
ಟಾಟಾ ಮೋಟಾರ್ಸ್‌ನ ಎಸ್‌ಯುವಿಗಳು ಯಾವಾಗಲೂ ಶಕ್ತಿಶಾಲಿಗೆ ಹೆಸರುವಾಸಿ. ಇತ್ತೀಚೆಗೆ ಇದಕ್ಕೆ ಸಾಕ್ಷಿ ಸಿಕ್ಕಿದೆ. ಕಳೆದ ವರ್ಷ ಕಂಪನಿ ಬಿಡುಗಡೆ ಮಾಡಿದ ಮಿಡ್-ಸೈಜ್ ಎಸ್‌ಯುವಿ ಟಾಟಾ ಕರ್ವ್(TATA Curvv) ಏಕಕಾಲದಲ್ಲಿ ಮೂರು ಟ್ರಕ್‌ಗಳನ್ನು ಎಳೆಯುವ ವಿಡಿಯೋ ವೈರಲ್ ಆಗುತ್ತಿದೆ. ಮೂರು ಟ್ರಕ್‌ಗಳ ಒಟ್ಟು ತೂಕ 42,000 ಕೆಜಿ. ಟಾಟಾ ಮೋಟಾರ್ಸ್ ಕಾರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಟಾಟಾ ಮೋಟಾರ್ಸ್ ಕಾರ್ಖಾನೆಯ ವೈಮಾನಿಕ ನೋಟದೊಂದಿಗೆ ವಿಡಿಯೋ ಆರಂಭವಾಗುತ್ತದೆ. ನಂತರ, ಗೋಲ್ಡ್ ಎಸೆನ್ಸ್‌ನ ಕ್ಲಾಸಿ ನೆರಳಿನಲ್ಲಿ ಟಾಟಾ ಕರ್ವ್ ಬರುವುದನ್ನು ನಾವು ನೋಡಬಹುದು. 14,000 ಕೆಜಿ ತೂಕದ ಟಾಟಾ ಟ್ರಕ್‌ನ ಮುಂದೆ ಈ ಕರ್ವ್ ನಿಂತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ 1.2 ಲೀಟರ್ ಹೈಪೀರಿಯನ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಅತ್ಯಂತ ಶಕ್ತಿಶಾಲಿ ಮೋಟಾರ್ ಎಂದು ತೋರಿಸಲು ಈ ವಿಶೇಷ ಪವರ್ ಟೆಸ್ಟ್ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಹೊಸ ಎಂಜಿನ್ 123 bhp ಪವರ್ ಮತ್ತು 225 Nm ಟಾರ್ಕ್ ಉತ್ಪಾದಿಸಬಲ್ಲದು. ಟ್ರಾನ್ಸ್‌ಮಿಷನ್ ಆಯ್ಕೆಗಳ ವಿಷಯದಲ್ಲಿ, ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐಚ್ಛಿಕ 7-ಸ್ಪೀಡ್ DCT ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಈ ಟಾಟಾ ಕರ್ವ್ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ ಎಂಬುದು ವಿಶೇಷ. ಟಾಟಾ ಕರ್ವ್‌ನ ವೈಶಿಷ್ಟ್ಯಗಳು, ಪವರ್‌ಟ್ರೇನ್, ಬೆಲೆ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಕರ್ವ್‌ನ ಪವರ್‌ಟ್ರೇನ್ ಬಗ್ಗೆ ಮಾತನಾಡುವುದಾದರೆ, ಟಾಟಾ ಕರ್ವ್‌ನಲ್ಲಿ 3 ಎಂಜಿನ್ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ. ಮೊದಲನೆಯದಾಗಿ 1.2 ಲೀಟರ್ GDI ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ, ಇದು ಗರಿಷ್ಠ 125 bhp ಪವರ್ ಮತ್ತು 225 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲದು. ಎರಡನೆಯದಾಗಿ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ, ಇದು ಗರಿಷ್ಠ 120 bhp ಪವರ್ ಮತ್ತು 170 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲದು. ಇದಲ್ಲದೆ, ಕಾರಿನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಕೂಡ ಲಭ್ಯವಿದೆ, ಇದು ಗರಿಷ್ಠ 118 bhp ಪವರ್ ಮತ್ತು 260 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲದು. ಕಾರಿನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ.
ಕರ್ವ್‌ನ ವೈಶಿಷ್ಟ್ಯಗಳ ಬಗ್ಗೆ ನಾವು ಮಾತನಾಡುವುದಾದರೆ, ಟಾಟಾ ಕರ್ವ್‌ನ ಕ್ಯಾಬಿನ್‌ನಲ್ಲಿ ಗ್ರಾಹಕರಿಗೆ 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿ, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 9 ಸ್ಪೀಕರ್ JBL ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಪನೋರಮಿಕ್ ಸನ್‌ರೂಫ್, ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಮುಂಭಾಗದ ಸೀಟ್, ವೈರ್‌ಲೆಸ್ ಫೋನ್ ಚಾರ್ಜರ್ ಮುಂತಾದವುಗಳನ್ನು ನೀಡಲಾಗಿದೆ. ಇದಲ್ಲದೆ, ಸುರಕ್ಷತೆಗಾಗಿ 360 ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS ತಂತ್ರಜ್ಞಾನವನ್ನು ಕಾರಿನಲ್ಲಿ ನೀಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕರ್ವ್‌ನ ಆರಂಭಿಕ ಎಕ್ಸ್-ಶೋರೂಮ್ ಬೆಲೆ 10 ಲಕ್ಷದಿಂದ 19 ಲಕ್ಷ ರೂ. ವರೆಗೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.