
ನವದೆಹಲಿ(ಮಾ.20): ಸಗಟು ಗ್ರಾಹಕರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ. ಹೆಚ್ಚಳವಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಸಗಟು ಗ್ರಾಹಕರಿಗೆ ಮಾರಾಟ ಮಾಡುವ ಡೀಸೆಲ್ ಪ್ರತಿ ಲೀಟರ್‌ಗೆ 25 ರೂಪಾಯಿಗಳಷ್ಟು ದುಬಾರಿಯಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ, ಪೆಟ್ರೋಲ್ ಪಂಪ್‌ಗಳ ಮೂಲಕ ಮಾರಾಟವಾಗುವ ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈ ತಿಂಗಳು ಪೆಟ್ರೋಲ್ ಪಂಪ್‌ಗಳ ಮಾರಾಟದಲ್ಲಿ ಶೇಕಡಾ 20 ರಷ್ಟು ಜಿಗಿತ ಕಂಡುಬಂದಿದೆ. ಬಸ್ ಫ್ಲೀಟ್ ನಿರ್ವಾಹಕರು ಮತ್ತು ಮಾಲ್‌ಗಳಂತಹ ಸಗಟು ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಂದ ಇಂಧನವನ್ನು ಖರೀದಿಸಿದ್ದಾರೆ. ಸಾಮಾನ್ಯವಾಗಿ ಅವರು ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಂದ ಇಂಧನವನ್ನು ಸಂಗ್ರಹಿಸುತ್ತಾರೆ. ಇದರಿಂದ ಇಂಧನವನ್ನು ಚಿಲ್ಲರೆಯಾಗಿ ಮಾರಾಟ ಮಾಡುವ ಕಂಪನಿಗಳ ನಷ್ಟ ಹೆಚ್ಚಿದೆ. ಅದರಲ್ಲೂ ನೈರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಕಂಪನಿಗಳು ಹೆಚ್ಚು ಪರಿಣಾಮ ಬೀರಿವೆ. ಮಾರಾಟವನ್ನು ಹೆಚ್ಚಿಸಿದರೂ, ಈ ಕಂಪನಿಗಳು ಇನ್ನೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈಗ ಪಂಪ್‌ಗಳು ಕಾರ್ಯನಿರ್ವಹಿಸಲು ಆರ್ಥಿಕವಾಗಿ ಲಾಭದಾಯಕವಾಗುವುದಿಲ್ಲ ಎಂಬುವುದು ಉಲ್ಲೇಖನೀಯ.
ಕಚ್ಚಾತೈಲ ದರ 140 ಡಾಲರ್‌ನಿಂದ 99.84 ಡಾಲರ್‌ಗೆ ಭಾರೀ ಇಳಿಕೆ!
ದಾಖಲೆಯ 136 ದಿನಗಳಿಂದ ಇಂಧನ ಬೆಲೆ ಏರಿಕೆಯಾಗದ ಕಾರಣ, ಈ ದರಗಳಲ್ಲಿ ಹೆಚ್ಚಿನ ಇಂಧನವನ್ನು ಮಾರಾಟ ಮಾಡುವ ಬದಲು ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವುದು ಕಂಪನಿಗಳಿಗೆ ಹೆಚ್ಚು ಪ್ರಾಯೋಗಿಕ ಆಯ್ಕೆಯಾಗಿದೆ ಎಂಬುವುದು ತಜ್ಞರ ಮಾತಾಗಿದೆ. 2008 ರಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಎಲ್ಲಾ 1,432 ಪೆಟ್ರೋಲ್ ಪಂಪ್‌ಗಳನ್ನು ಮಾರಾಟವು 'ಶೂನ್ಯ'ಕ್ಕೆ ಇಳಿಸಿದ ನಂತರ ಮುಚ್ಚಿತು. ಇಂದಿಗೂ ಅದೇ ಪರಿಸ್ಥಿತಿ ಚಾಲ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಬೃಹತ್ ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಂದ ಖರೀದಿಸುತ್ತಿದ್ದಾರೆ. ಇದರಿಂದಾಗಿ ಈ ಚಿಲ್ಲರೆ ವ್ಯಾಪಾರಿಗಳ ನಷ್ಟ ಹೆಚ್ಚುತ್ತಿದೆ.
ಮುಂಬೈನಲ್ಲಿ, ಡೀಸೆಲ್ ದರವು ಬೃಹತ್ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 122.05 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಲೀಟರ್‌ಗೆ 94.14 ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ, ದೆಹಲಿಯ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 86.67 ರೂ.ಗಳಾಗಿದ್ದು, ಸಗಟು ಅಥವಾ ಕೈಗಾರಿಕಾ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 115 ರೂ. ಆಗಿದೆ.
ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ನವೆಂಬರ್ 4, 2021 ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿಲ್ಲ. ಆದಾಗ್ಯೂ, ಈ ಅವಧಿಯಲ್ಲಿ ಜಾಗತಿಕವಾಗಿ ಇಂಧನ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂಧನ ಬೆಲೆಯನ್ನು ಹೆಚ್ಚಿಸಲಾಗಿಲ್ಲ ಎಂದು ಹೇಳಲಾಗಿದೆ.
Petrol- Diesel Price: ತಕ್ಷಣವೇ ಪೆಟ್ರೋಲ್ ದರ ಏರಿಕೆಗೆ ಕೇಂದ್ರದ ತಡೆ!
ಮಾರ್ಚ್ 10 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದ್ದು, ಅದರ ನಂತರವೂ ಸಂಸತ್ತಿನ ಎರಡನೇ ಹಂತದ ಬಜೆಟ್ ಅಧಿವೇಶನದ ಕಾರಣ ಪ್ರಸ್ತುತ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಬೃಹತ್ ಗ್ರಾಹಕರು ಮತ್ತು ಪೆಟ್ರೋಲ್ ಪಂಪ್ ಬೆಲೆಗಳಲ್ಲಿ ರೂ.25 ರ ಭಾರಿ ವ್ಯತ್ಯಾಸದಿಂದಾಗಿ, ಬೃಹತ್ ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಂದ ಇಂಧನವನ್ನು ಖರೀದಿಸುತ್ತಿದ್ದಾರೆ. ಅವರು ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಂದ ಟ್ಯಾಂಕರ್‌ಗಳನ್ನು ಬುಕ್ ಮಾಡುತ್ತಿಲ್ಲ. ಇದರಿಂದಾಗಿ ಪೆಟ್ರೋಲಿಯಂ ಕಂಪನಿಗಳ ನಷ್ಟ ಮತ್ತಷ್ಟು ಹೆಚ್ಚಿದೆ.
ಈ ಸಂಬಂಧ ಕಳುಹಿಸಲಾದ ಇ-ಮೇಲ್‌ಗಳಿಗೆ ನೈರಾ ಎನರ್ಜಿ ಪ್ರತಿಕ್ರಿಯಿಸಲಿಲ್ಲ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಬೇಡಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ಜಿಯೋ-ಬಿಪಿ ಹೇಳಿದೆ. ಚಿಲ್ಲರೆ ಮತ್ತು ಕೈಗಾರಿಕಾ ಬೆಲೆಯಲ್ಲಿ ಲೀಟರ್‌ಗೆ 25 ರೂ.ಗಳ ವ್ಯತ್ಯಾಸದಿಂದಾಗಿ, ಸಗಟು ಗ್ರಾಹಕರು ಚಿಲ್ಲರೆ ಪೆಟ್ರೋಲ್ ಪಂಪ್‌ಗಳಿಂದಲೂ ಖರೀದಿಸುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.