ಆಧಾರ್ ವರ್ಚುವಲ್ ಐಡಿ ಪಡೆಯೋದು ಹೇಗೆ?: ಸಿಂಪಲ್ ಸ್ಟೆಪ್ಸ್

First Published Jul 6, 2018, 1:02 PM IST
Highlights

ಆಧಾರ್ ವರ್ಚುವಲ್ ಐಡಿ ಪಡೆಯೋಧು ಹೇಗೆ?

ಸರಳ ಪ್ರಕ್ರಿಯೆ ಮೂಲಕ ನಿಮ್ಮದಾಗಲಿದೆ ವರ್ಚುವಲ್ ಐಡಿ

ಟೆಲಿಕಾಂ ಕಂಪನಿ, ಇ-ವ್ಯಾಲೆಟ್‌ ಸೇವೆಗೆ ಉಪಯುಕ್ತ

ರಗಳೆ ತಪ್ಪಿಸಲಿದೆ 16 ಅಂಕಿಗಳ ವರ್ಚುವಲ್ ಐಡಿ

ಬೆಂಗಳೂರು(ಜು.6): ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಲು ಇಚ್ಛಿಸದಿದ್ದಲ್ಲಿ 16 ಅಂಕಿಗಳ ವರ್ಚುವಲ್ ಐಡಿ- ವಿಐಡಿ (ಗುರುತಿನ ಸಂಖ್ಯೆ) ಯನ್ನು ಟೆಲಿಕಾಂ ಕಂಪನಿಗಳು ಮತ್ತು ಇತರ ಸೇವಾದಾರರಿಗೆ ನೀಡುವ ಆಯ್ಕೆಯನ್ನು ಆಧಾರ್‌ ಪ್ರಾಧಿಕಾರ ಈಗಾಗಲೇ ಒದಗಿಸಿದೆ.

ಗ್ರಾಹಕರು ಒಮ್ಮೆ ತಮ್ಮ ವಿಐಡಿಯನ್ನು ಸೇವಾದಾರರ ಜತೆ ಹಂಚಿಕೊಂಡ ಬಳಿಕ, ಆಧಾರ್‌ ಸಂಖ್ಯೆಯ ಬದಲು ಯುಐಡಿ ಟೋಕನ್ ಸಂಖ್ಯೆಯನ್ನು ಸೇವಾದಾರರು ಪಡೆಯಲಿದ್ದಾರೆ. ಅದರ ಜೊತೆಗೆ, ಎಲ್ಲ ಸೇವಾದಾರರ ಜತೆ ಸೀಮಿತ ಮಾಹಿತಿಗಳನ್ನು ಮಾತ್ರ ಹಂಚಿಕೊಳ್ಳುವಂತೆ ಆಧಾರ್‌ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ. 

ಬ್ಯಾಂಕುಗಳು ಅಥವಾ ಆದಾಯ ತೆರಿಗೆ ಇಲಾಖೆಯಂತಹ ಜಾಗತಿಕ ದೃಢೀಕರಣ ಬಳಕೆದಾರ ಏಜೆನ್ಸಿಗಳು ಎಲ್ಲ ದಾಖಲೆಗಳನ್ನು ಪಡೆಯಲಿವೆ. ಆದರೆ ಟೆಲಿಕಾಂ ಕಂಪನಿಗಳು ಅಥವಾ ಇ-ವ್ಯಾಲೆಟ್‌ ಸೇವಾದಾರರು ಆಧಾರ್‌ನಿಂದ ಪಡೆಯಲಾದ ಭಾಗಶಃ ಮಾಹಿತಿಗಳನ್ನು ಮಾತ್ರ ಪಡೆಯಲಿವೆ. 

ಯುಐಡಿಎಐ ಮುಖದ ಗುರುತು ಪತ್ತೆಯೊಂದಿಗೆ (ಫೇಶಿಯಲ್ ರೆಕಗ್ನಿಶನ್‌) ವಿಐಡಿ ನೀಡುತ್ತಿದ್ದು, ಆಧಾರ್‌ಗೆ ಸಂಬಂಧಿಸಿದ ಖಾಸಗಿತನ ಮತ್ತು ದೃಢೀಕರಣ ಆತಂಕಗಳ ನಿವಾರಣೆಗೆ ಯುಐಡಿಎಐ ಈ ವ್ಯವಸ್ಥೆ ಜಾರಿಗೆ ತಂದಿದೆ.

ಇನ್ನು ಆಧಾರ್ ವರ್ಚುವಲ್ ಐಡಿ- ವಿಐಡಿ ರಚಿಸಲು ಈ ಕೆಳಗಿನ ಪ್ರಕ್ರಿಯೆಯತ್ತ ಗಮನಹರಿಸಿ..

1.ಯುಐಡಿಎಐ ಅಧಿಕೃತ ಪೋರ್ಟಲ್ uidai.gov.in ಗೆ ಭೇಟಿ ನೀಡಿ, ವರ್ಚುವಲ್ ಐಡಿ ಲಿಂಕ್ ನ್ನು ಆಧಾರ್ ಸೇವೆಯಡಿ ಕ್ಲಿಕ್ ಮಾಡಿ
2. ವರ್ಚುವಲ್ ಐಡಿ ಲಿಂಕ್ ಮೇಲಿನ ಪಾಪ್ ಅಪ್ ನ್ನು ಕ್ಲಿಕ್ ಮಾಡಿ
3. ಪಾಪ್ ಅಪ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಆಧಾರ್ ನಂಬರ್ ಮತ್ತು ಸೆಕ್ಯೂರಿಟಿ ನಂಬರ್ ನೀಡಿದರೆ ಓಟಿಪಿ ಜನರೇಟ್ ಆಗುತ್ತದೆ
4. ನಿಮ್ಮ ಅಧಿಕೃತ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಈಗ ವರ್ಚುವಲ್ ಐಡಿ ಚೆಕ್ ಬಾಕ್ಸ್ ಜನರೇಟ್ ಮಾಡಿಕೊಳ್ಳಿ
5. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಆಧಾರ್ ವರ್ಚುವಲ್ ಐಡಿ ನಂಬರ್ ನಿಮ್ಮ ಅಧಿಕೃತ ಮೊಬೈಲ್ ಗೆ ಬರುತ್ತದೆ

click me!