3 ಲಕ್ಷ ರು. ಸನಿಹಕ್ಕೆ ಬೆಳ್ಳಿ ಬೆಲೆ

Kannadaprabha News   | Kannada Prabha
Published : Jan 15, 2026, 05:06 AM IST
silver price

ಸಾರಾಂಶ

ಸಂಕ್ರಾಂತಿ ಹಬ್ಬದಂದು ಬೆಳ್ಳಿಯು ಹಬ್ಬದ ಸಿಹಿಯನ್ನು ಕಸಿದು, ಕಹಿ ಕೊಟ್ಟಿದೆ. ಬೆಂಗಳೂರಿನಲ್ಲಿ ಒಂದೇ ದಿನ 17800 ರು. ಜಿಗಿದು ಕೇಜಿಗೆ 2,96,800 ರು.ಗೆ ಏರಿಕೆ ಕಂಡಿದೆ. ಈ ಮೂಲಕ 3 ಲಕ್ಷ ಸನಿಹಕ್ಕೆ ದಾಪುಗಾಲಿರಿಸಿದೆ. ಈ ಮೂಲಕ 22 ದಿನಗಳಲ್ಲಿ 63500 ರು. ಭಾರಿ ಹೆಚ್ಚಳವಾಗಿದೆ.

ನವದೆಹಲಿ: ಸಂಕ್ರಾಂತಿ ಹಬ್ಬದಂದು ಬೆಳ್ಳಿಯು ಹಬ್ಬದ ಸಿಹಿಯನ್ನು ಕಸಿದು, ಕಹಿ ಕೊಟ್ಟಿದೆ. ಬೆಂಗಳೂರಿನಲ್ಲಿ ಒಂದೇ ದಿನ 17800 ರು. ಜಿಗಿದು ಕೇಜಿಗೆ 2,96,800 ರು.ಗೆ ಏರಿಕೆ ಕಂಡಿದೆ. ಈ ಮೂಲಕ 3 ಲಕ್ಷ ಸನಿಹಕ್ಕೆ ದಾಪುಗಾಲಿರಿಸಿದೆ. ಈ ಮೂಲಕ 22 ದಿನಗಳಲ್ಲಿ 63500 ರು. ಭಾರಿ ಹೆಚ್ಚಳವಾಗಿದೆ.

22 ಕ್ಯಾರಟ್‌ ಚಿನ್ನದ ಬೆಲೆಯು 1050 ರು. ಏರಿ 1,35,600 ರು

ಮತ್ತೊಂದೆಡೆ 10 ಗ್ರಾಂ 22 ಕ್ಯಾರಟ್‌ ಚಿನ್ನದ ಬೆಲೆಯು 1050 ರು. ಏರಿ 1,35,600 ರು. ಹಾಗೂ 24 ಕ್ಯಾರಟ್‌ ಚಿನ್ನ 1000 ರು. ಜಿಗಿದು 1,47,900 ರು.ಗೆ ಏರಿಕೆ ಕಂಡಿದೆ.

ಅದೇ ರೀತಿ ದೆಹಲಿಯಲ್ಲಿ ಕೇಜಿ ಬೆಳ್ಳಿ ಬೆಲೆಯು ಒಂದೇ ದಿನ 15,000 ರು. ಜಿಗಿದು 2.86 ಲಕ್ಷ ರು.ಗೆ ಹೆಚ್ಚಳವಾಗಿದೆ. 99.9 ಶುದ್ಧತೆಯ ಚಿನ್ನವು 1500 ರು. ಹೆಚ್ಚಳವಾಗಿ 10 ಗ್ರಾಂಗೆ 1,46,500 ರು.ಗೆ ತಲುಪಿದೆ.ಬೆಳ್ಳಿ ಬೆಲೆ (ಕೇಜಿಗೆ)

ಡಿ.24: 2,33,300 ರು. ಜ.14: 2,96,800 ರು.

22 ದಿನದಲ್ಲಿ ಹೆಚ್ಚಳ: 63,500 ರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜೀವನ ಪಾಠ ಕಲಿಸಲು 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ
ಕೆಜಿಗೆ 3 ಲಕ್ಷ ಗಡಿಯತ್ತ ಬೆಳ್ಳಿ, ಮೂರೇ ದಿನದಲ್ಲಿ 34 ಸಾವಿರ ಏರಿಕೆ; ನಿಜವಾದ ಬೆಳ್ಳಿ ಗುರುತಿಸುವ ನಾಲ್ಕು ಮಾರ್ಗಗಳಿವು!