ಖಾಸಗಿ ಕಂಪನಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌: ಶೀಘ್ರದಲ್ಲೇ ಇವರಿಗೆ ಟೇಕ್‌ ಹೋಮ್‌ ಸಂಬಳ ಹೆಚ್ಚಳ!

By BK AshwinFirst Published Aug 19, 2023, 4:14 PM IST
Highlights

ಹೆಚ್ಚು ಸಂಬಳ ಮತ್ತು ಕಂಪನಿ ಒದಗಿಸಿದ ಬಾಡಿಗೆ-ಮುಕ್ತ ವಸತಿ ಹೊಂದಿರುವ ಉದ್ಯೋಗಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುವ ಕ್ರಮದಲ್ಲಿ, ಆದಾಯ ತೆರಿಗೆ ಇಲಾಖೆಯು ಅಂತಹ ವಸತಿಗಾಗಿ ಮೌಲ್ಯಮಾಪನ ಮಾನದಂಡಗಳಿಗೆ ಪರಿಷ್ಕರಣೆಗಳನ್ನು ಪ್ರಕಟಿಸಿದೆ.

ನವದೆಹಲಿ (ಆಗಸ್ಟ್‌ 19, 2023): ಆದಾಯ ತೆರಿಗೆ ಇಲಾಖೆ ತನ್ನ ನಿಯಮದಲ್ಲಿ ಪರಿಷ್ಕರಣೆ ಮಾಡ್ತಿದ್ದು, ಇದರಿಂದ ಹಲವುಖಾಸಗಿ ಉದ್ಯೋಗಿಗಳಿಗೆ ಲಾಭವಾಗಲಿದೆ. ಅಂದರೆ, ಈ ಉದ್ಯೋಗಿಗಳ ಟೇಕ್ - ಹೋಮ್‌ ಸ್ಯಾಲರಿ ಅಥವಾ ಕೈಗೆ ಸಿಗುವ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಅದೇನಪ್ಪಾ ಹೊಸ ನಿಯಮ, ಯಾರಿಗೆಲ್ಲ ಸಂಬಳ ಹೆಚ್ಚಾಗುತ್ತೆ ಅಂತೀರಾ..?

ಹೆಚ್ಚು ಸಂಬಳ ಮತ್ತು ಉದ್ಯೋಗದಾತ ಅಥವಾ ಕಂಪನಿ - ಒದಗಿಸಿದ ಬಾಡಿಗೆ-ಮುಕ್ತ ವಸತಿ ಹೊಂದಿರುವ ಉದ್ಯೋಗಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುವ ಕ್ರಮದಲ್ಲಿ, ಆದಾಯ ತೆರಿಗೆ ಇಲಾಖೆಯು ಅಂತಹ ವಸತಿಗಾಗಿ ಮೌಲ್ಯಮಾಪನ ಮಾನದಂಡಗಳಿಗೆ ಪರಿಷ್ಕರಣೆಗಳನ್ನು ಪ್ರಕಟಿಸಿದೆ. ಹೊಸ ಬದಲಾವಣೆಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದ್ದು, ಅರ್ಹ ಉದ್ಯೋಗಿಗಳಿಗೆ ಟೇಕ್-ಹೋಮ್ ಸಂಬಳವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ. 

ಇದನ್ನು ಓದಿ: ಮೂನ್‌ಲೈಟಿಂಗ್ ಮಾಡೋರಿಗೆ ಶಾಕಿಂಗ್ ನ್ಯೂಸ್‌: ಹೆಚ್ಚುವರಿ ಆದಾಯ ಘೋಷಿಸದ ಸಾವಿರಾರು ಜನರಿಗೆ ಐಟಿ ನೋಟಿಸ್‌

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ಈ ಬದಲಾವಣೆಗಳನ್ನು ತಂದಿದೆ. ಈ ನಿಯಮ ಪರಿಷ್ಕರಣೆ ಉದ್ಯೋಗದಾತರ ಒಡೆತನದಲ್ಲಿರುವ ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರದ ವಲಯದ ಹೊರಗಿನ ಉದ್ಯೋಗಿಗಳಿಗೆ ನೀಡಲಾಗುವ ಸುಸಜ್ಜಿತ ವಸತಿಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.

ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಅಂತಹ ವಸತಿಗಳ ಮೌಲ್ಯಮಾಪನವು ಈ ಕೆಳಗಿನಂತಿರುತ್ತದೆ:

  • 2011 ರ ಜನಗಣತಿಯ ಪ್ರಕಾರ 40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ, ಮೌಲ್ಯಮಾಪನವು ವೇತನದ 10% ಆಗಿರುತ್ತದೆ ಮತ್ತು ಹಿಂದಿನ 15% ಕ್ಕಿಂತ ಕಡಿಮೆಯಾಗಿದೆ.
  • 2011 ರ ಜನಗಣತಿಯ ಪ್ರಕಾರ 15 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಆದರೆ 40 ಲಕ್ಷವನ್ನು ಮೀರದ ನಗರಗಳಲ್ಲಿ, ಮೌಲ್ಯಮಾಪನವು ವೇತನದ 7.5% ಆಗಿರುತ್ತದೆ. ಅಂದರೆ, ಈ ಹಿಂದಿನ 10% ಕ್ಕಿಂತ ಕಡಿಮೆ ಆಗಿರುತ್ತದೆ.

ಇದನ್ನೂ ಓದಿ: ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!

ಈ ತಿದ್ದುಪಡಿಯು ಹೆಚ್ಚು  ಸಂಬಳ ಮತ್ತು ಉದ್ಯೋಗದಾತ-ಒದಗಿಸಿದ ವಸತಿಗಳನ್ನು ಪಡೆಯುವ ಉದ್ಯೋಗಿಗಳಿಗೆ ಪ್ರಯೋಜನಕಾರಿ ಪರಿಣಾಮಗಳನ್ನು ತರುತ್ತದೆ .

ಇದನ್ನೂ ಓದಿ: ಎನ್‌ಡಿಎಯಲ್ಲಿ ಈ 3 ಪಕ್ಷಗಳು ಮಾತ್ರ ಪ್ರಬಲ: ಉದ್ಧವ್‌ ಠಾಕ್ರೆ ಟಾಂಗ್‌; ಆ 3 ಪಕ್ಷಗಳು ಯಾವ್ಯಾವು ನೋಡಿ..

click me!