30 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಕಂಪನಿ ಎನಿಸಿಕೊಂಡ ಟಾಟಾ ಗ್ರೂಪ್‌!

By Santosh Naik  |  First Published Feb 6, 2024, 7:27 PM IST

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ 2024 ರಲ್ಲಿ ಇಲ್ಲಿಯವರೆಗೆ 9 ಪ್ರತಿಶತದಷ್ಟು ಏರಿಕೆ ಕಂಡಿದ್ದರೆ. ಟಾಟಾ ಮೋಟಾರ್ಸ್ ಲಿಮಿಟೆಡ್ 20 ಪ್ರತಿಶತದಷ್ಟು ಪ್ರಗತಿ ಸಾಧಿಸಿದೆ. ಟಾಟಾ ಪವರ್ ಶೇ.18ರಷ್ಟು ಜಿಗಿದರೆ, ಇಂಡಿಯನ್ ಹೋಟೆಲ್ಸ್ ಶೇ.16ರಷ್ಟು ಏರಿಕೆ ಕಂಡಿದೆ.


ಮುಂಬೈ (ಫೆ.6): ಟಾಟಾ ಗ್ರೂಪ್‌ ಸಮೂಹದ ಎಲ್ಲಾ ಕಂಪನಿಗಳು ಸೇರಿದಂತೆ ಅದರ ಮಾರುಕಟ್ಟೆ ಮೌಲ್ಯ ಫೆಬ್ರವರಿ 6 ರಂದು 30 ಲಕ್ಷ ಕೋಟಿಯ ಗಡಿ ದಾಟಿದೆ. ಅ ಮೂಲಕ, 30 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಗಡಿ ದಾಟಿದ ದೇಶದ ಮೊಟ್ಟಮೊದಲ ವಾಣಿಜ್ಯ ಸಮೂಹ ಇದಾಗಿದೆ. ಈ ವರ್ಷ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್ ಟಾಟಾ ಪವರ್ ಮತ್ತು ಇಂಡಿಯನ್ ಹೊಟೇಲ್ ಷೇರುಗಳಲ್ಲಿ ಕಂಡುಬಂದ ಖರೀದಿ ಪ್ರಕ್ರಿಯೆಯ ಆಸಕ್ತಿಯಿಂದ ಷೇರುದಾರರ ಸಂಪತ್ತಿನ ಏರಿಕೆ ಕಂಡಿದೆ. 2024ರಲ್ಲಿ ಈವರೆಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಬೆಲೆಗಳಲ್ಲಿ ಶೇ.9ರಷ್ಟು ಏರಿಕೆ ಕಂಡಿದ್ದರೆ, ಇನ್ನು ಟಾಟಾ ಮೋಟಾರ್ಸ್‌ನ ಷೇರುಗಳಲ್ಲಿ ಶೇ. 20ರಷ್ಟು ಏರಿಕೆಯಾಗಿದೆ. ಇನ್ನು ಟಾಟಾ ಪವರ್‌ನ ಷೇರುಗಳ ಬೆಲೆಯಲ್ಲಿ ಶೇ. 18ರಷ್ಟು, ಇಂಡಿಯನ್‌ ಹೋಟೆಲ್ಸ್‌ ಷೇರುಗಳಲ್ಲಿ ಶೇ. 16ರಷ್ಟು ಏರಿಕೆ ಕಂಡಿದೆ. ಟಾಟಾ ಗ್ರೂಪ್‌ನ ಒಟ್ಟು 24 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಿವೆ. ಈ ನಡುವೆ, ತೇಜಸ್ ನೆಟ್‌ವರ್ಕ್, ಟಾಟಾ ಎಲಿಕ್ಸಿ ಮತ್ತು ಟಾಟಾ ಕೆಮಿಕಲ್ಸ್ ಈ ವರ್ಷ ಇಲ್ಲಿಯವರೆಗೆ ಶೇಕಡಾ 10 ಕ್ಕಿಂತ ಹೆಚ್ಚು ಕುಸಿದಿದ್ದರೆ ಉಳಿದ ಷೇರುಗಳು ಶೇಕಡಾ 1-5 ರ ವ್ಯಾಪ್ತಿಯಲ್ಲಿ ಗಳಿಸಿವೆ.

ಟಿಸಿಎಸ್‌ ಫೆಬ್ರವರಿ 6 ರಂದು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಶೇ. 4ರಷ್ಟು ಏರಿಕೆ ಕಂಡು, 15 ಲಕ್ಷ ಕೋಟಿಯ ಮಾರುಕಟ್ಟೆ ಮೌಲ್ಯ ಕಂಡಿದೆ. 2024ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿ ಪ್ರಮುಖ ಒಪ್ಪಂದಗಳನ್ನು ಪಡೆದಿರುವುದು ಷೇರು ಬೆಲೆ ಏರಿಕೆಗೆ ಕಾರಣವಾಗಿದೆ. ಈವರೆಗೂ ಟಿಸಿಎಸ್‌ 8.1 ಬಿಲಿಯನ್‌ ಯುಎಸ್‌ ಡಾಲರ್‌ ಒಪ್ಪಂದವನ್ನು ಪಡೆದುಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 3.8ರಷ್ಟು ಏರಿಕೆಯಾಗಿದೆ. ಇನ್ನು ಕಂಪನಿಯ ಮ್ಯಾನೇಜ್‌ಮೆಂಟ್‌ ಕೂಡ ದೀರ್ಘಾವಧಿಯಲ್ಲಿ ಕಂಪನಿ ಬೆಳವಣಿಗೆ ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದು, ಸವಾಲಿನ ಸಣ್ಣ ಪುಟ್ಟ ಪರಿಸ್ಥಿತಿಗಳು ಕಡಿಮೆ ಆಗುತ್ತಿದ್ದಂತೆ ಕ್ಲೈಂಟ್‌ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

ಇಂಗ್ಲೆಂಡ್‌ ಮೂಲದ ವಿಮೆ ದೈತ್ಯ ಅವಿಯಾ ಜೊತೆ 15 ವರ್ಷಗಳ ಒಪ್ಪಂದಕ್ಕೆ ಟಿಸಿಎಸ್‌ ಸಹಿ ಹಾಕಿದೆ. ಯುಕೆ ಲೈಫ್‌ ಬ್ಯುಸಿನೆಸ್‌ಅನ್ನು ಬದಲಾಯಿಸುವ ಗುರಿಯಲ್ಲಿ ಒಪ್ಪಂದ ಏರ್ಪಟ್ಟಿದೆ ಎಂದು ಟಾಟಾ ಹೇಳಿದೆ. ಆದರೆ, ಎಷ್ಟು ಮೊತ್ತಕ್ಕೆ ಈ ಒಪ್ಪಂದವಾಗಿ ಎನ್ನುವ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಇದು 500 ಮಿಲಿಯನ್‌ ಡಾಲರ್‌ಗೂ ದೊಡ್ಡ ಮೊತ್ತದ ಒಪ್ಪಂದ ಎನ್ನಲಾಗಿದೆ. ಈ ತ್ರೈಮಾಸಿಕದಲ್ಲಿ ಹೆಚ್ಚೇನೂ ಒಪ್ಪಂದ ಗಳಿಸದೇ ಇದ್ದ ಟಿಸಿಎಸ್‌ಗೆ ಇದು ದೊಡ್ಡ ಒಪ್ಪಂದ ಎನ್ನಲಾಗಿದೆ.

ಸೆಮಿಕಂಡಕ್ಟರ್ ಚಿಪ್ ಕೊರತೆಯ ಪರಿಣಾಮ ಕಡಿಮೆ,  ಕಚ್ಚಾ ವಸ್ತುಗಳ ಬೆಲೆಗಳೂ ಕೂಡ ಕಡಿಮೆಯಾಗಿದೆ, ಅದರೊಂದಿಗೆ ಉತ್ತಮ ತ್ರೈಮಾಸಿಕ ಫಲಿತಾಂಶದ ಬೆನ್ನಲ್ಲೇ ಟಾಟಾ ಮೋಟಾರ್ಸ್‌ ಕಂಪನಿ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಜಾಗ್ವಾರ್ ಲ್ಯಾಂಡ್ ರೋವರ್ (JLR) ವಿಭಾಗವು ಗಮನಾರ್ಹವಾದ 16.2 ಶೇಕಡಾ EBITDA ಮಾರ್ಜಿನ್ ಅನ್ನು ಪೋಸ್ಟ್ ಮಾಡುವ ಮೂಲಕ ಕಂಪನಿಯು ಗಮನಾರ್ಹವಾದ 27 ಶೇಕಡಾ YYY ಪರಿಮಾಣ ಬೆಳವಣಿಗೆಯನ್ನು ಮತ್ತು ಗಣನೀಯ 22 ಶೇಕಡಾ YYY ಆದಾಯದ ಬೆಳವಣಿಗೆಯನ್ನು ಸಾಧಿಸಿದೆ. ಚಿಪ್ ಸವಾಲುಗಳ ಹೊರತಾಗಿಯೂ, JLR ನ ಪೂರೈಕೆಯು ಸುಧಾರಿಸಿದೆ.ಆರ್ಡರ್‌ ಬುಕ್‌ಗಳ ಬ್ಯಾಕ್‌ಲಾಗ್‌ಗಳು ಕಡಿಮೆ ಆಗುತ್ತಿದೆ.

Tap to resize

Latest Videos

ಲಕ್ಷದ್ವೀಪದಲ್ಲಿ ತಾಜ್‌ ಬ್ರ್ಯಾಂಡ್‌ನ ಎರಡು ಐಷಾರಾಮಿ ಹೋಟೆಲ್‌ ನಿರ್ಮಿಸಲು ಟಾಟಾ ನಿರ್ಧಾರ

ಇಂಧನ ವಿಭಾಗದ ಟ್ರೆಂಡ್‌ನ ಕಾರಣದಿಂದಾಗಿ ಟಾಟಾ ಪವರ್‌ ಕೂಡ 2024ರಲ್ಲಿ ಬೆಳವಣಿಗೆ ಕಂಡಿದೆ. ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಕೂಡ ಸರ್ಕಾರ ಮರುಬಳಕೆಯ ಇಂಧನ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ಟಾಟಾ ಪವರ್‌ ಷೇರುಗಳು ಏರಿಕೆ ಕಂಡಿದೆ. 5500 ಮೆಗಾ ವ್ಯಾಟ್‌ ಎನರ್ಜಿ ಪೋರ್ಟ್‌ಫೋಲಿಯೋ ಹೊಂದಿರುವ ಟಾಟಾ ಪವರ್‌, ಸೋಲಾರ್,‌ ವಿಂಡ್‌ ಹಾಗೂ ಹ್ರೈಡ್ರೋಪವರ್‌ಅನ್ನು ನಿಭಾಯಿಸಯತ್ತದೆ.

8 ಕೋಟಿ ರೂ. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಬಿಟ್ಟು ಟಾಟಾ ವಾಹನದಲ್ಲಿ ಪ್ರಯಾಣ ಮಾಡಿದ ಅನಂತ್ ಅಂಬಾನಿ!

click me!