ಆರೋಗ್ಯ ಕ್ಷೇತ್ರದಲ್ಲಿ ಲಾಭವಿದೆ. ಎಂದೂ ಬೇಡಿಕೆ ಕಡಿಮೆಯಾಗದ ಕ್ಷೇತ್ರಗಳಲ್ಲಿ ಆಹಾರ ಹಾಗೂ ಆರೋಗ್ಯ ಸೇರಿದೆ. ಜನರ ಬೇಡಿಕೆಯನ್ನು ಗಮನಿಸಿ ಲೈಂಗಿಕ ಸುರಕ್ಷತೆ ವಸ್ತುವನ್ನು ತಯಾರಿಸಿದ ಈ ಸಹೋದರರು ಈಗ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ.
ಸುರಕ್ಷಿತ ಲೈಂಗಿಕ ಕ್ರಿಯೆ, ಅನಪೇಕ್ಷಿತ ಗರ್ಭಧಾರಣೆ ತಡೆಯಲು ಕಾಂಡೋಮ್ ಅತ್ಯಗತ್ಯ. ಕಾಂಡೋಮ್ ದಂಪತಿ ಮಧ್ಯೆ ಆರೋಗ್ಯಕರ ಸಂಭೋಗವನ್ನು ಪ್ರೋತ್ಸಾಹಿಸುತ್ತದೆ. ಭಾರತದಲ್ಲಿ ಈ ಹಿಂದೆ ಕಾಂಡೋಮ್ ಬಗ್ಗೆ ಬಹಿರಂಗವಾಗಿ ಜನರು ಮಾತನಾಡ್ತಿರಲಿಲ್ಲ. ಈಗ್ಲೂ ಅದು ಕದ್ದುಮುಚ್ಚಿ ನಡೆಯುವ ಖರೀದಿಯಲ್ಲಿ ಒಂದಾಗಿದೆಯಾದ್ರೂ ಎಲ್ಲ ಮೆಡಿಕಲ್ ಶಾಪ್ ಗಳಲ್ಲಿ, ಆನ್ಲೈನ್ ನಲ್ಲಿ ಲಭ್ಯವಿರುವ ಕಾರಣ ಅಗತ್ಯವಿರುವವರು ಆರಾಮವಾಗಿ ಖರೀದಿ ಮಾಡಬಹುದಾಗಿದೆ. ಭಾರತದಲ್ಲಿ ಕಾಂಡೋಮ್ ತಯಾರಿಸುವ ಮತ್ತು ಮಾರಾಟ ಮಾಡುವ ಕಂಪನಿಗಳ ಸಂಖ್ಯೆ ಸಾಕಷ್ಟಿದೆ. ಅದ್ರಲ್ಲಿ ಮ್ಯಾನ್‌ಫೋರ್ಸ್ ಕಾಂಡೋಮ್ ಮೊದಲ ಸ್ಥಾನದಲ್ಲಿದೆ. ಮ್ಯಾನ್ ಫೋರ್ಸ್ ಅಲ್ಲದೆ ಭಾರತೀಯರು ಡ್ಯೂರೆಕ್ಸ್, ರೇಮಂಡ್ ಕನ್ಸ್ಯೂಮರ್ ಕಾಂಡೋಮನ್ನು ಹೆಚ್ಚು ಖರೀದಿ ಮಾಡ್ತಾರೆ. ನಾವಿಂದು ಎಂಟು ರೂಪಾಯಿಗೆ ತಯಾರಾಗುವ ಕಾಂಡೋಮ್ ಮಾರಾಟ ಮಾಡಿ 8750 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದ ಸಹೋದರರ ಕಂಪನಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಇಂದು ನಾವು ಹೇಳ್ತಿರೋದು ಮ್ಯಾನ್‌ಫೋರ್ಸ್ (Manforce) ಕಾಂಡೋಮ್ (Condom) ಕಂಪನಿ ಬಗ್ಗೆ. ಇದು ಕಾಂಡೋಮ್‌ಗಳ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ. ಕಂಪನಿ (Company) ಮ್ಯಾನ್‌ಫೋರ್ಸ್ ಮಾರುಕಟ್ಟೆ ಪಾಲು ಸುಮಾರು ಶೇಕಡಾ 32ರಷ್ಟಿದೆ. ಡ್ಯುರೆಕ್ಸ್ ಮತ್ತು ಕಾಮ ಸೂತ್ರ ಕಂಪನಿಗಳ ಪಾಲು ಸುಮಾರು ಶೇಕಡಾ 14- 14ರಷ್ಟಿದೆ.
ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಶುರು ಮಾಡಿದ್ರೂ ಒಂದೇ ವರ್ಷದಲ್ಲಿ ಲಕ್ಷಾಂತರ ವ್ಯವಹಾರ
ಭಾರತದಲ್ಲಿ (India) ಮ್ಯಾನ್‌ಕೈಂಡ್ ಫಾರ್ಮಾ, ಮ್ಯಾನ್‌ಫೋರ್ಸ್ ಹೆಸರಿನಲ್ಲಿ ಕಾಂಡೋಮ್‌ಗಳನ್ನು ತಯಾರಿಸುತ್ತದೆ. ಸಹೋದರರಾದ ರಮೇಶ್ ಜುನೇಜಾ ಮತ್ತು ರಾಜೇಶ್ ಜುನೇಜಾ ಇದರ ರುವಾರಿಗಳು. ಭಾರತದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿದ ರಮೇಶ್ ಜುನೇಜಾ ಮತ್ತು ರಾಜೇಶ್ ಜುನೇಜಾ ಕಾಂಡೋಮ್ ತಯಾರಿಕೆಗೆ ಮುಂದಾದ್ರು. 1995 ರಲ್ಲಿ ಸಹೋದರರು ಮ್ಯಾನ್ ಕೈಂಡ್ ಫಾರ್ಮ್ ಶುರು ಮಾಡಿದ್ರು. ಆಗ ಐವತ್ತು ಸಾವಿರ ರೂಪಾಯಿ ಬಂಡವಾಳ ಹಾಕಿ ಸಹೋದರರು ತಮ್ಮ ಕಂಪನಿಯನ್ನು ಶುರು ಮಾಡಿದ್ದರು. ಆರಂಭದಲ್ಲಿ 20 ಉದ್ಯೋಗಿಗಳೊಂದಿಗೆ ಸಹೋದರರು ಕಂಪನಿ ಪ್ರಾರಂಭಿಸಿದ್ದರು. ಮೊದಲ ವರ್ಷದಲ್ಲಿ ಎರಡು ರಾಜ್ಯಗಳಲ್ಲಿ ಕಂಪನಿ ತನ್ನ ಶಾಖೆಯನ್ನು ಹೊಂದಿತ್ತು. ರಾಜೀವ್ ಜುನೇಜಾ ಈ ಕಂಪನಿ ಎಂಡಿಯಾದ್ರೆ ರಮೇಶ್ ಅಧ್ಯಕ್ಷರಾಗಿದ್ದಾರೆ.
ಲೈಂಗಿಕ ಸುರಕ್ಷತೆಗಾಗಿ (Sexual Safety) ಪ್ರತಿಯೊಬ್ಬರೂ ಕಾಂಡೋಮ್ ಬಳಸುವಂತೆ ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ಪನ್ನ ತಯಾರಿಸುತ್ತಿರುವ ಮ್ಯಾನ್ ಕೈಂಡ್ ಫಾರ್ಮ್ ನ ಮ್ಯಾನ್ ಫೋರ್ಸ್ ಕಾಂಡೋಮ್ ಇದೇ ಕಾರಣಕ್ಕೆ ಹೆಚ್ಚಿನ ಬೇಡಿಕೆಯಲ್ಲಿದೆ.
ಮ್ಯಾನ್‌ಫೋರ್ಸ್ ಕಾಂಡೋಮ್‌ಗಳು ವಿಭಿನ್ನ ಗಾತ್ರ ಮತ್ತು ಫ್ಲೇವರ್ ನಲ್ಲಿ ಲಭ್ಯವಿದೆ. ಕಾಂಡೋಮ್ ಬೆಲೆ 8 ರಿಂದ 30 ರೂಪಾಯಿಗೆ ಸಿಗುತದೆ. ಮ್ಯಾನ್‌ಕೈಂಡ್ ದೇಶದಲ್ಲಿ 25 ಕಾರ್ಖಾನೆಗಳನ್ನು ಹೊಂದಿದೆ. ಅಲ್ಲದೆ 6 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಮುನ್ನಡೆಸುತ್ತಿದೆ. ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಮ್ಯಾನ್ ಕೈಂಡ್ ಕಂಪನಿ ತನ್ನ ಛಾಪು ಮೂಡಿಸಿದೆ. 34 ದೇಶಗಳಲ್ಲಿ ತನ್ನ ಉತ್ಪನ್ನಗಳ ವ್ಯಾಪಾರವನ್ನು ಕಂಪನಿ ಮಾಡುತ್ತಿದೆ. ಹಿಂದಿ ವರ್ಷದ ವರದಿ ಪ್ರಕಾರ, ಮ್ಯಾನ್‌ಕೈಂಡ್‌ನ ಆದಾಯ 8749 ಕೋಟಿ ರೂಪಾಯಿಯಾಗಿತ್ತು.
EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ
ಮ್ಯಾನ್ ಕೈಂಡ್ ಕಂಪನಿ ಬರೀ ಕಾಂಡೋಮ್ (Condom) ಮಾತ್ರವಲ್ಲ ಆರೋಗ್ಯಕ್ಕೆ ಸಂಬಂಧಿಸಿದ ಇನ್ನೂ ಅನೇಕ ಉತ್ಪನ್ನಗಳನ್ನು ತಯಾರಿಸುತ್ತದೆ. ಪೇಟೆಂಟ್ ಔಷಧಗಳ ತಯಾರಿಕೆಯತ್ತಲೂ ಕ್ಷಿಪ್ರ ಹೆಜ್ಜೆಗಳನ್ನು ಇಡುತ್ತಿದೆ. ಪ್ರೆಗಾ ನ್ಯೂಸ್, ಅನ್ವಾಂಟೆಡ್ 72, ಗ್ಯಾಸ್ –O ಫಾಸ್ಟ್, ಆಂಟಾಸಿಡ್ ಪೌಡರ್, ವಿಟಮಿನ್‌ಗಳು, ಖನಿಜಯುಕ್ತ ಪೂರಕಗಳು ಮತ್ತು ಮೊಡವೆ ವಿರೋಧಿ ವಿಭಾಗಗಳಲ್ಲಿ ಹಲವು ವಿಭಿನ್ನ ಬ್ರಾಂಡ್‌ಗಳನ್ನು ಕಂಪನಿ ತಯಾರಿಸುತ್ತಿದೆ.