ಬಜೆಟ್‌ಗೂ ಮುನ್ನ ಬಂಪರ್ ಗಿಫ್ಟ್: ಸಿಲಿಂಡರ್ ದರದಲ್ಲಿ ಇಳಿಕೆ!

Published : Jan 31, 2019, 08:06 PM ISTUpdated : Jan 31, 2019, 08:32 PM IST
ಬಜೆಟ್‌ಗೂ ಮುನ್ನ ಬಂಪರ್ ಗಿಫ್ಟ್:  ಸಿಲಿಂಡರ್ ದರದಲ್ಲಿ ಇಳಿಕೆ!

ಸಾರಾಂಶ

ಬಜೆಟ್‌ಗೂ ಮುನ್ನವೇ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್! ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕೆ! ಸಬ್ಸಿಡಿ ರಹಿತ ಅಡುಗೆ ಅನಿಲ ದರದಲ್ಲಿ ಭಾರೀ ಇಳಿಕೆ!ಇಂದು [ಗುರುವಾರ] ಮಧ್ಯರಾತ್ರಿಯಿಂದಲೇ ಜಾರಿ!

ನವದೆಹಲಿ, [ಜ.31]:  ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್​​​ ಅಧಿವೇಶನಕ್ಕೂ ಮುನ್ನವೇ ಅಡುಗೆ ಅನಿಲ ದರದಲ್ಲಿ ಇಳಿಕೆ ಆಗಿದೆ. 

ಸಬ್ಸಿಡಿ ಸಹಿತ LPG ಸಿಲಿಂಡರ್​ 1.46 ರೂಪಾಯಿ ಇಳಿಕೆಯಾಗಿದ್ದು, ಸಬ್ಸಿಡಿ ರಹಿತ ಎಲ್​​ಪಿಜಿ ಸಿಲಿಂಡರ್​​ ದರದಲ್ಲಿ 30 ರೂಪಾಯಿ ಅಷ್ಟು ಇಳಿಕೆಯಾಗಿದೆ.

14.2 ಕೆಜಿ ಸಬ್ಸಿಡಿ ಸಹಿತ ಎಲ್​ಪಿಜಿ ಸಿಲಿಂಡರ್​​ನ ದರ 493.53 ಆಗಲಿದೆ. ಇದಕ್ಕೂ ಮೊದಲು 494.99 ರುಪಾಯಿ ನೀಡಬೇಕಾಗಿತ್ತು.  

ಸದ್ಯದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 659 ರುಪಾಯಿ ಇದ್ದು, ಇದರಲ್ಲಿ 30 ರುಪಾಯಿ ಕಡಿಮೆ ಆಗಿದೆ. ಈ ಪರಿಷ್ಕೃತ ದರವು ಇಂದು [ಗುರುವಾರ] ಮಧ್ಯರಾತ್ರಿಯಿಂದ ಜಾರಿಯಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು