ಹೊಸ ವರ್ಷದ ಪ್ರಾರಂಭಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ.2024ನೇ ಸಾಲಿನಲ್ಲಿ ಷೇರು ಮಾರುಕಟ್ಟೆ ಒಟ್ಟು 14 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ಬಿಎಸ್ ಇ, ಎನ್ ಎಸ್ ಇ ರಜಾದಿನಗಳ ಪಟ್ಟಿ ಹೀಗಿದೆ.
Business Desk: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈಗಾಗಲೇ ಹೊಸ ವರ್ಷದಲ್ಲಿ ಬ್ಯಾಂಕ್ ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು 2024ನೇ ಸಾಲಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಾದ ಎನ್ ಎಸ್ ಇ ಹಾಗೂ ಬಿಎಸ್ ಇ ರಜಾಪಟ್ಟಿ ಕೂಡ ಬಿಡುಗಡೆಗೊಂಡಿದೆ. ಇದರ ಅನ್ವಯ ಮುಂದಿನ ವರ್ಷ ಬಿಎಸ್ ಇ ಹಾಗೂ ಎನ್ ಎಸ್ ಇಗೆ ಒಟ್ಟು 14 ದಿನಗಳ ಕಾಲ ರಜೆಯಿರಲಿದೆ. ಮೊದಲ ನಾಲ್ಕು ರಜೆಗಳು ದೀರ್ಘ ವಾರಾಂತ್ಯಗಳನ್ನು ಹೊಂದಿರಲಿವೆ. ಇನ್ನು ಐದು ರಜೆಗಳು -ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ಶ್ರೀ ಮಹಾವೀರ್ ಜಯಂತಿ, ಗಣೇಶ್ ಚತುರ್ಥಿ, ದಸರಾ ಹಾಗೂ ದೀಪಾವಳಿ-ಬಲಿಪಾಡ್ಯ ಶನಿವಾರ ಹಾಗೂ ಭಾನುವಾರಗಳಂದು ಬರಲಿವೆ. 2024ನೇ ಸಾಲಿನ ಟ್ರೇಡಿಂಗ್ ಹಾಗೂ ಷೇರು ಮಾರುಕಟ್ಟೆ ರಜಾದಿನಗಳ ಕ್ಯಾಲೆಂಡರ್ ಹೀಗಿದೆ.
ಬಿಎಸ್ ಇ ಪ್ರಕಟಿಸಿರುವ ರಜಾದಿನಗಳ ಪೂರ್ಣ ಪಟ್ಟಿಯಲ್ಲಿ ಮುಂದಿನ ವರ್ಷದ ಮೊದಲ ರಜೆ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯಕ್ತ ಇರಲಿದೆ. ಹಾಗೆಯೇ ಮುಂದಿನ ಮೂರು ರಜೆಗಳು ಮಾರ್ಚ್ ನಲ್ಲಿ ಇರಲಿವೆ. ಮಾ.8ರಂದು ಮಹಾಶಿವರಾತ್ರಿ (ಶುಕ್ರವಾರ), ಮಾ.25ರಂದು ಹೋಲಿ (ಸೋಮವಾರ) ಹಾಗೂ ಮಾ.29ರಂದು ಗುಡ್ ಫ್ರೈಡೆ ಇರಲಿದೆ. ಇವೆಲ್ಲವೂ ಶುಕ್ರವಾರವೇ ಇರಲಿರುವ ಕಾರಣ ಸುದೀರ್ಘ ವಾರಾಂತ್ಯವಿರಲಿದೆ.
ಹಣ ಬಿತ್ತಿ, ಹಣ ಬೆಳೆದ ಷೇರು ಮಾರ್ಕೆಟ್ ರೈತರು.. 2023ರಲ್ಲಿ 82 ಲಕ್ಷ ಕೋಟಿ ಶ್ರೀಮಂತರಾದ ಹೂಡಿಕೆದಾರರು!
ಇನ್ನು ಏಪ್ರಿಲ್, ಜುಲೈ ಹಾಗೂ ನವೆಂಬರ್ನಲ್ಲಿ ತಲಾ ಎರಡು ರಜೆಗಳಿರಲಿವೆ. ಫೆಬ್ರವರಿ ಹಾಗೂ ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ಯಾವುದೇ ರಜೆಯಿರೋದಿಲ್ಲ. ಈದ್-ಉಲ್-ಫಿತರ್ (ರಂಜಾನ್ ಈದ್) ಹಾಗೂ ರಾಮ್ ನವಮಿ ಏಪ್ರಿಲ್ 11 (ಗುರುವಾರ) ಹಾಗೂ ಏಪ್ರಿಲ್ 17ರಂದು (ಬುಧವಾರ) ಇರಲಿದೆ. ಇನ್ನು ಮಹಾರಾಷ್ಟ್ರ ಡೇ ಮೇ 1ರಂದು ಇರಲಿದೆ. ಬಕ್ರೀದ್ ಈದ್ ಪ್ರಯುಕ್ತ ಜೂನ್ 17ರಂದು ಷೇರು ಮಾರುಕಟ್ಟೆ ಕ್ಲೋಸ್ ಆಗಿರುತ್ತದೆ. ಇದು ಸೋಮವಾರ ಆಗಿರಲಿದೆ. ಹೀಗಾಗಿ ಇದು ಕೂಡ ದೀರ್ಘ ವಾರಾಂತ್ಯವಾಗಿರಲಿದೆ.
ಜುಲೈ 17ರಂದು ಮೊಹರಂ ಇರಲಿದೆ. ಇನ್ನು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಇರಲಿದೆ. ಇದು ಗುರುವಾರ ಇದೆ. ಇನ್ನು ಮಹಾತ್ಮ ಗಾಂಧಿ ಜಯಂತಿ ಅಕ್ಟೋಬರ್ 2ರಂದು ಇರಲಿದೆ. ಇದು ಬುಧವಾರ ಬಂದಿದೆ. ದೀಪಾವಳಿ ಪ್ರಯುಕ್ತ ಮಾರುಕಟ್ಟೆ ನವೆಂಬರ್ 1ರಂದು ಮುಚ್ಚಿರಲಿದೆ. ಇನ್ನು ಇದೇ ದಿನ ವಿಶೇಷ ಮುಹೂರ್ತ ಟ್ರೇಡಿಂಗ್ ಕೂಡ ನಡೆಯಲಿದೆ. ಅದರ ಸಮಯಾವಧಿಯನ್ನು ಹಬ್ಬದ ದಿನ ಹತ್ತಿರವಾಗುವಾಗ ಘೋಷಿಸಲಾಗುತ್ತದೆ. ಇನ್ನು ಗುರುನಾನಕ್ ಜಯಂತಿ ಅನ್ನು ನವೆಂಬರ್ 15ರಂದು ಆಚರಿಸಲಾಗುತ್ತದೆ. ಇದು ಕೂಡ ಶುಕ್ರವಾರ ಇದೆ. ಇನ್ನು ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 25ರಂದು (ಬುಧವಾರ) ಮಾರುಕಟ್ಟೆ ಬಂದ್ ಆಗಿರಲಿದೆ.
ಸರಕು ಮಾರುಕಟ್ಟೆ ರಜೆಗಳು
ಸರಕು ಉತ್ಪನ್ನಗಳ ಮಾರುಕಟ್ಟೆಗೆ ಐದು ಪೂರ್ಣ ದಿನಗಳ ಟ್ರೇಡಿಂಗ್ ರಜೆಗಳಿವೆ. ಗಣರಾಜ್ಯೋತ್ಸವ, ಗುಡ್ ಫ್ರೈಡೇ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹಾಗೂ ಕ್ರಿಸ್ಮಸ್ ಪ್ರಯುಕ್ತ ಟ್ರೇಡಿಂಗ್ ಮಾರುಕಟ್ಟೆಗೆ ಐದು ದಿನಗಳ ಕಾಲ ರಜೆ ನೀಡಲಾಗಿದೆ. ಇನ್ನು ಸಂಜೆಯ ಅವಧಿಯಲ್ಲಿ ಸರಕು ಮಾರುಕಟ್ಟೆ ಟ್ರೇಡಿಂಗ್ ಗೆ ತೆರೆದಿರುತ್ತದೆ.
Bank Holidays: ಜನವರಿ ತಿಂಗಳಲ್ಲಿ ಒಟ್ಟು 16 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ
ಇನ್ನು ಹೊಸ ವರ್ಷದ ದಿನ ಅಂದರೆ ಜನವರಿ 1ರಂದು ಸರಕು ಉತ್ಪನ್ನ ಮಾರುಕಟ್ಟೆ ಸಂಜೆ ಸಮಯದಲ್ಲಿ ಟ್ರೇಡಿಂಗ್ ಗೆ ಕ್ಲೋಸ್ ಆಗಿರುತ್ತದೆ.
ಜನವರಿ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಗಣರಾಜ್ಯೋತ್ಸವ ಸೇರಿದಂತೆ ಹೊಸ ವರ್ಷದ (2024ನೇ ಸಾಲಿನ) ಮೊದಲ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 16 ದಿನಗಳ ಕಾಲ ರಜೆಯಿದೆ.