Elon Mask tweet:ಅಮೆರಿಕದಲ್ಲಿರೋ ಭಾರತೀಯ ಪ್ರತಿಭೆಗಳನ್ನು ಹಾಡಿ ಹೊಗಳಿದ ಎಲಾನ್ ಮಸ್ಕ್

Suvarna News   | Asianet News
Published : Dec 01, 2021, 02:02 PM ISTUpdated : Dec 01, 2021, 02:31 PM IST
Elon Mask tweet:ಅಮೆರಿಕದಲ್ಲಿರೋ ಭಾರತೀಯ ಪ್ರತಿಭೆಗಳನ್ನು ಹಾಡಿ ಹೊಗಳಿದ ಎಲಾನ್ ಮಸ್ಕ್

ಸಾರಾಂಶ

ಟ್ವಿಟರ್ ಸಿಇಒ ಹುದ್ದೆಗೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ನೇಮಕಗೊಂಡಿರೋದನ್ನು ಶ್ಲಾಘಿಸಿ ಜಗತ್ತಿನ ಅನೇಕ ಪ್ರಸಿದ್ಧ ವ್ಯಕ್ತಿಗಳು ಟ್ವೀಟ್ ಮಾಡುತ್ತಿದ್ದಾರೆ. ಈ ನಡುವೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾರತೀಯ ಪ್ರತಿಭೆಗಳನ್ನು ಹೊಗಳಿ ಮಾಡಿರೋ ಟ್ವೀಟ್ ಸಾಕಷ್ಟು ಸದ್ದು ಮಾಡುತ್ತಿದೆ. 

ನ್ಯೂಯಾರ್ಕ್ (ಡಿ.1): ಭಾರತೀಯ ಸಂಜಾತ ಪರಾಗ್ ಅಗರ್ವಾಲ್ (Parag Agrawal)P ಸೋಮವಾರ (ನ.30) ಟ್ವಿಟ್ಟರ್ ನ (Twitter)  ಹೊಸ ಸಿಇಒ(CEO) ಆಗಿ ನೇಮಕಗೊಂಡಿದ್ದಾರೆ. ಇದು ಭಾರತ ಹಾಗೂ ವಿಶ್ವಾದ್ಯಂತ ನೆಲೆಸಿರೋ ಭಾರತೀಯರಿಗೆ ಹೆಮ್ಮೆಯ ಸಂಗತಿ. ಗೂಗಲ್(Google), ಮೈಕ್ರೋಸಾಫ್ಟ್ (Microsoft) ಸೇರಿದಂತೆ ವಿದೇಶಿ ಮೂಲದ ದೈತ್ಯ ಸಂಸ್ಥೆಗಳ ಸಿಇಒ ಹುದ್ದೆಯನ್ನುಕಳೆದ ಕೆಲವು ವರ್ಷಗಳಿಂದ ಭಾರತೀಯರು (Indians) ಅಲಂಕರಿಸುತ್ತಿದ್ದಾರೆ. ಈಗ ವಿಶ್ವದ ದೊಡ್ಡ ಟೆಕ್ ಕಂಪನಿ ಟ್ವಿಟ್ಟರ್ ಗೂ (Twitter) ಭಾರತೀಯ ಮೂಲದ ವ್ಯಕ್ತಿ ಸಿಇಒ ಆಗಿರೋದು ಭಾರತೀಯರಿಗೆ ಗರ್ವ ಮೂಡಿಸಿದೆ. ಈ ಸಂತಸದ ನಡುವೆ ಟೆಸ್ಲಾ (Tesla) ಸಂಸ್ಥೆಯ ಸಿಇಒ ಎಲಾನ್ ಮಸ್ಕ್ (Elon Mask) ಟ್ವೀಟ್ (Tweet)  ಮುಖಾಂತರ ಭಾರತೀಯ ಪ್ರತಿಭೆಗಳನ್ನು ಹಾಡಿ ಹೊಗಳಿರೋದು ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿದೆ.

ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

ಅಮೆರಿಕ (America) ಮೂಲದ ಸಂಸ್ಥೆಗಳ ಏಳ್ಗೆಯಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಪಾತ್ರವನ್ನುಮಸ್ಕ್ ಪ್ರಶಂಶಿಸಿದ್ದಾರೆ. ಸ್ಟ್ರೈಪ್ (Stripe) ಸಿಇಒ ಪ್ಯಾಟ್ರಿಕ್ ಕೊಲಿಸನ್ (Patrick Collison) ಗೂಗಲ್(Google), ಐಬಿಎಂ( IBM), ಮೈಕ್ರೋಸಾಫ್ಟ್ (Microsoft) ಹಾಗೂ ಈಗ ಟ್ವಿಟ್ಟರ್ (Twitter) ಸಿಇಒ ಪಟ್ಟವನ್ನು ಭಾರತೀಯ ಮೂಲದ ವ್ಯಕ್ತಿಗಳು ಅಲಂಕರಿಸಿರೋ ಬಗ್ಗೆ ತಮ್ಮ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಟೆಸ್ಲಾ ಸಿಇಒ 'ಅಮೆರಿಕ ಭಾರತೀಯ ಪ್ರತಿಭೆಗಳಿಂದ ಸಾಕಷ್ಟು ಲಾಭ ಪಡೆದುಕೊಂಡಿದೆ' ಎಂದು  ಟ್ವೀಟ್ ಮಾಡಿದ್ದಾರೆ. 'ಭಾರತೀಯ ಪ್ರತಿಭೆಗಳ ಕುರಿತು ಎಲಾನ್ ಮಸ್ಕ್  ಅವರ ಈ ಅಸಾಧಾರಣ ಹೇಳಿಕೆ ಪ್ರಸಕ್ತ ಪರಿಸ್ಥಿತಿಯಲ್ಲಿ ಭಾರತೀಯರ ಪಾಲಿಗೆ ಸ್ವಲ್ಪವಾದರೂ ಬದಲಾವಣೆ ತರುತ್ತದೆ' ಎಂದು ಟ್ವಿಟರ್ ಬಳಕೆದಾರರೊಬ್ಬರು ಆಶಯ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿರೋ ಭಾರತೀಯ ಪ್ರತಿಭೆಗಳನ್ನು ಹೊಗಳಿ ಎಲಾನ್ ಮಸ್ಕ್ ಮಾಡಿರೋ ಟ್ವೀಟ್ ಗೆ ಕೇವಲ 20 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್(likes) ದೊರಕಿದ್ದು, 20 ಸಾವಿರ ರೀಟ್ವೀಟ್Retweet) ಆಗಿದೆ. 

Indiaʼs GDP grew 8.4% in Q2: ಭಾರತದ್ದು ಈಗ ವಿಶ್ವದಲ್ಲೇ ವೇಗದ ಜಿಡಿಪಿ!

ಟ್ವಿಟರ್ ಹೊಸ ಸಿಇಒ ಸದ್ಯ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಈ ಹುದ್ದೆಗೇರಲು ಬೇಕಾದ ಎಲ್ಲ ಅಸಾಧಾರಣ ಅರ್ಹತೆಗಳು ಪರಾಗ್ ಅಗರ್ವಾಲ್ ಗಿದೆ. ಪರಾಗ್ ಅಗರ್ವಾಲ್ ಬಾಂಬೈ(Bombay) ಐಐಟಿಯಲ್ಲಿ (IIT) ಕಂಪ್ಯೂಟರ್ ಸೈನ್ಸ್ (Computer Science) ವಿಷಯದಲ್ಲಿ ಪದವಿ ಮುಗಿಸಿದ ಬಳಿಕ ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫೋರ್ಡ್((Stanford University)  ವಿಶ್ವವಿದ್ಯಾಲಯದಿಂದ ಪಿ.ಎಚ್ ಡಿ (Ph.d)ಪದವಿ ಪಡೆದಿದ್ದಾರೆ. 2011ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಟ್ವಿಟರ್ ಸೇರಿದ ಅಗರ್ವಾಲ್, 2017ರಲ್ಲಿ ಸಿಟಿಒ (CTO) ಹುದ್ದೆಗೇರಿದ್ದರು. ಇಂದು ಸಿಇಒ ಪಟ್ಟ ಅಲಂಕರಿಸಿದ್ದಾರೆ. ಟ್ವಿಟರ್ ಸೇರಿದ ಕೇವಲ 10 ವರ್ಷಗಳಲ್ಲೇ ಉನ್ನತ ಹುದ್ದೆಗೇರಿರೋದು ಅಗರ್ವಾಲ್ ಪ್ರತಿಭೆ ಎಂಥದ್ದು ಎಂಬುದನ್ನು ತೋರಿಸುತ್ತದೆ. ಸಂಸ್ಥೆಯ ತಂತ್ರಜ್ಞಾನದ ಮುಖ್ಯಸ್ಥರಾಗಿ ಅವರು, ಮೆಷಿನ್ ಲರ್ನಿಂಗ್ (Machine Learning), ಕೃತಕ ಇಂಟೆಲಿಜೆನ್ಸ್ (Artificial Intelligence) ಹಾಗೂ ತಾಂತ್ರಿಕ ಕಾರ್ಯತಂತ್ರಗಳ ಮೇಲ್ವಿಚಾರಣೆ ನಡೆಸಿದ್ದರು ಕೂಡ. ಟ್ವಿಟ್ಟರ್ (Twitter) ಕಂಪನಿಯ ಪ್ರತಿ ಮಹತ್ವದ ನಿರ್ಧಾರದ ಹಿಂದೆ ಪರಾಗ್ ಅಗರ್ವಾಲ್ ಇದ್ದರು, ಹೀಗಾಗಿ ಸಂಸ್ಥೆ ಮತ್ತಷ್ಟು ಬೆಳೆಯಲು ಸಾಧ್ಯವಾಯಿತು' ಎಂದು ಸಂಸ್ಥೆಯ ನಿರ್ಗಮಿತ ಸಿಇಒ ಜಾಕ್ ಡೊರ್ಸಿ( Jack Dorsey) ಸಿಬ್ಬಂದಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.  ಟ್ವಿಟರ್ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಉತ್ಸುಕವಾಗಿರೋ ಸಮಯದಲ್ಲೇ ಅಗರ್ವಾಲ್ ಸಂಸ್ಥೆಯ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈ ಸಂದರ್ಭದಲ್ಲಿ ಎಲಾನ್ ಮಸ್ಕ್ ಪ್ರಶಂಸೆ ಅಗರ್ವಾಲ್ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸೋದ್ರಲ್ಲಿ ಸಂಶಯವಿಲ್ಲ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ