ಹಿಂದಿನಂತಿರಲ್ಲ ಟಾಟಾ ಗ್ರೂಪ್‌, ರತನ್‌ ಟಾಟಾ ನಿಧನದ ಬೆನ್ನಲ್ಲೇ ಟಾಟಾ ಟ್ರಸ್ಟ್‌ನ ಉನ್ನತಾಧಿಕಾರಿಗಳಿಗೆ ಗೇಟ್‌ಪಾಸ್‌!

By Santosh NaikFirst Published Oct 28, 2024, 4:31 PM IST
Highlights

Ratan Tata News: ಟಾಟಾ ಟ್ರಸ್ಟ್‌, ತನ್ನ ಪ್ರಮುಖ ಸಮಾಜಮುಖಿ ಕಾರ್ಯಗಳಲ್ಲಿ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೇಂದ್ರೀಕರಿಸಲು ಹಾಗೂ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಲು ಕಂಪನಿಯ ಉನ್ನತ ಅಧಿಕಾರಿಗಳು ಕಡಿಮೆ ಮಾಡುವ ನಿರ್ಧಾರ ಮಾಡಿದೆ. ಆ ಮೂಲಕ ಕಂಪನಿಯ ನಿರ್ವಹಣೆಯ ರಚನೆಯನ್ನು ಇನ್ನಷ್ಟು ಸುಗಮ ಮಾಡಲು ಪ್ರಯತ್ನ ಮಾಡಿದೆ.

ಮುಂಬೈ (ಅ.28): ರತನ್‌ ಟಾಟಾ ನಿಧನವಾಗಿ ಇನ್ನೂ ಒಂದು ತಿಂಗಳು ಆಗಿಲ್ಲ. ಅದಾಗಲೇ ಟಾಟಾ ಟ್ರಸ್ಟ್‌ನ ಮ್ಯಾನೇಜ್‌ಮೆಂಟ್‌ನಲ್ಲಿ ದೊಡ್ಡ ಬದಲಾವಣೆಗಳಾಗುವ ಸೂಚನೆಗಳು ಸಿಕ್ಕಿದೆ. ಟಾಟಾ ಟ್ರಸ್ಟ್ಸ್ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಸುಗಮಗೊಳಿಸಲು ಆಂತರಿಕವಾಗಿ ಮ್ಯಾನೇಜ್‌ಮೆಂಟ್‌ ಪುನರ್‌ರಚನೆ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಹೊಸ ಬದಲಾವಣೆಗಳ ನಂತರ ಟಾಟಾ ಟ್ರಸ್ಟ್‌ನ ಮುಖ್ಯ ಹಣಕಾಸಿ ಅಧಿಕಾರಿ (ಸಿಎಫ್‌ಓ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ಅನ್ನೋ ಹುದ್ದೆಗಳೇ ಇರೋದಿಲ್ಲ. ಅದರೊಂದಿಗೆ ಔಟ್‌ಸೋರ್ಸ್‌ ಮಾಡುತ್ತಿದ್ದ ಕನ್ಸಲ್ಟೆಂಟ್‌ಗಳ ಮೇಲಿನ ಅವಲಂಬನೆಯನ್ನೂ ಕೂಡ ಕಡಿತಮಾಡಲಾಗುತ್ತಿದೆ. ಹೊಸ ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರನ್ನು ನೇಮಿಸುವ ಮೊದಲೇ ಈ ಕ್ರಮವನ್ನು ಪ್ರಾರಂಭಿಸಲಾಗಿತ್ತು ಎನ್ನುವುದು ಮುಖ್ಯ. ಈಗ ಅದಕ್ಕೆ ಅಧ್ಯಕ್ಷರ ಅನುಮೋದನೆಯೂ ಸಿಕ್ಕಿದೆ.

ಕಂಪನಿಯ ಆಂತರಿಕ ಲೆಕ್ಕಪರಿಶೋಧನಾ ವರದಿಯು ಸಿಬ್ಬಂದಿಯ ವೆಚ್ಚದಲ್ಲಿ ಭಾರೀ ಏರಿಕೆ ಆಗಿರುವುದನ್ನು ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಧು ವರದಿಯಾಗಿದೆ. ಕಂಪನಿಗೆ ಒಟ್ಟು 180 ಕೋಟಿಯನ್ನು ಸಿಬ್ಬಂದಿಗಾಗಿ ವೆಚ್ಚ ಮಾಡಬೇಕಿತ್ತು. 2022 ರಲ್ಲಿ, ನೇರ ಅನುಷ್ಠಾನ ಯೋಜನೆಗಳೆಂದು ಕರೆಯಲ್ಪಡುವ ಹೆಚ್ಚುವರಿ ವೆಚ್ಚಗಳು ಒಟ್ಟು ಉದ್ಯೋಗಿಗಳ ವೆಚ್ಚವನ್ನು 400 ಕೋಟಿಗೆ ಏರಿಸಿದ್ದವು. ಈ ವರದಿಯನ್ನು ಟ್ರಸ್ಟ್‌ನ ಅಧಿಕಾರಿಗಳು ಕೂಡ ಪರಾಮರ್ಶಿಸಿದ್ದರು.

Latest Videos

ನೇರ ಅನುಷ್ಠಾನ ಯೋಜನೆಗಳು ಅಂದರೆ ನೇರವಾಗಿ ಗುತ್ತಿಗೆದಾರರ ಮೂಲಕ ದೇಣಿಗೆಯಾಗಿ ಟ್ರಸ್ಟ್‌ನಿಂದ ಕಾರ್ಯಗತಗೊಳಿಸಲಾಗುತ್ತದೆ . ಇದನ್ನೂ ಕೂಡ ಕನಿಷ್ಠಕ್ಕೆ ಇಳಿಸಲಾಗುತ್ತದೆ. ಮತ್ತು ಈಗಿರುವ ಜವಾಬ್ದಾರಿಗಳನ್ನು ಪೂರೈಸಲು ಮಾತ್ರವೇ ಬಳಸಲಾಗುತ್ತದೆ. ಆದರೆ, ಈ ಬಗ್ಗೆ ಟಾಟಾ ಟ್ರಸ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಮುಖ್ಯ ಕಾರ್ಯನಿರ್ವಾಹಕ ಸಿದ್ಧಾರ್ಥ್ ಶರ್ಮಾ ಅವರು ಪರಿಣಾಮಕಾರಿ ಆಡಳಿತಕ್ಕಾಗಿ ಚೆಕ್ ಮತ್ತು ಬ್ಯಾಲೆನ್ಸ್ ಅನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಮತ್ತು ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ.

ಟಾಟಾ ಟ್ರಸ್ಟ್‌, ತನ್ನ ಪ್ರಮುಖ ಸಮಾಜಮುಖಿ ಕಾರ್ಯಗಳಲ್ಲಿ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೇಂದ್ರೀಕರಿಸಲು ಹಾಗೂ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಲು ಕಂಪನಿಯ ಉನ್ನತ ಅಧಿಕಾರಿಗಳು ಕಡಿಮೆ ಮಾಡುವ ನಿರ್ಧಾರ ಮಾಡಿದೆ. ಆ ಮೂಲಕ ಕಂಪನಿಯ ನಿರ್ವಹಣೆಯ ರಚನೆಯನ್ನು ಇನ್ನಷ್ಟು ಸುಗಮ ಮಾಡಲು ಪ್ರಯತ್ನ ಮಾಡಿದೆ. ನಿರ್ಧಾರ-ಮಾಡುವಿಕೆ ಮತ್ತು ಆಡಳಿತವನ್ನು ಚಾಲನೆ ಮಾಡಲು ಸಂಸ್ಥೆಯು ಲೀನರ್ ಕಾರ್ಯಕಾರಿ ಸಮಿತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ನಿರೀಕ್ಷಿಸಲಾಗಿದೆ.

10 ಸಾವಿರ ಕೋಟಿಯ ವಿಲ್‌ನಲ್ಲಿ ನಂಬಿಕಸ್ತ ಗೆಳೆಯ ಶಂತನು ನಾಯ್ಡುರನ್ನು ಮರೆಯದ ರತನ್‌ ಟಾಟಾ!

"ಟ್ರಸ್ಟ್ ಸಾರ್ವಜನಿಕರ ಸೇವಕನಂತೆ ಕಾರ್ಯನಿರ್ವಹಿಸಬೇಕು. ನಾವು ಟ್ರಸ್ಟ್‌ಗಳೊಳಗಿನ ಹಣ ಮತ್ತು ಆಸ್ತಿಯ ನಿಜವಾದ ಪಾಲಕರಾಗಿರಬೇಕು..' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ದತ್ ಹಣ ತಿ ಸಾರ್ವಜನಿಕರಿಗಾಗಿ ಮತ್ತು ಅದರ ಸ್ವಂತ ಸಿಬ್ಬಂದಿಗಾಗಿ ಅಲ್ಲ. ನಮಗೆ ಹೆಚ್ಚಿನ ವೆಚ್ಚದ ದೊಡ್ಡ ಪೋಸ್ಟ್‌ಗಳು ಅಗತ್ಯವಿಲ್ಲ ಮತ್ತು ಆದ್ದರಿಂದ, ಸರಿಯಾದ ತಪಾಸಣೆ ಮತ್ತು ನಿಯಂತ್ರಣಗಳನ್ನು ಇರಿಸಲಾಗುತ್ತಿದೆ..” ಸುಗಮ ಕಾರ್ಯಾಚರಣೆ ಮತ್ತು ಖಾತೆಗಳ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಟಾಟಾ ಟ್ರಸ್ಟ್‌ಗಳು ಹಿರಿಯ ಹಣಕಾಸು ತಜ್ಞರು ಮತ್ತು ಆಂತರಿಕ ಪ್ರತಿಭೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ರತನ್‌ ಟಾಟಾ ಮಾಡಿದ್ದ ಒಂದು ನಿಯಮ, ಟಾಟಾ ಸನ್ಸ್‌ಗೆ ಚೇರ್ಮನ್‌ ಆಗುವಂತಿಲ್ಲ ನೋಯೆಲ್‌ ಟಾಟಾ!

ಕಾರ್ಯಾಚರಣೆಯ ಗಾತ್ರ ಮತ್ತು ಪ್ರಮಾಣವು ಹಿರಿಯ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆಯ ವೆಚ್ಚಗಳ ಅಗತ್ಯವನ್ನು ನಿರ್ದೇಶಿಸುತ್ತದೆ, ಸಮಾಜಮುಖಿ ಸಂಸ್ಥೆಗಳಿಗೆ ವೆಚ್ಚದ ಪ್ರಜ್ಞೆಯು ನಿರ್ಣಾಯಕವಾಗಿದೆ ಎಂದು ಕಾನೂನು ಸಂಸ್ಥೆ DSK ಲೀಗಲ್‌ನ ವ್ಯವಸ್ಥಾಪಕ ಪಾಲುದಾರ ಆನಂದ್ ದೇಸಾಯಿ ತಿಳಿಸಿದ್ದಾರೆ.

click me!