ಟಿಸಿಎಸ್ ಉದ್ಯೋಗ ಕಡಿತದಿಂದ ಷೇರು ಕುಸಿತ ಮಾತ್ರವಲ್ಲ ಬೆಂಗಳೂರಿಗೆ ಶುರುವಾಯ್ತು ನಡುಕ

Published : Jul 28, 2025, 04:07 PM IST
TCS Dividend

ಸಾರಾಂಶ

ಅತೀ ದೊಡ್ಡ ಟೆಕ್ ಕಂಪನಿ ಟಿಸಿಎಸ್ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಟಿಸಿಎಸ್ ಷೇರು ಮೌಲ್ಯ ಕುಸಿತಗೊಂಡಿದೆ. ಇಷ್ಟೇ ಅಲ್ಲ ಇದೀಗ ಈ ಉದ್ಯೋಗ ಕಡಿತ ಬೆಂಗಳೂರಿಗೆ ನಡುಕ ಹುಟ್ಟಿಸಿದೆ. ಕಾರಣವೇನು?

ಬೆಂಗಳೂರು (ಜು.28) ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ ) ಘೋಷಣೆ ಟೆಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಟಿಸಿಎಸ್ ಸಿಇಒ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮುಂದಿನ ವರ್ಷ 12,000 ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಎಐ ಅಳವಡಿಕೆ ಸೇರಿದಂತೆ ಹಲವು ಕಾರಣಗಳಿಂದ ಟಿಸಿಎಸ್ ಉದ್ಯೋಗ ಕಡಿತ ಮಾಡಲು ಮುಂದಾಗಿದೆ. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್ ಷೇರುಗಳು ಮೌಲ್ಯ ಕುಸಿತಗೊಂಡಿದೆ. ಇದರ ಪರಿಣಾಮ ಕೇವಲ ಇಷ್ಟು ಮಾತ್ರವಲ್ಲ, ಇದೀಗ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ.

ಬೆಂಗಳೂರು ರಿಯಲ್ ಎಸ್ಟೇಟ್ ಬೇಡಿಕೆ ಕುಸಿತ

ಬೆಂಗಳೂರು ರಿಯಲ್ ಎಸ್ಟೇಟ್ ಅತ್ಯಂ ಬೂಮಿಂಗ್ ಕ್ಷೇತ್ರ. ಅದದರಲ್ಲೂ ಟಿಸಿಎಸ್ ಸೇರಿದಂತೆ ಎಲ್ಲಾ ಟೆಕ್ ಕಂಪನಿಗಳು 2 ವರ್ಷದಿಂದ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿ ಕಚೇರಿಯಂದಲೇ ಕೆಲಸ ಮಾಡಲು ಆದೇಶ ನೀಡಿದೆ. ಹೀಗಾಗಿ ತಮ್ಮ ತಮ್ಮ ಊರು, ಮನೆಗಳಲ್ಲಿದ್ದ ಉದ್ಯೋಗಿಗಳು ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದರು. ಇದರಿಂದ ಬೆಂಗಳೂರು ರಿಯಲ್ ಎಸ್ಟೇಟ್ ಬೇಡಿಕೆ, ಮೌಲ್ಯ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಟಿಸಿಎಸ್ ಉದ್ಯೋಗ ಕಡಿತದಿಂದ ಬೆಂಗಳೂರು ರಿಯಲ್ ಎಸ್ಟೇಟ್ ಮೇಲೆ ತೀವ್ರ ಹೊಡೆತ ನೀಡಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕೆಲ ಕಾರಣ ನೀಡಿದ್ದಾರೆ.

ಟೆಕ್ ಕಂಪನಿಗಳಿಂದ ಟಿಸಿಎಸ್ ಮಾದರಿ ಅನುಸರಿಸುವ ಸಾಧ್ಯತೆ

ದೊಡ್ಡ ದೊಡ್ಡ ಟೆಕ್ ಕಂಪನಿಗಳು ಉದ್ಯೋಗ ಕಡಿತ ಘೋಷಿಸಿದರೆ ಆಪತ್ತು ಹೆಚ್ಚು. ಈಗಾಗಲೇ ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಕೆಲ ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಇದೀಗ ಟಿಸಿಎಸ್ ಉದ್ಯೋಗ ಕಡಿತ ಮಾಡುತ್ತಿದೆ. ಇದರ ಪರಿಣಾಮ ಇತರ ಟೆಕ್ ಕಂಪನಿಗಳು ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಹೀಗೆ ಒಂದರ ಹಿಂದೆ ಮತ್ತೊಂದು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಾ ಹೋದರೆ ಬೆಂಗಳೂರು ರಿಯಲ್ ಎಸ್ಟೇಟ್ ಕುಸಿಯಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಏರುತ್ತಿದ್ದ ಬಾಡಿಗೆ, ಡೆಪಾಸಿಟ್‌ಗೂ ಬೀಳಲಿದೆ ಕತ್ತರಿ

ಬೆಂಗಳೂರಿನಲ್ಲಿ ಇತ್ತೀಚೆಗೆ ಮನೆ ಬಾಡಿಗೆ, ಡೆಪಾಸಿಟ್ ಭಾರಿ ಏರಿಕೆಯಾಗಿತ್ತು. ಕೆಲ ಮನೆ ಮಾಲೀಕರ ಬೇಡಿಕೆಗಳು ಅಸಾಧ್ಯ ಅನ್ನೋ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಉದ್ಯೋಗ ಕಡಿತ ಘೋಷಣೆಗಳು ಹೆಚ್ಚಾದರೆ, ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೆ ತೀವ್ರ ಹೊಡೆತ ಬೀಳಲಿದೆ. ಇದು ನೇರವಾಗಿ ಮನೆ ಮಾಲೀಕರ ಜೇಬಿಗೂ ಕತ್ತರಿ ಹಾಕಲಿದೆ. ಬಾಡಿಗೆ ಮನೆ ಬೇಡಿಕೆ ಕಡಿಮೆಯಾಗಲಿದೆ. ಪಿಜಿ, ಇತರ ಬಾಡಿಗೆ ರೂಪದ ಮನೆಗಳ ಬೇಡಿಕೆಯೂ ಇಳಿಕಯಾಗಲಿದೆ. ಜನಸಾಮಾನ್ಯರಿಗೂ ಇದು ವರದಾನವಾಗಿದೆ. ಆದರೆ ಮನೆ ಮಾಲೀಕರಿಗೆ ಹೊಡೆತ ನೀಡಲಿದೆ.

ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಸೇರಿದಂತೆ ಹಲವು ಟೆಕ್ ಕಂಪನಿಗಳಿರುವ ವಲಯದಲ್ಲಿ ಮನೆ ಬಾಡಿಗೆ ಲಕ್ಷ ರೂಪಾಯಿಗೆ ತಲುಪಿತ್ತು. ಇದೀಗ ಉದ್ಯೋಗ ಕಡಿತದಿಂದ ಘೋಷಣೆಯಿಂದ ಏರುತ್ತಿರುವ ಮನೆ ಬಾಡಿಗೆಗೆ ಬ್ರೇಕ್ ಬೀಳಲಿದೆ.

ಟಿಸಿಎಸ್ ಉದ್ಯೋಗ ಕಡಿತ ಘೋಷಣೆಯಿಂದ ಅಲ್ಲೋಲ ಕಲ್ಲೋಲ

ಟಿಸಿಎಸ್ ಕಂಪನಿ ಶೇಕಡಾ 2 ರಷ್ಟು ಉದ್ಯೋಗ ಕಡಿತ ಮಾಡಲು ಮುಂದಾಗಿದೆ. 2026ರಿಂದ ಟಿಸಿಎಸ್ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡಲಿದೆ. ಒಟ್ಟು 12,000 ಉದ್ಯೋಗ ಕಡಿತಗೊಳ್ಳಲಿದೆ. ಮಿಡ್ಲ್ ಲೆವಲ್, ಸಿನೀಯರ್ ಲೆವಲ್ ಉದ್ಯೋಗಿಗಳ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಎಂದು ಟಿಸಿಎಸ್ ಸಿಇಒ ಹೇಳಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?