ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಮನೆಯಲ್ಲಿಯೇ ಈ ವ್ಯಾಪಾರ ಆರಂಭಿಸಿ, ತಿಂಗಳಿಗೆ 40-50 ಸಾವಿರ ಗಳಿಸಿ. ಮೊಬೈಲ್ ರಿಪೇರಿ ಕೋರ್ಸ್ ಮಾಡಿ, ಈ ಲಾಭದಾಯಕ ವ್ಯವಹಾರವನ್ನು ಇಂದೇ ಆರಂಭಿಸಿ.
ಬೆಂಗಳೂರು: ಇಂದು ಎಲ್ಲರೂ ತಾವು ಮಾಡುವ ಕೆಲಸದಿಂದ ಬೇಸತ್ತಿದ್ದು, ಸ್ವಂತ ವ್ಯವಹಾರದತ್ತ ಮುಖ ಮಾಡುತ್ತಿದ್ದಾರೆ. ನೀವೂ ಸಹ ಇದೇ ಯೋಚನೆಯಲ್ಲಿದ್ದೀರಾ? ಯಾವ ವ್ಯವಹಾರ ಆರಂಭಿಸಿದ್ರೆ ಹೆಚ್ಚು ಲಾಭ ಸಿಗುತ್ತೆ ಅನ್ನೋ ಗೊಂದಲದಲ್ಲಿದ್ದೀರಾ? ಬಂಡವಾಳದ ಕೊರತೆ ಇದೆಯಾ? ಇಂದು ನಾವು ನಿಮಗೆ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಬ್ಯುಸಿನೆಸ್ ಆರಂಭವಾಗಿ ಕೆಲ ಸಮಯದಲ್ಲಿಯೇ ನಿಮಗೆ ಪ್ರತಿನಿತ್ಯವೂ ನಿಗಿದಿತ ಆದಾಯ ಸಿಗುತ್ತದೆ. ನೀವಿರುವ ಮನೆಯಲ್ಲಿಯೇ ಈ ಬ್ಯುಸಿನೆಸ್ ಆರಂಭಿಸಬಹುದಾಗಿದೆ.
ಇಂದು ಎಲ್ಲರ ಕೈಯಲ್ಲಿಯೂ ಸ್ಮಾರ್ಟ್‌ಫೋನ್ ಇರುತ್ತದೆ. ಯಾವುದೇ ಸ್ಮಾರ್ಟ್‌ಫೋನ್ ಒಂದಿಷ್ಟು ಸಮಯದ ಬಳಿಕ ಏನಾದ್ರೂ ರಿಪೇರಿಗೆ ಬಂದೇ ಬರುತ್ತದೆ. ಸ್ಮಾರ್ಟ್‌ಫೋನ್ ರಿಪೇರಿಗಾಗಿ ಜನರು ಹಣ ಖರ್ಚು ಮಾಡಲು ಸಿದ್ಧವಿರುತ್ತಾರೆ. ಹಾಗಾಗಿ ಊರಿನಲ್ಲಿಯೇ ಮನೆಯಲ್ಲಿ ಚಿಕ್ಕದಾದ ಟೇಬಲ್ ಹಾಕಿಕೊಂಡು ಮೊಬೈಲ್ ರಿಪೇರಿ ಮತ್ತು ಬಿಡಿಭಾಗಗಳ ಮಾರಾಟ (Mobile Accessories Business) ಮಾಡಬಹುದು. ಈ ಬ್ಯುಸಿನೆಸ್ ವರ್ಷದ 12 ತಿಂಗಳೂ ಸಹ ನಡೆಯುತ್ತದೆ.
ಮೊಬೈಲ್ ರಿಪೇರಿ ಮಾಡೋದು ಹೇಗೆ ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ಜ್ಞಾನವಿರಬೇಕು. ಒಂದು ವೇಳೆ ಈ ಬ್ಯುಸಿನೆಸ್ ಆರಂಭಿಸುವ ಪ್ಲಾನ್ ಇದ್ರೆ ಎರಡರಿಂದ ಮೂರು ತಿಂಗಳ ಕೋರ್ಸ್ ಮಾಡಬಹುದಾಗಿದೆ. ಈ ಬ್ಯುಸಿನೆಸ್‌ನಲ್ಲಿ ಚಾರ್ಜರ್, ಇಯರ್‌ಫೋನ್‌ಗಳು, ಬ್ಲೂಟೂತ್ ಸ್ಪೀಕರ್, ಮೊಬೈಲ್ ಸ್ಟ್ಯಾಂಡ್, ಸೌಂಡ್ ಸ್ಪೀಕರ್ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿಯೂ ಹಣ ಸಂಪಾದಿಸಬಹುದು. ಮೊಬೈಲ್ ಮಾರಾಟ ಮತ್ತು ಖರೀದಿಸುವ ಅಂಗಡಿಗಳಿಂದಲೂ ನಿಮಗೆ ರಿಪೇರಿ ಕೆಲಸ ಸಿಗುತ್ತದೆ. ಈ ಮೂಲಕ ವ್ಯವಹಾರವನ್ನು ಹಂತ ಹಂತವಾಗಿ ವಿಸ್ತರಿಸಿಕೊಳ್ಳುವ ಅವಕಾಶಗಳು ಈ ವ್ಯವಹಾರದಲ್ಲಿ ಹೇರಳವಾಗಿವೆ.
ಇದನ್ನೂ ಓದಿ: ಕಡಿಮೆ ಬಂಡವಾಳದಲ್ಲಿ ಶುರು ಮಾಡಿ, ತಿಂಗಳಿಗೆ 1.5 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ
ಮೊಬೈಲ್ ರಿಪೇರಿ ಬ್ಯುಸಿನೆಸ್ ಆರಂಭಿಸಲು ನಿಮಗೆ 5 ರಿಂದ 10 ಸಾವಿರ ರೂಪಾಯಿ ಬೇಕಾಗುತ್ತದೆ. ಸಾಧಾರಣ ಮೊಬೈಲ್ ರಿಪೇರಿ ಮಾಡಿದ್ರೂ 400 ರಿಂದ 500 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಈ ಮೂಲಕ ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಹಣ ಸಂಪಾದಿಸಬಹುದು.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ವ್ಯಾಪಾರ ಸಂಪೂರ್ಣವಾಗಿ ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: ತಿಂಗಳಿಗೆ 10 ಸಾವಿರ ಗಳಿಸುತ್ತಿದ್ದವನ ಖಾತೆಯಲ್ಲಿ 2 ಕೋಟಿ ರೂಪಾಯಿ; ಇದು ನಿಮ್ಮ ಸುತ್ತಮುತ್ತವೇ ಇರೋ ಬ್ಯುಸಿನೆಸ್?