2020 ಕಲಿಕೆಯ ವರ್ಷ; ಕೊರೋನಾ ಕಲಿಸಿದ ಈ ಆರ್ಥಿಕ ಪಾಠವನ್ನು ಎಂದಿಗೂ ಮರೆಯಬೇಡಿ

By Suvarna News  |  First Published Dec 29, 2020, 1:30 PM IST

2020 ಎಂದೂ ಮರೆಯದ ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿರೋ ಜೊತೆ ನೆನಪಿನಲ್ಲಿ ಉಳಿಯುವಂತಹ ಒಂದಿಷ್ಟು ಪಾಠಗಳನ್ನೂ ಕಲಿಸಿದೆ.ಅದ್ರಲ್ಲೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈ ವರ್ಷ ಕಲಿತ ಪಾಠಗಳನ್ನು ಪ್ರತಿಯೊಬ್ಬರೂ ಮುಂದಿನ ವರ್ಷಗಳಲ್ಲಿ ಅನುಷ್ಠಾನಕ್ಕೆ ತರೋ ಪ್ರಯತ್ನ ಮಾಡಿದ್ರೆ ಅನೇಕ ಆರ್ಥಿಕ ಸಂಕಷ್ಟಗಳಿಂದ ಪಾರಾಗಬಹುದು.


2020 ಇತಿಹಾಸದ ಪುಟಗಳಲ್ಲಿ ಕೆಂಪು ಅಕ್ಷರಗಳಲ್ಲಿ ದಾಖಲಾಗಲಿರೋ ವರ್ಷ.ಕೊರೋನಾ ಎಂಬ ಪುಟ್ಟ ವೈರಸ್‌ ಇಡೀ ಮನುಕುಲವನ್ನು ವರ್ಷವಿಡೀ ಆತಂಕ,ಭೀತಿಯಲ್ಲಿ ಬಹುತೇಕ ಮನೆಯೊಳಗೇ ಕಳೆಯುವಂತೆ ಮಾಡಿ ಬಿಟ್ಟಿತ್ತು.ಈಗ ಮತ್ತೊಂದು ಹೊಸ ವರ್ಷ ಹೊಸ್ತಿಲಿಗೆ ಬಂದು ನಿಂತಿದೆ. ಆದ್ರೆ ಹಿಂದಿನ ವರ್ಷಗಳಂತೆ ಅದ್ದೂರಿ ಸ್ವಾಗತ ನೀಡೋ ಸ್ಥಿತಿಯಲ್ಲಂತೂ ಜಗತ್ತಿಲ್ಲ. ಕೊರೋನಾ ಭೀತಿ ಹೊಸ ವರ್ಷಕ್ಕೂ ಮುಂದುವರಿಯೋ ಲಕ್ಷಣಗಳು ಗೋಚರಿಸುತ್ತಿವೆ. ಈ ಎಲ್ಲದರ ನಡುವೆ 2020ರೆಡೆಗೆ ಒಂದು ಹಿನ್ನೋಟ ಬೀರಿದ್ರೆ,ನಾವು ಎಂದೂ ಕಲಿಯದ ಅನೇಕ ಜೀವನಪಾಠಗಳನ್ನುಕಲಿತಿದ್ದೇವೆ.ಬಹುಶಃ 2020 ಅನ್ನೋದುಬೇರೆಲ್ಲ ವರ್ಷಗಳಿಗಿಂತ ಭಿನ್ನವಾದ ಪಾಠಗಳನ್ನು ಕಲಿಸಿದೆ.ಅವುಗಳಲ್ಲಿ ಹಣಕಾಸು,ಉಳಿತಾಯಕ್ಕೆ ಸಂಬಂಧಿಸಿ ವೈಯಕ್ತಿಕವಾಗಿ ಪ್ರತಿಯೊಬ್ಬರೂ ನೆನಪಿಡಲೇಬೇಕಾದ ವಿಷಯಗಳೂ ಸೇರಿವೆ.

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಔಟ್; ಕಾರಣವೇನು?

Tap to resize

Latest Videos

undefined

ವಿಮೆ ಮಾಡಿಸೋದು ಅತ್ಯಗತ್ಯ
2020ರಲ್ಲಿ ಕೋವಿಡ್‌ ಜೊತೆಗೆ ವಿವಿಧ ಚಂಡಮಾರುತಗಳು, ಪ್ರವಾಹ ಸೇರಿದಂತೆ ಅನೇಕ ಪ್ರಾಕೃತಿಕ ವಿಕೋಪಗಳು ಕೂಡ ದೇಶ ಹಾಗೂ ವಿಶ್ವದ ಜನರನ್ನು ತಲ್ಲಣಗೊಳಿಸಿದ್ದವು.ಪರಿಣಾಮ ಇಷ್ಟು ವರ್ಷ ಆರೋಗ್ಯ ವಿಮೆ ಸೇರಿದಂತೆ ವಿವಿಧ ವಿಮೆಗಳನ್ನು ಮಾಡಿಸೋದು ದುಡ್ಡು ದಂಡ ಎಂಬ ಅಭಿಪ್ರಾಯ ಹೊಂದಿದ್ದವರು ಅವುಗಳ ಮಹತ್ವವನ್ನು ಅರಿತುಕೊಂಡಿದ್ದಾರೆ.ವಿಮೆ ಕುರಿತು ನಾವು ಕಲಿತ ಪಾಠಗಳೇನು?
-ಜಗತ್ತಿನಾದ್ಯಂತ ಉದ್ಯೋಗ ಕಡಿತದಿಂದ ಅನೇಕರು ನಿರುದ್ಯೋಗಿಗಳಾಗಿದ್ದಾರೆ.ಇದ್ರಿಂದ ಒಂದಂತೂ ಸ್ಪಷ್ಟವಾಗಿದೆ,ಕಂಪೆನಿಗಳು ಉದ್ಯೋಗಿಗಳಿಗೆ ನೀಡೋ ವಿಮೆಯನ್ನು ನಂಬಿಕೊಂಡು ಕುಳಿತ್ರೆ ಸಾಲದು.ಉದ್ಯೋಗ ಕಳೆದುಕೊಂಡ್ರೆ ವಿಮಾ ಸೌಲಭ್ಯವೂ ಇಲ್ಲ.ಹೀಗಾಗಿ ನಮ್ಮ ಹಾಗೂ ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ಉದ್ಯೋಗದಾತ ಸಂಸ್ಥೆಗಳ ಆರೋಗ್ಯವಿಮೆ ಹೊರತಾಗಿ ಪ್ರತ್ಯೇಕ ಆರೋಗ್ಯ ವಿಮಾ ಪಾಲಿಸಿಗಳನ್ನು ಮಾಡಿಸೋದು ಅಗತ್ಯ.
- ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ವೆಚ್ಚಗಳು ಕವರ್‌ ಆಗೋವಂತಹ ಆರೋಗ್ಯ ವಿಮಾ ಪಾಲಿಸಿಗಳನ್ನು ಆಯ್ಕೆ ಮಾಡ್ಬೇಕು ಅಂದ್ರೆ ಇಡೀ ಕುಟುಂಬಕ್ಕಾಗೋ ಪಾಲಿಸಿ ಮಾಡಿಸಬೇಕು
-ಪ್ರಾಕೃತಿಕ ವಿಕೋಪ ಅಥವಾ ಅವಘಡಗಳಿಂದ ಮನೆ ಹಾಗೂ ಕಚೇರಿಗಳಿಗಾಗೋ ನಷ್ಟ ತುಂಬಿಸಲು ಅವುಗಳಿಗೆ ಕೂಡ ವಿಮೆ ಮಾಡಿಸೋದು ಅಗತ್ಯ.

ತುರ್ತು ನಿಧಿ ಬೇಕೇಬೇಕು
ಕೊರೋನಾ ಸಮಯದಲ್ಲಿ ಅನೇಕ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದವು. ಕುಟುಂಬದಲ್ಲಿ ಒಬ್ಬ ಸದಸ್ಯ ಕೊರೋನಾಕ್ಕೆ ತುತ್ತದ್ರೂ ಖಾಸಗಿ ಆಸ್ಪತ್ರೆಗಳಲ್ಲಿ ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿತ್ತು.ಕೊರೋನಾ ಚಿಕಿತ್ಸಾ ವೆಚ್ಚ ಅನೇಕ ಕುಟುಂಬಗಳಿಗೆ ಆರ್ಥಿಕ ಆಘಾತ ನೀಡಿದ್ರೆ,ಇನ್ನೊಂದು ಕಡೆ ಅನೇಕರು ಉದ್ಯೋಗ ಕಳೆದುಕೊಂಡು ಕುಟುಂಬ ನಡೆಸಲು ಹೆಣಗಾಡಬೇಕಾಯಿತು. ಇಂಥ ಅನಿರೀಕ್ಷಿತ ಸಂದರ್ಭಗಳಲ್ಲಿಈ ಮೊದಲೇ ಕೂಡಿಟ್ಟಿರೋ ಹಣವಿದ್ರೆ, ಅಪ್ಬಾಂಧವನಂತೆ ನೆರವಿಗೆ ಬರುತ್ತದೆ. ಈ ವಾಸ್ತವವನ್ನು ಕೊರೋನಾ ಸಮಯದಲ್ಲಿ ಅನೇಕ ಕುಟುಂಬಗಳು ಮನಗಂಡಿವೆ. ಹೀಗಾಗ ಭವಿಷ್ಯದಲ್ಲಿ ಎದುರಾಗೋ ಅನಿರೀಕ್ಷಿತ ವೆಚ್ಚಗಳಿಗೆಂದು ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಎತ್ತಿಡೋದು ಅಗತ್ಯ. ಈ ತುರ್ತು ನಿಧಿಯನ್ನು ಬ್ಯಾಂಕ್‌  ಸೇವಿಂಗ್‌ ಅಕೌಂಟ್‌ನಲ್ಲಿಡೋದು ಉತ್ತಮ.ಏಕಂದ್ರೆ ಅಗತ್ಯ ಬಿದ್ದಾಗ ತಕ್ಷಣ ತೆಗೆದುಕೊಳ್ಳಬಹುದು. ಹೂಡಿಕೆ ಅಥವಾ ದೀರ್ಘಕಾಲಿಕಾ ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದ್ರೆ ತಕ್ಷಣಕ್ಕೆ ಹಣ ಕೈಗೆ ಸಿಗದೆ ತೊಂದರೆಯಾಗುತ್ತೆ.

ಎಲ್‌ಪಿಜಿ ಬಲು ದುಬಾರಿ: 9 ತಿಂಗಳಿಂದ ಇಲ್ಲ ಸಬ್ಸಿಡಿ!

ಭವಿಷ್ಯಕ್ಕೊಂದಿಷ್ಟು ಹಣ ಉಳಿಸಬೇಕು
ಉಳಿತಾಯದ ಮಹತ್ವವನ್ನು ಕೊರೋನಾ ಮನದಟ್ಟು ಮಾಡಿಸಿದೆ.ದುಡಿಯೋದೆ ಖರ್ಚು ಮಾಡೋಕೆ ಎಂದು ಭಾವಿಸಿಕೊಂಡವರಿಗೆ ಕೊರೋನಾ ಚಾಟಿಯೇಟು ನೀಡಿದೆ. ಉದ್ಯೋಗ ಕಡಿತ, ವೇತನ ಕಡಿತ, ವೇತನ ಹೆಚ್ಚಳವಾಗದಿರೋದು ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದೆ. ತಿಂಗಳ ಸಂಬಳದಲ್ಲಿ ಒಂದಿಷ್ಟು ಉಳಿತಾಯ ಮಾಡ್ಬೇಕು ಎಂಬುದು ಎಲ್ಲರಿಗೂ ಅರ್ಥವಾಗಿದೆ. ದುಂದುವೆಚ್ಚಗಳಿಗೆ ಕಡಿವಾಣ, ಬಜೆಟ್‌ ಹಾಗೂ ಅದಕ್ಕನುಗುಣವಾಗಿ ಖರ್ಚು ಮಾಡ್ಬೇಕೆಂಬ ಪಾಠ ಕಲಿಸಿದೆ.

ಸಾಲ ತಗ್ಗಿಸಿಕೊಂಡಷ್ಟು ನೆಮ್ಮದಿ
ವೈಯಕ್ತಿಕ ಸಾಲ, ಕ್ರೆಡಿಟ್‌ ಕಾರ್ಡ್‌ ಬಿಲ್‌ ಆದಷ್ಟು ಕಡಿಮೆಯಿದ್ರೆ ಒಳ್ಳೆಯದು ಎಂಬುದು ಕೊರೋನಾ ಕಲಿಸಿದ ಪಾಠಗಳಲ್ಲೊಂದು. ಸಾಲ ಮಾಡಿಕೊಂಡವರು ಕೊರೋನಾ ಸಮಯದಲ್ಲಿ ಉದ್ಯೋಗ ಕಳೆದುಕೊಂಡು ಅಥವಾ ಸಂಬಳ ಕಡಿತದಿಂದ ಇಎಂಐ ಕಟ್ಟಲಾಗದೆ ಸಾಕಷ್ಟು ತೊಂದರೆಗೊಳಗಾಗಿದ್ದರು. ಕೈ ಸಾಲ ಪಡೆದವರು ಕೂಡ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲಾಗದೆ ಸಂಕಷ್ಟ ಅನುಭವಿಸಿದ್ದರು. ಸಾಲ ಮಾಡೋದು ಎಷ್ಟು ರಿಸ್ಕ್‌ ಎಂಬುದನ್ನು ಕೊರೋನಾ ಕಲಿಸಿದೆ. ಸಾಲ ತಗ್ಗಿಸಿಕೊಂಡಷ್ಟು ನೆಮ್ಮದಿ ಎಂಬುದು ಜನರಿಗೆ ಈ ವರ್ಷ ಚೆನ್ನಾಗಿ ಅರ್ಥವಾಗಿದೆ.

ಷೇರುಪೇಟೆಗೆ ಕೊರೋನಾ ದಾಳಿ: 7 ತಿಂಗಳ ಬಳಿಕ ಮಹಾ ಕುಸಿತ!

ಒಂದೇ ಕಡೆ ಹೂಡಿಕೆ ಬೇಡ
ಹೂಡಿಕೆ ಮಾಡೋವಾಗ ಒಂದೇ ವಲಯದಲ್ಲಿ ಹಣ ತೊಡಗಿಸೋದು ಅಪಾಯಕಾರಿ ಎಂಬ ಮಾತನ್ನು ಹೂಡಿಕೆ ತಜ್ಞರು ಪದೇಪದೆ ಹೇಳುತ್ತಿದ್ದರೂ ಬಹುತೇಕರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಕೊರೋನಾ ಒಕ್ಕರಿಸಿಕೊಂಡ ಬಳಿಕ ಈ ಮಾತಿನ ಮಹತ್ವ ಅರಿವಾಗಿದೆ. ಬಂಗಾರದ ಮೇಲೆ ಹಣ ಹೂಡೋದು ವೇಸ್ಟ್‌ ಎಂಬುದು ಕೆಲವರ ಅಭಿಪ್ರಾಯವಾಗಿತ್ತು.ಆದ್ರೆ ೨೦೨೦ರಲ್ಲಿ ಬಂಗಾರದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಕೆಲವು ಕಂಪನಿಗಳ ಷೇರ್‌ ವ್ಯಾಲ್ಯೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು, ಹೂಡಿಕೆದಾರರು ಕೈ ಸುಟ್ಟುಕೊಂಡಿದ್ದಾರೆ. ಹೀಗಾಗಿ ಒಂದೇ ವಲಯದಲ್ಲಿ ಹೂಡಿಕೆ ಮಾಡೋ ಬದಲು ಬೇರೆ ಬೇರ ಕ್ಷೇತ್ರಗಳಲ್ಲಿ ಹಣ ತೊಡಗಿಸಿದ್ರೆ ರಿಸ್ಕ್‌ ಕಡಿಮೆ ಎಂಬುದು ಹೂಡಿಕೆದಾರರು ಈ ವರ್ಷ ಕಲಿತಿರೋ ಪಾಠ. 

click me!