Nadia Chauhan: ಅಪ್ಪನ ಕೈ ಹಿಡಿದ ಮಗಳು; ಬುದ್ಧಿವಂತಿಕೆಯಿಂದ್ಲೇ ಲಕ್ಷ ಕೋಟಿ ವ್ಯವಹಾರ ನಡೆಸ್ತಿದೆ ಕಂಪನಿ

By Suvarna News  |  First Published Feb 15, 2024, 4:59 PM IST

ಬ್ಯುಸಿನೆಸ್ ನಲ್ಲಿ ನಿರಂತರತೆ, ಬುದ್ಧಿವಂತಿಕೆ ಬಹಳ ಮುಖ್ಯ. ನಿಂತ ನೀರಾಗಿದ್ರೆ ಯಶಸ್ಸು ಕನಸಾಗುತ್ತದೆ. ಕೆಲಸ ಯಾವುದೇ ಇರಲಿ ಶ್ರದ್ಧೆಯಿಂದ ಮಾಡಿದ್ರೆ ಖಜಾನೆ ತುಂಬುತ್ತೆ ಎಂಬುದಕ್ಕೆ ಇವರು ಉತ್ತಮ ನಿದರ್ಶನ. 


ವ್ಯಾಪಾರದಲ್ಲಿ ಯಶಸ್ವಿಯಾಗ್ಬೇಕು ಅಂದ್ರೆ ವಿದೇಶದಲ್ಲಿ ಓದಿರಬೇಕು, ದೊಡ್ಡ ದೊಡ್ಡ ಡಿಗ್ರಿ ಪಡೆದಿರಬೇಕು ಎಂದೇನಿಲ್ಲ. ವ್ಯಾಪಾರದ ಕಲೆ ಗೊತ್ತಿದ್ದರೆ ಅವಿದ್ಯಾವಂತ ಕೂಡ ವ್ಯಾಪಾರದಲ್ಲಿ ಯಶಸ್ಸು ಸಾಧಿಸಬಲ್ಲ. ಇನ್ನು ವ್ಯಾಪಾರಸ್ಥರ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಮಕ್ಕಳಿಗೆ ರಕ್ತದಲ್ಲಿಯೇ ಆ ಕಲೆ ಬಂದಿರುತ್ತದೆ. ತಂದೆ ನೆಟ್ಟ ಮರಕ್ಕೆ ಬರೀ ನೀರು ಹಾಕ್ತಾ ಅದನ್ನು ಬೆಳೆಸುವ ಪ್ರಯತ್ನ ನಡೆಸದೆ ಅದಕ್ಕೊಂದಿಷ್ಟು ಗೊಬ್ಬರದ ಜೊತೆ ಹೊಸ ಮರಗಳನ್ನು ನೆಟ್ಟು ಬೆಳೆಸುವ ಕಾರ್ಯ ಮಾಡಿದ್ರೆ ವ್ಯಾಪಾರದಲ್ಲಿ ಸಕ್ಸಸ್ ಸಿಗುತ್ತದೆ. ಬುದ್ಧಿವಂತಿಕೆ ಜೊತೆಗೆ ನಿರಂತರತೆ ಬ್ಯುಸಿನೆಸ್ ನಲ್ಲಿ ಅತಿ ಮುಖ್ಯವಾಗುತ್ತದೆ. ಹೆಚ್ಚಿನ ಡಿಗ್ರಿ ಇಲ್ಲದೆ, ವಿದೇಶಕ್ಕೆ ಓದಲು ಹೋಗದೆ ಕುಟುಂಬದ ಬ್ಯುಸಿನೆಸ್ ಗೆ ಕೈ ಹಾಕಿ ಯಶಸ್ಸು ಕಂಡ ಮಹಿಳೆಯರಲ್ಲಿ ಈಗ ನಾವು ಹೇಳ್ತಿರುವ ಮಹಿಳೆ ಸೇರಿದ್ದಾರೆ. ಕಂಪನಿಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಬುದ್ಧಿವಂತಿಕೆ ಕಂಪನಿಯಲ್ಲಿ ಸಾಕಷ್ಟು ಪ್ರಯೋಜನಕ್ಕೆ ಬಂದಿದೆ. ಕಂಪನಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಲು ಸಾಧ್ಯವಾಗಿದೆ.

ಯಶಸ್ವಿ ಉದ್ಯಮಿ ಲೀಸ್ಟ್ ನಲ್ಲಿ ಪಾರ್ಲೆ ಆಗ್ರೋ (Parle Agro) ಮಾಲೀಕ ನಾಡಿಯಾ ಚೌಹಾನ್ ಹೆಸರಿದೆ. ನಾಡಿಯಾ ಚೌಹಾನ್ (Nadia Chauhan) , ಪ್ರಕಾಶ್ ಚೌಹಾನ್ ಮಗಳು. ಸದ್ಯ ಪಾರ್ಲೆ ಆಗ್ರೋದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಜಂಟಿ ನಿರ್ದೇಶಕರಾಗಿದ್ದಾರೆ. ಅವರ ಅಕ್ಕ ಶೌನಾ ಚೌಹಾಣ್ ಕಂಪನಿಯ ಸಿಇಒ (CEO) ಜವಾಬ್ದಾರಿ ಹೊತ್ತಿದ್ದಾರೆ. ಒಂದು ಕಾಲದಲ್ಲಿ 300 ಕೋಟಿ ಮೌಲ್ಯದ ಕಂಪನಿಯನ್ನು ನಾಡಿಯಾ ಚೌಹಾನ್, 8000 ಕೋಟಿಗೆ ತಂದು ನಿಲ್ಲಿಸಿದ್ದಾರೆ. ಕಂಪನಿಯ ಈ ಯಶಸ್ಸಿಗೆ ನಾಡಿಯಾ ಚೌಹಾನ್ ಮುಖ್ಯ ಕಾರಣ ಎನ್ನಲಾಗುತ್ತದೆ.

Tap to resize

Latest Videos

24K ಗೋಲ್ಡ್‌, 159 ವಜ್ರ ಹೊದಿಸಿದ ಜಗತ್ತಿನ ಅತೀ ದುಬಾರಿ ಐಫೋನ್‌, ಅಬ್ಬಬ್ಬಾ.ಬೆಲೆ ಇಷ್ಟೊಂದಾ?

ನಾಡಿಯಾ ಚೌಹಾನ್ ಬಾಲ್ಯದಲ್ಲಿಯೇ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ತಮ್ಮ ತಂದೆ ಜೊತೆ ಮುಂಬೈನಲ್ಲಿರುವ ಮುಖ್ಯ ಕಚೇರಿಗೆ ಬರ್ತಿದ್ದರು. ಪ್ರಕಾಶ್ ಚೌಹಾನ್ 1985ರಲ್ಲಿ ಅಗ್ರೋ ಕಂಪನಿಯನ್ನು ಶುರು ಮಾಡಿದ್ದರು. ಸ್ವೀಡಿಷ್ ಕಂಪನಿಯ ಮಾವಿನ ಉತ್ಪನ್ನವನ್ನು ಟೆಟ್ರಾ ಪ್ಯಾಕ್‌ಗಳಲ್ಲಿ ತಯಾರಿಸುತ್ತಿದ್ದರು. ಆಗಷ್ಟೆ ನಾಡಿಯಾ ಜನನವಾಗಿತ್ತು. ವಿದ್ಯಾಭ್ಯಾಸ ಮುಗಿಸಿದ ನಾಡಿಯಾ ತಮ್ಮ ಹದಿನೇಳನೇ ವಯಸ್ಸಿನಲ್ಲೇ ಕಂಪನಿಗೆ ಸೇರಿದ್ದರು. 2003 ರಲ್ಲಿ ಕಂಪನಿ ಸೇರಿದಾಗ ಕಂಪನಿ ವಹಿವಾಟು ಕೇವಲ 300 ಕೋಟಿ ರೂಪಾಯಿ ಇತ್ತು. 2017 ರ ಹೊತ್ತಿಗೆ ಕಂಪನಿ ವಹಿವಾಟು  4,200 ಕೋಟಿ ರೂಪಾಯಿ ದಾಟಿತ್ತು. 2022-23 ರಲ್ಲಿ ಅದು 8,000 ಕೋಟಿ ರೂಪಾಯಿ ಗಡಿ ದಾಟಿದೆ. 

ಭಾರತದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್‌ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ನೆಟ್‌ವರ್ತ್‌ ಎಷ್ಟು?

ನಾಡಿಯಾ, ತಂದೆ ಶುರು ಮಾಡಿದ್ದ ಉತ್ಪನ್ನದ ಜೊತೆ ಇತರ ಉತ್ಪನ್ನಗಳಿಗೆ ಕೈ ಹಾಕಿದ್ದರು. ನಾಡಿಯಾ ಕಂಪನಿ ಥಮ್ಸ್ ಅಪ್, ಲಿಮ್ಕಾ, ಗೋಲ್ಡ್ ಸ್ಪಾಟ್, ಸಿಟ್ರಾ ಮತ್ತು ಮಾಜಾ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವರ ಪ್ರಮುಖ ಬ್ರ್ಯಾಂಡ್ ಫ್ರೂಟಿ. ಗಳಿಕೆಯಲ್ಲಿ ಶೇಕಡಾ 95ರಷ್ಟು ಫ್ರೂಟಿಯಿಂದ ಬರ್ತಿದೆ. ನಾಡಿಯಾ, 2005 ರಲ್ಲಿ Appy Fizz ಅನ್ನು ಶುರು ಮಾಡಿದ್ರು. ಇದು ಸತ್ಯ ಜನಪ್ರಿಯ ಉತ್ಪನ್ನವಾಗಿದೆ. ಇದಲ್ಲದೆ ಫ್ರೂಟಿ ಫ್ಲೇವರ್ ಬದಲಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ನಿಂಬು ಪಾನಕವನ್ನು ಬಾಟಲಿಯಲ್ಲಿ ನೀಡಲು ಶುರು ಮಾಡಿದ ಮೊದಲ ಕಂಪನಿ ಇದು. ನಾಡಿಯ ಹೊಸ ಹೊಸ ಪ್ರಯೋಗ ಮಾಡ್ತಿರುತ್ತಾರೆ. ಹಲವಾರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದಾರೆ. ಇದರ ಮೂಲಕ ಉತ್ಪಾದನೆ ಹೆಚ್ಚಿಸಲು ಪ್ರಾರಂಭಿಸಿದ್ದಾರೆ. ಕಂಪನಿಯ ಬಾಟಲ್ ವಾಟರ್ ಬ್ರಾಂಡ್ ಬೈಲಿ (Bailey)  ಗ್ರಾಹಕರ ಗಮನ ಸೆಳೆದಿದೆ. ಇದು 1,000 ಕೋಟಿ ವ್ಯವಹಾರ ನಡೆಸಿದೆ. ಒಟ್ಟಿನಲ್ಲಿ ಪಾರ್ಲೆ ಆಗ್ರೋ ಯಶಸ್ಸಿನ ಹಿಂದೆ ನಾಡಿಯಾ ಶ್ರಮವಿದೆ. 

click me!