
ಬೆಂಗಳೂರು (ಅ.28): ದೇಶದ ಅತ್ಯಂತ ಪ್ರಖ್ಯಾತ ಆಟೋ ಪಾರ್ಟ್ಸ್ ಮೇಕರ್, ಜಯ್ ಭಾರತ್ ಮಾರುತಿ (ಜೆಬಿಎಂ ಆಟೋ) ಆಟೋ ತನ್ನ ಷೇರುಗಳ ವಿಭಜನೆ ಮಾಡೋದನ್ನು ಘೋಷಣೆ ಮಾಡಿದೆ. ಕೊನೆಯ ಬಾರಿಗೆ ಸ್ಟಾಕ್ ಸ್ಪ್ಲಿಟ್‌ಗೆ ಜೆಬಿಎಂ ಆಟೋ ಮುಂದಾಗಿದ್ದು, ಪ್ರಸ್ತುತ 2 ರೂಪಾಯು ಇರುವ ಫೇಸ್ ವ್ಯಾಲ್ಯು, ಷೇರು ವಿಭಜನೆಯ ಬಳಿಕ 1 ರೂಪಾಯಿ ಫೇಸ್ ವ್ಯಾಲ್ಯು ಹೊಂದಿರಲಿದೆ. ಕಂಪನಿಯ ಮಂಡಳಿಯು 2014 ರಲ್ಲಿ ಮೊದಲ ಬಾರಿಗೆ ತನ್ನ ಷೇರುಗಳನ್ನು ವಿಭಜನೆ ಮಾಡಿತ್ತು. ಆಗ ₹10 ಮುಖಬೆಲೆಯ ಒಂದು ಷೇರನ್ನು ತಲಾ ₹5 ರ ಎರಡು ಷೇರುಗಳಾಗಿ ವಿಭಜಿಸಲಾಯಿತು. JBM Auto ನ ಎರಡನೇ ಸ್ಟಾಕ್ ವಿಭಜನೆಯು 2022 ರಲ್ಲಿ ಮಾಡಿತ್ತು. ಪ್ರತಿ ₹5 ರ ಷೇರುಗಳನ್ನು ತಲಾ ₹2 ರ ಷೇರುಗಳಾಗಿ ವಿಭಜಿಸಲಾಗಿತ್ತು.ಕಳೆದ ಐದು ವರ್ಷದಲ್ಲಿ ಜೆಬಿಎಂ ಆಟೋ ಕಂಪನಿಯ ಷೇರು ಶೇ. 1633ರಷ್ಟು ಏರಿಕೆ ಕಂಡಿದೆ. ಇದರ ರೆಕಾರ್ಡ್ ಡೇಟ್‌ಅನ್ನು ಮುಂದಿನ ದಿನಗಳಲ್ಲಿ ಕಂಪನಿ ತಿಳಿಸಲಿದೆ.
ಹಿಂದಿನಂತಿರಲ್ಲ ಟಾಟಾ ಗ್ರೂಪ್, ರತನ್ ಟಾಟಾ ನಿಧನದ ಬೆನ್ನಲ್ಲೇ ಟಾಟಾ ಟ್ರಸ್ಟ್‌ನ ಉನ್ನತಾಧಿಕಾರಿಗಳಿಗೆ ಗೇಟ್‌ಪಾಸ್!
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, JBM ಆಟೋ ₹1,286 ಕೋಟಿಗಳ ಏಕೀಕೃತ ಆದಾಯವನ್ನು ವರದಿ ಮಾಡಿದೆ, ಇದು ಕಳೆದ ವರ್ಷದ ಅದೇ ತ್ರೈಮಾಸಿಕದಲ್ಲಿ ವರದಿ ಮಾಡಿದ ₹1,231 ಕೋಟಿ ಆದಾಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಈ ಅವಧಿಯ ನಿವ್ವಳ ಲಾಭವು ಹಿಂದಿನ ವರ್ಷದ ತ್ರೈಮಾಸಿಕದಿಂದ ₹ 44 ಕೋಟಿಯಿಂದ ₹ 49 ಕೋಟಿಗೆ ಅಲ್ಪ ಏರಿಕೆ ಕಂಡಿದೆ.
ರತನ್ ಟಾಟಾ ಮಾಡಿದ್ದ ಒಂದು ನಿಯಮ, ಟಾಟಾ ಸನ್ಸ್‌ಗೆ ಚೇರ್ಮನ್ ಆಗುವಂತಿಲ್ಲ ನೋಯೆಲ್ ಟಾಟಾ!
ಜೆಬಿಎಂ ಆಟೊದ ಕಾಂಪೊನೆಂಟ್ ವಿಭಾಗವು ಕಳೆದ ವರ್ಷ ₹752 ಕೋಟಿಯಿಂದ ಈ ಬಾರಿ ₹793.6 ಕೋಟಿಗೆ ಏರಿಕೆ ಕಂಡಿದೆ. ಒಇಎಂ ವಿಭಾಗದ ಆದಾಯವು ₹420 ಕೋಟಿಯಲ್ಲಿ ಸ್ಥಿರವಾಗಿದೆ. ಫಲಿತಾಂಶಗಳು ಮತ್ತು ಸ್ಟಾಕ್ ಸ್ಪ್ಲಿಟ್ ಪ್ರಕಟಣೆಯ ನಂತರ JBM ಆಟೋ ಷೇರುಗಳು ಪ್ರಸ್ತುತ 3.7% ನಷ್ಟು ಕಡಿಮೆ ₹1,510.1 ರಲ್ಲಿ ವಹಿವಾಟು ನಡೆಸುತ್ತಿವೆ. 2024 ರಲ್ಲಿ ಸ್ಟಾಕ್ ಇದುವರೆಗೆ 7% ನಷ್ಟು ಕುಸಿದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.