ್ಲಿ 10 ಕೋಟಿ ರೂ. ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 

ಅರೇ, 1 ರೂಪಾಯಿಗೆ 10 ಕೋಟಿ ಮೌಲ್ಯವೇ? ಇದು ಸುಳ್ಳು ಸುದ್ದಿ ಎಂದು ನೀವು ಭಾವಿಸಬಹುದು. ಆದ್ರೆ ಇದು ಸಾಮಾನ್ಯ ಒಂದು ರೂಪಾಯಿ ಅಲ್ಲ. ಇದೊಂದು ವಿಶಿಷ್ಟ ಒಂದು ರೂಪಾಯಿ ನಾಣ್ಯವಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತವಿರೋ ಸಮಯದಲ್ಲಿ ಚಾಕ್ತಿಯಲ್ಲಿದ್ದ ವಿಶೇಷ ಒಂದು ರೂಪಾಯಿ ನಾಣ್ಯ ಇದಾಗಿದೆ. ಈ ನಾಣ್ಯವನ್ನು1885ರಲ್ಲಿ ತಯಾರಿಸಲಾಗಿತ್ತು. ಒಂದು ವೇಳೆ ನೀವು ಕೂಡ 1885 ರಲ್ಲಿ ಟಂಕಿಸಲ್ಪಟ್ಟ ಒಂದು ರೂಪಾಯಿ ನಾಣ್ಯ ಹೊಂದಿದ್ರೆ ಆನ್ ಲೈನ್ ಹರಾಜಿನ ಮೂಲಕ ಮಾರಾಟ ಮಾಡಿ ಹಣ ಗಳಿಸಬಹುದು. 

Earn Money:ಈ 5ರೂ.ನೋಟು ನಿಮ್ಮ ಬಳಿಯಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು!

ಹಳೆಯ ನೋಟು, ನಾಣ್ಯ ಮಾರಾಟ ಮಾಡೋದು ಹೇಗೆ?
ಅನೇಕ ವರ್ಷಗಳಿಂದ ಪುರಾತನ ಕಾಲದ ನಾಣ್ಯಗಳು ಹಾಗೂ ನೋಟುಗಳ ಆನ್ ಲೈನ್ ಹರಾಜು (Online auction) ನಡೆಯುತ್ತಿದೆ. ಕೆಲವರು ಈ ಆನ್ ಲೈನ್ ಹರಾಜಿನ ಮೂಲಕ ತಮ್ಮ ಬಳಿಯಿರೋ ಹಳೆಯ ಹಾಗೂ ಅಪರೂಪದ ನಾಣ್ಯಗಳ ಬದಲಿಗೆ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ ಕೂಡ. ಕ್ವಿಕರ್ (Quickr),ಇ-ಬೇ (eBay)ಅಥವಾ ಒಎಲ್ ಎಕ್ಸ್ (Olx)ಮೂಲಕ ನೀವು ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಸುಲಭವಾಗಿ  ಮಾರಾಟ ಮಾಡಬಹುದು. ಅದು ಹೇಗೆ? ಅಂತೀರಾ ಇಲ್ಲಿದೆ ನೋಡಿ ಹಂತ ಹಂತವಾದ ಮಾಹಿತಿ.
-ಮೊದಲಿಗೆ ನೀವು ಮಾರಾಟ ಮಾಡಲು ಬಯಸೋ ಕರೆನ್ಸಿಯ ಸ್ಪಷ್ಟ ಫೋಟೋ ತೆಗೆಯಿರಿ.
-ಆ ನಂತರ ಈ ಫೋಟೋವನ್ನು eBay ಅಥವಾ OLXನಲ್ಲಿ ಅಪ್ ಲೋಡ್ (Upload)ಮಾಡಿ.
-ಆ ಕಂಪನಿ ನಿಮ್ಮ ಮಾರಾಟಕ್ಕಿರೋ ನಾಣ್ಯ ಅಥವಾ ನೋಟಿನ ಜಾಹೀರಾತನ್ನು ಪ್ರಕಟಿಸುತ್ತದೆ. 
*ಈ ಜಾಹೀರಾತನ್ನು ನೋಡಿ ಆಸಕ್ತ ಜನರು ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಖರೀದಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ. 
-ನೀವು ಅವರೊಂದಿಗೆ ನೇರವಾಗಿ ಮಾತನಾಡಿ, ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಬಹುದು. 
ಹೀಗೆ ನೀವು ನಿಮ್ಮ ಬಳಿಯಿರೋ ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡೋ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಬಹುದು.

RBI ಎಚ್ಚರಿಕೆಗಳೇನು?
ಹಳೆಯ ನೋಟು ಹಾಗೂ ನಾಣ್ಯಗಳ ಆನ್ ಲೈನ್  ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿ ಆರ್ ಬಿಐ ಕೆಲವು ಮಾರ್ಗಸೂಚಿ ಹಾಗೂ ಎಚ್ಚರಿಕೆ ಸಂದೇಶಗಳನ್ನು ಸಾರ್ವಜನಿಕರಿಗೆ ರವಾನಿಸಿದೆ ಕೂಡ. 'ಕೆಲವು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹೆಸರು ಹಾಗೂ ಲೋಗೋವನ್ನು ಅಕ್ರಮವಾಗಿ ಬಳಸಿಕೊಂಡು ಹಳೆಯ ಬ್ಯಾಂಕಿನ ನೋಟುಗಳು ಹಾಗೂ ನಾಣ್ಯಗಳ ಆನ್ ಲೈನ್ ಹಾಗೂ ಆನ್ ಲೈನ್ ಹೊರತಾದ ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿದ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿರೋದು ಅಥವಾ ಕಮೀಷನ್ ಅಥವಾ ತೆರಿಗೆ ಪಡೆಯುತ್ತಿರೋದು ಆರ್ ಬಿಐ ಗಮನಕ್ಕೆ ಬಂದಿದೆ' ಎಂದು ಆರ್ ಬಿಐ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ ಕೂಡ.  ಅಷ್ಟೇ ಅಲ್ಲ, ಇಂಥ ವ್ಯವಹಾರಗಳಲ್ಲಿ ಆರ್ ಬಿಐ ಭಾಗಿಯಾಗಿಲ್ಲ. ಅಲ್ಲದೆ, ಇಂಥ ವಹಿವಾಟುಗಳ ಮೇಲೆ ಯಾವುದೇ ಶುಲ್ಕಗಳು ಅಥವಾ ಕಮೀಷನ್ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ ಕೂಡ.

Rs 1 coin: 1 ರೂಪಾಯಿಯ ಈ ವಿಶೇಷ ನಾಣ್ಯ ನಿಮ್ಮಲಿದ್ಯಾ? 2.5 ಲಕ್ಷ ರೂ. ಗಳಿಸುವ ಅವಕಾಶ, ಇಲ್ಲಿದೆ ವಿವರ

ಕೆಲವು ವರದಿಗಳ ಪ್ರಕಾರ ಕಳೆದ ವರ್ಷ 1018 ವರ್ಷಗಳಷ್ಟು ಹಳೆಯದಾದ ಮೆಕ್ಕಾ ಮದೀನದ ನಾಣ್ಯವು  2.5  ಕೋಟಿ ರೂ.ಗೆ ಹರಾಜಾಗಿದೆ. ಈ ನಾಣ್ಯದ ಮೇಲೆ ಮೆಕ್ಕಾ ಮದೀನದ ಚಿತ್ರವಿರೋ ಜೊತೆ 786 ಎಂಬ ಸಂಖ್ಯೆಯೂ ಇತ್ತು. ಮಾತಾ ವೈಷ್ಣೋದೇವಿ ಮಂದಿರದ ಮಂಡಳಿಗೆ ಸೇರಿದ ನಾಣ್ಯವೊಂದು  50ಲಕ್ಷ ರೂ.ಗೆ ಮಾರಾಟವಾಗಿದೆ. ಈ ನಾಣ್ಯದ ಮೇಲೆ ದುರ್ಗೆಯ ಚಿತ್ರವಿತ್ತು. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!