ನಿವೃತ್ತಿ ವಯಸ್ಸಿನಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾದ ಮಹಿಳೆ

By Suvarna News  |  First Published Mar 2, 2024, 2:27 PM IST

ವಯಸ್ಸು ಬರಿ ಲೆಕ್ಕ ಎಂದ್ಕೊಂಡು ದಾರಿಗೆ ಇಳಿದ್ರೆ ನಡೆಯೋದು ಕಷ್ಟವೇನಲ್ಲ. ಅನೇಕ ವೃದ್ಧರು ಜೀವನದ ಕೊನೆ ಘಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಆರವತ್ತೈದು ದೊಡ್ಡ ವಯಸ್ಸೇನಲ್ಲ ಅಂದ್ಕೊಂಡು ಬ್ಯುಸಿನೆಸ್ ಶುರು ಮಾಡಿದ ಮಹಿಳೆಯ ಸ್ಪೂರ್ತಿದಾಯಕ ಕಥೆ ಇಲ್ಲಿದೆ. 
 


ನಿವೃತ್ತಿ ವಯಸ್ಸಿನಲ್ಲಿ ಸ್ವಾವಲಂಭಿಯಾಗುವ ನಿರ್ಧಾರ ತೆಗೆದುಕೊಳ್ಳೋದು ಸುಲಭವಲ್ಲ. ಆಗ ಸವಾಲುಗಳು ಹೆಚ್ಚು. ಎಲ್ಲರಂತೆ ಗೃಹಿಣಿಯಾಗಿ ಜೀವನ ಕಳೆಯುತ್ತೇನೆ ಎಂದು ಕುಳಿತಿದ್ರೆ ಸಾಧನೆ ಮಾಡಿ ಹೆಸರು ಗಳಿಸಿದ ಮಹಿಳೆಯರು ಇನ್ನೂ ಮನೆ ಕೆಲಸ ಮಾಡ್ತಾ ಕಾಲ ಕಳೆಯಬೇಕಿತ್ತು. ಎಲ್ಲರಂತೆ ನಾವಾಗಬಾರದು, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು, ಸ್ವಾವಲಂಭಿ ಬದುಕು ಬದುಕಬೇಕು ಎನ್ನುವ ಕೆಲ ಮಹಿಳೆಯರು ನಿವೃತ್ತಿ ವಯಸ್ಸಿನಲ್ಲಿ ಹೊಸ ಜೀವನ ಶುರು ಮಾಡಿದ್ದಿದೆ. ಅದ್ರಲ್ಲಿ ಪರಾಸ್ ದೇವಿ ಜೈನ್ ಕೂಡ ಒಬ್ಬರು. 

65 ವರ್ಷದ ಪರಾಸ್ ದೇವಿ ಜೈನ್ ಅನೇಕ ಮಹಿಳೆಯರಿಗೆ ದಾರಿದೀಪವಾಗಿದ್ದಾರೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ಏನಾದ್ರೂ ಮಾಡಬೇಕು ಎಂಬ ಆಸೆ ಹೊಂದಿರುವ ಮಹಿಳೆಯರಿಗೆ ಸ್ಫೂರ್ತಿ (inspiration) ಯಾಗಿದ್ದಾರೆ. ರಾಜಸ್ತಾನ ಭಿಲ್ವಾರಾ ನಗರದ ಶಾಸ್ತ್ರಿನಗರದ ನಿವಾಸಿ ಪರಾಸ್ ದೇವಿ ಈ ವಯಸ್ಸಿನಲ್ಲಿ ಸ್ವಂತ ಉದ್ಯಮ (Industry) ಆರಂಭಿಸಲು ಯೋಜಿಸಿ ಯಶಸ್ವಿಯಾಗಿದ್ದಾರೆ.

Tap to resize

Latest Videos

Success Story : ಪಾರ್ಲೆ ಜಿಗೆ ಟಕ್ಕರ್ ನೀಡಿದ್ದ ಮಾರ್ವಾಡಿ ಬ್ಯುಸಿನೆಸ್ ಮ್ಯಾನ್!

ಪರಾಸ್ ದೇವಿ ಪ್ರತಿ ದಿನ ತಾವು ಮಾಡುವ ಅಡುಗೆ ಕೆಲಸವನ್ನೇ ಬ್ಯುಸಿನೆಸ್ ಆಗಿ ಪರಿವರ್ತಿಸಿದ್ದಾರೆ. ಅವರ ಖರ್ಜೂರ (Dates) ಹಾಗೂ ನಿಂಬೆ ಹಣ್ಣಿನ ಚಟ್ನಿ ತಿಂದ ಆಪ್ತರು ಮತ್ತೆ ಮತ್ತೆ ಕೇಳ್ತಿದ್ದರು. ಮನೆಯವರಿಗಲ್ಲದೆ ಸಂಬಂಧಿಕರು, ಸ್ನೇಹಿತರು ಅವರ ಕೈರುಚಿಯನ್ನು ಇಷ್ಟಪಟ್ಟಿದ್ದರು. ಇದನ್ನು ನೋಡಿದ ಪರಾಸ್ ದೇವಿ ಜೈನ್, ಉದ್ಯಮವನ್ನಾಗಿ ಶುರು ಮಾಡುವ ಆಲೋಚನೆ ಮಾಡಿದ್ರು. ಆರಂಭದಲ್ಲಿ 5 ಕೆಜಿ ನಿಂಬೆ ಚಟ್ನಿ ಮಾಡುವ ಮೂಲಕ ಪರಾಸ್ ದೇವಿ ಜೈನ್ ತಮ್ಮ ವ್ಯವಹಾರವನ್ನು ಔಷಚಾರಿಕವಾಗಿ ಶುರು ಮಾಡಿದ್ರು. ಆರಂಭದಲ್ಲಿಯೇ ಒಳ್ಳೆ ಪ್ರತಿಕ್ರಿಯೆ ಸಿಕ್ಕ ಕಾರಣ ಅದನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದರು ಪರಾಸ್ ದೇವಿ ಜೈನ್.

ಇವರು ಮನೆಯಲ್ಲಿಯೇ ಸ್ವಚ್ಛತೆ ಹಾಗೂ ರುಚಿಗೆ ಹೆಚ್ಚು ಮಹತ್ವ ನೀಡಿ ಚಟ್ನಿ ತಯಾರಿಸುತ್ತಾರೆ. ಯಾವುದೇ ಕೃತಕ ಬಣ್ಣವನ್ನು ಬಳಸುವುದಿಲ್ಲ. ಪರಸ್ ದೇವಿ ಜೈನ್ ಬರೀ ತಮ್ಮ ಬಗ್ಗೆ ಆಲೋಚನೆ ಮಾಡಲಿಲ್ಲ. ಅವರು ಈ ಉದ್ಯಮ ಶುರು ಮಾಡುತ್ತಲೆ ತನ್ನ ಸುತ್ತಮುತ್ತಲಿನ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. 

ಸಂಬಂಧಕ್ಕೂ ಬಂತು ವಿಮೆ! ಸಂಗಾತಿ ಮಧ್ಯೆ ಅನ್ಯೋನ್ಯತೆ ಜೊತೆ ಆರ್ಥಿಕ ಭದ್ರತೆ ನೀಡುತ್ತೆ!

ಸುಮಾರು ಹತ್ತು ವರ್ಷಗಳ ಹಿಂದೆ ಇವರ ಚಟ್ನಿ ಬ್ಯುಸಿನೆಸ್ ಶುರುವಾಗಿದೆ. ಆರ್ಡರ್ ಗೆ ತಕ್ಕಂತೆ ಚಟ್ನಿ ತಯಾರಿಸುತ್ತಾರೆ. ತಿಂಗಳಿಗೆ ಒಂದು ಸಾವಿರ ಕಿಲೋ ಚಟ್ನಿ ತಯಾರಿಸೋದಾಗಿ ಪರಾಸ್ ದೇವಿ ಜೈನ್ ಹೇಳ್ತಾರೆ. 
ಆರಂಭದಲ್ಲಿ ಬರೀ ಚಟ್ನಿ ಮಾಡ್ತಿದ್ದವರು ಈಗ ಅದನ್ನು ವಿಸ್ತರಿಸಿದ್ದಾರೆ. ಟೀ ಮಸಾಲ, ಬೆಳ್ಳುಳ್ಳಿ ಪಾಪಡ್, ಮಾಂಗೋಡಿ ಮತ್ತು ಉಪ್ಪಿನಕಾಯಿಯನ್ನೂ ಪರಾಸ್ ದಾಸ್ ಜೈನ್ ಮಾಡಿ ಮಾರಾಟ ಮಾಡ್ತಿದ್ದಾರೆ. ಆರಂಭದಲ್ಲಿ ರಾಜಸ್ಥಾನದ ಜನರಿಗೆ ಮಾತ್ರ ಪರಿಚಯವಿದ್ದ ಈ ಉತ್ಪನ್ನ ಈಗ ಗಡಿ ದಾಟಿದೆ. ಅಜ್ಮೀರ್, ಜೈಪುರ, ಉದಯಪುರ,  ವಿಜಯನಗರವಲ್ಲದೆ ಗುಜರಾತ್ ಹಾಗೂ ದಕ್ಷಿಣ ಭಾರತಕ್ಕೂ ಈಗ  ವ್ಯಾಪಿಸಿದೆ. 

ಅಜ್ಜಿ ಕಲಿಸಿದ ವಿಧಾನವನ್ನೇ ಪರಾಸ್ ದೇವಿ ದಾಸ್ ಅನುಸರಿಸುತ್ತಾರೆ. ಹಾಗಾಗಿ ಈ ಚಟ್ನಿಯನ್ನು ಕೆಲ ದಿನ ಇಡಬಹುದು. ಮನೆಯಲ್ಲಿಯೇ ಮಾಡುವ ಈ ಪದಾರ್ಥವನ್ನು ಮಾರಾಟ ಮಾಡಿ ಪರಾಸ್ ದೇವಿ ಜೈನ್ ನಾಲ್ಕು ಲಕ್ಷ ರೂಪಾಯಿವರೆಗೆ ಸಂಪಾದನೆ ಮಾಡುತ್ತಾರೆ. ನಿಂಬೆ ಹಣ್ಣಿನ ಬೀಜ ತೆಗೆದು ಅದರ ಸಿಪ್ಪೆಯನ್ನು ಕುಟ್ಟಿ, ಜಾಯಿಕಾಯಿ, ಸಕ್ಕರೆ ಹಾಗೂ ಕೆಲ ಮಸಾಲೆ ಹಾಕಿ ಮಿಕ್ಸ್ ಮಾಡಿ ಹತ್ತರಿಂದ ಹದಿನೈದು ದಿನಗಳವರೆಗೆ ಹಾಗೆ ಬಿಟ್ಟು ನಂತ್ರ ಅದನ್ನು ಪ್ಯಾಕ್ ಮಾಡಲಾಗುತ್ತದೆ. 500 ಗ್ರಾಂ ಚಟ್ನಿ ಪ್ಯಾಕೆಟನ್ನು 120 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಪರಾಸ್ ದೇವಿ ಅನೇಕ ಮಹಿಳೆಯರಿಗೆ ಕೆಲಸ ಕೂಡ ನೀಡಿದ್ದಾರೆ.

click me!