ಸರ್ಕಾರಿ ಉದ್ಯೋಗಿಗಳೇ ಗಮನಿಸಿ, 7ನೇ ವೇತನ ಆಯೋಗದಡಿಯಲ್ಲಿ ದೊರೆತ ಸಂಬಳ ಬಾಕಿಗಿದೆ ತೆರಿಗೆ ಪರಿಹಾರ

By Suvarna News  |  First Published Aug 25, 2022, 12:29 PM IST

ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಬದಲಾವಣೆಗಳಾಗಿರುವ ಕಾರಣ ಈ ವರ್ಷ ಪಾವತಿಸಲಾಗಿರುವ ಬಾಕಿ ವೇತನ ಹಾಗೂ ಪಿಂಚಣಿಗಳ ಮೊತ್ತದ ಮೇಲೆ ಹೆಚ್ಚಿನ ತೆರಿಗೆ ಬೀಳುವ ಸಾಧ್ಯತೆಯಿದೆ. ಆದ್ರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್  89 (1) ಅಡಿಯಲ್ಲಿ ಬಾಕಿ ವೇತನ ಅಥವಾ ಮುಂಗಡ ವೇತನ ಅಥವಾ ಕುಟುಂಬ ಪಿಂಚಣಿ ಬಾಕಿ ಪಡೆದಿರುವ ವ್ಯಕ್ತಿ ತೆರಿಗೆ ಪರಿಹಾರ ಅಥವಾ ಟ್ಯಾಕ್ಸ್ ರಿಲೀಫ್ ಕ್ಲೈಮ್ ಮಾಡಬಹುದು.
 


ನವದೆಹಲಿ (ಆ.25): ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಬಳಿಕ ಹೆಚ್ಚಳಗೊಂಡ ವೇತನ ಹಾಗೂ ಭತ್ಯೆಗಳ ಬಾಕಿಯನ್ನು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಪಾವತಿಸಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಏಳನೇ ವೇತನ ಆಯೋಗದ ಅನ್ವಯ ವೇತನಗಳು ಹಾಗೂ ಪಿಂಚಣಿಗಳನ್ನು ಪಡೆಯುತ್ತಿದ್ದಾರೆ. ತೆರಿಗೆ ಸ್ಲ್ಯಾಬ್ ಗಳಲ್ಲಿನ ಬದಲಾವಣೆಗೆ ಅನುಗುಣವಾಗಿ ಈ ವರ್ಷ ಪಾವತಿಸಲಾಗಿರುವ ಬಾಕಿ ವೇತನ ಹಾಗೂ ಪಿಂಚಣಿಗಳ ಮೊತ್ತದ ಮೇಲೆ ಹೆಚ್ಚಿನ ತೆರಿಗೆ ಬೀಳುವ ಸಾಧ್ಯತೆಯಿದೆ. ಆದರೆ, ಬಾಕಿ ವೇತನ ಪಡೆದಿರುವ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 89 ರ ಅಡಿಯಲ್ಲಿ ಕ್ಲೈಮ್ ಮಾಡಿಕೊಳ್ಳಲು ಅವಕಾಶವಿದೆ. ಕಾಯ್ದೆಯ ಸೆಕ್ಷನ್  89 (1) ಅಡಿಯಲ್ಲಿ ಬಾಕಿ ವೇತನ ಅಥವಾ ಮುಂಗಡ ವೇತನ ಅಥವಾ ಕುಟುಂಬ ಪಿಂಚಣಿ ಬಾಕಿ ಪಡೆದಿರುವ ವ್ಯಕ್ತಿ ತೆರಿಗೆ ಪರಿಹಾರ ಅಥವಾ ಟ್ಯಾಕ್ಸ್ ರಿಲೀಫ್  ಕ್ಲೈಮ್ ಮಾಡಬಹುದು. ಈ ಪರಿಹಾರ ಪಡೆಯಲು ಸರ್ಕಾರಿ ಉದ್ಯೋಗಿಗಳು ಅರ್ಜಿ ನಮೂನೆ 10E ಅನ್ನು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಫೈಲ್ ಮಾಡಬೇಕು.  ತೆರಿಗೆದಾರರು ಸೆಕ್ಷನ್ 89ರ ಅಡಿಯಲ್ಲಿ ಅರ್ಜಿ ನಮೂನೆ 10ಇ ಸಲ್ಲಿಕೆ ಮಾಡದೆ ತೆರಿಗೆ ಪರಿಹಾರಕ್ಕೆ  ಕ್ಲೈಮ್ ಮಾಡಿದ್ರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಲಿದ್ದಾರೆ. ಇನ್ನು ಅರ್ಜಿ ನಮೂನೆ 10ಇ ಸಲ್ಲಿಕೆ ಮಾಡಿದ ಬಳಿಕ ನಿಮ್ಮ ಐಟಿಆರ್ ಫೈಲಿಂಗ್ ನಲ್ಲಿ ತೆರಿಗೆ ಪರಿಹಾರ ಕಾಲಂ ಅಡಿಯಲ್ಲಿ ಮಾಹಿತಿಗಳನ್ನು ನಮೂದಿಸೋದು ಕಡ್ಡಾಯ. ಹೀಗೆ ಮಾಡಿದ್ರೆ ಮಾತ್ರ ನಿಮಗೆ ತೆರಿಗೆ ಹಣ ಮರುಪಾವತಿಯಾಗುತ್ತದೆ.

ಆನ್ ಲೈನ್ ನಲ್ಲಿ 10ಇ ಅರ್ಜಿ ಸಲ್ಲಿಕೆ ಹೇಗೆ?
ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ಮುಖಾಂತರ ಸರ್ಕಾರಿ ಉದ್ಯೋಗಿಗಳು 10ಇ ಅರ್ಜಿ ಸಲ್ಲಿಕೆ ಮಾಡಬಹುದು. ಅದಕ್ಕಾಗಿ ಈ ಸರಳ ಹಂತಗಳನ್ನು ಅನುಸರಿಸಬೇಕು. 
*ಮೊದಲಿಗೆ www.incometax.gov.in ಈ ವೆಬ್ ಸೈಟ್ ಗೆ ಲಾಗಿ ಇನ್ ಆಗಿ.
*ಆ ಬಳಿಕ ಇ-ಫೈಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿರುವ ಅರ್ಜಿಗಳ ಪಟ್ಟಿಯಲ್ಲಿ 'ತೆರಿಗೆ ವಿನಾಯ್ತಿ ಹಾಗೂ ಪರಿಹಾರಗಳು/ಫಾರ್ಮ್ 10ಇ' ಆಯ್ಕೆ ಮಾಡಿ.

Tap to resize

Latest Videos

ದುಬಾರಿ ವಸ್ತು ಖರೀದಿಗೆ ಖಾತೆಯಲ್ಲಿ ಹಣವಿಲ್ಲವಾ? ಚಿಂತೆ ಬೇಡ, ಡೆಬಿಟ್ ಕಾರ್ಡ್ ಇದ್ರೆ ಸಾಕು, ಸಿಗುತ್ತೆ ಇಎಂಐ ಸೌಲಭ್ಯ

*ಮೌಲ್ಯಮಾಪನ ವರ್ಷ (Assessment Year) ಆಯ್ಕೆ ಮಾಡಿ ಹಾಗೂ ಮುಂದುವರಿಕೆ (continue) ಆಯ್ಕೆ ಮೇಲೆ ಕ್ಲಿಕ್ ಮಾಡಿ. 
*ಫಾರ್ಮ್ 10ಇ ವಿವಿಧ ಬಾಕಿಗಳಿಗೆ ಸಂಬಂಧಿಸಿ 5 ಅನುಬಂಧಗಳನ್ನು (Annexures) ಹೊಂದಿದೆ. ಇದರಲ್ಲಿ ನೀವು ಅನುಬಂಧ-1 ಆಯ್ಕೆ ಮಾಡಬೇಕು. ಇದು ಮುಂಗಡವಾಗಿ ವೇತನ ಅಥವಾ ಬಾಕಿ ಪಡೆದಿರೋದಕ್ಕೆ ಸಂಬಂಧಿಸಿದೆ. 
*ಅರ್ಜಿ ನಮೂನೆ 10ಇ ಸ್ವಯಂಚಾಲಿತವಾಗಿ  ಸೆಕ್ಷನ್ 89ರ ಅಡಿಯಲ್ಲಿ ಲಭಿಸುವ ತೆರಿಗೆ ಪರಿಹಾರದ ಹಣವನ್ನು ಲೆಕ್ಕ ಮಾಡುತ್ತದೆ.
*ಒಮ್ಮೆ ನೀವು ಅರ್ಜಿ ನಮೂನೆ  10ಇ ಫೈಲ್ ಮಾಡಿದ ಬಳಿಕ ನೀವು ಅದನ್ನು ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ನಲ್ಲಿ ಕ್ಲೈಮ್ ಮಾಡಬೇಕು. ಆಗ ಮಾತ್ರ ನಿಮಗೆ ಆ ಹಣ ಸಿಗುತ್ತದೆ. ಈ ಮಾಹಿತಿಗಳನ್ನು ನಿಮ್ಮ ಐಟಿಆರ್ ತೆರಿಗೆ ಪರಿಹಾರ ಕಾಲಂ ಅಡಿಯಲ್ಲಿ ನಮೂದಿಸಿ. 

287ರೂ. ಪಿಜ್ಜಾ ಆರ್ಡರ್ ರದ್ದುಗೊಳಿಸಿದ ಝೊಮ್ಯಾಟೊಗೆ ಬಿತ್ತು 10,000ರೂ. ದಂಡ!

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ (central government employees)8ನೇ ವೇತನ ಆಯೋಗ (8th Pay Commission) ರಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆಗಸ್ಟ್ ಪ್ರಾರಂಭದಲ್ಲಿ ವಿತ್ತ ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಮಾಹಿತಿ ನೀಡಿದ್ದರು. 
 

click me!