
Small Change, Big Result: ಇಂದು ಮಾರುಕಟ್ಟೆಯ ಅನಿಶ್ವಿತತೆಯಿಂದಾಗ ಯಾವಾಗ ಬೇಕಾದ್ರೂ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ವ್ಯವಹಾರಗಳಲ್ಲಿ ದಿಢೀರ್ ನಷ್ಟವುಂಟಾಗಿ ವ್ಯಾಪಾರಿಗಳು ನಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಿ ಜನರು ತಮ್ಮ ಭವಿಷ್ಯವನ್ನು ಆರ್ಥಿಕವಾಗಿ ಭದ್ರ ಮಾಡಿಕೊಳ್ಳಲು ಹಲವು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಹೂಡಿಕೆಗಳು ತಾತ್ಕಾಲಿಕ ಪರಿಹಾರ ನೀಡಿದರೂ ಇದು ಹೆಚ್ಚಿನ ಲಾಭ ಮತ್ತು ನಿರಂತರ ಆದಾಯದ ಮೂಲವಾಗಿರಲ್ಲ. ಕೆಲ ಮಾರುಕಟ್ಟೆ ತಜ್ಞರು, ಆರ್ಥಿಕ ಸುರಕ್ಷತೆ ಕಾಪಾಡಿಕೊಳ್ಳುವ ಆಸ್ತಿ ನಮ್ಮೊಳಗೆ ಇರುತ್ತೆ ಎಂದು ನಂಬುತ್ತಾರೆ. ಈ ಸಂಬಂಧ ಉದ್ಯಮಿ ಮತ್ತು ಲೇಖಕ ಅಂಕುರ್ ವಾರಿಕೂ, ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ, ಸ್ವಯಂ ಬೆಳವಣಿಗೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ.
ಅಂಕುರ್ ವಾರಿಕೂ ಅವರ ಲಿಂಕ್ಡ್ ಇನ್ ಪೋಸ್ಟ್ ಪ್ರಕಾರ, ಯಶಸ್ಸಿನ ಬಾಹ್ಯ ಗುರುತುಗಳಿಗಿಂತ ಸ್ವಯಂ ಬೆಳವಣಿಗೆಗೆ ಆದ್ಯತೆ ನೀಡಬೇಕೆಂದು ಹೇಳುತ್ತಾರೆ. ಒಬ್ಬ ವ್ಯಕ್ತಿ ಜೀರೋ ಬ್ಯಾಲೆನ್ಸ್ ಅಕೌಂಟ್‌ನಿಂದ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಬ್ಯಾಂಕ್ ಖಾತೆ ಶೂನ್ಯಕ್ಕೆ ಇಳಿದರೂ ಸಹ ವೈಯಕ್ತಿಕ ಅಭಿವೃದ್ದಿ ಹೊಂದಲು ನಿಮ್ಮೊಳಗಿನ ಕೌಶಲ್ಯ ಬಳಸಿಕೊಳ್ಳಬೇಕು ಎಂದು ಅಂಕುರ್ ವಾರಿಕೂ ಸಲಹೆ ನೀಡುತ್ತಾರೆ.
ಆರ್ಥಿಕ ಅಥವಾ ವೃತ್ತಿ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಕಷ್ಟಕರ ಸಮಯ ಎದುರಾಗುತ್ತದೆ. ಆದರೆ ಈ ಕಷ್ಟಗಳು ವ್ಯಕ್ತಿಯಲ್ಲಿನ ಸಾಮರ್ಥ್ಯವನ್ನು ಅಳಸಿ ಹಾಕಲಾರದು. ಉದ್ಯೋಗ ನಷ್ಟ, ವ್ಯವಹಾರ ವಿಫಲ ಸೇರಿದಂತೆ ಎಲ್ಲಾ ಆರ್ಥಿಕ ಸಂಕಷ್ಟಗಳಿಗೆ ಮಾರುಕಟ್ಟೆಯ ಅನಿಶ್ಚಿತತೆ ಕಾರಣವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮಲ್ಲಿರುವ ಕೌಶಲ್ಯ, ಸಾಮರ್ಥ್ಯವನ್ನು (Skill and Experience: The Real Safety Net) ಪುನರ್ಜೀವನ ಮಾಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಯೋಚಿಸಿ ಸೂಕ್ತ ನಿರ್ಧಾರ ಮತ್ತು ಅವುಗಳನ್ನು ಮಾರುಕಟ್ಟೆಗೆ ತಕ್ಕಂತ ಪ್ರಯೋಗಿಸಲು ನಿಮ್ಮಲ್ಲಿನ ಕೌಶಲ್ಯ ಬಳಸಿಕೊಳ್ಳಬೇಕು.
ಈ ಎಲ್ಲದರ ಪರಿಣಾಮ ನಿಮಗೆ ಮೊದಲ ದಿನದಿಂದಲೇ ಸಿಗಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿರಬೇಕಾಗುತ್ತದೆ. ಮುಂದಿನ ಹಂತಗಳೊಂದಿಗೆ ಜೀವನ ನಡೆಸುತ್ತಾ ಹೋಗುತ್ತಿರಬೇಕಾಗುತ್ತದೆ. ಮುಂದಿನ ಹಂತವನ್ನು ಹೇಗೆ ನ್ಯಾವಿಗೇಟ್ ಮಾಡುವುದು ಎಂಬುದರ ಕುರಿತು ಹೆಚ್ಚಿನ ಅರಿವು ನಿಮ್ಮಲ್ಲಿದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕಾಗುತ್ತದೆ.
ಅಂಕುರ್ ವಾರಿಕೂ ಅಭಿಪ್ರಾಯ ಪ್ರಕಾರ, ಅತ್ಯಂತ ವಿಶ್ವಾಸಾರ್ಹ ಮತ್ತು ಹೆಚ್ಚಿನ ಲಾಭದ ಹೂಡಿಕೆ ಮಾರುಕಟ್ಟೆಗಳಲ್ಲಿ ಅಥವಾ ಸ್ವತ್ತುಗಳಲ್ಲಿ ಕಂಡುಬರುವುದಿಲ್ಲ. ಮೊದಲ ವೈಯಕ್ತಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು. ಈ ರೀತಿಯ ಅಭಿವೃದ್ಧಿ ಕಾಲಾನಂತರದಲ್ಲಿ ಸಂಯೋಜನೆಗೊಂಡು ದೀರ್ಘಾವಧಿಯ ಅನುಕೂಲಗಳನ್ನು ಒದಗಿಸುತ್ತದೆ ಎಂದು ಅಂಕುರ್ ವಾರಿಕೂ ಹೇಳುತ್ತಾರೆ. ನಿಮ್ಮಲ್ಲಿನ ಒಂದೇ ಒಂದು ಹೊಸ ಮತ್ತು ವಿನೂತನ ಕೌಶಲ್ಯ ನಿಮ್ಮ ವೃತ್ತಿಜೀವನವನ್ನು ಮರುರೂಪಿಸಲು ಸಾಕು ಅಥವಾ ಯಾವುದೇ ಒಂದು ಹೊಸ ಕಲಿಗೆ ನಿಮ್ಮ ಆರಂಭಕ್ಕೆ ಮುನ್ನಡಿ ಬರೆಯಲಿದೆ. ಸಣ್ಣ ಬದಲಾವಣೆಯೂ ಸಹ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅಂಕುರ್ ವಾರಿಕೂ ಸಲಹೆ ನೀಡುತ್ತಾರೆ.
ನಿಮ್ಮ ಜೀವನದಲ್ಲಿನ ಸಣ್ಣ ಸಣ್ಣ ಸುಧಾರಣೆಗಳು ಪ್ರಮುಖ ಬದಲಾವಣೆಗಳಾಗಿ ಕಾರಣವಾಗಿರುತ್ತವೆ. ಹೊಸ ಪ್ರದೇಶದಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಅಥವಾ ಒಬ್ಬರ ದೃಷ್ಟಿಕೋನವನ್ನು ಸರಿಹೊಂದಿಸುವುದು ಸೇರಿದಂತೆ ಇನ್ನಿತರ ಕೌಶಲ್ಯಾಧರಿತ ನಿರ್ಧಾರಗಳು ದೊಡ್ಡಮಟ್ಟದ ಅಥವಾ ಸಕಾರಾತ್ಮಕ ಅಥವಾ ಲಾಭದಾಯಕ ಫಲಿತಾಂಶಗಳು ನೀಡುತ್ತದೆ. ಸಣ್ಣ ಬದಲಾವಣೆಗಳಿಗೆ ಒಪ್ಪಿಕೊಳ್ಳದಿದ್ರೆ ಯಾವುದೇ ಫಲಿತಾಂಶಗಳು ಗೋಚರಿಸುವುದಿಲ್ಲ.
ಯಶಸ್ಸನ್ನು ಭೌತಿಕ ಆಸ್ತಿಗಳೊಂದಿಗೆ ಸಮೀಕರಿಸುವ ಪ್ರವೃತ್ತಿಯನ್ನು ಪ್ರಶ್ನೆ ಮಾಡಿರುವ ಅಂಕುರ್ ವಾರಿಕೂ, ಆರ್ಥಿಕ ಸಂಕಷ್ಟ ಅಥವಾ ಬೆಳವಣಿಗೆ ಸಂದರ್ಭದಲ್ಲಿ ಬಾಹ್ಯ ಜೀವನಶೈಲಿಗೆ (ಕಾರ್, ಬೈಕ್ ಸೇರಿದಂತೆ ಐಷಾರಾಮಿ ಬದುಕಿನ ಮೇಲಿನ ಆಸೆ) ಆಕರ್ಷಿತರಾಗಬಾರದು. ನಿಜವಾದ ಯಶಸ್ಸಿನ ವ್ಯಕ್ತಿಗಳು, ಬಾಹ್ಯ ಜೀವನಶೈಲಿಗೆ ಆಕರ್ಷಿತರಾಗಲ್ಲ ಎಂದು ಅಂಕುರ್ ಹೇಳುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.