
How India Instamarted 2025: ಕ್ವಿಕ್ ಡೆಲಿವರಿ ಅಪ್ಲಿಕೇಶನ್‌ಗಳಿಂದ ಶಾಪಿಂಗ್ ಮಾಡುವುದು ಜನರಿಗೆ ಸುಲಭದ ಕೆಲಸವಾಗಿ ಮಾರ್ಪಟ್ಟಿದೆ. ಅದು ಬ್ಲಿಂಕಿಟ್, ಜೆಪ್ಟೊ ಅಥವಾ ಸ್ವಿಗ್ಗಿಯ ಇನ್‌ಸ್ಟಾಮಾರ್ಟ್ ಆಗಿರಲಿ... ಜನರು ಈ ಮೂರು ದಿನಸಿ ಅಪ್ಲಿಕೇಶನ್‌ಗಳಿಂದಲೂ ಹೆಚ್ಚಿನ ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಇನ್‌ಸ್ಟಾಮಾರ್ಟ್ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್ ಶಾಪಿಂಗ್‌ನ ಅಚ್ಚರಿಯ ಪ್ರವೃತ್ತಿ ಕಂಡುಬಂದಿದೆ. 2025ರ ವರ್ಷಕ್ಕೆ ಬಿಡುಗಡೆಯಾದ ವರದಿಯ ಪ್ರಕಾರ, ಚೆನ್ನೈನ ಯೂಸರ್ ಇಡೀ ವರ್ಷದಲ್ಲಿ ಕಾಂಡೋಮ್‌ಗಳಿಗಾಗಿ 1,06,398 ರೂ.ಗಳನ್ನು ಖರ್ಚು ಮಾಡಿದ್ದಾರೆ. ಯೂಸರ್ ವರ್ಷವಿಡೀ 228 ವಿಭಿನ್ನ ಆರ್ಡರ್‌ಗಳನ್ನು ಮಾಡಿದ್ದಾರೆ. ಅಂದರೆ, ಪ್ರತಿ ತಿಂಗಳು ಸರಾಸರಿ 19 ಆರ್ಡರ್‌ಗಳು. ಬೆಂಗಳೂರಿನ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 68,600 ರೂ.ಗಳನ್ನು ಟಿಪ್ ಆಗಿ ನೀಡಿದ್ದಾರೆ. ಇನ್ನೂ ಕೆಲವು ಆಸಕ್ತಿದಾಯಕ ಅಂಕಿಅಂಶಗಳು ಬೆಳಕಿಗೆ ಬಂದಿವೆ.
ಸ್ವಿಗ್ಗಿ ಬ್ಲಾಗ್‌ಪೋಸ್ಟ್ ಪ್ರಕಾರ, ಇನ್‌ಸ್ಟಾಮಾರ್ಟ್‌ನಲ್ಲಿ ಕಾಂಡೋಮ್‌ಗಳು ಜನಪ್ರಿಯ ಉತ್ಪನ್ನವಾಗಿತ್ತು. ಪ್ರತಿ 127 ಆರ್ಡರ್‌ಗಳಲ್ಲಿ ಒಂದು ಕಾಂಡೋಮ್‌ಗಳನ್ನು ಒಳಗೊಂಡಿತ್ತು. ಸೆಪ್ಟೆಂಬರ್‌ನಲ್ಲಿ ಮಾರಾಟವು 24% ರಷ್ಟು ಹೆಚ್ಚಾಗಿದ್ದು, ಕಾಂಡೋಮ್ ಶಾಪಿಂಗ್‌ಗೆ ಇದು ಅತಿದೊಡ್ಡ ತಿಂಗಳು ಎನಿಸಿಕೊಂಡಿದೆ. ಇದಲ್ಲದೆ, ಮುಂಬೈನ ಯೂಸರ್ ಒಬ್ಬರು ಸಕ್ಕರೆ ರಹಿತ ರೆಡ್ ಬುಲ್‌ಗಾಗಿ ₹16.3 ಲಕ್ಷ ಖರ್ಚು ಮಾಡಿದ್ದಾರೆ. ಚೆನ್ನೈನ ಯೂಸರ್ ಒಬ್ಬರು ಸಾಕುಪ್ರಾಣಿಗಳ ಆರೈಕೆಗಾಗಿ ₹2.41 ಲಕ್ಷ ಖರ್ಚು ಮಾಡಿದ್ದಾರೆ.
ಬೆಂಗಳೂರಿನ ಯೂಸರ್ ಒಬ್ಬರು ಡೆಲಿವರಿ ಏಜೆಂಟ್‌ಗಳಿಗೆ ₹68,600 ರೂಪಾಯಿ ಹಣವನ್ನು ಟಿಪ್ ಆಗಿಯೇ ನೀಡಿದ್ದಾರೆ ಎಂದು ವರದಿ ತೋರಿಸುತ್ತದೆ. ಚೆನ್ನೈನಲ್ಲಿ ಒಬ್ಬ ಯೂಸರ್ ₹59,505 ರೂಪಾಯಿ ಹಣ ಟಿಪ್ ನೀಡಿದ್ದಾರೆ. ನೋಯ್ಡಾದಲ್ಲಿ ಯೂಸರ್ ಒಬ್ಬರು ಬ್ಲೂಟೂತ್ ಸ್ಪೀಕರ್, SSD ಮತ್ತು ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಾಗಿ ಒಂದೇ ಬಾರಿಗೆ ₹2.69 ಲಕ್ಷ ಖರ್ಚು ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಬಳಕೆದಾರರು ಒಂದೇ ಬಾರಿಗೆ ಮೂರು ಐಫೋನ್ 17 ಗಳನ್ನು ಖರೀದಿಸಿದ್ದಾರೆ, ಒಟ್ಟು ₹4.3 ಲಕ್ಷ ಖರ್ಚು ಮಾಡಿದ್ದಾರೆ.
ವರದಿಯ ಪ್ರಕಾರ, ಪ್ರೇಮಿಗಳ ದಿನದಂದು ಪ್ರತಿ ನಿಮಿಷಕ್ಕೆ 666 ಗುಲಾಬಿಗಳನ್ನು ಆರ್ಡರ್ ಮಾಡಲಾಗಿದೆ. ರಕ್ಷಾ ಬಂಧನ, ಸ್ನೇಹ ದಿನ ಮತ್ತು ಪ್ರೇಮಿಗಳ ದಿನಗಳನ್ನು ಹೆಚ್ಚಾಗಿ ಸಂಭ್ರಮದಿಂದ ಆಚರಿಸಲಾಗಿದೆ. ಏಕೆಂದರೆ ಜನರು ಹೇರಳವಾಗಿ ಅದೇ ದಿನ ಗಿಫ್ಟ್ ಖರೀದಿಸಿದರು. ಚಿಕ್ಕ ಶಾಪಿಂಗ್ ಆರ್ಡರ್ ಎಂದರೆ ಬೆಂಗಳೂರಿನ ಬಳಕೆದಾರರು ₹10 ಮೌಲ್ಯದ ಪ್ರಿಂಟ್ ಔಟ್ ಆಗಿತ್ತು. ಇನ್ನು ಮುಂಬೈನ ಯೂಸರ್ ಚಿನ್ನಕ್ಕಾಗಿ ಮಾತ್ರ ₹15.16 ಲಕ್ಷ ಖರ್ಚು ಮಾಡಿದ್ದಾರೆ. ಬೆಂಗಳೂರಿನ ಖಾತೆಯೊಂದು ₹4.36 ಲಕ್ಷ ಮೌಲ್ಯದ ನೂಡಲ್ಸ್ ಅನ್ನು ಆರ್ಡರ್ ಮಾಡಿದೆ. ಹೈದರಾಬಾದ್‌ನ ಯೂಸರ್ ಗುಲಾಬಿಗಳಿಗಾಗಿ ₹31,000 ಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ನೋಯ್ಡಾದ ಬಳಕೆದಾರರು 1,343 ಪ್ರೋಟೀನ್ ವಸ್ತುಗಳಿಗೆ ₹2.8 ಲಕ್ಷ ಖರ್ಚು ಮಾಡಿದ್ದಾರೆ. ಈ ಪ್ರವೃತ್ತಿ ತ್ವರಿತ ವಾಣಿಜ್ಯ ವೇದಿಕೆಗಳಲ್ಲಿ ಶಾಪಿಂಗ್ ಮಾಡುವ ಜನರ ತ್ವರಿತ ಹೆಚ್ಚಳವನ್ನು ಪ್ರದರ್ಶಿಸುತ್ತದೆ. ಜನರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಈ ಅಪ್ಲಿಕೇಶನ್‌ಗಳನ್ನು ಬಳಸಲು ಒಗ್ಗಿಕೊಳ್ಳುವ ಅಭ್ಯಾಸವನ್ನು ಇದು ಪ್ರತಿಬಿಂಬಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.