ಆನ್ಲೈನ್ ಮೂಲಕ ಕಾಂಪ್ರಹೆನ್ಸೀವ್ ವಾಹನ ವಿಮೆಗೆ ಉಪಯುಕ್ತ ಮಾರ್ಗದರ್ಶಿ!

By Santosh Naik  |  First Published Nov 3, 2024, 3:57 PM IST

ಸಮಗ್ರ ವಾಹನ ವಿಮೆಯು ನಿಮ್ಮ ವಾಹನಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ, ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಸ್ವಂತ ಹಾನಿ ಎರಡನ್ನೂ ಒಳಗೊಂಡಿದೆ. ವಾಹನ ವಿಮೆ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಸಮಗ್ರ ವಿಮೆ ಖರೀದಿಸುವುದು ಸುಲಭ ಮತ್ತು ಅನುಕೂಲಕರವಾಗಿದೆ.


ವಾಹನದ ಗರಿಷ್ಠ ಸುರಕ್ಷತೆಗೆ ಕಾಂಪ್ರಹೆನ್ಸೀವ್ ಅಥವಾ ಸಮಗ್ರ ವಾಹನ ವಿಮೆ ಆ್ಯಪ್ ಹೆಚ್ಚಿನ ಸೌಲಭ್ಯ ಹಾಗೂ ಥರ್ಡ್ ಪಾರ್ಟಿ ಹೊಣೆಗಾರಿಕೆಯನ್ನು ಮೀರಿಸುವ ವ್ಯಾಪ್ತಿಯನ್ನು ನೀಡುತ್ತದೆ. ವಿಶೇಷ ಅಂದರೆ ಈ ರೀತಿಯ ಸಮಗ್ರ ವಾಹನ ವಿಮೆ ಕೇವಲ ನಿಮ್ಮ ವಾಹನಕ್ಕೆ ಆಗುವ ಹಾನಿ ಅಥವಾ ಡ್ಯಾಮೇಜಗೆ ಮಾತ್ರ ಕವರೇಜ್ ನೀಡುವುದಲ್ಲ, ಥರ್ಡ್ ಪಾರ್ಟಿ ಹೊಣೆಗಾರಿಕೆಯನ್ನೂ ಪೂರೈಸುತ್ತದೆ. ಈ ಮೂಲಕ ಸಂಪೂರ್ಣ ಸುರಕ್ಷತೆ ಒದಗಿಸುತ್ತದೆ. ಪ್ರಾಕೃತಿಕ ವಿಕೋಪ, ಕಳ್ಳತನ, ಅಪಘಾತ ಸೇರಿದಂತೆ ವಾಹನಕ್ಕೆ ಎದುರಾಗುವ ಸಂಕಷ್ಟಗಳಿಗೆ ಸಂಪೂರ್ಣ ಕವರೇಜ್ ನೀಡುವ ಮೂಲಕ ವಾಹನ ಮಾಲೀಕರು ಆರ್ಥಿಕವಾಗಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ. 

ವಾಹನ ವಿಮೆ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಕಾರು ವಿಮೆ ಖರೀದಿಸುವ ಪ್ರಕ್ರಿಯೆ ಅತೀ ಸುಲಭ ಹಾಗೂ ತಡೆರಹಿತವಾಗಿದೆ. ವಾಹನ ವಿಮೆ ಖರೀದಿಸುವಾಗ ನಿಮಗೆ ಇತರ ವಿಮೆ ಪಾಲಿಸಿಗಳ ಜೊತೆ ಹೋಲಿಕೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಉತ್ತಮ ವಿಮೆ ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ. ಈ ಮಾರ್ಗಸೂಚಿ ನಿಮಗೆ ಸಮಗ್ರ(ಕಾಂಪ್ರಹೆನ್ಸೀವ್) ವಿಮೆ ಸೇರಿದಂತೆ ಉತ್ತಮ ವಿಮೆ ಖರೀದಿಸುವುದು ಹೇಗೆ ಅನ್ನೋದು ತಿಳಿಸಲಿದೆ.

Tap to resize

Latest Videos

ಸಮಗ್ರ ವಾಹನ ವಿಮೆಯ ಒಳನೋಟ

ಸವಿಸ್ತಾರವಾದ ಕವರೇಜ್
ಕಾಂಪ್ರಹೆನ್ಸೀವ್ ವಿಮೆ ಅಥವಾ ಸಮಗ್ರ ವಿಮೆಗೆ ಸ್ವಂತ ಹಾನಿ ಎಂದೂ ಕರೆಯುತ್ತಾರೆ. ಈ ಸಮಗ್ರ ವಿಮೆ ವ್ಯಾಪ್ತಿ ಸವಿಸ್ತಾರವಾಗಿದೆ. ಅವುಗಳೆಂದರೆ: 

1 ಥರ್ಡ್ ಪಾರ್ಟಿ ಹೊಣೆಗಾರಿಕೆ: 
ಮೂರನೇ ವ್ಯಕ್ತಿ ಹೊಣೆಗಾರಿಕೆಯಲ್ಲಿ ಮೂರನೇ ವ್ಯಕ್ತಿಗಾದ ಹಾನಿ ಅಥವಾ ಗಾಯದಿಂದ ಆಗುವ ಕಾನೂನು ಹೊಣೆಗಾರಿಕೆಗಳನ್ನು ಒಳಗೊಂಡಿರುತ್ತದೆ. 
2 ಸ್ವಂತ ಹಾನಿ ಕವರೇಜ್:
ಅಪಘಾತ, ಕಳ್ಳತನ, ಬೆಂಕಿ, ಪ್ರವಾಹ, ದಾಳಿ, ಭೂಕಂಪ, ಮಾನವ ನಿರ್ಮಿತ ಹಾಗೂ ನೈಸರ್ಗಿಕ ವಿಕೋಪಗಳಿಂದ ನಿಮ್ಮ ವಾಹನಕ್ಕೆ ಆಗವ ಹಾನಿಯಿಂದ ರಕ್ಷಣೆ ನೀಡುತ್ತದೆ.
3 ವೈಯಕ್ತಿಕ ಅಪಘಾತ ಕವರೇಜ್:
ಅಪಘಾತ ಸಂದರ್ಭದಲ್ಲಿ ಮೃತಪಟ್ಟರೆ, ಗಾಯಗೊಂಡಾಗ, ಅಂಗವೈಕಲ್ಯ ಸಮಸ್ಯೆ ಎದುರಿಸಿದಾಗ ಪರಿಹಾರಗಳನ್ನು ನೀಡುತ್ತದೆ.
4 ಹೆಚ್ಚುವರಿ ಸೌಲಭ್ಯ;
ಇಲ್ಲಿ ಕೆಲ ಹೆಚ್ಚುವರಿ ವಿಮೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ. ಈ ಪೈಕಿ ಝಿರೋ ಡಿಪ್ರಿಸಿಯೇಶನ್(ಶೂನ್ಯ ಸವಕಳಿ) ಎಂಜಿನ್ ರಕ್ಷಣೆ, ರಸ್ತೆ ಬದಿ ನೆರವು(ರೋಡ್ ಸೈನ್ ಅಸಿಸ್ಟೆನ್ಸ್)ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಪಡೆಯಹುದು.

ಕಾಂಪ್ರಹೆನ್ಸೀವ್ ವಾಹನ ವಿಮೆಯಿಂದ ಆಗುವ ಪ್ರಯೋಜನಗಳು
1 ವಿಸ್ತೃತ ಸುರಕ್ಷತೆ: ಥರ್ಡ್ ಪಾರ್ಟಿ ವಿಮೆಗಳಲ್ಲಿ ಮೂರನೇ ವ್ಯಕ್ತಿಗೆ ಕಾನೂನಾತ್ಮಕವಾಗಿ ನೀಡಬೇಕಾದ ಹೊಣೆಗಾರಿಕೆ ಪೂರೈಸಲಿದೆ. ಆದರೆ ಕಾಂಪ್ರಹೆನ್ಸೀವ್ ವಿಮೆ ಆ್ಯಪ್ ಥರ್ಡ್ ಪಾರ್ಟಿ ಹಾಗೂ ಸ್ವಂತ ಹಾನಿ ಎರಡನ್ನೂ ಒಳಗೊಂಡಿರುತ್ತದೆ.
2 ಆರ್ಥಿಕ ಭದ್ರತೆ: ಅಪಘಾತ, ನೈಸರ್ಗಿಕ, ಮಾನ ನಿರ್ಮಿತ ವಿಪತ್ತುಗಳ ಸಂದರ್ಭಗಳಲ್ಲಿ ಕಾಂಪ್ರಹೆನ್ಸೀವ್ ವಿಮೆ ನಿಮಗೆ ಸಂಪೂರ್ಣ ಆರ್ಥಿಕ ಸುರಕ್ಷತೆ ನೀಡುತ್ತದೆ. ವಾಹನ ರಿಪೇರಿಯ ಸಂಪೂರ್ಣ ವೆಚ್ಚವನ್ನು ನೀಡಲಿದೆ.  
3 ಮನಸ್ಸಿಗೆ ನೆಮ್ಮದಿ: ಯಾವುದೇ ರೀತಿಯ ಅಪಾಯಗಳು, ಹಾನಿಗಳಿಂದ ಸಮಗ್ರ ವಿಮೆ ಸುರಕ್ಷತೆ ನೀಡುತ್ತದೆ. ಹೀಗಾಗಿ ಚಾಲನೆ ಹಾಗೂ ವಾಹನ ಮಾಲೀಕತ್ವದಲ್ಲಿ ನೆಮ್ಮದಿ ನೀಡುತ್ತದೆ.  

ಆನ್ಲೈನ್ ಮೂಲಕ ಕಾಂಪ್ರಹೆನ್ಸೀವ್ ವಿಮೆ ಖರೀದಿ ಹೇಗೆ?
ಮೋಟಾರು ವಿಮೆ ಆ್ಯಪ್ ಬಳಸಿಕೊಂಡು ಆನ್ಲೈನ್ ಮೂಲಕ ಕಾಂಪ್ರಹೆನ್ಸೀವ್ ವಿಮೆ ಖರೀದಿಸುವುದು ಅತೀ ಸುಲಭ. ಸರಳ ಹಾಗೂ ಸುಲಭವಾಗಿ ವಿಮೆ ಖರೀದಿಗೆ ಮಾರ್ಗದರ್ಶನ ನೀಡುವ ಹಂತ ಹಂತದ ಮಾರ್ಗಸೂಚಿ ಇಲ್ಲಿದೆ.  

ಮೊದಲ ಹಂತ: ಸಂಶೋಧಿಸಿ ಹಾಗೂ ಪಾಲಿಸಿಗಳನ್ನು ಹೋಲಿಕೆ ಮಾಡಿ
ಲಭ್ಯವಿರುವ ವಿವಿಧ ವಿಮಾ ಪೂರೈಕೆದಾರರ ವಾಹನ ವಿಮೆಗಳನ್ನು ಹೋಲಿಕೆ ಮಾಡಿ. ವಿಮೆ ಒದಗಿಸುತ್ತಿರುವ ಪ್ರಯೋಜನೆ, ಸೌಲಭ್ಯಗಳ ತುಲನೆ ಮಾಡಬೇಡು. ಆನ್ಲೈನ್ ಮೂಲಕ ವಾಹನ ವಿಮೆ ಖರೀದಿಸುವಾಗ ಹೋಲಿಕೆ ಟೂಲ್(ಕಂಪ್ಯಾರಿಶನ್ ಟೂಲ್) ಮೂಲಕ ವಿವಿಧ ಕಂಪನಿಗಳ ಪಾಲಿಸಿಗಳನ್ನು ಮೌಲ್ಯಮಾಪನ ಮಾಡಿ. ಕವರೇಡ್, ಪ್ರೀಮಿಯಂ ಮೊತ್ತ, ಹೆಚ್ಚುವರಿ ಸೌಲಭ್ಯಗಳು ಜೊತೆಗೆ ಗ್ರಾಹಕರ ಅಭಿಪ್ರಾಯಗಳನ್ನೂ ಪರಿಶೀಲಿಸಿದೆ. ಇದರಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿರುವ ಉತ್ತಮ ವಾಹನ ವಿಮೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಎರಡನೇ ಹಂತ: ವಿಮೆ ನೀತಿಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ
ವಾಹನ ವಿಮೆ ಖರೀದಿಸುವಾಗ ಪೂರೈಕೆದಾರರ ನಿಯಮ, ಷರತ್ತು ಸೇರಿದಂತೆ ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ವಿಶೇಷವಾಗಿ ಯಾವೆಲ್ಲಾ ಕವರೇಜ್ ಈ ವಿಮೆ ನೀಡುತ್ತದೆ. ಯಾವುದು ವಿಮೆಯಲ್ಲಿ ಒಳಪಡುವುದಿಲ್ಲ,  ಪರಿಹಾರದ ಮನವಿ(ಕ್ಲೈಮ್) ಪ್ರಕ್ರಿಯೆಗಳು ಕುರಿತು ಗಮನಹರಿಸಿದೆ. ಈ ಮೂಲಕ ಕ್ಲೈಮ್ ವೇಳೆ ಆಘಾತ, ಅಚ್ಚರಿಯಾಗದಂತೆ ಹಾಗೂ ನಿಮ್ಮ ವಿಮೆ ಯಾವೆಲ್ಲಾ ಕವರೇಜ್ ನೀಡಲಿದೆ ಅನ್ನೋ ಸ್ಪಷ್ಟ ಮಾಹಿತಿ ನಿಮಗಿರುವಂತೆ ನೋಡಿಕೊಳ್ಳಿ.

ಮೂರನೇ ಹಂತ: ಪ್ರೀಮಿಯಂ ಮೊತ್ತದ ಲೆಕ್ಕಾಚಾರ
ಆನ್ಲೈನ್ ಮೂಲಕ ವಾಹನ ವಿಮೆ ಖರೀದಿಸುವಾಗ ಪೂರೈಕೆದಾರರು ಅಥವಾ ಪಾಲಿಸಿ ನೀಡುವ ಕಂಪನಿಗಳು ಆನ್ಲೈನ್ ಪ್ರಿಮಿಯಂ ಕ್ಯಾಲ್ಕುಲೇಟರ್ ನೀಡುತ್ತದೆ. ಇದನ್ನು ಬಳಸಿಕೊಂಡು ಕಾಂಪ್ರಹೆನ್ಸೀವ್ ವಿಮೆಯ ಪ್ರಿಮಿಯಂ ಮೊತ್ತ ಅಂದಾಜು ಮಾಡಲು ಸಾಧ್ಯವಿದೆ. ನಿಮ್ಮ ವಾಹನದ ಉತ್ಪಾದನೆ ವರ್ಷ, ಮಾಡೆಲ್, ಕಾರಿನ ತಯಾರಿಕೆ, ಆರ್ಟಿಒ ನೋಂದಣಿ ಸ್ಥಳ ಸೇರಿದಂತೆ ಕೆಲ ಮಾಹಿತಿಗಳನ್ನು ನೀಡಿದರೆ ಕ್ಯಾಲ್ಕುಲೇಟರ್ ಅಂದಾಜು ಪ್ರಿಮಿಯಂ ಮೊತ್ತವನ್ನು ನೀಡಲಿದೆ.  

ನಾಲ್ಕನೇ ಹಂತ: ಹೆಚ್ಚುವರಿ ಸೌಲಭ್ಯಗಳ ಆಯ್ಕೆ ಮಾಡಿ
ನಿಮ್ಮ ಕಾಂಪ್ರಹೆನ್ಸೀವ್ ವಿಮೆಗೆ ಲಭ್ಯವರುವ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸಿಕೊಳ್ಳಿ. ಈ ಮೂಲಕ ನಿಮ್ಮ ಸಮಗ್ರ ವಿಮೆ ಪ್ರಯೋಜನಗಳನ್ನು ವರ್ಧಿಸಿಕೊಳ್ಳಬಹುದು. ಜನಪ್ರಿಯ ಹೆಚ್ಚುವರಿ ಸೌಲಭ್ಯದ ವಿವರ ಇಲ್ಲಿವೆ.

1 ಝಿರೋ ಡಿಪ್ರಿಸಿಯೇಶನ್: ಶೂನ್ಯ ಸವಕಳಿ ಅಥವಾ ಬಂಪರ್ ಟು ಬಂಪರ್ ಕವರೇಜ್ ಸೌಲಭ್ಯವನ್ನು ಸೇರಿಸಿಕೊಳ್ಳುವುದರಿಂದ ವಾಹನಕ್ಕೆ ಸಂಪೂರ್ಣ ಕ್ಲೈಮ್ ಸಿಗಲಿದೆ.
2 ಎಂಜಿನ್ ರಕ್ಷಣೆ ಕವರೇಜ್ : ನೀರಿನಿಂದ ಆಗುವ ಎಂಜಿನ್ ಸಮಸ್ಯೆ ಅಥವಾ ತೈಲ ಸೋರಿಕೆ ಸೇರಿದಂತೆ ಇತರ ಎಂಜಿನ್ ಸಮಸ್ಯೆಗಳಿಗೆ ಹೆಚ್ಚುವರಿ ಸೌಲಭ್ಯದ ಮೂಲಕ ಸುರಕ್ಷತೆ ಒದಗಿಸಿ.
3 ರೋಡ್ ಸೈಡ್ ಅಸಿಸ್ಟೆನ್ಸ್: ರಸ್ತೆ ಬದಿ ಸಹಾಯ ಸೌಲಭ್ಯ ಸೇರಿಸಿಕೊಳ್ಳುವುದರಿಂದ ಪ್ರಮುಖವಾಗಿ ನಡು ರಸ್ತೆಯಲ್ಲಿ ಅಥವಾ ಯಾವುದೇ ಪ್ರಯಾಣದ ನಡುವೆ ವಾಹನ ಕೆಟ್ಟು ನಿಂತಾಗ ತಕ್ಷಣಕ್ಕೆ ನೆರವು ಸಿಗಲಿದೆ.
4 ಇನ್ವಾಯ್ಸ್ ಕವರ್: ವಾಹನ ಸಂಪೂರ್ಣವಾಗಿ ನಷ್ಟವಾದಾಗ, ಕಳ್ಳತನ ಸಂದರ್ಭಗಳಲ್ಲಿ ಕಾರಿನ ಮೌಲ್ಯ ಮರುಪಾವತಿಯಾಗಲಿದೆ. 

ಐದನೇ ಹಂತ: ಅರ್ಜಿ ಭರ್ತಿ ಮಾಡಿ
ಹೋಲಿಕೆ, ಪ್ರೀಮಿಯಂ, ಷರತ್ತು ನಿಯಮಗಳನ್ನು ಪರಿಶೀಲನೆ ಮಾಡಿದ ಬಳಿಕ ನೀವು ಆಯ್ಕೆ ಮಾಡುವ ವಾಹನ ವಿಮೆ ಪಡೆಯಲು ಆನ್ಲೈನ್ ಅರ್ಜಿ ನಮೂನೆ ಭರ್ತಿ ಮಾಡಬೇಕು. ನಿಮ್ಮ ವಾಹನದ ಮಾಹಿತಿ, ಆರ್ಟಿಒ ನೋಂದಣಿ ವಿವರ ಸೇರಿದಂತೆ ಇತರ ಅಗತ್ಯ ಮಾಹಿತಿಗಳನ್ನು ಒದಗಿಸಿದೆ. ನೀವು ಭರ್ತಿ ಮಾಡಿದ ಎಲ್ಲಾ ಮಾಹಿತಿ ಸರಿಯಾಗಿದೆಯಾ, ಕಣ್ತಪ್ಪಿನಿಂದ ಯಾವುದೇ ತಪ್ಪುಗಳು ಸಂಭವಿಸಿದೆಯಾ ಅನ್ನೋದು ಪರಿಶೀಲಿಸಬೇಕು. ಕಾರಣ ಕ್ಲೈಮ್ ಸಂದರ್ಭದಲ್ಲಿ ಸಣ್ಣ ತಪ್ಪಗಿ ದುಬಾರಿ ದಂಡ ತೆರಬೇಕಾಗುತ್ತದೆ. 

ಆರನೇ ಹಂತ: ಪಾವತಿ ಮಾಡಿ
ಆನ್ಲೈನ್ ಮೂಲಕ ವಿವರ , ಮಾಹಿತಿ ದಾಖಲಿಸಿದ ಬಳಿಕ ಪಾವತಿ ಮಾಡಬೇಕು. ಇಲ್ಲಿ ನಿಮ್ಮ ಸುಲಭದ ಪಾವತಿ ವ್ಯವಸ್ಥೆಗಳು ಲಭ್ಯವಿದೆ. ವಿಮಾ ಪೂರೈಕೆದಾರರು ಕ್ರೆಡಿಟ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಸೇರಿದಂತೆ ಹಲವು ಪಾವತಿ ಆಯ್ಕೆ ನೀಡುತ್ತಾರೆ. ನಿಮ್ಮ ಆದ್ಯತೆಯ ಪಾವತಿ ವಿಧಾನ ಆಯ್ಕೆ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿ.

ಏಳನೇ ಹಂತ: ಪಾಲಿಸಿ ಡಾಕ್ಯುಮೆಂಟ್ ಪಡೆಯಿರಿ
ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿದ ಬೆನ್ನಲ್ಲೇ ಆನ್ಲೈನ್ ಮೂಲಕವೂ ನಿಮ್ಮ ವಾಹನ ವಿಮೆ ಪಾಲಿಸಿ ಡೌನ್ಲೋಡ್ ಆಯ್ಕೆ ಪಡೆಯುತ್ತೀರಿ. ಇದೇ ವೇಳೆ ಇಮೇಲ್ ಮೂಲಕವೂ ಪಾಲಿಸಿ ಡಾಕ್ಯುಮೆಂಟ್ ಸ್ವೀಕರಿಸುತ್ತೀರಿ. ಈ ಡಾಕ್ಯೂಮೆಂಟ್ ನಿಮ್ಮ ವಾಹನ ವಿಮೆಯ ದಾಖಲೆಯಾಗಿದೆ. ಆರ್ಟಿಒ ತಪಾಸಣೆ ಅಥವಾ ಪೊಲೀಸ್ ತಪಾಸಣೆ ವೇಳೆ ಈ ದಾಖಲೆ ಅಗತ್ಯವಾಗಿ ನಿಮ್ಮಲಿರಬೇಕು. ಪ್ರತಿಗಳನ್ನು ತೆಗೆದು ನಿಮ್ಮ ವಾಹನದಲ್ಲಿ ಸುರಕ್ಷಿತವಾಗಿಡಿ.  

ಕಾಂಪ್ರಹೆನ್ಸೀವ್ ಕಾರು ವಿಮೆಯನ್ನು ಆನ್ಲೈನ್ ಮೂಲಕ ಖರೀದಗಿಗೆ ಕಾರು ವಿಮೆ ಆ್ಯಪ್ಲೀಕೇಶನ್ ಹೇಗೆ ನೆರವು ನೀಡುತ್ತದೆ
 
ಕಾರು ವಿಮೆ ಆ್ಯಪ್ ಕಾಂಪ್ರಹೆನ್ಸೀವಿ(ಸಮಗ್ರ) ವಿಮೆ ಖರೀದಿಸುವ ವಿಧಾನ ಹಾಗೂ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಈ ಪ್ರಕ್ರಿಯೆ ಹೆಚ್ಚು ಅನುಕೂಲಕರ ಹಾಗೂ  ಪರಿಣಾಮಕಾರಿಯಾಗಿದೆ.  ಅಪ್ಲಿಕೇಶನ್ ಹೇಗೆ ಸಹಾಯ ಮಾಡುತ್ತವೆ ಎಂಬುದು ಇಲ್ಲಿದೆ:

1. ಬಳಕೆದಾರ ಸ್ನೇಹಿ ಇಂಟರ್ಫೇಸ್: ಕಾರು ವಿಮೆ ಆ್ಯಪ್ಗಳನ್ನು ಬಳಕೆದಾರ ಸ್ನೇಹಿ ಇಂಟರ್ಫೇಸ್ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಬಳಕೆದಾರರು ಯಾವುದೇ ಗೊಂದಲವಿಲ್ಲದೆ, ಸುಲಭಾಗಿ ವಿಮೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿದೆ. ತಂತ್ರಜ್ಞಾನ ಕುರಿತು ಹೆಚ್ಚಾಗಿ ತಿಳಿದಿಲ್ಲದವರೂ, ಮೊದಲ ಬಾರಿಗೆ ಆನ್ಲೈನ್ ಮೂಲಕ ವಾಹನ ವಿಮೆ ಖರೀದಿಸುವವರು ಯಾರ ನೆರವಿಲ್ಲದೆ ಸುಲಭವಾಗಿ ವಾಹನ ವಿಮೆ ಖರೀದಿಸಲು ಸಾಧ್ಯವಿದೆ. ಇದರಿಂದ ಬಳಕೆದಾರ ಯಾವುದೇ ಸಮಸ್ಯೆ ಇಲ್ಲದೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
 
2.ನೀತಿ ಹೋಲಿಕೆ: ಈ ಅಪ್ಲಿಕೇಶನ್ಗಳು ವಿವಿಧ ವಿಮಾದಾರರಿಂದ ವಿವಿಧ ಸಮಗ್ರ ಕಾರು ವಿಮಾ ಪಾಲಿಸಿಗಳನ್ನು ಹೋಲಿಸಲು ನಿಮಗೆ ಅನುಮತಿಸುತ್ತದೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಉತ್ತಮ ನೀತಿಯನ್ನು ಹುಡುಕಲು ನೀವು ಕವರೇಜ್, ಪ್ರೀಮಿಯಂ ದರಗಳು ಮತ್ತು ಆಡ್-ಆನ್ ಆಯ್ಕೆಗಳನ್ನು ಸುಲಭವಾಗಿ ಮೌಲ್ಯಮಾಪನ ಮಾಡಬಹುದು.

3.ತಕ್ಷಣದ ಕೊಟೇಶನ್: ಕೆಲವೇ ಟ್ಯಾಪ್ಗಳೊಂದಿಗೆ, ನೀವು ಬಹು ವಿಮಾದಾರರಿಂದ ತ್ವರಿತ ಕೊಟೇಶನ್ ಪಡೆಯಬಹುದು. ವೆಚ್ಚದ ಪರಿಣಾಮಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಜೊತೆಗೆ ನಿಮ್ಮ ಬಜೆಟ್ಗೆ ಅನುಗುಣವಾಗಿ ವಿಮೆ ಪಾಲಿಸಿ ಆಯ್ಕೆ ಮಾಡಲು ಇದು ಸಹಾಯ ಮಾಡುತ್ತದೆ.

4.ಸುರಕ್ಷಿತ ವಹಿವಾಟು: ಕಾರು ವಿಮಾ ಅಪ್ಲಿಕೇಶನ್ಗಳು ಸುರಕ್ಷಿತ ಪಾವತಿ ಗೇಟ್ವೇಗಳನ್ನು ಒದಗಿಸುತ್ತವೆ, ನಿಮ್ಮ ಹಣಕಾಸಿನ ವಹಿವಾಟುಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸುತ್ತದೆ. ಕ್ರೆಡಿಟ್/ಡೆಬಿಟ್ ಕಾರ್ಡ್ಗಳು, ನೆಟ್ ಬ್ಯಾಂಕಿಂಗ್ ಅಥವಾ UPI ನಂತಹ ವಿವಿಧ ವಿಧಾನಗಳ ಮೂಲಕ ನೀವು ಪಾವತಿಗಳನ್ನು ಮಾಡಬಹುದು.

5.ಡಿಜಿಟಲ್ ಡಾಕ್ಯುಮೆಂಟೇಶನ್: ಖರೀದಿ ಪೂರ್ಣಗೊಂಡ ನಂತರ, ಪಾಲಿಸಿ ದಾಖಲೆಗಳನ್ನು ತಕ್ಷಣವೇ ನಿಮ್ಮ ಇಮೇಲ್ಗೆ ಕಳುಹಿಸಲಾಗುತ್ತದೆ ಅಥವಾ ಅಪ್ಲಿಕೇಶನ್ನಲ್ಲಿ ಸಂಗ್ರಹಿಸಲಾಗುತ್ತದೆ. ಇದು ಫಿಸಿಕಲ್ ಡಾಕ್ಯುಮೆಂಟ್ ಅಗತ್ಯವನ್ನು ನಿವಾರಿಸುತ್ತದೆ. ಇಷ್ಟೇ ಅಲ್ಲ ಯಾವಾಗ ಬೇಕಾದರೂ ನಿಮ್ಮ ಪಾಲಿಸಿಗಳನ್ನು ಡೌನ್ಲೋಡ್ ಮಾಡಲು ಹಾಗೂ ವಿಚಾರಿಸಲು ಅನುವು ಮಾಡಿಕೊಡುತ್ತದೆ.

6. ನವೀಕರಣ ಸುಲಭ: ಕಾರು ವಿಮೆ ಮುಕ್ತಾಯಗೊಳ್ಳುತ್ತಿದ್ದರೆ, ಸುಲಭವಾಗಿ ನವೀಕರಣ ಮಾಡಲು ಇದು ಅನುಮತಿಸುತ್ತದೆ. ವಿಮೆ ಮುಕ್ತಾಯದ ದಿನಾಂಕಕ್ಕಿಂತ ಮೊದಲು ನಿಮಗೆ ನೆನಪಿಸುವ ಕೆಲಸವನ್ನು ಇದು ಮಾಡಲಿದೆ.  ಬಳಿಕ ಕೆಲವೇ ಕೆಲವು ಕ್ಲಿಕ್ ಮೂಲಕ ವಾಹನ ವಿಮೆ ಪಾಲಿಸಿಯನ್ನು ನವೀಕರಣ ಮಾಡಬಹುದು.  ಇಷ್ಟೇ ಅಲ್ಲ ವಿಮೆ ಮುಗಿದಿದೆ ನವೀಕರಣ ಮಾಡಬೇಕು ಅನ್ನೋ ಆತಂಕ, ಚಿಂತೆಗಳು ನಿಮಗಿರುವುದಿಲ್ಲ.

ಆನ್ಲೈನ್ ಮೂಲಕ ಸಮಗ್ರ ವಾಹನ ವಿಮೆ ಖರೀದಿಗೆ ಸಲಹೆ
 
ವಿಮಾದಾರರ ಪರಿಶೀಲಿಸಿ: ನೀವು ಯಾವ ವಿಮಾದಾರರ ಪಾಲಿಸಿ ಆಯ್ಕೆ ಮಾಡುತ್ತೀರೋ, ಆ ವಿಮಾದಾರ ಅಥವಾ ಕಂಪನಿಯನ್ನು ಪರಿಶೀಲಿಸಿ.ಕ್ಲೈಮ್ ಇತ್ಯರ್ಥ ಅನುಪಾತ, ಪಾಸಿಟೀವ್ ಗ್ರಾಹಕ ವಿಮರ್ಷೆಗಳನ್ನು ಪರಿಶೀಲಿಸಿ. ಖರೀದಿಗೂ ಮುನ್ನ ನೀವು ಆಯ್ಕೆ ಮಾಡಿದ ವಿಮೆ ಪ್ರತಿಷ್ಠಿತ ವಿಮಾದಾರರ ಪಾಲಿಸಿ ಅನ್ನೋದು ಖಚಿತಪಡಿಸಿಕೊಳ್ಳಿ.  ಇದು ವಿಮಾದಾರರ ವಿಶ್ವಾಸಾರ್ಹತೆ ಮತ್ತು ಗ್ರಾಹಕ ಸೇವೆಯಲ್ಲಿ ನಿಮಗೆ ವಿಶ್ವಾಸವನ್ನು ನೀಡುತ್ತದೆ.

ನಿಮ್ಮ ಪಾಲಿಸಿಯನ್ನು ಕಸ್ಟಮೈಸ್ ಮಾಡಿ: ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಸಮಗ್ರ ವಾಹನ ವಿಮಾ ಪಾಲಿಸಿಯನ್ನು ಹೊಂದಿಸಿ. ನಿಮ್ಮ ವಾಹನದ ಅವಶ್ಯಕತೆಗಳು ಮತ್ತು ನಿಮ್ಮ ಚಾಲನಾ ಅಭ್ಯಾಸಗಳ ಆಧಾರದ ಮೇಲೆ ಗರಿಷ್ಠ ರಕ್ಷಣೆಯನ್ನು ಒದಗಿಸುವ ಆಡ್-ಆನ್ಗಳನ್ನು ಆಯ್ಕೆಮಾಡಿ.

ಐಡಿವಿಯನ್ನು ಪರಿಶೀಲಿಸಿ (ವಿಮೆ ಮಾಡಿದ ಘೋಷಿತ ಮೌಲ್ಯ): ವಾಹನದ ಒಟ್ಟು ನಷ್ಟ ಅಥವಾ ಕಳ್ಳತನದ ಸಂದರ್ಭದಲ್ಲಿ ವಿಮಾದಾರು ಮಾಲೀಕರಿಗೆ ನೀಡುವ ಗರಷ್ಠ ಮೊತ್ತವೇ IDV ಗರಿಷ್ಠ ವಿಮಾ ಮೊತ್ತವಾಗಿದೆ. IDV ಪ್ರೀಮಿಯಂ ಮತ್ತು ಕ್ಲೈಮ್ ಮೊತ್ತ ಎರಡರ ಮೇಲೂ ಪರಿಣಾಮ ಬೀರುವುದರಿಂದ IDV ನಿಖರವಾಗಿ ಮೌಲ್ಯಮಾಪನ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಾರಾಂಶ:
ಸಮಗ್ರ ವಾಹನ ವಿಮೆಯು ನಿಮ್ಮ ವಾಹನಕ್ಕೆ ವ್ಯಾಪಕವಾದ ರಕ್ಷಣೆಯನ್ನು ನೀಡುತ್ತದೆ. ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಸ್ವಂತ ಹಾನಿಗಳನ್ನು ಒಳಗೊಂಡಿರುತ್ತದೆ. ಸಮಗ್ರ ಕಾರು ವಿಮಾ ಅಪ್ಲಿಕೇಶನ್ಗಳ ಕವರೇಜ್ ವಿವರಗಳು ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.  ವಾಹನ ವಿಮಾ ಆ್ಯಪ್ಸ್ ನಿಮಗೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ವಾಹನ ವಿಮೆ ಅಪ್ಲಿಕೇಶನ್ಗಳನ್ನು ಆನ್ಲೈನ್ನಲ್ಲಿ ಖರೀದಿಸುವುದು ಅನುಕೂಲಕರವಾಗಿದೆ.  ಪಾಲಿಸಿಗಳನ್ನು ಹೋಲಿಸಲು, ಪ್ರೀಮಿಯಂಗಳನ್ನು ಲೆಕ್ಕಾಚಾರ ಮಾಡಲು ಮತ್ತು ನಿಮ್ಮ ವ್ಯಾಪ್ತಿಯನ್ನು ಕಸ್ಟಮೈಸ್ ಮಾಡಲು  ಅನುಮತಿಸುತ್ತದೆ. ನಿಮ್ಮ ಸಮಗ್ರ ವಾಹನ ವಿಮಾ ಪಾಲಿಸಿಯನ್ನು ಆನ್ಲೈನ್ನಲ್ಲಿ ಖರೀದಿಸಲು ಮತ್ತು ನಿಮ್ಮ ವಾಹನವನ್ನು ಸಮರ್ಪಕವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮೇಲೆ ವಿವರಿಸಿದ ಹಂತಗಳನ್ನು ಅನುಸರಿಸಿ.
 

click me!