ಈ Valentineಗೆ ಮನದನ್ನೆಗೆ ಹೇಳಿ ‘Be Mine': ಜಾಯಲುಕ್ಕಾಸ್ ಸ್ಪೆಶಲ್ ಗಿಫ್ಟ್!

Published : Jan 31, 2019, 06:07 PM IST
ಈ Valentineಗೆ ಮನದನ್ನೆಗೆ ಹೇಳಿ ‘Be Mine': ಜಾಯಲುಕ್ಕಾಸ್ ಸ್ಪೆಶಲ್ ಗಿಫ್ಟ್!

ಸಾರಾಂಶ

ಪ್ರೇಮಿಗಳ ದಿನಕ್ಕಾಗಿ ಪ್ರೇಮಿಗಳಿಂದ ದಿನಗಣನೆ| ಫೆ. 14ಕ್ಕೆ ಕಾಯುತ್ತಿವೆ ಜೋಡಿ ಹಕ್ಕಿಗಳು| ಪ್ರೇಮಿಗಳ ದಿನಕ್ಕಾಗಿ ಜಾಯಲುಕ್ಕಾಸ್ ವಿಶೇಷ ಆಭರಣ| ‘Be MIne' ಎಂಬ ವಿಶೇಷ ಆಭರಣ ಸಿದ್ಧಪಡಿಸಿದ ಜಾಯಲುಕ್ಕಾಸ್| 3000 ರೂ. ಬೆಲೆಯ ಆಭರಣ ಖರೀದಿ ಮೇಲೆ 1 ಗ್ರಾಂ ಗೋಲ್ಡ್ ಕಾಯಿನ್ ಉಚಿತ

ದುಬೈ(ಜ.31): ಪ್ರೇಮಿಗಳ ದಿನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಪ್ರೇಮಿಗಳೆಲ್ಲಾ ಹಗಲು ರಾತ್ರಿ ಫೆ.14ಕ್ಕೆ ದಿನಗಳನ್ನು ಎಣಿಸುತ್ತಾ ಮನಸ್ಸು ಕದ್ದ ಗೆಳೆಯ/ಗೆಳತಿಯ ಭೇಟಿಗಾಗಿ ಕಾಯುತ್ತಿದ್ದಾರೆ.

ಆದರೆ ಪ್ರೇಮಿಗಳ ದಿನದಂದು ಖಾಲಿ ಕೈಯಲ್ಲಿ ಭೇಟಿ ಮಾಡಿದರಾದೀತೆ?. ಕೈಯಲ್ಲೊಂದು ಕೆಂಗುಲಾಬಿ ಇದ್ದರೆ ಪ್ರೇಯಸಿಯ ಮುಖ ಅದರಷ್ಟೇ ಕೆಂಪಾಗದೇ ಇರದು.

ಕೇವಲ ಕೆಂಗುಲಾಬಿ ಯಾಕೋ ಸಾಕಾಗದು, ಮನದನ್ನೆಗೆ ಇಷ್ಟವಾಗೋ ಮತ್ತೊಂದು ಗಿಫ್ಟ್ ಇದ್ದರೆ ಪ್ರೇಮಿಗಳ ದಿನ ಸಾರ್ಥಕ ಅಂತಾ ಯೋಚಿಸುತ್ತಿದ್ದೀರಾ?. ಹಾಗಿದ್ದರೆ ಪ್ರೇಮಿಗಳ ದಿನಕ್ಕೂ ಮೊದಲು ಜಾಯಲುಕ್ಕಾಸ್ ಮಳಿಗೆಗೆ ಭೇಟಿ ನೀಡೋದು ಉತ್ತಮ.

ಹೌದು, ವಿಶ್ವದ ಪ್ರಸಿದ್ಧ ಆಭರಣ ತಯಾರಕ ಸಂಸ್ಥೆ ಜಾಯಲುಕ್ಕಾಸ್ ಪ್ರೇಮಿಗಳ ದಿನಕ್ಕಾಗಿ ವಿಶೇಷ ಆಭರಣವೊಂದನ್ನು ಸಿದ್ಧಪಡಿಸಿದೆ. ಪ್ರೇಮಿಗಳಿಗೆಂದೇ ತಯಾರಿಸಲಾದ ಈ ವಿಶೇಷ ಆಭರಣ ಪ್ರೇಮಿಗಳ ಮನಸ್ಸು ಕದಿಯದಿರದು.

ಪ್ರೇಮಿಗಳ ದಿನಕ್ಕಾಗಿ ‘Be MIne' ಎಂಬ ವಿಶೇಷ ಆಭರಣ ಸಿದ್ಧಪಡಿಸಿರುವ ಜಾಯಲುಕ್ಕಾಸ್, ಹೃದಯದ ಆಕಾರದ ವಜ್ರ ಮತ್ತು ಚಿನ್ನದ ವಿಶಿಷ್ಟ ರಿಂಗ್, ಬ್ರೆಸ್ಲೇಟ್ ಗಳನ್ನು ತಯಾರಿಸಿದೆ.

ದುಬೈನಲ್ಲಿ ಈ ವೀಶೇಷ ಆಭರಣಗಳನ್ನು ಬಿಡುಗಡೆ ಮಾಡಿದ ಜಾಯಲುಕ್ಕಾಸ್ ಸಂಸ್ಥೆಯ ಚೇರಮನ್ ಜಾಯ್ ಅಲುಕ್ಕಾಸ್, ಪ್ರೀತಿ ಈ ಜಗತ್ತಿನ ಅತ್ಯಂತ ಬಲಿಷ್ಠ ಸಂವೇದನೆಯಾಗಿದ್ದು, ಸಂತಸದ ಉತ್ಕೃಷ್ಟ ಭಾವನೆಯಾಗಿದೆ ಎಂದು ಹೇಳಿದರು.

ಇಂತಹ ಪ್ರೀತಿಯನ್ನು ಹಂಚುವ, ಪಸರಿಸುವ, ಅನುಭವಿಸುವ ದಿನವಾದ ಪ್ರೇಮಿಗಳ ದಿನಕ್ಕಾಗಿ ಸಂಸ್ಥೆ ವಿಶಿಷ್ಟ ಆಭರಣಗಳನ್ನು ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಜಾಯ್ ಅಲುಕ್ಕಾಸ್ ಅಭಿಪ್ರಾಯಪಟ್ಟರು.

ಇನ್ನು ಪ್ರೇಮಿಗಳ ದಿನದಂದು 3000 ರೂ. ಮೇಲಿನ ಆಭರಣ ಖರೀದಿಗೆ 1 ಗ್ರಾಂ ಉಚಿತ ಗೋಲ್ಡ್ ಕಾಯಿನ್ ನೀಡುವುದಾಗಿ ಸಂಸ್ಥೆ ಘೋಷಿಸಿದೆ. ಅಲ್ಲದೇ ಈ ಕೊಡುಗೆ ಫೆ.16, 2019ರ ವರೆಗೆ ಇರಲಿದೆ ಎಂದು ಸ್ಪಷ್ಟಪಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!