4 ದಿನದಲ್ಲಿ Rs 34984 ಕೋಟಿ ಕಳೆದುಕೊಂಡ ಭಾರತದ ಪ್ರಮುಖ ಸರ್ಕಾರಿ ಬ್ಯಾಂಕ್ 

By Mahmad Rafik  |  First Published Nov 19, 2024, 11:29 AM IST

ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಭಾರತದ ಪ್ರಮುಖ ಬ್ಯಾಂಕ್ ನಾಲ್ಕು ದಿನಗಳಲ್ಲಿ ₹34,984 ಕೋಟಿ ನಷ್ಟ ಅನುಭವಿಸಿದೆ. ಇದು ಕಂಪನಿಯ ಷೇರು ಮೌಲ್ಯದಲ್ಲಿ ಶೇ.4.62ರಷ್ಟು ಇಳಿಕೆಗೆ ಕಾರಣವಾಗಿದೆ.


ನವದೆಹಲಿ: ಷೇರು ಮಾರುಕಟ್ಟೆಯ ಕುಸಿತ ಭಾರತದ ಪ್ರಮುಖ ಮತ್ತು ದೈತ್ಯ ಕಂಪನಿಗಳು ಬಹುದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗುತ್ತಿವೆ. ದೇಶದ 10 ಪ್ರಮುಖ ಕಂಪನಿಗಳ ಪೈಕಿ 8 ಸಂಸ್ಥೆಗಳು ಒಟ್ಟು 1,65,180.04 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿವೆ. ಇದರ ಜೊತೆಯಲ್ಲಿ ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಎಸ್‌ಬಿಐ ಕೇವಲ ನಾಲ್ಕು ದಿನದಲ್ಲಿ (ಸೋಮವಾರದಿಂದ ಗುರುವಾರದವರೆಗೆ) 34,984 ಕೋಟಿ ರೂ. ನಷ್ಟ ಅನುಭವಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದು ಅತಿದೊಡ್ಡ ನಷ್ಟವಾಗಿದ್ದು, ಆರ್ಥಿಕ ಪರಿಸ್ಥಿತಿ ಮೇಲೆ ಬಹುದೊಡ್ಡ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಈ ನಾಲ್ಕು ದಿನದಲ್ಲಿ ಎಸ್‌ಬಿಐ ಷೇರು ಮೌಲ್ಯದಲ್ಲಿ ಶೇ.4.62ರಷ್ಟು ಇಳಿಕೆಯಾಗಿದೆ. ಒಟ್ಟಾರೆ ಎಸ್‌ಬಿಐ ಕಂಪನಿ ಮೌಲ್ಯದಲ್ಲಿ 34,984 ಕೋಟಿ ರೂ. ಇಳಿಕೆಯಾಗಿ 7,17,584.07 ಕೋಟಿ ರೂ.ಗೆ ತಲುಪಿದೆ. ನವೆಂಬರ್ 14ರ ಮಾರುಕಟ್ಟೆಯ ಅಂತ್ಯಕ್ಕೆ ಷೇರು ಬೆಲೆ 805.95 ರೂಪಾಯಿಗೆ ಮುಕ್ತಾಯಗೊಂಡಿದೆ. 

Tap to resize

Latest Videos

undefined

ಕಳೆದ ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸಕ್ಸ್ ಶೇಕಡಾ 2.39 (1,906.01) ಇಳಿಕೆಯಾಗಿತ್ತು. ಗುರು ನಾನಕ ಜಯಂತಿ ಹಿನ್ನೆಲೆ ಇಕ್ವಿಟಿ ಮಾರುಕಟ್ಟೆ ಶುಕ್ರವಾರ ಕ್ಲೋಸ್ ಆಗಿತ್ತು. ಭಾರತದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರಿಯ ಮಾರ್ಕೆಟ್ ಕ್ಯಾಪ್  Rs 22,057.77 ಕೋಟಿಗಳಿಂದ Rs 17,15,498.91 ಕೋಟಿಗೆ ಇಳಿಕೆಯಾಗಿತ್ತು. ಮುಕೇಶ್ ಅಂಬಾನಿ ನೇತೃತ್ವದ ಕಂಪನಿ ದೇಶದ ಅತ್ಯಂತ ಮೌಲ್ಯಯುತ ದೇಶಿ ಕಂಪನಿಯಾಗಿದೆ.

ಇದನ್ನೂ ಓದಿ: ಕೋಟಿ ಕೋಟಿ ಹಣ ಉಳಿಸಲು ಬೆಂಗಳೂರಿನಲ್ಲಿನ ಪ್ರಧಾನ ಕಚೇರಿ ಸ್ಥಳಾಂತರಿಸಲು ಮುಂದಾದ 5000 ಉದ್ಯೋಗಿಗಳ ಕಂಪನಿ

ಟಿಸಿಎಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಇನ್ಫೋಸಿಸ್‌ ಮತ್ತು ಎಸ್‌ಬಿಐ ಮೌಲ್ಯ ಇಳಿಮುಖವಾಗಿತ್ತು. ನವೆಂಬರ್ 15ರ ದಿನದ ಅಂತ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನವೆಂಬರ್ 15 ರಿಂದ ಮೂರು ಅವಧಿಗಳಿಗೆ ನಿಧಿ ಆಧಾರಿತ ಸಾಲದ ದರದ (MCLR) ಮಾರ್ಜಿನಲ್ ವೆಚ್ಚವನ್ನು 5 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ.

ಬ್ಯಾಂಕ್‌ಗಳ ಪರಿಷ್ಕೃತ ರೇಟ್ ಪ್ರಕಾರ, ಬ್ಯಾಂಕ್‌ನ ಮೂರು ತಿಂಗಳ ಎಂಸಿಎಲ್‌ಆರ್ 8.50% ರಿಂದ 8.55% ಕ್ಕೆ, ಆರು ತಿಂಗಳ ಎಂಸಿಎಲ್‌ಆರ್ 8.85% ರಿಂದ 8.90% ಕ್ಕೆ ಮತ್ತು ಒಂದು ವರ್ಷದ ಎಂಸಿಎಲ್‌ಆರ್ 8.95% ರಿಂದ 9% ಕ್ಕೆ ಏರಿದೆ. ಕಳೆದ ಮೂರು ತಿಂಗಳಲ್ಲಿ ಎಂಸಿಎಲ್‌ಆರ್‌ನಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ಇದು ತನ್ನ ಗ್ರಾಹಕರಿಗೆ ಸಾಲಗಳನ್ನು ಮತ್ತು ಸಮಾನ ಮಾಸಿಕ ಕಂತುಗಳನ್ನು (ಇಎಂಐ) ದುಬಾರಿಯನ್ನಾಗಿ ಮಾಡುತ್ತದೆ.

ಇದನ್ನೂ ಓದಿ: 1 ವರ್ಷದ ಫಿಕ್ಸಡ್ ಡೆಪಾಸಿಟ್‌ಗೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತೆ?

click me!