ಭಾರತೀಯ ರೈಲ್ವೆಯ ಎರಡು ಅಂಗಸಂಸ್ಥೆಗಳಾದ ಐಆರ್ ಎಫ್ ಸಿ ಹಾಗೂ ಆರ್ ವಿಎನ್ ಎಲ್ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಬರೀ ಒಂದೇ ವರ್ಷದಲ್ಲಿ ಶೇ..450 ರಿಟರ್ನ್ಸ್ ಸಿಕ್ಕಿದೆ.
ಮುಂಬೈ (ಏ.4): ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರ ಅದೃಷ್ಟ ಯಾವಾಗ ಹೇಗೆ ಖುಲಾಯಿಸುತ್ತದೆ ಎಂದು ಹೇಳಲಾಗದು. ಇದಕ್ಕೆ ಈ ಎರಡೂ ಷೇರುಗಳಲ್ಲಿ ಹೂಡಿಕೆ ಮಾಡಿದವರೇ ಸಾಕ್ಷಿ. ಭಾರತೀಯ ರೈಲ್ವೆಯ ಈ ಎರಡು ಸಂಸ್ಥೆಗಳ ಷೇರುಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಶೇ.450ರಷ್ಟು ರಿಟರ್ನ್ಸ್ ನೀಡಿವೆ. ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್ ಎಫ್ ಸಿ) ಹಾಗೂ ರೈಲ್ ವಿಕಾಸ್ ನಿಗಮ ಲಿಮಿಟೆಡ್ (ಆರ್ ವಿಎನ್ ಎಲ್) ಸಾರ್ವಜನಿಕ ವಲಯದ ಸಂಸ್ಥೆಗಳಾಗಿದ್ದು, ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡುತ್ತಿವೆ. ಒಂದು ವರ್ಷದೊಳಗೆ ಈ ರೈಲ್ವೆ ಷೇರುಗಳು ಶೇ.100ಕ್ಕೂ ಅಧಿಕ ರಿಟರ್ನ್ಸ್ ನೀಡಿವೆ. ಐಆರ್ ಸಿಎಫ್ ಷೇರು ಒಂದು ವರ್ಷದಲ್ಲಿ ಶೇ.444 ರಿಟರ್ನ್ಸ್ ನೀಡಿದೆ. ಇನ್ನು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆರ್ ವಿಎನ್ ಎಲ್ ಷೇರುಗಳು ಶೇ.782ಕ್ಕೂ ಅಧಿಕ ರಿಟರ್ನ್ಸ್ ನೀಡಿವೆ.
ಐಆರ್ ಎಫ್ ಸಿ ಅನ್ನು ಭಾರತೀಯ ರೈಲ್ವೆಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸುವ ಮೂಲಕ ರೈಲ್ವೆಯ ವಾರ್ಷಿಕ ಯೋಜನೆಗಳಿಗೆ ಐಆರ್ ಎಫ್ ಸಿ ನೆರವು ನೀಡಿದೆ. ಹಾಗೆಯೇ ಬಜೆಟ್ ಹೊರತುಪಡಿಸಿದ ಹೆಚ್ಚುವರಿ ವೆಚ್ಚಗಳನ್ನು ನಿಭಾಯಿಸಲು ಕೂಡ ಈ ನಿಧಿ ನೆರವು ನೀಡುತ್ತಿದೆ. ಐಆರ್ ಎಫ್ ಸಿ ಭಾರತೀಯ ರೈಲ್ವೆಯ ಅಗತ್ಯಗಳನ್ನು ಮಾರುಕಟ್ಟೆಯಿಂದ ಸ್ಪರ್ಧಾತ್ಮಕ ದರದಲ್ಲಿ ಸಾಲವನ್ನು ಪಡೆಯುವ ಮೂಲಕ ಪೂರ್ಣಗೊಳಿಸುತ್ತಿದೆ. ಐಆರ್ ಎಫ್ ಸಿ ನೆರವಿನೊಂದಿಗೆ ಭಾರತೀಯ ರೈಲ್ವೆ ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ಅಥವಾ ಹೊಸ ರೈಲ್ವೆಗಳನ್ನು ಪರಿಚಯಿಸಲುನೆರವು ನೀಡುತ್ತಿದೆ. ಮಾ.29ರಂದು ಆರ್ ವಿಎನ್ ಎಲ್ ಹಾಗೂ ಖಾಸಗಿ ಉಕ್ಕು ಕಂಪನಿ ಸಲ್ಸಾರ್ ಟೆಕ್ನೋ ಇಂಜಿನಿಯರಿಂಗ್ ರವಂಡದಲ್ಲಿ 60 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಪಡೆದಿವೆ.
ಐಆರ್ ಎಫ್ ಸಿ ರಿಟರ್ನ್ಸ್
ಒಂದು ವರ್ಷದಲ್ಲಿ ಐಆರ್ ಎಫ್ ಸಿ ಷೇರುಗಳು ಶೇ.444 ರಷ್ಟು ರಿಟರ್ನ್ಸ್ ನೀಡಿವೆ. ಒಂದು ವೇಳೆ ಒಬ್ಬ ವ್ಯಕ್ತಿ ಈ ಷೇರಿನಲ್ಲಿ ಕಳೆದ ವರ್ಷ ಒಂದು ಲಕ್ಷ ರೂ. ಹೂಡಿಕೆ ಮಾಡಿದ್ರೆ ಈಗ ಆತ 4ಲಕ್ಷ ರೂ. ವಿತ್ ಡ್ರಾ ಮಾಡಬಹುದು. ಕಳೆದ ಮೂರು ವರ್ಷಗಳಲ್ಲಿ ಈ ರೈಲ್ವೆ ಷೇರು ಶೇ. 533ರಷ್ಟು ರಿಟರ್ನ್ಸ್ ನೀಡಿವೆ. ಕಳೆದ ಮೂರು ತಿಂಗಳಲ್ಲಿ ಈ ಸಂಸ್ಥೆ ಷೇರುಗಳು ಶೇ.44ರಷ್ಟು ರಿಟರ್ನ್ಸ್ ನೀಡಿವೆ. ಆದರೆ, ಕಳೆದ ತಿಂಗಳು ಈ ಸಾರ್ವಜನಿಕ ವಲಯದ ಕಂಪನಿ ಷೇರು ಶೇ.1.7ರಷ್ಟು ಇಳಿಕೆ ದಾಖಲಿಸಿದೆ.
ಆದಾಯ ತೆರಿಗೆ ಇಲಾಖೆಯಿಂದ 6329 ಕೋಟಿ ರೀಫಂಡ್ ಸ್ವೀಕರಿಸಲಿರುವ ಇನ್ಫೋಸಿಸ್!
ಆರ್ ವಿಎನ್ ಎಲ್ ರಿಟರ್ನ್ಸ್
ರೈಲ್ವೆ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಆರ್ ವಿಎನ್ ಎಲ್ ಷೇರುಗಳು ಒಂದು ವರ್ಷದಲ್ಲಿ ಶೇ.281ರಷ್ಟು ರಿಟರ್ನ್ಸ್ ನೀಡಿವೆ. ಕಳೆದ ಮೂರು ತಿಂಗಳಲ್ಲಿ ಈ ರೈಲ್ವೆ ಷೇರಿನ ಬೆಲೆಯಲ್ಲಿ ಶೇ.43ರಷ್ಟು ಏರಿಕೆಯಾಗಿದೆ. ಅದೇರೀತಿ ಕಳೆದ ಮೂರು ವರ್ಷಗಳಲ್ಲಿ ಆರ್ ವಿಎನ್ ಎಲ್ ಷೇರುಗಳಯ ಹೂಡಿಕೆದಾರರಿಗೆ ಶೇ.782ಕ್ಕಿಂತ ಹೆಚ್ಚಿನ ರಿಟರ್ನ್ಸ್ ನೀಡಿವೆ. ಈ ವರ್ಷದ ಜನವರಿಯಲ್ಲಿ ಈ ಕಂಪನಿಯ ಷೇರಿನ ಬೆಲೆ 52 ವರ್ಷಗಳ ಅತ್ಯಧಿಕ ಮಟ್ಟಕ್ಕೆ ತಲುಪಿತ್ತು.
ಗಣಿಗಾರಿಕೆ ಪ್ರದೇಶಗಳು, ಸಿಮೆಂಟ್ ಸ್ಥಾವರಗಳಿಗೆ ರೈಲು ಸಂಪರ್ಕವನ್ನು ಸುಧಾರಿಸಲು 2024-31 ರ ಆರ್ಥಿಕ ವರ್ಷಗಳಲ್ಲಿ ₹ 5.25 ಲಕ್ಷ ಕೋಟಿ ಹೂಡಿಕೆ ಪಡೆಯಲು ಕೇಂದ್ರ ರೈಲ್ವೆ ಸಚಿವಾಲಯದ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಯೋಜನೆಯ ನಂತರ ರೈಲ್ವೇ ಷೇರುಗಳು ಏರುತ್ತಿವೆ.