ಕೆಲಸ ಸಿಕ್ಕ ತಕ್ಷಣ ಉಳಿತಾಯ ಮಾಡೋಕೆ ಮನಸ್ಸು ಬರೋದಿಲ್ಲ. ನಂತ್ರ ಮದುವೆ, ಮಕ್ಕಳ ಜವಾಬ್ದಾರಿ ಹೆಚ್ಚಾದಂತೆ ಕೈನಲ್ಲಿ ಹಣ ನಿಲ್ಲೋದಿಲ್ಲ. ಇದ್ರಿಂದ ಕೊನೆಗಾಲದಲ್ಲಿ ಬಿಡಿಗಾಸೂ ಇರೋದಿಲ್ಲ. ನಿವೃತ್ತಿ ನಂತ್ರ ಸಮಸ್ಯೆ ಆಗ್ಬಾರದು ಅಂದ್ರೆ ಸ್ಮಾರ್ಟ್ ಆಗಿ ಆಲೋಚನೆ ಮಾಡ್ಬೇಕು.
ನಿವೃತ್ತಿ, ಪಿಂಚಣಿ ಎಂದಾಗ ನಮ್ಮ ತಲೆಯಲ್ಲಿ ಓಡೋದು 60ರ ವಯಸ್ಸು. 30ನೇ ವಯಸ್ಸಿನಲ್ಲಿ ನಿವೃತ್ತಿ ಬಗ್ಗೆ ಮಾತನಾಡಿದ್ರೆ ಹೆಚ್ಚಿನ ಜನರು ತಲೆಗೆಡಿಸಿಕೊಳ್ಳುವುದಿಲ್ಲ. ಈಗಷ್ಟೆ ವೃತ್ತಿ ಜೀವನ ಆರಂಭವಾಗ್ತಿದೆ. ಗಳಿಕೆ ಶುರುವಾಗುವಾಗ್ಲೇ ಉಳಿತಾಯ ಮಾಡಿದ್ರೆ ಹೇಗೆ ಎನ್ನುವವರಿದ್ದಾರೆ. ಬಂದ ಸಂಬಳವನ್ನು ಬಿಂದಾಸ್ ಆಗಿ ಖರ್ಚು ಮಾಡ್ಬೇಕು ಎಂದು ಕೆಲವರು ಹೇಳ್ತಾರೆ. ಆದ್ರೆ ನಿವೃತ್ತಿ ಜೀವನಕ್ಕಾಗಿ ಈಗಿನಿಂದಲೇ ಉಳಿತಾಯ ಮಾಡುವುದು ಬಹಳ ಮುಖ್ಯ ಎಂಬುದನ್ನು ನಾವು ಮರೆತಿರುತ್ತೇವೆ. ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಅನೇಕರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಅವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ವಯಸ್ಸಾದ್ಮೇಲೆ ದುಡಿದು ತಿನ್ನುವ ಬದಲು, ಈಗ್ಲೇ ಸ್ವಲ್ಪ ಬುದ್ದಿ ಉಪಯೋಗಿಸಿ ಹಣ ಉಳಿತಾಯ ಮಾಡಿದ್ರೆ ನಿವೃತ್ತಿ ಜೀವನವನ್ನು ಯಾವುದೇ ಟೆನ್ಷನ್ ಇಲ್ಲದೆ ಕಳೆಯಬಹುದು. 30 ವರ್ಷ ವಯಸ್ಸಿನಲ್ಲಿ ನಿಮ್ಮ ಉಳಿತಾಯದ ಪ್ಲಾನ್ ಹೇಗಿರಬೇಕೆಂದು ನಾವು ಹೇಳ್ತೆವೆ.
ನಿವೃತ್ತಿ (Retirement) ಗಾಗಿ ಹೀಗಿರಲಿ ನಿಮ್ಮ ಪ್ಲಾನ್ (Plan) :
ಗುರಿ ಬಹಳ ಮುಖ್ಯ : ಎಲ್ಲದಕ್ಕೂ ಗುರಿ ಮುಖ್ಯ. ಇದಕ್ಕೆ ಕೂಡ ನೀವು ಗುರಿ ಹೊಂದಿರಬೇಕು. ನಿವೃತ್ತಿ ಸಮಯದಲ್ಲಿ ನಿಮ್ಮ ಬ್ಯಾಂಕ್ (Bank) ಖಾತೆಯಲ್ಲಿ ಎಷ್ಟು ಹಣವಿರಬೇಕೆಂಬ ಗುರಿಯನ್ನು ನೀವು ಸೆಟ್ ಮಾಡಿಕೊಳ್ಳಬೇಕು. ಆ ಸಮಯದಲ್ಲಿ ತಿಂಗಳಿಗೆ ಎಷ್ಟು ಖರ್ಚಾಗಬಹುದು ಎಂಬುದನ್ನು ಲೆಕ್ಕ ಹಾಕಿ ಈಗ ನೀವು ಹೂಡಿಕೆ (Investment ) ಮಾಡಬೇಕಾಗುತ್ತದೆ. ಈಗಿನ ತಿಂಗಳ ಖರ್ಚಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಪಿಂಚಣಿ ಯೋಜನೆಯಲ್ಲಿ ನೀವು ಹಣ ಹೂಡಬೇಕಾಗುತ್ತದೆ.
ಫ್ಯಾಷನ್‌ಗೆ ತಕ್ಕಂತೆ ಅಪ್‌ಡೇಟ್ ಆದ್ರೆ ಅರ್ನ್ ಮಾಡಬಹುದು ನೋಡಿ!
ಆದಷ್ಟು ಬೇಗ ಶುರುವಾಗ್ಲಿ ಹೂಡಿಕೆ : ಇನ್ನೂ ವಯಸ್ಸಿದೆ ಎಂದು ಹೂಡಿಕೆಯನ್ನು ಮುಂದೂಡುತ್ತ ಹೋಗ್ಬೇಡಿ. ನೀವು ಗಳಿಕೆ ಶುರು ಮಾಡಿದ ತಕ್ಷಣ ಉಳಿತಾಯ ಶುರು ಮಾಡಿದ್ರೆ ಒಳ್ಳೆಯದು. ಬೇಗ ನೀವು ಹೂಡಿಕೆ ಶುರು ಮಾಡಿದ್ರೆ ಬಡ್ಡಿ ಹೆಚ್ಚಿಗೆ ಸಿಗುತ್ತದೆ. ಮಕ್ಕಳ ಶಿಕ್ಷಣ, ಮದುವೆ, ಇಎಂಐ, ಜೀವ ವಿಮೆ ಮತ್ತು ಸಾಲ ಪಾವತಿ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತಿ ಯೋಜನೆಯನ್ನು ಮಾಡಲಾಗುತ್ತದೆ. ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ನೀವು ಉಳಿತಾಯ ಮಾಡ್ಬೇಕಾಗುತ್ತದೆ.
ದಿ ಬೆಸ್ಟ್ ಪಿಂಚಣಿ ಯೋಜನೆ ಹುಡುಕಾಟ : ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅತ್ಯುತ್ತಮ ಪಿಂಚಣಿ ಯೋಜನೆಯಾಗಿದೆ. ಇದನ್ನು ಹೊರತುಪಡಿಸಿ ಸರ್ಕಾರಿ ಮತ್ತು ಖಾಸಗಿ ಎರಡರಲ್ಲೂ ವಿಭಿನ್ನ ಪಿಂಚಣಿ ಯೋಜನೆಗಳಿವೆ. ಆ ಯೋಜನೆಗಳಲ್ಲಿ ಯಾವುದು ಲಾಭಕರ ಎಂಬುದನ್ನು ಪತ್ತೆ ಮಾಡಿ ಅದ್ರಲ್ಲಿ ಹೂಡಿಕೆ ಮಾಡಿ. ನೀವು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆಯನ್ನು ಉಳಿಸಬಹುದು.
ಖರ್ಚನ್ನು ಕಡಿಮೆ ಮಾಡಿ : ಐಷಾರಾಮಿ ಜೀವನಕ್ಕೆ ಅನೇಕರು ಯರ್ರಾಬಿರ್ರಿ ಖರ್ಚು ಮಾಡ್ತಾರೆ. ಇಷ್ಟೊಂದು ಖರ್ಚು ಮಾಡುವ ಅಗತ್ಯವಿರುವುದಿಲ್ಲ. ಹಾಗೆಯೇ ನಾಲ್ಕೈದು ಕಡೆ ಸಾಲ ತೆಗೆದುಕೊಂಡವರಿರುತ್ತಾರೆ. ಸಾಲ ಮರುಪಾವತಿಯಲ್ಲಿಯೇ ನಮ್ಮ ಸಮಯ ಕಳೆಯುತ್ತದೆ. ಉಳಿತಾಯ ಮಾಡಲು ಹಣ ಇರೋದಿಲ್ಲ. ಹಾಗಾಗಿ ನಮ್ಮ ಜವಾಬ್ದಾರಿ ಅರಿತು ನಾವು ಖರ್ಚು ಮಾಡ್ಬೇಕು. ತಿಂಗಳಿಗೆ ಎಷ್ಟು ಖರ್ಚು ಮಾಡ್ಬೇಕೆಂದು ಟಾರ್ಗೆಟ್ ಹಾಕಿಕೊಳ್ಳಿ. ಆ ಗಡಿ ದಾಟದಂತೆ ನೋಡಿಕೊಳ್ಳಿ.
ಎಸ್ ಬಿಐಯಲ್ಲಿವೆ 6 ವಿಧದ ಉಳಿತಾಯ ಖಾತೆಗಳು; ಯಾರು, ಯಾವುದರಲ್ಲಿ ಹೂಡಿಕೆ ಮಾಡಬಹುದು?
ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿರಿ : ಸರ್ಕಾರ ನಿವೃತ್ತ ಜೀವನಕ್ಕೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಎಲ್ಲ ಹಣವನ್ನು ಮ್ಯೂಚ್ಯುವಲ್ ಫಂಡ್ ಗೆ ಹಾಕ್ಬೇಕೆಂದೇನಿಲ್ಲ. ಇದ್ರಿಂದ ಕೈಸುಟ್ಟುಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ನೀವು ಸರ್ಕಾರಿ ಯೋಜನೆಗಳ ಉಳಿತಾಯ ಬಾಂಡ್ ಖರೀದಿ ಮಾಡಬಹುದು. ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ನಿವೃತ್ತಿ ಸಮಯದಲ್ಲಿ ಪರಿತಪಿಸುವುದು ತಪ್ಪುತ್ತದೆ.