Money Transfer : ತಪ್ಪಾದ ಖಾತೆಗೆ ಹಣ ಹೋದ್ರೆ ವಾಪಸ್ ಪಡೆಯೋದು ಹೇಗೆ?

By Suvarna News  |  First Published Dec 16, 2021, 1:03 PM IST

ತರಾತುರಿಯಲ್ಲಿ ತಪ್ಪುಗಳಾಗುತ್ತವೆ. ಫೋನ್ ಕರೆ ಮಾಡುವಾಗ ಸಂಖ್ಯೆ ಬದಲಾಗಿ ರಾಂಗ್ ನಂಬರ್ ಗೆ ಕರೆ ಮಾಡಿರ್ತೇವೆ. ತಪ್ಪಾದ ಕರೆಯಿಂದ ನಷ್ಟವಿಲ್ಲ. ಆದ್ರೆ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದ್ರೆ ಟೆನ್ಷನ್ ಶುರುವಾಗುತ್ತದೆ. ತಲೆಬಿಸಿ ಮಾಡುವ ಅಗತ್ಯವಿಲ್ಲ. ನಿಮ್ಮ ಹಣ ಕೈ ಸೇರಲು ಹೀಗೆ ಮಾಡಿ. 


ಬ್ಯಾಂಕ್ (Bank) ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸಣ್ಣ ತಪ್ಪಿನಿಂದ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಗ್ರಾಹಕ (Customer)ರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್ ಗಳು ಆನ್ಲೈನ್ (Online) ಸೇವೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡ್ತಿವೆ. ಮನೆಯಲ್ಲಿಯೇ ಕುಳಿತು ದೇಶ-ವಿದೇಶದಲ್ಲಿರುವವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್ ಎಲ್ಲ ಕೆಲಸಗಳನ್ನೂ ಆನ್ಲೈನ್ ಮೂಲಕವೇ ಮಾಡಬಹುದು. ಆದರೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ವೇಳೆ ಖಾತೆ ಸಂಖ್ಯೆ ಸ್ವಲ್ಪ ಅದಲು ಬದಲಾದರೂ ಬೇರೆಯವರ ಖಾತೆಗೆ ಹಣ ಸೇರುತ್ತದೆ. ನೀವು ನಿಮ್ಮವರಿಗೆ ಹಣ ವರ್ಗಾವಣೆ ಮಾಡಿದ್ದೀರಿ ಎಂದುಕೊಂಡಿರುತ್ತೀರಿ. ಆದ್ರೆ ಅದು ಅವರ ಖಾತೆಗೆ ಹೋಗಿರುವುದಿಲ್ಲ. ಆನ್ಲೈನ್ ಹಣ ವರ್ಗಾವಣೆಯಲ್ಲಿ ಮಾತ್ರವಲ್ಲ ಬ್ಯಾಂಕ್ ಗೆ ಹೋಗಿ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲೂ ಇಂಥ ಸಮಸ್ಯೆಯಾಗುತ್ತದೆ. ಅಪ್ಪಿತಪ್ಪಿ ನಿಮ್ಮ ಹಣ (Money )ಬೇರೆ ವ್ಯಕ್ತಿಗೆ ಹಣ ವರ್ಗಾವಣೆಯಾದ್ರೆ ಚಿಂತಿಸುವ ಅಗತ್ಯವಿಲ್ಲ. ಬ್ಯಾಂಕ್ ಗೆ ಹೋಗದೆಯೂ ನೀವು ಆನ್ಲೈನ್ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 

ತಪ್ಪಾಗಿ ಕಳುಹಿಸಿದ ಹಣವನ್ನು ಮರಳಿ ಪಡೆಯುವುದು ಹೇಗೆ?
ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಅದ್ರ ಸಹಾಯದಿಂದ ನೀವು ತಕ್ಷಣ ಹಣವನ್ನು ಮರಳಿ ಪಡೆಯಬಹುದು. ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದರೆ ನೀವು ತಕ್ಷಣ ನಿಮ್ಮ ಬ್ಯಾಂಕ್ ಖಾತೆ ಮತ್ತು ನಿಮ್ಮ ಸ್ಥಳೀಯ ಬ್ಯಾಂಕ್ ಮ್ಯಾನೇಜರ್ (Manager) ಸಂಪರ್ಕಿಸಬೇಕು. ಫಲಾನುಭವಿಯ ಸಮಯ, ಖಾತೆ ಮತ್ತು ಬಯಸಿದ ಖಾತೆಯಂತಹ ತಪ್ಪು ವಹಿವಾಟಿನ ಪ್ರತಿಯೊಂದು ವಿವರವನ್ನು ಅವರಿಗೆ ನೀಡಿ. ಕಸ್ಟಮರ್ ಕೇರ್(Customer Care) ಗೆ ಕರೆ ಮಾಡಿ ಕೂಡ ನೀವು ಮಾಹಿತಿ ನೀಡಬಹುದು. ಕಸ್ಟಮರ್ ಕೇರ್ ಗೆ ಕರೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಗೂಗಲ್ (Google) ನಲ್ಲಿ ಸರ್ಚ್ ಮಾಡಿ ತಪ್ಪಾದ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ರೆ ಖಾತೆಯಲ್ಲಿರುವ ಹಣ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಬ್ಯಾಂಕ್ ನ ಕಸ್ಟಮರ್ ಕೇರ್ ಗೆ (Bank Customer Care) ಮಾತ್ರ ಕರೆ ಮಾಡಬೇಕು.

Tap to resize

Latest Videos

undefined

ಬ್ಯಾಂಕ್ ಗೆ ಹಣ ವರ್ಗಾವಣೆಯಾದ ಸಮಯ, ಖಾತೆ ಸೇರಿದಂತೆ ತಪ್ಪು ವಹಿವಾಟಿನ ಪ್ರತಿಯೊಂದು ವಿವರವನ್ನು ಅವರಿಗೆ ನೀಡಬೇಕಾಗುತ್ತದೆ. ನಂತರ ಬ್ಯಾಂಕ್ ಹಣ ಹೋದ ಬ್ಯಾಂಕಿನ ಶಾಖೆಯ ವಿವರಗಳನ್ನು ನೀಡಬೇಕಾಗುತ್ತದೆ.  
ಬ್ಯಾಂಕ್ ಆ ವ್ಯಕ್ತಿಯನ್ನು ಸಂಪರ್ಕಿಸುತ್ತದೆ. ವಹಿವಾಟನ್ನು ಹಿಂತಿರುಗಿಸಲು  ಅನುಮತಿಯನ್ನು ಪಡೆಯುತ್ತದೆ.  

RBI Card Data Storage Norms:ಜ.1ರಿಂದ ಗ್ರಾಹಕರ ಕಾರ್ಡ್ ಮಾಹಿತಿ ಸಂಗ್ರಹಿಸುವಂತಿಲ್ಲ; ಇನ್ನೂ ಸಿದ್ಧಗೊಳ್ಳದ ವ್ಯಾಪಾರಿಗಳು!

ತಪ್ಪಾಗಿ ಹೋದ ಖಾತೆಯ ವ್ಯಕ್ತಿ  ಹಣವನ್ನು ವರ್ಗಾಯಿಸಲು ನಿರಾಕರಿಸಿದರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವನ್ನೂ ದಾಖಲಿಸಬಹುದು .
ನಿಮ್ಮ ಖಾತೆಯಿರುವ ಬ್ಯಾಂಕ್ ನಲ್ಲಿಯೇ ಆ ವ್ಯಕ್ತಿಯ ಖಾತೆಯಿದ್ದರೆ ಹಣ ವಾಪಸ್ ಪಡೆಯುವುದು ಸುಲಭ. ಬೇರೆ ಬ್ಯಾಂಕ್ ನಲ್ಲಿ ಖಾತೆಯಿದ್ದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಎರಡು ತಿಂಗಳವರೆಗೂ ಆಗುವ ಸಾಧ್ಯತೆಯಿದೆ. 
ಒಂದು ವೇಳೆ ನೀವು ಅಕೌಂಟ್ (Account) ಸಂಖ್ಯೆ ಅಥವಾ ಐಎಫ್ ಎಸ್ಸಿ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಹಣ ಯಾವುದೇ ಖಾತೆಗೆ ವರ್ಗಾವಣೆಯಾಗುವುದಿಲ್ಲ. ನಿಮ್ಮ ಖಾತೆಗೆ ಹಣ ವಾಪಸ್ ಬರಲಿದೆ. ಸ್ವಲ್ಪ ಸಮಯದಲ್ಲಿಯೇ ಹಣ ವಾಪಸ್ ಬರಲಿದೆ.

ಹಣ ವರ್ಗಾವಣೆ ವೇಳೆ ಎಚ್ಚರಿಕೆ : ವಹಿವಾಟು ನಡೆಸುವ ಮೊದಲು ಐಎಫ್ ಎಸ್ಸಿ  ಕೋಡ್  (IFSC Code )ಮತ್ತು ಬ್ಯಾಂಕ್ ಖಾತೆ ಸಂಖ್ಯೆಯ ಬಗ್ಗೆ ಸರಿಯಾದ ವಿವರಗಳನ್ನು ಪಡೆಯಬೇಕು. ವಹಿವಾಟು ನಡೆಸುವ ಮೊದಲು ವಿವರಗಳನ್ನು ಎರಡು ಅಥವಾ ಮೂರು ಬಾರಿ ಪರಿಶೀಲಿಸಬೇಕು. ಆನ್‌ಲೈನ್ ವಹಿವಾಟು ಮಾಡುವ ಮೊದಲು, ಆರಂಭದಲ್ಲಿ ಅವರ ಖಾತೆಗೆ ಒಂದರಿಂದ 10 ರೂಪಾಯಿ ಹಾಕಬೇಕು. ಅವರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಬೇಕು.
 
ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ : ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಆರ್ ಬಿಐ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಈಗಿನ ದಿನಗಳಲ್ಲಿ ಬ್ಯಾಂಕ್ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾಯಿಸಿದಾಗ ಸಂದೇಶ ಬರುತ್ತದೆ. ತಪ್ಪಾಗಿ ಹಣ ವರ್ಗಾವಣೆಯಾಗಿದೆ ಎಂದು ಗ್ರಾಹಕರು ಬ್ಯಾಂಕ್ ಸಂಪರ್ಕಿಸಿದಾಗ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಬ್ಯಾಂಕ್ ಗಳಿಗೆ  ಆರ್‌ಬಿಐ ಸೂಚನೆ ನೀಡಿದೆ. ನಿಮ್ಮ ಹಣವನ್ನು ತಪ್ಪು ಖಾತೆಯಿಂದ ಸರಿಯಾದ ಖಾತೆಗೆ ಹಿಂದಿರುಗಿಸುವ ಜವಾಬ್ದಾರಿಯನ್ನು ಬ್ಯಾಂಕ್ ಹೊಂದಿರುತ್ತದೆ. 

click me!