
ನವದೆಹಲಿ(ಆ.28): ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ನೆರವಾಗುವುದಕ್ಕಾಗಿ ಏಕರೂಪದ ಜಿಎಸ್‌ಟಿ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ವಯನಾಡ್‌ಗೆ ಪ್ರಯಾಣಿಸುವ ವೇಳೆ ಊಟಿಗೆ ಭೇಟಿ ನೀಡಿದ್ದ ರಾಹುಲ್, ಊಟಿಯ ಪ್ರಮುಖ ಚಾಕೋಲೆಟ್ ಬ್ರಾಂಡ್ ಆದಂತಹ ಮೂಡಿ ಚಾಕೋಲೆಟ್ ಸಂಸ್ಥೆಗೆ ಭೇಟಿ ನೀಡಿದ್ದರು. ಈ ವಿಡಿಯೋವನ್ನು ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘ವಯನಾಡ್‌ಗೆ ಪ್ರಯಾಣಿಸುವ ಸಮಯದಲ್ಲಿ ಊಟಿಯ ಪ್ರಮುಖ ಬ್ರಾಂಡ್ ಆದಂತಹ ಮೂಡಿಸ್ ಚಾಕೊಲೆಟ್‌ಗೆ ಭೇಟಿ ನೀಡಿದ್ದೆ. ಇಲ್ಲಿ ಕೆಲಸ ಮಾಡುವವರ ಶ್ರದ್ಧೆ ನಿಜಕ್ಕೂ ಸ್ಪೂರ್ತಿದಾಯಕ’ ಎಂದು ಹೇಳಿದ್ದಾರೆ. ಅಲ್ಲದೇ ಮುರಳೀಧರ ರಾವ್ ಹಾಗೂ ಸ್ವಾತಿ ಎಂಬುವವರು ಈ ಕಾರ್ಖಾನೆಯನ್ನು ನಡೆಸುತ್ತಿದ್ದು, ಸುಮಾರು 70 ಮಹಿಳೆಯರು ಉನ್ನತ ರುಚಿಯ ಚಾಕೋಲೆಟ್‌ಗಳನ್ನು ಇಲ್ಲಿ ತಯಾರು ಮಾಡುತ್ತಾರೆ. ಆದರೆ ಇಂತಹ ಉದ್ಯಮಗಳು ಗಬ್ಬರ್ ಸಿಂಗ್ ತೆರಿಗೆಯಿಂದಾಗಿ ತೊಂದರೆಗೊಳಗಾಗುತ್ತಿವೆ ಎಂದು ಕಿಡಿಕಾರಿದ್ದಾರೆ.
ಚೀನಾದಿಂದ ಲಡಾಖ್ ಜಾಗ ಕಬಳಿಕೆ: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಇಂತಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಇಂತಹ ಉದ್ಯಮಗಳಿಗೆ ನೆರವು ನೀಡುವುದಕ್ಕಾಗಿ ಸರ್ಕಾರ ಏಕರೂಪದ ಜಿಎಸ್‌ಟಿ ಜಾರಿ ಮಾಡಬೇಕು ಎಂದು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.