ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ಮುನಿಸು: ಅದರಲ್ಲಿರೋ ನಿಮ್ಮ ಹಣ ಬಾಸು?

By Web DeskFirst Published Dec 20, 2018, 4:42 PM IST
Highlights

ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ಗೆ ಏಕಿಷ್ಟು ಮುನಿಸು?| ಹೊಸ ಖಾತೆಗಳನ್ನು ಹೊಂದಲು ಪೇಟಿಎಂ ಬ್ಯಾಂಕ್‌ಗೆ ಅವಕಾಶವಿಲ್ಲ ಏಕೆ?| ನಾಲ್ಕು ಕಾರಣಗಳಿಗಾಗಗಿ ಪೇಟಿಎಂ ಮೇಲೆ ಆರ್‌ಬಿಐ ಮುನಿಸಿಕೊಂಡಿದೆ|ಪೇಟಿಎಂ ಬ್ಯಾಂಕ್‌ನಲ್ಲಿ ಇ-ವಾಲೆಟ್ ಹೊಂದಿರುವವರ ಗತಿ ಏನು?

ನವದೆಹಲಿ(ಡಿ.20): ಪೇಟಿಎಂ ನ ಪೇಮೆಂಟ್ ಬ್ಯಾಂಕ್ ಹೊಸ ಗ್ರಾಹಕರು ಮತ್ತು ಹೊಸ ಖಾತೆಗಳನ್ನು ಹೊಂದಲು ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಯಾವುದೇ ಹೊಸ ಇ-ವಾಲೆಟ್ ಗಳನ್ನು ಹೊಂದಿಲ್ಲ.

ಆದರೆ ಪೇಟಿಎಂ ಪೇಮೆಂಟ್ ಮೇಲಿನ ಈ ಮುನಿಸಿಗೆ ಆರ್‌ಬಿಐ ಕಾರಣ ನೀಡಿದ್ದು, ಒಟ್ಟು ನಾಲ್ಕು ಪ್ರಮುಖ ಕಾರಣಗಳಿಂದಾಗಿ ಆರ್‌ಬಿಐ ಪೇಮೆಂಟ್ ಬ್ಯಾಂಕ್ ಕುರಿತು ಅತೃಪ್ತಿ ಹೊಂದಿದೆ.

ಪ್ರಮುಖವಾಗಿ ಪೇಮೆಂಟ್ ಬ್ಯಾಂಕ್ ನಿಮ್ಮ ಗ್ರಾಹಕರನ್ನು ಅರಿಯಿರಿ(KYC) ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬುದು ಆರ್‌ಬಿಐ ಆರೋಪ. ಅಲ್ಲದೇ ಪೇಟಿಎಂ ಸಂಸ್ಥಾಪಕ ವಿಜಯ್ ಕುಮಾರ್ ಶರ್ಮಾ ಮತ್ತವರ ಒಡೆತನಕ್ಕೆ ಸೇರಿದ ಕಂಪನಿಗಳ ಷೇರು ಪಾಲುದಾರಿಕೆ ಕುರಿತು ಆರ್‌ಬಿಐ ಗೆ ಸ್ಪಷ್ಟನೆ ಬೇಕಾಗಿದೆ.

ಅಲ್ಲದೇ ಪೇಟಿಎಂ ಬ್ಯಾಂಕ್ ಒಟ್ಟು ಠೇವಣಿ 100 ಕೋಟಿ ರೂ. ಇರದೇ ಇರುವುದು ಹಾಗೂ ಪೇಮೆಂಟ್ ಬ್ಯಾಂಕ್‌ಗಳ ದಿನದ ವಹಿವಾಟು ನಿರ್ಬಂಧದ ನಿಬಂಧನೆಗಳನ್ನೂ ಪೇಟಿಎಂ ಪೇಮೆಂಟ್ ಬ್ಯಾಂಕ್ ಉಲ್ಲಂಘಿಸಿದೆ ಎನ್ನುವುದು ಆರ್‌ಬಿಐ ನೀಡಿರುವ ಸ್ಪಷ್ಟನೆಯಾಗಿದೆ.

ಪೇಟಿಎಂನಿಂದ ಬಳಕೆದಾರರಿಗೆ ಹೊಸ ಸೌಲಭ್ಯ

ಪೆಟಿಎಂ ಮುಖ್ಯಸ್ಥನಿಂದ 20 ಕೋಟಿ ಸುಲಿಗೆ ಯತ್ನ

ಪೇಟಿಎಂ ಮಾಲ್‌ನಿಂದ ಹಬ್ಬದ ಋತುವಿಗೆ ಭರ್ಜರಿ ಕೊಡುಗೆ!

click me!