ಬಿಲಿಯನೇರ್ ಮುಕೇಶ್ ಅಂಬಾನಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೋಟಿಗಟ್ಟಲೆ ಉದ್ಯಮವನ್ನು ಮುಕೇಶ್ ಅಂಬಾನಿಯ ಕುಟುಂಬ ಅಲ್ಟ್ರಾ ಲಕ್ಸುರಿಯಸ್ ಬಂಗಲೆಯಲ್ಲಿ ವಾಸಿಸುತ್ತಿದೆ. ಆದ್ರೆ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಬಿಸಿನೆಸ್‌ನಲ್ಲಿ ಫೈಲ್ಯೂರ್ ಆಗುತ್ತಲೇ ಹೋಗುತ್ತಿದ್ದಾರೆ. ಆದ್ರೆ ಇವರ ಐಷಾರಾಮಿ ಬಂಗಲೆ ಎಲ್ಲರನ್ನೂ ನಿಬ್ಬೆರಗಾಗಿಸುವಂತಿದೆ.
ರಿಲಯನ್ಸ್ ಗ್ರೂಪ್‌ನ ಅಧ್ಯಕ್ಷರಾದ ಅನಿಲ್ ಅಂಬಾನಿ ಭಾರತದ ಅತ್ಯಂತ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ದಿವಂಗತ ಉದ್ಯಮಿ ಧೀರೂಭಾಯಿ ಅಂಬಾನಿಯವರ ಕಿರಿಯ ಪುತ್ರ ಮತ್ತು ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿಯವರ ಸಹೋದರ. ಧೀರೂಭಾಯಿ ಅಂಬಾನಿ ನಿಧನದ ನಂತರ, ಇಬ್ಬರು ಸಹೋದರರು ದೂರವಾಗಿದ್ದರು. ಮುಕೇಶ್ ಅಂಬಾನಿ, ಬಿಸಿನೆಸ್‌ನಲ್ಲಿ ಉನ್ನತ ಸ್ಥಾನಕ್ಕೇರಿದ್ದು, ಅನಿಲ್ ಅಂಬಾನಿಗೆ ಸಾಕಷ್ಟು ಸಂಕಷ್ಟಗಳು ಎದುರಾದವು.
ಅನಿಲ್ ಅಂಬಾನಿ ತನ್ನ ಕಂಪನಿಯಾದ ರಿಲಯನ್ಸ್ ಕ್ಯಾಪಿಟಲ್‌ನ್ನು ಹಿಂದೂಜಾ ಬ್ರದರ್ಸ್‌ಗೆ 2023ರಲ್ಲಿ ಮಾರಾಟ ಮಾಡಲು ಯೋಚಿಸುತ್ತಿದ್ದಾರೆ ಎಂಬ ವದಂತಿ, ಉದ್ಯಮಿ ಸಾಕಷ್ಟು ಆರ್ಥಿಕ ತೊಂದರೆಯಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಕೆಲ ವರ್ಷಗಳಿಂದ ಅನಿಲ್ ಅಂಬಾನಿ ಹಲವಾರು ಸವಾಲುಗಳ ನಡುವೆಯೂ ಕುಟುಂಬ ಸಮೇತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪತ್ನಿ ಟೀನಾ ಅಂಬಾನಿ ಮತ್ತು ಇಬ್ಬರು ಪುತ್ರರೊಂದಿಗೆ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ರಿಲಯನ್ಸ್ ಕಂಪೆನಿಗಳಲ್ಲಿ ಅನಿಲ್-ಮುಖೇಶ್ ಸೇರಿ ಅಂಬಾನಿ ಕುಟುಂಬದವರ ಪಾತ್ರ, ಒಬ್ಬೊಬ್ಬರ ನಿವ್ವಳ ಮೌಲ್ಯವೆಷ್ಟು?
ಬರೋಬ್ಬರಿ 17 ಅಂತಸ್ತಿನ ಬಂಗಲೆ ಹೊಂದಿರುವ ಅನಿಲ್ ಅಂಬಾನಿ
2022ರ ಫೆಬ್ರವರಿ 20ರಂದು ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಅವರ ಹಿರಿಯ ಮಗ ಜೈ ಅನ್ಮೋಲ್ ಕ್ರಿಶಾ ಶಾ ಅವರನ್ನು ವಿವಾಹವಾದರು ಅನಿಲ್ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಅಂಬಾನಿ ಅವರೊಂದಿಗೆ ಐದು ಜನರ ಕುಟುಂಬ ಮುಂಬೈನ ಐಷಾರಾಮಿ ಮನೆಯಲ್ಲಿ ಶಾಂತಿಯುತವಾಗಿ ವಾಸಿಸುತ್ತಿದೆ. ಇದು ಬರೋಬ್ಬರಿ 17 ಅಂತಸ್ತಿನ ಐಷಾರಾಮಿ ಮನೆಯಾಗಿದೆ. ಆಸ್ತಿಯು 16,000 ಚದರ ಅಡಿಗಳಲ್ಲಿ ಹರಡಿಕೊಂಡಿದೆ ಮತ್ತು ಮುಂಬೈನ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಒಂದಾಗಿದೆ.
ಅನಿಲ್ ಅಂಬಾನಿಯ ಈ ಐಷಾರಾಮಿ ಮನೆ ಮುಂಬೈನ ಪಾಲಿ ಹಿಲ್ಸ್‌ನಲ್ಲಿದೆ. ಐಷಾರಾಮಿ ವಾಸಸ್ಥಾನವು 66 ಮೀಟರ್ ಎತ್ತರವಾಗಿದೆ. ಅನಿಲ್ ಅಂಬಾನಿ ಅದನ್ನು 150 ಮೀಟರ್‌ಗೆ ಏರಿಸಲು ಬಯಸಿದ್ದರು. ಆದರೆ ಅಧಿಕಾರಿಗಳಿಂದ ಅಗತ್ಯವಾದ ಅನುಮತಿ ಇದಕ್ಕೆ ದೊರಕಲ್ಲಿಲ್ಲ. ಇದಲ್ಲದೆ, ಅನಿಲ್ ಅಂಬಾನಿ ಅವರ ಐಷಾರಾಮಿ ಮನೆಯು ಹೆಲಿಪ್ಯಾಡ್, ಲಾಂಜ್ ಪ್ರದೇಶ ಮತ್ತು ಬೃಹತ್ ಪಾರ್ಕಿಂಗ್ ಅನ್ನು ಸಹ ಹೊಂದಿದೆ.ಅನಿಲ್ ಅಂಬಾನಿ ಅವರ ಮನೆಯ ಹೆಚ್ಚಿನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿಲ್ಲದಿದ್ದರೂ, ಅವರ ಪತ್ನಿ ಟೀನಾ ಅಂಬಾನಿ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿರುವ ಫೋಟೋಗಳು ಎಲ್ಲರ ಗಮನ ಸೆಳೆಯುತ್ತದೆ.
ಅಂಬಾನಿ ತಂಗಿ ಅಂದ್ರೆ ಸುಮ್ನೇನಾ, ಕೋಟಿ ಕೋಟಿ ವ್ಯವಹಾರ ನಿರ್ವಹಿಸೋ ಯಶಸ್ವೀ ಉದ್ಯಮಿ ನೀನಾ!
ಅನಿಲ್ ಅಂಬಾನಿಯ ಐಷಾರಾಮಿ ಕಾರುಗಳ ಕಲೆಕ್ಷನ್
ಭಾರತದ ಅತ್ಯಂತ ದುಬಾರಿ ಕಾರುಗಳಿಂದ ತುಂಬಿರುವ ಅನಿಲ್ ಅಂಬಾನಿಯವರ ಗ್ಯಾರೇಜ್ ಗಮನ ಸೆಳೆಯುತ್ತದೆ. ವರದಿಗಳ ಪ್ರಕಾರ, ಪೋರ್ಷೆ, ಆಡಿ ಕ್ಯೂ7, ಮರ್ಸಿಡಿಸ್ ಜಿಎಲ್‌ಕೆ 350, ಲೆಕ್ಸಸ್ ಎಕ್ಸ್‌ಯುವಿ ಮತ್ತು ರೋಲ್ಸ್ ರಾಯ್ಸ್‌ನಂತಹ ಅದ್ದೂರಿ ಕಾರುಗಳು ಅನಿಲ್ ಅಂಬಾಯ್ ಅವರ ಗ್ಯಾರೇಜ್‌ನಲ್ಲಿ ನಿಲುಗಡೆಯಾಗಿದೆ. ಇದು ನಿಜಕ್ಕೂ ಕಾರುಗಳ ಬೃಹತ್ ಸಂಗ್ರಹವಾಗಿದೆ..
ಅನಿಲ್ ಅಂಬಾನಿಯ ಪಾಲಿ ಹಿಲ್ಸ್ ಮನೆಯ ಬೆಲೆ 5000 ಕೋಟಿ ರೂ.
ಬಹು ಮಾಧ್ಯಮ ವರದಿಗಳ ಪ್ರಕಾರ, ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಅನಿಲ್ ಅಂಬಾನಿ ಅವರ ಐಷಾರಾಮಿ ಮನೆ ಮೌಲ್ಯ ರೂ. 5000 ಕೋಟಿ. ಹೌದು, ಹಲವು ಉದ್ಯಮಗಳು ಲಾಸ್ ಆಗಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಅನಿಲ್ ಅಂಬಾನಿ ಮುಂಬೈನ ಅತ್ಯಂತ ದುಬಾರಿ ಆಸ್ತಿಗಳನ್ನು ಹೊಂದಿದ್ದಾರೆ. ಅನಿಲ್ ಅಂಬಾನಿ ಅವರ ಹಿರಿಯ ಸಹೋದರ, ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಅವರ ಮನೆಗೆ ಹೋಲಿಸಿದರೆ ಇದು ಬಹಳ ಚಿಕ್ಕದಾಗಿದೆ.