ವೊಡಾಫೋನ್‌ನಲ್ಲೂ ನೂರಾರು ನೌಕರರಿಗೆ ಗೇಟ್‌ಪಾಸ್‌?

By Kannadaprabha NewsFirst Published Jan 15, 2023, 8:40 AM IST
Highlights
  • 1 ಲಕ್ಷ ನೌಕರರ ಹೊಂದಿರುವ ವೊಡಾಫೋನ್‌
  •  ಹೆಚ್ಚಿನ ಉದ್ಯೋಗ ಕಡಿತ ಲಂಡನ್‌ನಲ್ಲಿ: ವರದಿ
  • 5 ವರ್ಷದಲ್ಲೇ ಅತಿ ದೊಡ್ಡ ಉದ್ಯೋಗ ಕಡಿತ


ನವದೆಹಲಿ: ಟೆಲಿಕಾಮ್‌ ಕ್ಷೇತ್ರದ ದೊಡ್ಡ ಕಂಪನಿಗಳಲ್ಲಿ ಒಂದಾದಂತಹ ವೊಡಾಫೋನ್‌ ಸಹ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಜಗತ್ತಿನಾದ್ಯಂತ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಕಂಪನಿ ನಿರ್ಧರಿಸಿದೆ. ಇದರಲ್ಲಿ ಅತಿ ಹೆಚ್ಚು ಲಂಡನ್‌ ಕಚೇರಿ ಸಿಬ್ಬಂದಿಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಕಂಪನಿಯ ಮಾರುಕಟ್ಟೆ ಕುಸಿತ ಕಾಣುತ್ತಿರುವುದರಿಂದ 2026ರೊಳಗೆ 15 ಸಾವಿರ ಕೋಟಿ ರು. ಉಳಿಸುವ ಗುರಿಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಹಾಕಿಕೊಂಡಿತ್ತು. ಹಾಗಾಗಿ ಈಗ ನಡೆಯುತ್ತಿರುವ ಉದ್ಯೋಗ ಕಡಿತವೂ ಸಹ ಇದಕ್ಕೆ ಸಂಬಂಧಿಸಿದೆ ಎಂದು ವರದಿ ಹೇಳಿದೆ. ಇಂಟರ್‌ನೆಟ್‌ ದರ ಮತ್ತು ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಟೆಲಿಕಾಮ್‌ ಕಂಪನಿಗಳು ನಷ್ಟಕ್ಕೆ ತುತ್ತಾಗುತ್ತಿವೆ. ಯುರೋಪಿನ ಟೆಲಿಕಾಂ ಸಂಸ್ಥೆಗಳಾದ ಸ್ಪೇನ್‌ನ ಟೆಲೆಫೋನಿಯಾ, ಫ್ರಾನ್ಸ್‌ನ ಆರೆಂಜ್‌ ಸಂಸ್ಥೆಗಳು ಈಗಾಗಲೇ ಶೇ.50ರಷ್ಟು ಉದ್ಯೋಗ ಕಡಿತ ಮಾಡಿವೆ.

ಜಗತ್ತಿನಾದ್ಯಂತ 1.04 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ವೊಡಾಫೋನ್‌, ಭಾರತದಲ್ಲಿ ಎಷ್ಟು ಉದ್ಯೋಗಿಗಳನ್ನು ತೆಗೆಯಲಾಗುತ್ತದೆ ಎಂಬುದರ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಭಾರತದಲ್ಲಿ ಐಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು 'ವಿಐ' ಹೆಸರಿನಲ್ಲಿ ವೊಡಾಪೋನ್‌ ಕಾರ‍್ಯನಿರ್ವಹಿಸುತ್ತಿದೆ.

ಗೂಗಲ್‌ನಿಂದಲೂ ಶೀಘ್ರದಲ್ಲೇ ಸಿಬ್ಬಂದಿ ಕಡಿತ..! ಸಂಬಳದ ವೆಚ್ಚ ಇಳಿಸಲು ಹೂಡಿಕೆದಾರರ ಒತ್ತಾಯ

ಮುಂಬರುವ ಕಷ್ಟಕರ ಸಮಯಕ್ಕೆ ಸಿದ್ಧರಾಗಿ: ಟ್ವಿಟ್ಟರ್‌ ಸಿಬ್ಬಂದಿಗೆ ಇ - ಮೇಲ್ ಕಳಿಸಿದ Elon Musk..!

 

click me!