Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್

By Suvarna News  |  First Published Dec 23, 2021, 6:50 PM IST

ಶಾಲೆ ಅಡ್ಮಿಷನ್ ಗೆ ಆಧಾರ್ ನಂಬರ್ ಕೇಳಿರ್ತಾರೆ. ತರಾತುರಿಯಲ್ಲಿ ಆಧಾರ್ ಕೇಂದ್ರಕ್ಕೆ ಹೋದ್ರೆ ಅದು,ಇದು ಅಂತಾ ಅಲೆಸ್ತಾರೆ. ಪ್ರತಿದಿನ  ಹೋಗಿ ಬಂದು ಸುಸ್ತಾಗೋ ಪಾಲಕರಿಗೆ ಖುಷಿ ಸುದ್ದಿಯಿದೆ. ಇನ್ಮುಂದೆ ಆಸ್ಪತ್ರೆಯಲ್ಲೇ ಸಿಗುತ್ತೆ ಆಧಾರ್ ನಂಬರ್.  


ಆಧಾರ್ (Aadhaar) ಈಗ ಕಡ್ಡಾಯ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ನಂಬರ್ ಹೊಂದಿದ್ದರೆ ಸರ್ಕಾರಿ ಹಾಗೂ ಖಾಸಗಿ ಸೇವೆ ಪಡೆಯುವುದು ಸುಲಭ. ಸರ್ಕಾರ (Government)ದ ಯೋಜನೆಗಳ ಲಾಭ ಪಡೆಯಬೇಕೆಂದರೆ ಆಧಾರ್ ಸಂಖ್ಯೆ (Aadhaar Card) ಅನಿವಾರ್ಯವಾಗಿದೆ. ಅನೇಕ ಯೋಜನೆಗಳಿಗೆ ಆಧಾರ್ ಲಿಂಕ್(link) ಆಗದೆ ಹೋದಲ್ಲಿ ಸೇವೆ ಸಿಗೋದಿಲ್ಲ.ಶಾಲೆಗಳಲ್ಲಿಯೂ ಈಗ ಆಧಾರ್ ದಾಖಲೆ ಕೇಳುತ್ತಿದ್ದಾರೆ. ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಲ್ಲದೆ ಹೋದರೂ ಬಹುತೇಕ ಶಾಲೆಗಳು ಆಧಾರ್ ಕೇಳ್ತಿವೆ. ಶಾಲೆಗಳಿಗೆ ಮಾತ್ರವಲ್ಲದೆ ಮಕ್ಕಳ ಪಾಸ್ಪೋರ್ಟ್ ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ಅಗತ್ಯ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಐದು ವರ್ಷದೊಳಗಿನ ಮಕ್ಕಳಿಗೆಆಧಾರ್ ಕಾರ್ಡ್ ಮಾಡಿಸ್ತಿದ್ದಾರೆ. 

ಜನನದೊಂದಿಗೆ (Birth) ಆಧಾರ್ ಸಂಖ್ಯೆ :
ಮಗು ಜನಿಸಿದ ತಕ್ಷಣ, ಮಗುವಿಗಾಗಿ ಮಾಡುವ ಮೊದಲ ದಾಖಲೆ ಎಂದರೆ ಅದು ಜನನ ಪ್ರಮಾಣಪತ್ರವಾಗಿದೆ (Birth Certificate). ಆದರೆ ಜನನ ಪ್ರಮಾಣಪತ್ರದ ಮೊದಲು, ಮಗುವಿಗೆ ಇನ್ಮುಂದೆ ಆಧಾರ್ ಕಾರ್ಡ್ ಸಿಗಲಿದೆ. ಮಗು ತನ್ನ ಜನನದ ಜೊತೆಗೆ ಆಧಾರ್ ಸಂಖ್ಯೆಯನ್ನು ಪಡೆಯಲಿದೆ ಎಂದ್ರೆ ನಂಬಲೇಬೇಕು. ಯುಐಡಿಎಐ(UIDAI )ಇದಕ್ಕೆ ಬಹುತೇಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮಕ್ಕಳ ಜನನದೊಂದಿಗೆ ಆಧಾರ್ ಕಾರ್ಡ್ ನೋಂದಣಿ ಆಸ್ಪತ್ರೆ (Hospital)ಯಲ್ಲಿ ನಡೆಯಲಿದೆ. ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಯುಐಡಿಎಐ ಹೇಳಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಜನನ ಪ್ರಮಾಣಪತ್ರದ ಮೊದಲು ಮಗುವಿಗೆ ಆಧಾರ್ ಕಾರ್ಡ್ ಸಿಗಲಿದೆ. ಜನನ ಪ್ರಮಾಣಪತ್ರವನ್ನು ಪಡೆಯಲು ಸುಮಾರು 1 ತಿಂಗಳು ತೆಗೆದುಕೊಳ್ಳುತ್ತದೆ.  ಈ ಯೋಜನೆಯಡಿ, ನವಜಾತ ಮಕ್ಕಳಿಗೆ ಆಧಾರ್ ಸಂಖ್ಯೆ ನೀಡಲು ಜನನ ನೋಂದಣಾಧಿಕಾರಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. 

Tap to resize

Latest Videos

undefined

PM Jan Dhan OD Limit:ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ರೂ ಸಿಗುತ್ತೆ 10 ಸಾವಿರ; ಹೇಗೆ ಗೊತ್ತಾ?

131 ಕೋಟಿ ಜನರ ಬಳಿಯಿದೆ ಆಧಾರ್:
ಯುಐಡಿಎಐ ಮಾಹಿತಿ ಪ್ರಕಾರ, ವಯಸ್ಕ ಜನಸಂಖ್ಯೆಯ ಶೇಕಡಾ 99.7 ಮಂದಿ ಆಧಾರ್‌ ಹೊಂದಿದ್ದಾರೆ. ದೇಶದ 131 ಕೋಟಿ ಜನಸಂಖ್ಯೆಯನ್ನು ಆಧಾರ್‌ನೊಂದಿಗೆ Enroll ಮಾಡಲಾಗಿದೆ. ಹಿರಿಯರ ನಂತರ ನವಜಾತ ಮಕ್ಕಳ ಹೆಸರು ದಾಖಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಭಾರತದಲ್ಲಿ ಪ್ರತಿ ವರ್ಷ 2 ರಿಂದ 2.5 ಕೋಟಿ ಮಕ್ಕಳು ಜನಿಸುತ್ತಾರೆ. ಮಕ್ಕಳನ್ನು ಆಧಾರ್ ಗೆ ಸೇರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಮಗುವಿನ ಜನನದ ನಂತ್ರ ಮಗುವಿನ ಫೋಟೋ(Photo)ವನ್ನು ಕ್ಲಿಕ್ ಮಾಡಿ ಆಧಾರ್ ಕಾರ್ಡ್ ಸಿದ್ಧಪಡಿಸಲಾಗುತ್ತದೆ.

ಐದು ,15 ವರ್ಷದಲ್ಲಿ ಮಾಡಬೇಕು ನವೀಕರಣ :
ಹಿರಿಯರ ಆಧಾರ್ ಕಾರ್ಡ್ ಮಾಡಲು ಬಯೋಮೆಟ್ರಿಕ್‌ (Biometric)ಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಮಕ್ಕಳ ವಿಷಯದಲ್ಲಿ ಆಧಾರ್ ನಿಯಮವನ್ನು ಬದಲಾಯಿಸಲಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳಲಾಗುವುದಿಲ್ಲ.  ದಾಖಲೆ ರೂಪದಲ್ಲಿ ಮಕ್ಕಳ ಪೋಷಕರ ಆಧಾರ್ ಕಾರ್ಡ್ ಅವಶ್ಯಕವಾಗುತ್ತದೆ. ಪೋಷಕರ ಆಧಾರ್ ಪರಿಶೀಲನೆ ಮಾಡಿ,ಮಕ್ಕಳಿಗೆ ಆಧಾರ್ ನೀಡಲಾಗುತ್ತದೆ.

Changes In GST:ಜನವರಿ 1ರಿಂದ ಪರೋಕ್ಷ ತೆರಿಗೆ ಪದ್ಧತಿ ಬಿಗಿ; ಜಿಎಸ್ ಟಿಯಲ್ಲಿ 12 ಬದಲಾವಣೆಗಳು

ಐದು ವರ್ಷ (Five years )ದಾಟಿದ ನಂತರ, ಮಗುವಿನ ಬಯೋಮೆಟ್ರಿಕ್ಸ್  ತೆಗೆದುಕೊಳ್ಳಲಾಗುತ್ತದೆ. ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ. ಆಗ ಮಕ್ಕಳ ಹೆಬ್ಬೆಟ್ಟಿನ ಗುರುತು ಹಾಗೂ ಕಣ್ರೆಪ್ಪೆ (Eyelash) ಗುರುತನ್ನು ಪಡೆಯಲಾಗುತ್ತದೆ. ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ನವೀಕರಣ ಮಾಡಬೇಕಾಗುತ್ತದೆ.ಯುಐಡಿಎಐ ಇಡೀ ಜನಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸುತ್ತಿದೆ.  ಹಿಂದಿನ ವರ್ಷ ಹಿಂದುಳಿದ ಪ್ರದೇಶಗಳಲ್ಲಿ 10,000 ಕ್ಯಾಂಪ್ ನಡೆಸಲಾಗಿತ್ತು. ಹಿಂದುಳಿದ ಪ್ರದೇಶಗಳಲ್ಲಿ ಅನೇಕರು ಆಧಾರ್ ಕಾರ್ಡ್ ಹೊಂದಿಲ್ಲ ಎಂಬ ಮಾಹಿತಿ ಮೇರೆಗೆ ಕ್ಯಾಂಪ್ ನಡೆಸಲಾಗಿತ್ತು. ಕ್ಯಾಂಪ್ (Camp) ವೇಳೆ 30 ಲಕ್ಷ ಜನರನ್ನು ಆಧಾರ್ ಜೊತೆ ಲಿಂಕ್ (Link )ಮಾಡಲಾಗಿತ್ತು. 
 

click me!