ಸಂಚಾರದಲ್ಲಿ ಕ್ರಾಂತಿ ಮಾಡಲಿದೆ ಎನ್ನಲಾದ ಹೈಪರ್‌ಲೂಪ್ ಯೋಜನೆ ಆರಂಭಕ್ಕೂ ಮುನ್ನವೇ ಬಂದ್

By Kannadaprabha NewsFirst Published Dec 25, 2023, 9:42 AM IST
Highlights

ಯಾಣದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಲಾಗಿದ್ದ ಹೈಪರ್‌ಲೂಪ್ ಯೋಜನೆ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿದೆ. ನಂ.1 ಶ್ರೀಮಂತ ಎಲಾನ್ ಮಸ್ಕ್ ಆರಂಭಿಸಿದ್ದ ಹೈಪರ್‌ಲೂಪ್ ಒನ್ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಪ್ರಯಾಣದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಲಾಗಿದ್ದ ಹೈಪರ್‌ಲೂಪ್ ಯೋಜನೆ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿದೆ. ನಂ.1 ಶ್ರೀಮಂತ ಎಲಾನ್ ಮಸ್ಕ್ ಆರಂಭಿಸಿದ್ದ ಹೈಪರ್‌ಲೂಪ್ ಒನ್ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೈಪರ್‌ಲೂಪ್ ಯೋಜನೆ ಅಂತ್ಯವಾಗಿರುವ ಕುರಿತಾಗಿ ವರದಿ ಪ್ರಕಟಿಸಿರುವ ಬ್ಲೂಮ್‌ಬರ್ಗ್, 'ಹೈಪರ್‌ಲೂಪ್ ಒನ್ ಯೋಜನೆಯಲ್ಲಿ ಹಣ ತೊಡಗಿಸಿದ್ದ ರಿಚರ್ಡ್ ಬ್ರಾನ್‌ಸನ್ ತಮ್ಮ ಹಣವನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೇ ಈ ಕಂಪನಿಯಲ್ಲಿರುವ ಉಳಿದ ನೌಕರರನ್ನು ಮುಂದಿನ ವರ್ಷಾಂತ್ಯದ ವೇಳೆಗೆ ವಜಾ ಮಾಡಲಾಗುತ್ತದೆ' ಎಂದು ಹೇಳಿದೆ.

ಬೆಂಗಳೂರಿನಲ್ಲೂ ಆರಂಭಕ್ಕೆ ಚರ್ಚೆ
ಹೈಪರ್‌ಲೂಪ್ ಯೋಜನೆಯನ್ನು ಬೆಂಗಳೂರು ವಿಮಾನ ನಿಲ್ದಾಣದಿಂದಲೂ ಆರಂಭಿಸಲು ನಿರ್ಧರಿಸಲಾಗಿತ್ತು. ಬೆಂಗಳೂರು ವಿಮಾನ ನಿಲ್ದಾಣದಿಂದ ನಗರ ಕೇಂದ್ರಕ್ಕೆ ಹೈಪರ್ ಲೂಪ್ ಅಳವಡಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಬಳಿಕ ಡೋನ್ ಟ್ಯಾಕ್ಸಿ ಸೇರಿದಂತೆ ಇತರ ಸಂಚಾರ ವ್ಯವಸ್ಥೆ 7 ಬಗ್ಗೆ ಚಿಂತನೆ ಆರಂಭವಾಗಿತ್ತು.

ಏನಿದು ಹೈಪರ್‌ಲೂಪ್‌ಯೋಜನೆ:

ಅಯಸ್ಕಾಂತದ ಶಕ್ತಿಯನ್ನು ಬಳಸಿಕೊಂಡು ಪೈಪ್ ಮುಖಾಂತರ ಅತಿ ವೇಗದ ಸಂಚಾರ ಸೌಲಭ್ಯ ಒದಗಿಸುವುದು ಹೈಪರ್‌ಲೂಪ್‌ ಯೋಜನೆಯಾಗಿದೆ. ಇದರಲ್ಲಿ ರೈಲುಗಳು ಗಂಟೆಗೆ 1127 ಕಿ.ಮೀ.ವೇಗದಲ್ಲಿ ಚಲಿಸಲಿದೆ. ಅಲ್ಲದೇ ಇದು ಈಗಿರುವ ಎಲ್ಲಾ ಸಾರಿಗೆ ಸೌಲಭ್ಯಗಳಿಗೆ ಹೋಲಿಸಿದರೆ ಇದು ಹೆಚ್ಚು ಪರಿಸರಸ್ನೇಹಿಯಾಗಿರಲಿದೆ ಎನ್ನಲಾಗಿತ್ತು. ಹೀಗಾಗಿ ಎಲಾನ್ ಮಸ್ಕ್ ಈ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿ ಹೈಪರ್‌ಲೂಪ್ ಒನ್ ಯೋಜನೆಯನ್ನು ಆರಂಭಿಸಿದ್ದರು. ಇದಕ್ಕಾಗಿ  ಅಮೆರಿಕದ ನೆವಾಡ ಮರುಭೂಮಿಯಲ್ಲಿ ಕೆಲವು ಪ್ರತಿಕೃತಿಗಳನ್ನು ರಚನೆ ಮಾಡಲಾಗಿತ್ತು. ಆದರೆ ಇದರ ಎಂಜಿನಿಯರಿಂಗ್ ವ್ಯವಸ್ಥೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತು ವಿಶ್ವದ ಯಾವುದೇ ದೇಶಗಳಿಂದಲೂ ಯೋಜನೆ ಆರಂಭಕ್ಕೆ ಪ್ರಸ್ತಾವ ಬರದೇ ಇರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಜಗತ್ತಿನ ಮೊದಲ ಹೈಪರ್‌ಲೂಪ್‌ ಭಾರತದಲ್ಲಿ? ಏನಿದು? ಇಲ್ಲಿದೆ ಮಾಹಿತಿ

2020ರಲ್ಲಿ ಮೊದಲು ಹೈಪರ್ ಲೂಪ್‌ನ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿತ್ತು. ಈ ವೇಳೆ 170 ಕಿ.ಮೀ. ವೇಗವನ್ನು ಸಾಧಿಸಲಾಗಿತ್ತು. ಇದಾದ ಬಳಿಕ 2022 ಯೋಜನೆಯನ್ನು ಬದಲಾಯಿಸಿರುವುದಾಗಿ ಘೋಷಿಸಿದ ಮಸ್ಕ್, ಜನರ ಬದಲು ಸರಕನ್ನು ಇದರಲ್ಲಿ ಸಾಗಿಸಲು ನಿರ್ಧರಿ ಸಲಾಗಿದೆ ಎಂದು ಹೇಳಿದ್ದರು. ಇದಾದ ಬಳಿಕ ಒಂದಷ್ಟು ಹೂಡಿಕೆದಾರರು ಯೋಜನೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಈ ಯೋಜನೆಯನ್ನು ಇದೀಗ ಕೈಬಿಡಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.

ಕೇವಲ 30 ನಿಮಿಷದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ, ಇದು ಸಾಧ್ಯ ಎಂದು ತೋರಿಸಿದ ಐಐಟಿ ಮದ್ರಾಸ್‌!

click me!