
ನವದೆಹಲಿ (ಆ.07) ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಳೆದ ತಿಂಗಳು ಬರೋಬ್ಬರಿ 12,000 ಉದ್ಯೋಗ ಕಡಿತ ಘೋಷಿಸಿ ಐಟಿ ಕ್ಷೇತ್ರದಲ್ಲೇ ಅಲ್ಲೋಲ ಕಲ್ಲೋಲವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಟಿಸಿಎಸ್ ಇದೀಗ ಗುಡ್ ನ್ಯೂಸ್ ಕೊಟ್ಟಿದೆ. ಮುಂದಿನ ತಿಂಗಳಿನಿಂದ ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಮಾಡುತ್ತಿದೆ. ಸೆಪ್ಟೆಂಬರ್ 1 ರಿಂದ ಸ್ಯಾಲರಿ ಹೈಕ್ ಅನ್ವಯವಾಗಲಿದೆ. ಕಂಪನಿಯ ಶೇಕಡಾ 80 ರಷ್ಟು ಉದ್ಯೋಗಳಿಗೆ ವೇತನ ಹೆಚ್ಚಾಗಲಿದೆ. ಈ ಕುರಿತು ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದೆ.
ಕಂಪನಿ ಉದ್ಯೋಗಿಗಳಿಗೆ ಧನ್ಯವಾದ
ಜ್ಯೂನಿಯರ್ ಲೆವೆಲ್, ಮಿಡ್ ಲೆವೆಲ್ ಸೇರಿದಂತೆ ಶೇಕಡಾ 80 ರಷ್ಟು ಉದ್ಯೋಗಿಗಳಿಗೆ ಸ್ಯಾಲರಿ ಹೆಚ್ಚಾಗುತ್ತಿದೆ. ಆಗಸ್ಟ್ 6 ರಂದು ಉದ್ಯೋಗಳಿಗೆ ಈ ಕುರಿತು ಇಮೇಲ್ ಕಳುಹಿಸಲಾಗಿದೆ. ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಉದ್ಯೋಗಿಗಳಿಗೆ ಧನ್ಯವಾದಗಳು. ಜೊತೆಯಾಗಿ ಮತ್ತಷ್ಟು ಸಾಧನೆಯ ಜೊತೆಗೆ ಟಿಸಿಎಸ್ ಕಟ್ಟಿ ಬೆಳೆಸೋಣ ಎಂದು ಸಂದೇಶ ಕಳುಹಿಸಲಾಗಿದೆ. ಟಿಸಿಎಸ್ ಸ್ಯಾಲರಿ ಹೈಕ್ ಸಿ3ಎ ಉದ್ಯೋಗಿಗಳ ವರೆಗೂ ನೀಡಲಾಗುತ್ತದೆ. ಟಿಸಿಎಸ ವೈ ಉದ್ಯೋಗಿಗಳು ಅಂದರೆ ಟ್ರೈನಿ, ಇನ್ನು ಸಿ1, ಸಿ2 ಹಾಾಗೂ ಸಿ3ಎ ಹಂತ ಜ್ಯೂನಿಯರ್ ಲೆವೆಲ್‌ನಿಂದ ಮಿಡ್ ಹಾಗೂ ಸಿನಿಯರ್ ಲೆವೆಲ್ ವರೆಗಿದೆ.
ಷೇರುಗಳ ಮೌಲ್ಯ ಕುಸಿತ
ಕಳೆದ ತಿಂಗಳ ಉದ್ಯೋಗ ಕಡಿತ ಘೋಷಣೆ ಐಟಿ ಕ್ಷೇತ್ರದಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು. ಟಿಸಿಎಸ್ ಉದ್ಯೋಗ ಕಡಿತ ಘೋಷಣೆಯಿಂದ ಇತರ ಕಂಪನಿಗಳು ಇದೇ ಹಾದಿಯಲ್ಲಿ ಸಾಗಲಿದೆ ಅನ್ನೋ ಆತಂಕವೂ ಎದುರಾಗಿದೆ. ಜನವರಿ 2026ರಿಂದ ಶೇಕಡಾ 2ರಷ್ಟು ಟಿಸಿಎಸ್ ಉದ್ಯೋಗ ಕಡಿತ ಮಾಡಲಿದೆ ಎಂದಿತ್ತು. ಟಿಸಿಎಸ್ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 2ರಷ್ಟು ಉದ್ಯೋಗಿಗಳನ್ನು ಕಡಿತ ಮಾಡಲಾಗುತ್ತಿದೆ ಎಂದಿತ್ತು. 12,000 ಉದ್ಯೋಗ ಕಡಿತ ಹಂತ ಹಂತದಲ್ಲಿ ನಡೆಯಲಿದೆ. ಟಿಸಿಎಸ್ ಕಂಪನಿಯಲ್ಲಿ ಒಟ್ಟ 6,13,069 ಉದ್ಯೋಗಿಗಳಿದ್ದಾರೆ. 2026ರ ಜನವರಿಯಿಂದ ಉದ್ಯೋಗ ಕಡಿತ ಆರಂಭಗೊಳ್ಳಲಿದೆ. ಈ ಘೋಷಣೆ ಬೆನ್ನಲ್ಲೇ ಟಿಸಿಎಸ್ ಷೇರು ಮಾರುಕಟ್ಟೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಟಿಸಿಎಸ್ ಷೇರಗುಲು ಶೇಕಡಾ 34ರಷ್ಟು ಕುಸಿತ ಕಂಡಿತ್ತು. ಟಿಸಿಎಸ್ ಷೇರುಗಳು ಮೌಲ್ಯ 4584 ರೂಪಾಯಿಯಿಂದ 3030.75 ರೂಪಾಯಿಗೆ ಇಳಕೆಯಾಗಿತ್ತು. ಕಳೆ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಅನುಭವಿಸಿದ ಪೈಕಿ ಟಿಸಿಎಸ್ ಕೂಡ ಒಂದಾಗಿದೆ.
ಹಲವು ದಿಗ್ಗಜ ಕಂಪನಿಗಳಲ್ಲಿ ಉದ್ಯೋಗ ಕಡಿತ
ಟಿಸಿಎಸ್ ಇತ್ತೀಚೆಗೆ ಉದ್ಯೋಗ ಕಡಿತ ಘೋಷಿಸಿದೆ. ಆದರೆ ಇದಕ್ಕೂ ಮೊದಲು ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಹಂತ ಹಂತವಾಗಿ ಉದ್ಯೋಗ ಕಡಿತ ಮಾಡಿದೆ. ಭಾರತದ ಟಿಸಿಎಸ್ ಕಂಪನಿ ಉದ್ಯೋಗ ಕಡಿತ ಭಾರತೀಯ ಐಟಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.