ನಾನು ಶ್ರೀಮಂತ. ಆದರೆ ಏನು ಮಾಡಬೇಕು ಅನ್ನೋದೇ ತೋಚುತ್ತಿಲ್ಲ. ಇದು 33ರ ಹರೆಯದ ಭಾರತೀಯ ಮೂಲದ ಸ್ಟಾರ್ಟ್‌ಅಪ್ ಉದ್ಯಮಿ ವಿನಯ್ ಹೀರೆಮಠ್ ತನ್ನ ನೋವು ತೋಡಿಕೊಂಡಿದ್ದಾರೆ. ಬರೋಬ್ಬರಿ 8,368 ಕೋಟಿ ರೂಪಾಯಿ ಕೈಯಲ್ಲಿ ಹಿಡಿದು ಪರಿತಪಿಸುತ್ತಿರುವುದೇಕೆ?
ಕ್ಯಾಲಿಫೋರ್ನಿಯಾ(ಜ.06) ಭಾರತೀಯ ಮೂಲದ ಅಮೆರಿದ ಉದ್ಯಮಿ ವಿನಯ್ ಹೀರೆಮಠ್ ವಯಸ್ಸು ಕೇವಲ 33. ಆದರೆ ಲೂಮ್ ಸ್ಟಾರ್ಟ್ ಅಪ್ ಕಂಪನಿ ಆರಂಭಿಸಿ ಕೆಲವೆ ವರ್ಷಗಳಲ್ಲಿ ಅತೀ ದೊಡ್ಡ ಉದ್ಯಮಿಯಾಗಿ ಬೆಳದ ಸಾಧಕ. ಇದರ ಜೊತೆಗೆ ಹಲವು ಸ್ಟಾರ್ಟ್ ಅಪ್ ಕಂಪನಿಗಳಿಗೆ ಫಂಡಿಂಗ್ ಮಾಡಿಯೂ ಯಶಸ್ವಿಯಾಗಿದ್ದಾರೆ. ಆದರೆ ಗೆಳತಿ ಬ್ರೇಕ್ಅಪ್ ಸೇರಿದಂತೆ ಹಲವು ಕಾರಣಗಳಿಂದ ಇದೀಗ ವಿನಯ್ ಹೀರೆಮಠ್ ತನ್ನ ಲೂಮ್ ಕಂಪನಿಯನ್ನು ಬರೋಬ್ಬರಿ 8,368 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದೀಗ ಏಕಾಂತದಲ್ಲಿರುವ ವಿನಯ್ ಹೀರೆಮಠ್‌ಗೆ ಇಷ್ಟೊಂದು ಹಣದಲ್ಲಿ ಏನು ಮಾಡಲಿ, ನನ್ನ ಜೊತೆ ಯಾರು ಇಲ್ಲ, ಏನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಲೂಮ್ ಸ್ಟಾರ್ಟ್‌ಅಪ್ ಕಂಪನಿಯನ್ನು ವಿನಯ್ ಹೀರೆಮಠ್ ಅಟ್ಲಾಸಿಯನ್ ಕಂಪನಿಗೆ ಮಾರಾಟ ಮಾಡಿದ್ದಾರೆ. 975 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ಅಮೆರಿಕನ್ ಕಂಪನಿಯೊಂದು ಬರೋಬ್ಬರಿ 60 ಮಿಲಿಯನ್ ಡಾಲರ್ ಸ್ಯಾಲರಿ ಇರುವ ಉದ್ಯೋಗ ಆಫರ್ ಮಾಡಿತ್ತು. ಆದರೆ ಎಲ್ಲವನ್ನೂ ನಿರಾಕರಿಸಿದ ವಿನಯ್ ಹೀರೆಮಠ್ ಹೊಸ ಉದ್ಯಮ ಆರಂಭಿಸುವ ತಯಾರಿಯಲ್ಲಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
Jagdeep Singh: ವಿಶ್ವದಲ್ಲಿಯೇ ಗರಿಷ್ಠ ವೇತನ ಪಡೆಯುವ ಉದ್ಯೋಗಿ, ದಿನದ ಸಂಬಳ 48 ಕೋಟಿ!
ನಾನು ಶ್ರೀಮಂತನಾಗಿದ್ದೇನೆ. ಆದರೆ ಇಷ್ಟು ಹಣದಲ್ಲಿ ಏನು ಮಾಡಬೇಕು ತೋಚುತ್ತಿಲ್ಲ. ನನ್ನ ಸ್ಟಾರ್ಟ್ಅಪ್ ಕಂಪನಿ ಮಾರಾಟ ಮಾಡಿದ ಬಳಿಕ ಕಳೆದೊಂದು ವರ್ಷ ವಿಪರೀತ ನೋವು ಅನುಭವಿಸಿದ್ದೇನೆ. ಹಲವು ಏರಿಳಿತ ತಂಡಿದ್ದೇನೆ. ತೀವ್ರ ಸಂಕಷ್ಟ,ಸವಾಲು ಎದುರಿಸಿದ್ದೇನೆ. ಕೆಲಸ ಮಾಡುತ್ತೇನೆ, ಮಾಡಬೇಕು ಅನ್ನೋ ಪರಿಸ್ಥಿತಿಯಲ್ಲೂ ನಾನಿಲ್ಲ. ಮತ್ತೆ ಹಣಮಾಡಬೇಕು ಅನ್ನೋ ಉದ್ದೇಶವಿಲ್ಲ. ಆದರೆ ಸದ್ಯ ಎಲ್ಲದರಿಂದ ಹೊರಬಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇನೆ. ಆದರೆ ಏನು ಮಾಡಬೇಕು ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
2 ವರ್ಷ ನನ್ನ ಗೆಳತಿ ಜೊತೆ ಪ್ರೀತಿಯಲ್ಲಿದ್ದೆ. ಆದರೆ ಬ್ರೇಕ್ಅಪ್ ತೀವ್ರ ನೋವು ತಂದಿದೆ. ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಅನ್ನೋದು ನನ್ನ ನಿಲುವು. ಪ್ರೀತಿಪೂರ್ವಕ ನಮನ ಹಾಗೂ ಧನ್ಯವಾದ. ಒಳ್ಳೆಯ ಗೆಳೆಯನಾಗಿ ಇರಲು ಸಾಧ್ಯವಾಗಲಿಲ್ಲಿ. ಸಮಯ ಕೊಡಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ ಎಂದು ವಿನಯ್ ಹೀರೆಮಠ್ ಬರೆದುಕೊಂಡಿದ್ದಾರೆ.
ಅಟ್ಲಾಸಿಯನ್ ಕಂಪನಿಗೆ ಲೂಮ್ ಮಾರಾಟ ಮಾಡಿದ ಬೆನ್ನಲ್ಲೇ ಅಟ್ಲಾಸಿಯನ್ ಅತೀ ದೊಡ್ಡ ಆಫರ್ ನೀಡಿತ್ತು. 60 ಮಿಲಿಯನ್ ಡಾಲರ್ ವೇತನ. ಅಂದರೆ ಭಾರತೀಯ ರೂಪಾಯಿಗಳಲ್ಲಿ 514 ಕೋಟಿ ರೂಪಾಯಿ. ಇದನ್ನೂ ತಿರಸ್ಕರಿಸಿ ಹೊರಟ ವಿನಯ್ ಹೀರೆಮಠ್ ಇದೀಗ ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ವಿನಯ್ ಹೋರಾಟ ನಿಂತಿಲ್ಲ. ಹಲವು ಏಳುಬೀಳು, ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳಿಂದ ನೊಂದಿದ್ದಾರೆ ಅನ್ನೋದು ನಿಜ. ಆದರೆ ವಿಯನ್ ಹುಟ್ಟು ಹೋರಾಟಗಾರ. ಹೀಗಾಗಿ ಎಲ್ಲವನ್ನು ಸವಾಲಾಗಿ ಸ್ವೀಕರಿಸಿದ್ದಾರೆ.
ಈತ ವಿಶ್ವದ 5ನೇ ಶ್ರೀಮಂತ, ಆದರೂ ಅಂಬಾನಿಗೆ ಪ್ರತಿ ತಿಂಗಳು ಪಾವತಿಸುತ್ತಾರೆ 40 ಲಕ್ಷ ರೂ