ಎಲ್ಲರೂ ರಾತ್ರಿ ಬೆಳಗಾಗೋದ್ರೊಳಗೆ ಶ್ರೀಮಂತರಾಗಲು ಸಾಧ್ಯವಿಲ್ಲ. ಹಣ, ಐಷಾರಾಮಿ ಜೀವನದ ಹಿಂದೆ ಪರಿಶ್ರಮವಿರುತ್ತದೆ. ಹಗಲು ರಾತ್ರಿ ದುಡಿಮೆ, ಬುದ್ಧಿವಂತಿಕೆ ಮುಖ್ಯವಾಗುತ್ತದೆ. ಆರಂಭದಲ್ಲಿ ಆರು ಸಾವಿರ ಸಂಬಳ ತರ್ತಿದ್ದ ಈ ವ್ಯಕ್ತಿ ಉತ್ತಮ ನಿದರ್ಶನ.
ಪ್ರಾಮಾಣಿಕವಾಗಿ ದುಡಿಯುವ ಜನರ ಹಿಂದೆ ಸದಾ ದೇವರಿರ್ತಾನೆ ಎನ್ನುವ ಮಾತು ಸುಳ್ಳಲ್ಲ. ಕಷ್ಟಪಟ್ಟು ದುಡಿಯುವ ಜನರಿಗೆ ಸುಖ ಇದ್ದೇ ಇದೆ. ಬಡತನದಲ್ಲಿ ಹುಟ್ಟಿದ ಜನರೆಲ್ಲ ಬಡತನದಲ್ಲಿಯೇ ಸಾಯಬೇಕಾಗಿಲ್ಲ. ಪರಿಶ್ರಮ, ಬುದ್ಧಿವಂತಿಕೆ, ಪ್ರಾಮಾಣಿಕತೆ ಅವರನ್ನು ಶ್ರೀಮಂತರ ಸಾಲಿನಲ್ಲಿ ತಂದು ನಿಲ್ಲಿಸುತ್ತದೆ. ಅದಕ್ಕೆ ಜಯಂತಿ ಕಾನನಿ ಉತ್ತಮ ನಿದರ್ಶನ. ಬಡ ಮಧ್ಯಮ ವರ್ಗದಲ್ಲಿ ಜನಿಸಿ, ಕಷ್ಟಪಟ್ಟು ವಿದ್ಯಾಭ್ಯಾಸ ಮುಗಿಸಿದ ಜಯಂತಿ ಕಾನನಿ, ಬಡತನವನ್ನು ಶಾಪ ಎಂದುಕೊಳ್ಳಲಿಲ್ಲ. ಕೆಲಸದ ಮೇಲೆ ಪ್ರೀತಿ ತೋರಿಸಿ, ಹಗಲಿರುಳು ದುಡಿದು ಯಶಸ್ವಿಯಾಗಿದ್ದಾರೆ. ತಿಂಗಳು ತಿಂಗಳಿಗೆ ಬರುವ ಸಂಬಳ ಬಿಟ್ಟು ಸ್ಟಾರ್ಟ್ ಅಪ್ ಶುರು ಮಾಡಿದ ಜಯಂತಿ ಕಾನನ, ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ಜಯಂತಿ ಕಾನನಿ ಯಾರು? ಅವರ ಸಾಧನೆ ಹಾದಿ ಹೇಗಿತ್ತು ಎಂಬೆಲ್ಲ ಮಾಹಿತಿ ಇಲ್ಲಿದೆ.
ಜಯಂತಿ ಕಾನನಿ (Jayanti Kanani) ಯಾರು? : ಜಯಂತಿ ಕಾನನಿ ಗುಜರಾತಿನ ಉದ್ಯಮಿ. ಕೆಲಸ ಬಿಟ್ಟು ಸ್ವಂತ ಸ್ಟಾರ್ಟ್ ಅಪ್ (Start Up) ಶುರು ಮಾಡಿದ ಜಯಂತಿ ಕಾನನಿ ಹಿಂದೆ ತಿರುಗಿ ನೋಡಲಿಲ್ಲ. ಈಗ ತಮ್ಮ ಕಂಪನಿಯಲ್ಲಿ ಅನೇಕರಿಗೆ ಉದ್ಯೋಗ (Jobs) ನೀಡುವಷ್ಟು ಬೆಳೆದಿದ್ದಾರೆ. ಜಯಂತಿ ಕಾನನಿ ಈಗ 55,000 ಕೋಟಿ ರೂಪಾಯಿ ಮೌಲ್ಯದ ಕಂಪನಿ ಒಡೆಯರಾಗಿದ್ದಾರೆ.
ಸಿಂಪಲ್ ಬ್ಯುಸಿನೆಸ್, ಕಡಿಮೆ ಬಂಡವಾಳ ಸಾಕು, ಕೈ ತುಂಬಾ ಗಳಿಕೆ ಗ್ಯಾರಂಟಿ!
ಜಯಂತಿ ಕಾನನಿ ಕುಟುಂಬ (Family) – ವಿದ್ಯಾಭ್ಯಾಸ (Education): ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಜಯಂತಿ ಕಾನನಿ ಅಹಮದಾಬಾದ್ ನ ಸಣ್ಣ ಫ್ಲಾಟ್ ಒಂದರಲ್ಲಿ ಪಾಲಕರ ಜೊತೆ ವಾಸವಾಗಿದ್ದರು. ಅವರ ತಂದೆ ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡಿ ಕುಟುಂಬ ಸಾಗಿಸ್ತಿದ್ದರು. ಮಗನ ವಿದ್ಯಾಭ್ಯಾಸಕ್ಕೆ ತಂದೆ ಅಡ್ಡಿಯಾಗಿರಲಿಲ್ಲ. ಎಲ್ಲರ ಸಹಕಾರದಿಂದ ಜಯಂತಿ ಕಾನನಿ, ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಮುಗಿಸಿದ್ರು. ಮುಂದೆ ಓದಲು ಹಣವಿಲ್ಲದ ಕಾರಣ ಜಯಂತಿ ಕಾನನಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯ್ತು. ಜಯಂತಿ ಕಾನನಿ, ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾದ್ರೂ ಅವರಿಗೆ ಆರಂಭದಲ್ಲಿ ಬರ್ತಾ ಇದ್ದಿದ್ದು ಕೇವಲ ಆರು ಸಾವಿರ ರೂಪಾಯಿ ಸಂಬಳ ಮಾತ್ರ. ಮನೆಯನ್ನು ನಿರ್ವಹಿಸಲು ಇದು ಸಾಧ್ಯವಾಗ್ತಿರಲಿಲ್ಲ. ಹಾಗಾಗಿ ಮನೆಯಲ್ಲೂ ಅವರು ಪಾರ್ಟ್ ಟೈಂ ಕೆಲಸ ಮಾಡ್ತಿದ್ದರು. ಆದ್ರೆ ಇವೆರಡರಿಂದಲೂ ಅವರಿಗೆ ಬರ್ತಿದ್ದ ಹಣ ಜೀವನ ನಿರ್ವಹಣೆಗೆ ಸಾಲ್ತಿರಲಿಲ್ಲ. ಇದೇ ಕಾರಣಕ್ಕೆ ಮದುವೆ ಸಂದರ್ಭದಲ್ಲಿ ಸಾಲ ಮಾಡಿದ್ದರು ಜಯಂತಿ ಕಾನನಿ.
ಲಕ್ಷ ಲಕ್ಷ ವೇತನ ಬರ್ತಿದ್ದ ವಕೀಲಿಕೆ ಬಿಟ್ಟು, ಪ್ರಾಣಿ ಜೊತೆ ಮಾತನಾಡಿ ಕೋಟಿ ಗಳಿಸ್ತಿದ್ದಾರೆ ಈ ಮಹಿಳೆ!
ಹೊಸ ಸಾಧನೆಗೆ ನೆರವಾದ ಸ್ನೇಹಿತರು : ಜಯಂತಿ ಕಾನನಿ ಅದೃಷ್ಟ ಸಂದೀಪ್ ನೈಲ್ವಾಲ್ ಮತ್ತು ಅನುರಾಗ್ ಅರ್ಜುನ್ ಭೇಟಿಯಾದ್ಮೇಲೆ ಬದಲಾಯ್ತು. ಕಂಪನಿಯಲ್ಲಿ ಡೇಟಾ ವಿಶ್ಲೇಷಕರಾಗಿ ಕೆಲಸ ಮಾಡ್ತಿರುವಾಗ ಜಯಂತಿ ಕಾನನಿ, ಸಂದೀಪ್ ನೈಲ್ವಾಲ್ ಮತ್ತು ಅನುರಾಗ್ ಅರ್ಜುನ್ ಭೇಟಿಯಾದ್ರು. ಈ ಮೂವರ ಉದ್ದೇಶವೂ ಹಣ ಸಂಪಾದನೆಯಾಗಿತ್ತು. ಮೂವರೂ ಒಂದಾಗಿ 2017ರಲ್ಲಿ ಪಾಲಿಗಾನ್ ಶುರು ಮಾಡಿದ್ರು. ಆರಂಭದಲ್ಲಿ ಇದ್ರ ಹೆಸರು ಮ್ಯಾಟಿಕ್ ಎಂದಿತ್ತು. ಮೂವರ ಸತತ ಶ್ರಮ, ಬುದ್ಧಿವಂತಿಕೆಯಿಂದಾಗಿ ಕಳೆದ ಆರು ವರ್ಷದಲ್ಲೇ ಕಂಪನಿ ಸಾಕಷ್ಟು ಸಾಧನೆ ಮಾಡಿದೆ. ಈಗ ಕಂಪನಿ ಮೌಲ್ಯ 55,000 ಕೋಟಿ ಎಂದು ಅಂದಾಜಿಸಲಾಗಿದೆ. ಅಮೇರಿಕನ್ ಹೂಡಿಕೆದಾರ ಮತ್ತು ಶಾರ್ಕ್ ಟ್ಯಾಂಕ್ ನ್ಯಾಯಾಧೀಶ ಮಾರ್ಕ್ ಕ್ಯೂಬನ್, ಪಾಲಿಗಾನ್ ಗೆ ಹಣ ಹೂಡಿಕೆ ಮಾಡಿದ್ದಾರೆ. ಪಾಲಿಗಾನ್ ಯಶಸ್ವಿಯಾಗ್ತಿದ್ದಂತೆ ಅನೇಕ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿವೆ. 2022 ರಲ್ಲಿ ಟೈಗರ್ ಗ್ಲೋಬಲ್, ಸಾಫ್ಟ್‌ಬ್ಯಾಂಕ್ ಮತ್ತು ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾದಂತಹ ಹೂಡಿಕೆದಾರರಿಂದ ಪಾಲಿಗಾನ್ ಕಂಪನಿ 450 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ ಎಂಬ ವರದಿ ಇದೆ.