ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಶುರು ಮಾಡಿದ್ರೂ ಒಂದೇ ವರ್ಷದಲ್ಲಿ ಲಕ್ಷಾಂತರ ವ್ಯವಹಾರ

By Suvarna News  |  First Published Mar 27, 2024, 1:26 PM IST

ಬಟ್ಟೆಗೆ ತಕ್ಕಂತೆ ಜನರು ಚಪ್ಪಲಿ ಧರಿಸ್ತಾರೆ. ಚಪ್ಪಲಿ ಮೇಲೆ ಮಹಿಳೆಯರಿಗೆ ಆಸಕ್ತಿ ಹೆಚ್ಚು. ಆದ್ರೆ ಈ ಕ್ಷೇತ್ರದಲ್ಲಿ ಸ್ಪರ್ಧೆ ತೀವ್ರವಾಗಿದ್ದು, ಅಲ್ಲಿ ಗೆದ್ದು ಬರೋದು ಸುಲಭವಲ್ಲ. ಕಲೆಯಲ್ಲಿ ಆಸಕ್ತಿಹೊಂದಿರುವ ಇವರು ಬುದ್ಧಿವಂತಿಕೆ ಬಳಸಿ ಜನಮೆಚ್ಚುಗೆ ಗಳಿಸಿದ್ದಾರೆ.
 


ದುಬಾರಿ ದುನಿಯಾದಲ್ಲಿ ಮನೆಯಲ್ಲಿ ಒಬ್ಬರೇ ದುಡಿದ್ರೆ ಹಣದ ನಿರ್ವಹಣೆ ಸಾಧ್ಯವಿಲ್ಲ. ಪತಿ – ಪತ್ನಿ ಸೇರಿದಂತೆ ಮನೆಯಲ್ಲಿರುವ ಕನಿಷ್ಠ ಇಬ್ಬರು ಸಂಪಾದನೆ ಮಾಡಿದ್ರೆ ಎಲ್ಲ ಖರ್ಚನ್ನು ಒಂದು ಮಟ್ಟಕ್ಕೆ ನಿಭಾಯಿಸಬಹುದು. ಆರ್ಥಿಕವಾಗಿ ಸದೃಢವಾಗ್ಬೇಕು ಅಂದ್ರೆ ಹಣ ಸಂಪಾದನೆ ಜೊತೆ ಬುದ್ಧಿವಂತಿಕೆಯಿಂದ ಅದರ ಬಳಕೆ ಮಾಡ್ಬೇಕು. ಕಚೇರಿ ಕೆಲಸಕ್ಕಿಂತ ಉದ್ಯಮದಲ್ಲಿ ಹೆಚ್ಚು ಲಾಭವಿದೆ ಎಂದು ಅನೇಕರು ಹೇಳ್ತಿದ್ದಾರೆ. ಇದೇ ಕಾರಣಕ್ಕೆ ಸ್ಟಾರ್ಟ್ ಅಪ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಜನರು ಯಾವುದನ್ನು ಇಷ್ಟಪಡ್ತಾರೆ ಎಂಬುದನ್ನು ಅರಿತು ಉದ್ಯಮ ಶುರು ಮಾಡಿದ್ರೆ ಅದ್ರಲ್ಲಿ ಯಶಸ್ಸು ಸಾಧ್ಯ. ಈ ಜೋಡಿಯೊಂದು ಉದ್ಯಮ ಆರಂಭಿಸಿ ಕೆಲವೇ ದಿನಗಳಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದೆ. ಆಸಕ್ತಿಕರ ಕ್ಷೇತ್ರದಲ್ಲಿ ಕೆಲಸ ಮಾಡಿದ್ರೆ ಕೆಲಸ ಹಾಗೂ ಗಳಿಕೆ ಎರಡೂ ಸುಲಭ ಎಂಬುದಕ್ಕೆ ಈ ಜೋಡಿ ಉತ್ತಮ ನಿದರ್ಶನ.

ಕರ್ನಾಲ್ (Karnal) ನಿವಾಸಿ ಅರ್ಪಿತ್ ಮದಾನ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ವ್ಯಕ್ತಿ. ಅರ್ಪಿತ್ ಮದಾನ್, ತಮ್ಮ ಸ್ನೇಹಿತ (Friend) ರ ಜೊತೆ ಸೇರಿ ಉದ್ಯಮ ಶುರು ಮಾಡಿದ್ದಾರೆ. ಅವರ ಕೆಲಸ ಜನರಿಗೆ ಮೆಚ್ಚುಗೆ ಆಗಿದೆ. ಹಾಗಾಗಿ ಕೆಲವೇ ದಿನಗಳಲ್ಲಿ ಅವರು ತಯಾರಿಸಿದ ಉತ್ಪನ್ನ ದೊಡ್ಡಮಟ್ಟದಲ್ಲಿ ಮಾರಾಟವಾಗ್ತಿದೆ. 

Tap to resize

Latest Videos

ಎಲ್‌ಐಸಿ ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌: ಫೈನಾನ್ಸ್‌ ಇನ್ಷೂರೆನ್ಷ್‌ ವರದಿ!

ಅರ್ಪಿತ್ ಮದಾನ್ ತಮ್ಮ ಸ್ಟಾರ್ಟ್ ಅಪ್ (Start Up) ಕಂಪನಿಗೆ ಆರ್ಟಿಸ್ಟಿಕ್ ನಾರಿ ಎಂದು ಹೆಸರಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಚಪ್ಪಲಿ, ಶೂಗಳಿವೆ. ಇಷ್ಟೆಲ್ಲ ಸ್ಟೈಲಿಶ್ ಚಪ್ಪಲಿ (Stylish Slippers) ಮಧ್ಯೆ ಹೊಸ ಬ್ರ್ಯಾಂಡ್ ಬಂದಾಗ ಅದನ್ನು ಜನರು ಹೇಗೆ ಸ್ವೀಕರಿಸ್ತಾರೆ ಎಂಬ ಪ್ರಶ್ನೆ ಕಾಡುತ್ತದೆ. ಚಪ್ಪಲಿ ಉದ್ಯಮಕ್ಕೆ ಕಾಲಿಡುವ ಮುನ್ನ ಇದೇ ಕಾರಣಕ್ಕೆ ಜನರು ಅನೇಕ ಬಾರಿ ಆಲೋಚನೆ ಮಾಡ್ತಾರೆ. ಅರ್ಪಿತ್ ಮದಾನ್ ಹೀಗೆ ಆಲೋಚನೆ ಮಾಡ್ತಾ ಕುಳಿತಿದ್ರೆ ಸಾಧನೆ ಮಾಡಲು ಸಾಧ್ಯವಿರಲಿಲ್ಲ. ಫ್ಯಾಷನ್ ದಿನ ದಿನಕ್ಕೂ ಬದಲಾಗುತ್ತದೆ. ಮಹಿಳೆಯರು ತಮ್ಮ ಡ್ರೆಸ್ ಗೆ ತಕ್ಕಂತೆ ಚಪ್ಪಲಿ ಖರೀದಿ ಮಾಡುವ ಕಾರಣ, ಈಗಿನ ಮಹಿಳೆಯರ ಆಸಕ್ತಿ ಪರಿಗಣಿಸಿ ಅರ್ಪಿತ್ ಮದಾನ್ ಹೊಸ ಸ್ಟೈಲ್ ಚಪ್ಪಲಿಯನ್ನು ಮಾರುಕಟ್ಟೆಗೆ ತಂದಿದ್ದಾರೆ. 

ಈಗ ಅರ್ಪಿತ್ ಮದಾನ್, ಆರ್ಟಿಸ್ಟಿಕ್ ನಾರಿ ಕಂಪನಿ ಚಪ್ಪಲಿ ಮತ್ತು ಬ್ಯಾಗ್‌ ಗಳನ್ನು ತಯಾರಿಸುತ್ತದೆ. ಇವರು ತಯಾರಿಸುವ ಚಪ್ಪಲಿ ಸಾಕಷ್ಟು ವಿಶೇಷವಾಗಿದೆ. ಚಪ್ಪಲಿ, ಹೈ-ಹೀಲ್ಸ್, ಫ್ಲಾಟ್ ಸೇರಿದಂತೆ ಅನೇಕ ಚಪ್ಪಲಿಗಳನ್ನು ಕಂಪನಿ ತಯಾರಿಸುತ್ತದೆ. ಕಂಪನಿ ತಯಾರಿಸುವ ಉತ್ಪನ್ನ ವಿಶೇಷವಾಗಿರುವ ಕಾರಣ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಯ್ತು. ಇದಾದ್ಮೇಲೆ ಕಂಪನಿ ಕಲಾತ್ಮಕ ಮಹಿಳಾ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕಂಪನಿಯಲ್ಲಿ ಸದ್ಯ 6ರಿಂದ 7 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಪಿತ್ ಹೇಳಿದ್ದಾರೆ. 

ಅಲ್ಲಲ್ಲಿ ಸ್ಟಾಲ್ ತೆರೆದು ತಮ್ಮ ಕಂಪನಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವರು, ಕಳೆದ ವರ್ಷವಷ್ಟೇ ಈ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಉದ್ಯಮ ಶುರು ಮಾಡಿದ ನಂತ್ರ ಅರ್ಪಿತ್ ತಿರುಗಿ ನೋಡ್ಲೇ ಇಲ್ಲ. ಡಿಸೈನಿಂಗ್ ನಲ್ಲಿ ಅರ್ಪಿತ್ ಆಸಕ್ತಿ ಹೊಂದಿರುವ ಕಾರಣ ಅದೇ ಉದ್ಯಮವನ್ನು ಶುರು ಮಾಡಲು ಅವರು ಮುಂದಾಗಿದ್ದರು. ಉದ್ಯಮ ಶುರು ಮಾಡಿ ಕೇವಲ ಒಂದೇ ವರ್ಷ ಆಗಿದ್ರೂ ಅರ್ಪಿತ್ ವ್ಯಾಪಾರ ಲಕ್ಷಕ್ಕೆ ತಲುಪಿದೆ. 

ದುಡಿಯೋ ಹೆಣ್ಣಿನ ಕೈಯ್ಯಲ್ಲೂ ಇರ್ಬೇಕು ತುರ್ತು ನಿಧಿ, ಹೇಗೆ ಹೆಲ್ಪ್ ಆಗುತ್ತೆ ಇಲ್ನೋಡಿ!

ಜನರ ಆಯ್ಕೆಗೆ ಅನುಗುಣವಾಗಿ ಅವರು ಉತ್ಪನ್ನಗಳ ವಿನ್ಯಾಸ ಮಾಡುತ್ತಾರೆ. ಆರ್ಟಿಸ್ಟಿಕ್ ನಾರಿ ಕಂಪನಿ ಜನರು ಬಯಸುವ ವಿನ್ಯಾಸವನ್ನು ತಪ್ಪಾಗದಂತೆ ಪ್ರಿಂಟ್ ಮಾಡುತ್ತದೆ. ಈ ಕೆಲಸ ಗ್ರಾಹಕರಿಗೆ ಮೆಚ್ಚುಗೆಯಾಗಿದೆ. ಹಾಗಾಗಿ ಸಾಕಷ್ಟು ಆರ್ಡರ್ ಬರುತ್ತೆ ಎನ್ನುತ್ತಾರೆ ಅರ್ಪಿತ್.    

click me!