life insurance tips: ಲೈಫ್ ಇನ್ಶೂರೆನ್ಸ್: ಖರೀದಿಸುವಾಗ ಈ 10 ಅಂಶಗಳು ನೆನಪಿಡಿ!

Published : Mar 20, 2025, 07:20 AM ISTUpdated : Mar 20, 2025, 07:23 AM IST
life insurance tips: ಲೈಫ್ ಇನ್ಶೂರೆನ್ಸ್: ಖರೀದಿಸುವಾಗ ಈ 10 ಅಂಶಗಳು ನೆನಪಿಡಿ!

ಸಾರಾಂಶ

ಲೈಫ್ ಇನ್ಶೂರೆನ್ಸ್ ಕೇವಲ ಕುಟುಂಬದ ರಕ್ಷಣೆ ಮಾತ್ರವಲ್ಲ, ಉಳಿತಾಯದ ಮಾರ್ಗವೂ ಹೌದು. ಹೆಚ್‌ಡಿಎಫ್‌ಸಿ ಲೈಫ್‌ನ ವಿಶಾಲ್ ಸುಭರ್‌ವಾಲ್ ಅವರು ಲೈಫ್ ಇನ್ಶೂರೆನ್ಸ್ ಖರೀದಿಸುವಾಗ ಗಮನಿಸಬೇಕಾದ 10 ಮುಖ್ಯ ಅಂಶಗಳನ್ನು ತಿಳಿಸಿದ್ದಾರೆ.

ಲೈಫ್ ಇನ್ಶೂರೆನ್‌ ಅನ್ನುವುದು ಒಂದು ರೀತಿಯಲ್ಲಿ ಕುಟುಂಬದವರಿಗೆ ಏನೂ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ವಿಧಾನವೂ ಹೌದು. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಉಳಿತಾಯ ಸೂತ್ರವೂ ಹೌದು. ಬಹಳಷ್ಟು ಮಂದಿ ಲೈಫ್ ಇನ್ಶೂರೆನ್ಸ್ ಖರೀದಿಸಲು ಆಲೋಚಿಸುತ್ತಿದ್ದರೂ ಅವರಿಗೆ ಸರಿಯಾದ ಸಲಹೆ, ಸೂಚನೆ ಸಿಕ್ಕಿರುವುದಿಲ್ಲ. ಅಂಥವರಿಗೆಂದೇ ಹೆಚ್‌ಡಿಎಫ್‌ಸಿ ಲೈಫ್ ಸಂಸ್ಥೆಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಸ್ಟ್ರಾಟೆಜಿ, ಡಿಸ್ಟ್ರಿಬ್ಯೂಷನ್, ಪ್ಲಾನಿಂಗ್, ಇ-ಕಾಮರ್ಸ್ ವಿಭಾಗದ ಗ್ರೂಪ್ ಹೆಡ್ ವಿಶಾಲ್ ಸುಭರ್‌ವಾಲ್ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಆ ಕೆಲವು ಸಲಹೆಗಳು ಇಲ್ಲಿವೆ-

1. ಪ್ರತಿಯೊಬ್ಬರಿಗೂ ಅವರದೇ ಆದ ಹ್ಯೂಮನ್ ಲೈಫ್ ವ್ಯಾಲ್ಯೂ (ಹೆಚ್ ಎಲ್ ವಿ) ಇರುತ್ತದೆ. ಅದನ್ನು ಲೆಕ್ಕಾಚಾರದ ಮೂಲಕ ತಿಳಿಯಬಹುದು. ಹಾಗಾಗಿ ನಿಮ್ಮ ಹೆಚ್‌ಎಲ್‌ವಿ ಎಷ್ಟು ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಜೀವ ವಿಮೆಯನ್ನು ಖರೀದಿಸಿ.
2. ನೀವು ಬದುಕಿನ ಯಾವ ಹಂತದಲ್ಲಿದ್ದೀರಿ ಎಂಬುದನ್ನು ಅವಲೋಕಿಸಿ. ಜೊತೆಗೆ ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನೀವು ಹೊಂದಿರುವ ಆರ್ಥಿಕ ಗುರಿ ಇತ್ಯಾದಿಗಳಿಗೆ ಅನುಗುಣವಾಗಿ ಜೀವ ವಿಮೆ ಉತ್ಪನ್ನಗಳನ್ನು ಆಯ್ಕೆ ಮಾಡಿ.

3. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಪಾಲಿಸಿಯ ಅವಧಿ ಮತ್ತು ಪ್ರೀಮಿಯಂ ಮೊತ್ತವನ್ನು ನಿರ್ಧರಿಸಿ.
4. ಅತ್ಯಂತ ಕಡಿಮೆ ಬೆಲೆಯ ಯೋಜನೆಗೆ ಮಾರು ಹೋಗದಿರಿ. ಯಾಕೆಂದರೆ ಆ ಯೋಜನೆ ನಿಮಗೆ ಸೂಕ್ತ ಆಗಿರಲಿಕ್ಕಿಲ್ಲ ಎಂಬುದನ್ನು ಗಮನದಲ್ಲಿಡಿ.

5. ಪಾಲಿಸಿಯ ನಿಯಮಗಳನ್ನು ಎಚ್ಚರಿಕೆಯಿಂದ ಓದಿ. ಷರತ್ತುಗಳನ್ನು ಹುಷಾರಾಗಿ ಪರಿಶೀಲಿಸಿ.
6. ಉತ್ತಮ ಪ್ರಯೋಜನ ಮತ್ತು ರಿಸ್ಕ್ ಕವರ್ ಒದಗಿಸುವ ಆಡ್- ಆನ್ ರೈಡರ್‌ ಗಳನ್ನು ಕೂಡ ಖರೀದಿಸಿ.

7. ಅರ್ಜಿ ಫಾರ್ಮ್ ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ. ಪೂರ್ಣ ವಿವರಗಳನ್ನು ಸಲ್ಲಿಸಿ.
8. ನಿಮ್ಮ ಪಾಲಿಸಿಗೆ ನಾಮಿನಿ ಹೆಸರಿಸುವುದನ್ನು ಮರೆಯದಿರಿ. ಆ ನಾಮಿನಿ ಕೂಡ ಅದರ ಬಗ್ಗೆ ತಿಳಿದಿರುವಂತೆ ನೋಡಿಕೊಳ್ಳಿ.

9. ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇ-ವಿಮೆ ಖಾತೆಯಲ್ಲಿ (ಇಐಎ) ಸೇವ್ ಮಾಡಿ.
10. ಪಾಲಿಸಿಗಳು 30 ದಿನಗಳ ಫ್ರೀಲುಕ್ ಆಫರ್‌ನೊಂದಿಗೆ ಬರುತ್ತವೆ, ಆ ಕಡೆಗೂ ಗಮನ ಇರಲಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!