ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!

By Web DeskFirst Published Oct 1, 2019, 5:51 PM IST
Highlights

ಪ್ರಧಾನಿ ಮೋದಿ ವಿರುದ್ಧ ಮತ್ತೆ ಹರಿಹಾಯ್ದ ಸುಬ್ರಮಣಿಯನ್ ಸ್ವಾಮಿ| ಪ್ರಧಾನಿ ಮೋದಿ ಕಹಿ ಸತ್ಯವನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದ ಸ್ವಾಮಿ| ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂಬ ಮನಸ್ಸಿಲ್ಲವೇ ಎಂದು ಕೇಳಿದ ಸ್ವಾಮಿ| ಪ್ರಧಾನಿ ಮೋದಿ ಅವರ ಆಡಳಿತ ವೈಖರಿ ಟೀಕಿಸಿದ ಬಿಜೆಪಿ ಹಿರಿಯ ನಾಯಕ| ಈ ಸರ್ಕಾರದಲ್ಲಿ ಕೆಲವರು ಮಾತ್ರ ತಮನಿಸಿದ್ದನ್ನು ಹೇಳಬಹುದು ಎಂದು ಹರಿಹಾಯ್ದ ಸ್ವಾಮಿ| ‘ಆರ್ಥಿಕ ಬಿಕ್ಕಟ್ಟಿಗೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್’ಟಿಯ ಅವೈಜ್ಞಾನಿಕ ಜಾರಿ ಕಾರಣ’|

ನವದೆಹಲಿ(ಅ.01): ಪ್ರಧಾನಿ ಮೋದಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಹರಿಹಾಯುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ದೇಶದ ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತೆ ಮೋದಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂಬ ಮನಸ್ಸಿದ್ದರೆ, ಪ್ರಧಾನಿ ಮೋದಿ ಕಹಿ ಸತ್ಯವನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.

ಸರ್ಕಾರ ಅರ್ಥಶಾಸ್ತ್ರಜ್ಞರನ್ನು ಬೆದರಿಸುವುದನ್ನು ನಿಲ್ಲಿಸಬೇಕು ಎಂದಿರುವ ಸುಬ್ರಮಣಿಯನ್ ಸ್ವಾಮಿ, ನೈಜ ಸ್ಥಿತಿಗತಿಯ ಕಹಿ ಸತ್ಯವನ್ನು ಕೇಳುವ ಮನೋಭಾವ ಬೆಳೆಸಿಕೊಳ್ಳಿ ಎಂದು ಪ್ರಧಾನಿಗೆ ತಿವಿದಿದ್ದಾರೆ.

ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿರುವ ಸ್ವಾಮಿ, ಈ ಸರ್ಕಾರದಲ್ಲಿ ಕೆಲವರು ಮಾತ್ರ ತಮನಿಸಿದ್ದನ್ನು ಹೇಳಬಹುದು ಎಂದು ನೇರವಾಗಿ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. 

ಸದ್ಯದ ಆರ್ಥಿಕ ಬಿಕ್ಕಟ್ಟಿಗೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್’ಟಿಯ ಅವೈಜ್ಞಾನಿಕ ಜಾರಿಯೇ ಕಾರಣ ಎಂದು ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದು, ಏಕಪಕ್ಷೀಯ ನಿರ್ಧಾರಗಳು ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಆರೋಪಿಸಿದ್ದಾರೆ.

click me!