Name Change In PAN Card: ವಿವಾಹದ ಬಳಿಕ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಬದಲಾಯಿಸಲು ಏನ್ ಮಾಡ್ಬೇಕು?

By Suvarna NewsFirst Published Dec 23, 2021, 8:21 PM IST
Highlights

ವಿವಾಹದ ಬಳಿಕ ಮಹಿಳೆಯ ಉಪನಾಮ ಹಾಗೂ ವಿಳಾಸದಲ್ಲಿ ಬದಲಾವಣೆಯಾಗುತ್ತದೆ. ಆಕೆ ತನ್ನ ಪ್ಯಾನ್ ಕಾರ್ಡ್ ನಲ್ಲಿ ಈ ಬದಲಾವಣೆಗಳನ್ನು ಮಾಡಲು ಏನ್ ಮಾಡ್ಬೇಕು? ಆನ್ ಲೈನ್ ನಲ್ಲಿ ಸುಲಭವಾಗಿ ಹೆಸರು ಮತ್ತು ವಿಳಾಸ ಬದಲಾಯಿಸೋದು ಹೇಗೆ? ಇಲ್ಲಿದೆ ಮಾಹಿತಿ

ನೀವು ಆದಾಯ ತೆರಿಗೆ (Income tax) ಪಾವತಿಸುತ್ತಿದ್ರೆ, ನಿಮ್ಮ ಬಳಿ ಕಡ್ಡಾಯವಾಗಿ ಕಾಯಂ ಖಾತೆ ಸಂಖ್ಯೆ (PAN)ಇರಲೇಬೇಕು. ಆದಾಯ ತೆರಿಗೆ ರಿಟರ್ನ್ಸ್ (Income tax returns)  ಸಲ್ಲಿಕೆಗೆ ಪ್ಯಾನ್ ಕಾರ್ಡ್ (PAN Card)ಗುರುತು ದೃಢೀಕರಣ ದಾಖಲೆಯಾಗಿದೆ. ಭಾರತದಲ್ಲಿ ಇಂದು ಗುರುತು ದೃಢೀಕರಣಕ್ಕಾಗಿ ಕೇಳೋ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ (PAN Card) ಕೂಡ ಸೇರಿದೆ. ಹೀಗಾಗಿ ಆದಾಯ ತೆರಿಗೆ ಸಲ್ಲಿಕೆ ಸೇರಿದಂತೆ ಗುರುತು ದೃಢೀಕರಣಕ್ಕಾಗಿ ಪ್ಯಾನ್ ಕಾರ್ಡ್ ಹೊಂದಿರೋದು ಒಳ್ಳೆಯದು. 10 ಅಂಕೆಗಳಿರೋ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ (Income Tax Department) ವಿತರಿಸುತ್ತದೆ.  ಪ್ಯಾನ್ ಕಾರ್ಡ್ ಹೊಂದಿರೋ ಬಹುತೇಕ ಮಹಿಳೆಯರು ವಿವಾಹದ ಬಳಿಕ ಹೆಸರಿನ ಉಪನಾಮದಲ್ಲಿ ಬದಲಾವಣೆಯಾಗೋ ಕಾರಣ ತೊಂದರೆ ಅನುಭವಿಸುತ್ತಾರೆ. ಹೀಗಿರೋವಾಗ ಮದುವೆಯಾದ ಬಳಿಕ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಉಪನಾಮ  ಅಥವಾ ವಿಳಾಸ ಬದಲಿಸಬೇಕಾಗುತ್ತದೆ. ಆದ್ರೆ ಇದು ಹೇಗೆ ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ ಇದಕ್ಕಾಗಿ ಯಾರದ್ದೋ ಬೆನ್ನು ಬಿದ್ದು, ಕಡಿಮೆ ಹಣದಲ್ಲಾಗೋ ಕೆಲಸಕ್ಕೆ ಹೆಚ್ಚು ಪಾವತಿಸಿ ಕೈ ಸುಟ್ಟುಕೊಳ್ಳುತ್ತಾರೆ. ಅಲ್ಲದೆ, ಪ್ಯಾನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗಾಗಿ ತಿಂಗಳುಗಟ್ಟಲೆ  ಕಾಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಆದ್ರೆ ಈ ಎಲ್ಲ ಕಿರಿಕಿರಿಯಿಲ್ಲದೆ  ನೀವೇ ಆನ್ ಲೈನ್ ನಲ್ಲಿ ಸುಲಭವಾಗಿ ಹೆಸರು ಮತ್ತು ವಿಳಾಸ ಬದಲಾಯಿಸಬಹುದು. 

ಹೆಸರು ಬದಲಾವಣೆಗೆ ಯಾವೆಲ್ಲ ದಾಖಲೆಗಳು ಅಗತ್ಯ
-ವಿವಾಹ ಪ್ರಮಾಣಪತ್ರ
-ಹೆಸರು ಬದಲಾವಣೆಗೆ ಸಂಬಂಧಿಸಿದ ಅಧಿಕೃತ ಪತ್ರ
-ಪಾಸ್ಫೋರ್ಟ್ ಪ್ರತಿ
-ಗಜೆಟೆಡ್ ಅಧಿಕಾರಿಯಿಂದ ಪಡೆದ ಪ್ರಮಾಣಪತ್ರ

Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್

ಆನ್ ಲೈನ್ ನಲ್ಲಿ ಪ್ಯಾನ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸೋದು ಹೇಗೆ?
-ಮೊದಲಿಗೆ ನೀವು NSDL ವೆಬ್ ಸೈಟ್ https://tin.tin.nsdl.com/pan/changerequest.html ಭೇಟಿ ನೀಡಿ.
-ಇಲ್ಲಿ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ
-ನಿಮ್ಮ ಹೆಸರಿನ ಮುಂದಿರೋ ಬಾಕ್ಸ್ ಆಯ್ಕೆ ಮಾಡಿ ಅದ್ರಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ನಮೂದಿಸಿ
-ಆ ಬಳಿಕ Validate ಆಯ್ಕೆ ಕ್ಲಿಕ್ ಮಾಡಿ. ಎಲ್ಲ ಮಾಹಿತಿಗಳು ಸರಿ ಇದೆಯಾ ಎಂದು ಪರಿಶೀಲಿಸಿ.
-ನೀವು ನಮೂದಿಸಿರೋ ಎಲ್ಲ ಮಾಹಿತಿಗಳು (ಹೆಸರು ಹಾಗೂ ವಿಳಾಸ ಸೇರಿದಂತೆ) ಸರಿಯಿದ್ದರೆ Submit ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಪಾವತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ.
-ನೆಟ್ ಬ್ಯಾಂಕಿಂಗ, ಡೆಬಿಟ್/ಕ್ರೆಡಿಟ್ ಕಾರ್ಡ್, ಕ್ಯಾಶ್ ಕಾರ್ಡ್ ಇತ್ಯಾದಿ ಮೂಲಕ ಪಾವತಿ ಮಾಡಬಹುದು.
-ನೀವು ಶುಲ್ಕ ಪಾವತಿಸಿದ ಬಳಿಕ ಪ್ಯಾನ್ ಅರ್ಜಿಯ ಪ್ರಿಂಟ್ ತೆಗೆಯಿರಿ. ಅದಕ್ಕೆ ಎರಡು ಪಾಸ್ಫೋರ್ಟ್ ಗಾತ್ರದ ಫೋಟೋಗಳನ್ನು ಅಂಟಿಸಿ ಅಗತ್ಯವಿರುವಲ್ಲಿ ಸಹಿ ಮಾಡಿ ಅಗತ್ಯ ದಾಖಲೆಗಳು ಹಾಗೂ ಪಾವತಿ ಸ್ಲಿಪ್ ಜೊತೆಗೆ ಒಂದು ಕವರ್ ನಲ್ಲಿ ಹಾಕಿ ಹತ್ತಿರದ ಎನ್ ಎಸ್ ಡಿಎಲ್ ಕಚೇರಿಗೆ ನೀಡಿ. 15ದಿನಗಳಲ್ಲಿ ಹೆಸರು ಹಾಗೂ ವಿಳಾಸ ಬದಲಾವಣೆಗೊಂಡ ಹೊಸ ಪ್ಯಾನ್ ಕಾರ್ಡ್ ನಿಮ್ಮ ಮನೆಗೆ ಬರುತ್ತದೆ. 

PM Jan Dhan OD Limit:ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ರೂ ಸಿಗುತ್ತೆ 10 ಸಾವಿರ; ಹೇಗೆ ಗೊತ್ತಾ?

ಎಷ್ಟು ಶುಲ್ಕ?
ಪ್ಯಾನ್ ಕಾರ್ಡ್ ನಲ್ಲಿ ಹೆಸರು ಹಾಗೂ ವಿಳಾಸ ಬದಲಾವಣೆಗೆ ನೀವು ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ನೀವು ಆನ್ ಲೈನ್ ನಲ್ಲೇ ಪಾವತಿ ಮಾಡಬಹುದು. ಹೆಸರು ಹಾಗೂ ವಿಳಾಸ ಬದಲಾವಣೆಗೆ ಮಹಿಳೆ 110ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಆ ಮಹಿಳೆ ವಿದೇಶದಲ್ಲಿದ್ದು, ಬದಲಾವಣೆ ಮಾಡುತ್ತಿದ್ರೆ 1020ರೂ. ಪಾವತಿಸಬೇಕಾಗುತ್ತದೆ. 
 

click me!