300 ಬಿಲಿಯನ್ ಡಾಲರ್ ಕ್ಲಬ್‌ಗೆ ಎಲಾನ್ ಮಸ್ಕ್; 22.50 ಲಕ್ಷ ಆಸ್ತಿ ಹೊಂದಿದ ವಿಶ್ವದ ಮೊದಲಿಗ!

By Suvarna NewsFirst Published Oct 28, 2021, 5:42 AM IST
Highlights
  • ಮಸ್ಕ್‌ ಆಸ್ತಿ ಒಂದೇ ದಿನ 2.70 ಲಕ್ಷ ಕೋಟಿ ರು.ನಷ್ಟುಹೆಚ್ಚಳ
  • ಇಷ್ಟುಆಸ್ತಿ ಹೊಂದಿದ ವಿಶ್ವದ ಮೊದಲಿಗ ಎಂಬ ಹಿರಿಮೆ ಸನ್ನಿಹಿತ
  • 22.50 ಲಕ್ಷ ಆಸ್ತಿ ಕ್ಲಬ್‌ ಸೇರಲಿದ್ದಾರೆ ಎಲನ್ ಮಸ್ಕ್

ವಾಷಿಂಗ್ಟನ್‌(ಅ.28): ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ, ಟೆಸ್ಲಾ ಸೇರಿದಂತೆ ಹಲವು ಉದ್ಯಮ ಸಮೂಹಗಳ ಮಾಲೀಕ ಅಮೆರಿಕದ ಎಲಾನ್‌ ಮಸ್ಕ್‌, ಸದ್ಯದಲ್ಲೇ 300 ಬಿಲಿಯನ್‌ ಡಾಲರ್‌ (22.50 ಲಕ್ಷ) ಆಸ್ತಿ ಕ್ಲಬ್‌ ಸೇರಿದ ವಿಶ್ವದ ಮೊದಲಿಗ ಎಂಬ ಹಿರಿಮೆಗೆ ಪಾತ್ರರಾಗುವ ಸಾಧ್ಯತೆ ಇದೆ.

ಬೆಜೋಸ್‌, ಮಸ್ಕ್‌ ಸಾಲಿಗೆ ರಿಲಯನ್ಸ್‌ ಒಡೆಯ: 100 ಶತಕೋಟಿ ಡಾಲರ್‌ ಕ್ಲಬ್‌ಗೆ ಅಂಬಾನಿ!

ಮಂಗಳವಾರ ಮಸ್ಕ್‌ ಒಡೆತನದ ಕಂಪನಿಗಳ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಕಾರಣ ಅವರ ಆಸ್ತಿ ಒಂದೇ ದಿನದಲ್ಲಿ 2.70 ಲಕ್ಷ ಕೋಟಿ ರು.ನಷ್ಟುಹೆಚ್ಚಳವಾಗುವ ಮೂಲಕ 287 ಶತಕೋಟಿ ಡಾಲರ್‌ (21.50 ಲಕ್ಷ ಕೋಟಿ ರು.) ತಲುಪಿದೆ. ಸದ್ಯ ಅಮೆರಿಕ ಷೇರುಪೇಟೆ ಭಾರೀ ಏರುಗತಿದೆ. ಏರಿಕೆ ಗತಿ ಹೀಗೆಯೇ ಮುಂದುವರೆದ ಒಂದು ಅಥವಾ ಎರಡು ದಿನಗಳಲ್ಲಿ ಎಲಾನ್‌ ಮಸ್ಕ್‌ 300 ಶತಕೋಟಿ ಡಾಲರ್‌ ಕ್ಲಬ್‌ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ವಿಶೇಷವೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಮಸ್ಕ್‌ ಆಸ್ತಿಯಲ್ಲಿ 10 ಲಕ್ಷ ಕೋಟಿ ರು.ನಷ್ಟುಭಾರೀ ಏರಿಕೆ ದಾಖಲಾಗಿದೆ.

ಮತ್ತೊಂದು ಹೈಪ್ರೊ​ಫೈಲ್‌ ವಿಚ್ಛೇದ​ನ: ಮಸ್ಕ್‌ ದಂಪತಿ ಡೈವೋ​ರ್ಸ್‌!

ಹಟರ್ಜ್ ಗ್ಲೋಬಲ್‌ ಹೋಲ್ಡಿಂಗ್ಸ್‌ ಐಎನ್‌ಸಿ ಟೆಸ್ಲಾದಿಂದ ಒಂದು ಲಕ್ಷ ಎಲೆಕ್ಟ್ರಾನಿಕ್‌ ವಾಹನಗಳನ್ನು ಆರ್ಡರ್‌ ಮಾಡುತ್ತಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಮಂಗಳವಾರ ಟೆಸ್ಲಾ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ ಕಂಡಿತ್ತು.

ವಿಶ್ವದ ಟಾಪ್‌ 3 ಸಿರಿವಂತರು
ಎಲಾನ್‌ ಮಸ್ಕ್‌ 21.50 ಲಕ್ಷ ಕೋಟಿ ರು.
ಜೆಫ್‌ ಬೆಜೋಸ್‌ 14.70 ಲಕ್ಷ ಕೋಟಿ ರು.
ಬೆರ್ನಾರ್ಡ್‌ ಅರ್ನಾಲ್ಟ್‌ 12.37 ಲಕ್ಷ ಕೋಟಿ ರು.

ಬ್ಲೂಂಬರ್ಗ್‌ ಬಿಲಿಯೆನರ್ಸ್‌ ಇಂಡೆಕ್ಸ್‌ ಅನ್ವಯ ಹಾಲಿ ಎಲಾನ್‌ ಮಸ್ಕ್‌ 21.50 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಮೊದಲ ಸ್ಥಾನದಲ್ಲಿ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ 14.70 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿ ಮತ್ತು ಐಷಾರಾಮಿ ವಸ್ತುಗಳ ಉತ್ಪಾದನಾ ಸಂಸ್ಥೆ ಲ್ಯೂಯಿಸ್‌ ವ್ಯೂಟನ್‌ ಮಾಲೀಕ ಬೆರ್ನಾರ್ಡ್‌ ಅರ್ನಾಲ್ಟ್‌ 12.37 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್ ವಾಸಿಸುವುದು ಮಾತ್ರ ಬಾಡಿಗೆ ಮನೆಯಲ್ಲಿ!

ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಚಿತ್ತ ಹರಿಸಿದೆ. ಹೀಗಾಗಿ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿಯಾಗಿರುವ ಟೆಸ್ಲಾಗೆ ಭಾರಿ ಬೇಡಿಕೆ ಇದೆ. ಶೀಘ್ರದಲ್ಲೇ ಭಾರತದಲ್ಲೂ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿದೆ. ಹೀಗಾಗಿ ಎಲನ್ ಮಸ್ಕ್ ಆಸ್ತಿ ಹಾಗೂ ಆದಾಯದಲ್ಲಿ ಹಲವು ದಾಖಲೆ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಲನ್ ಮಸ್ಕ್ ಹುಟ್ಟುಹಾಕಿರುವ ಸ್ಪೇಸ್ ಎಕ್ಸ್(Space X) ಕಂಪನಿ ಇದೀಗ ಪ್ರಯೋಗಿಕ ಹಂತದಲ್ಲಿದೆ. ಆದರೆ ಭವಿಷ್ಯದಲ್ಲಿ ಇದೇ ಸ್ಪೇಸ್ ಎಕ್ಸ್ ಕಂಪನಿ ಅತ್ಯಂತ ಯಶಸ್ವಿ ಹಾಗೂ ಅತೀ ಹೆಚ್ಚು ಆದಾಯ ತಂದುಕೊಡುವ ಕಂಪನಿಯಾಗಿ ಬೆಳೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಎಲಾನ್ ಮಸ್ಕ್ 13 ವರ್ಷಗಳ ಹಿಂದೆ ಯಾರು ಊಹಿಸದ ಜೀವನ ಮಾಡಿದ್ದಾರೆ. ಹೌದು, ಇದೀಗ ವಿಶ್ವದ ಅತ್ಯಂತ ಶ್ರೀಮಂತನಾಗಿರುವ ಎಲಾನ್ ಮಸ್ಕ್ 2008ರಲ್ಲಿ ಗೆಳೆಯರಿಂದ ಸಾಲ ಪಡೆದು ದಿನ ದೂಡಿದ್ದಾರೆ. 2008ರಲ್ಲಿ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿಗೆ ಹಣ ಹೂಡಿಕೆ ಮಾಡಿದ ಎಲಾನ್ ಮಸ್ಕ್ ತೀವ್ರ ಹಿನ್ನಡೆ ಅನುಭವಿಸಿದ್ದರು. ತನ್ನಲ್ಲಿರುವ ಎಲ್ಲಾ ಹಣವನ್ನು ಟೆಸ್ಲಾ ಕಂಪನಿಗೆ ಸುರಿದ ಮಸ್ಕ್‌ಗೆ 2008ರಲ್ಲಿ ಉದ್ಭವಿಸಿದ ಆರ್ಥಿಕ ಹಿಂಜರಿತ ಪೆಟ್ಟು ನೀಡಿತು. ಟೆಸ್ಲಾ ನಷ್ಟದಲ್ಲಿ ಮುಳುಗಿತು. 2008ರಲ್ಲಿ ಎಲೆಕ್ಟ್ರಿಕ್ ಕಾರಿನ ಕುರಿತು ಹೆಚ್ಚಿನವರು ಖರೀದಿ ದೂರದ ಮಾತು, ಕಾರಿನ ಕುರಿತು ಕೇಳಲು ಕೂಡ ಆಸಕ್ತಿ ತೋರಿಸಿರಲಿಲ್ಲ. ಈ ಕುರಿತು 2008ರಲ್ಲಿ ತಮ್ಮ ನಷ್ಟ ಹಾಗೂ ಕಷ್ಟದ ಜೀವನ ಕುರಿತು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

click me!