ಮುಕೇಶ್ ಅಂಬಾನಿ, ಸುನಿಲ್ ಮಿತ್ತಲ್‌ಗೆ ಬ್ಯಾಡ್‌ನ್ಯೂಸ್ ಕೊಟ್ಟ ವೊಡಾಫೋನ್ ಐಡಿಯಾ

Published : Apr 04, 2025, 02:55 PM ISTUpdated : Apr 04, 2025, 02:59 PM IST
ಮುಕೇಶ್ ಅಂಬಾನಿ, ಸುನಿಲ್ ಮಿತ್ತಲ್‌ಗೆ ಬ್ಯಾಡ್‌ನ್ಯೂಸ್ ಕೊಟ್ಟ ವೊಡಾಫೋನ್ ಐಡಿಯಾ

ಸಾರಾಂಶ

ವೊಡಾಫೋನ್ ಐಡಿಯಾ (Vi) ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಪೈಪೋಟಿ ನೀಡಲು ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಸೂಪರ್ ಹೀರೋ ಮತ್ತು ನಾನ್‌ಸ್ಟಾಪ್ ಹೀರೋ ಪ್ಲಾನ್‌ಗಳು ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ.

ನವದೆಹಲಿ: ಭಾರತದಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳಿದ್ದು, ಇವುಗಳ ಮಧ್ಯೆ ತೀವ್ರ ಸ್ಪರ್ಧೆಯಿದೆ. ಅತಿಹೆಚ್ಚು ಬಳಕೆದಾರರ ಆಧಾರದ ಮೇಲೆ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಇವೆ. ಇದೀಗ ಮೂರನೇ ಸ್ಥಾನದಲ್ಲಿರುವ ವೊಡಾಫೋನ್ ಐಡಿಯಾ, ಎದುರಾಳಿ ಟೆಲಿಕಾಂ ಕಂಪನಿಗಳಿಗೆ ಬ್ಯಾಡ್ ನ್ಯೂಸ್ ನೀಡಿದೆ. ನಂಬರ್ 1 ಮತ್ತು ನಂಬರ್ 2 ಸ್ಥಾನದಲ್ಲಿರೋ ಎರಡು ಕಂಪನಿಗಳಿಗೆ ಟಕ್ಕರ್ ಕೊಡುವ ಉದ್ದೇಶದಿಂದಲೇ ವೊಡಾಫೋನ್ ಐಡಿಯಾ ಹೊಸ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ. ಮಾಸಿಕ, ವಾರ್ಷಿಕ ಮತ್ತು ಡೇಟಾ ಆಧರಿತ ಪ್ಲಾನ್‌ಗಳನ್ನು ವೊಡಾಫೋನ್ ಐಡಿಯಾ ಪರಿಚಯಿಸಿದೆ.  

ವೊಡಾಫೋನ್ ಐಡಿಯಾ ಸೂಪರ್ ಹೀರೋ ಪ್ಲಾನ್
ವೊಡಾಫೋನ್ ಐಡಿಯಾ ತನ್ನ ವಾರ್ಷಿಕ ಪ್ಲಾನ್‌ನಲ್ಲಿ ಗ್ರಾಹಕರಿಗೆ ರಾತ್ರಿ 12 ರಿಂದ ಮಧ್ಯಾಹ್ನ 12 ಗಂಟೆ ಅವಧಿ ನಡುವೆ ಅನ್‌ಲಿಮಿಟೆಡ್ ಡೇಟಾ ಬಳಕೆಗೆ ಅನುಮತಿಯನ್ನು ನೀಡಿದೆ. ವಾರ್ಷಿಕ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡ ಬಳಕೆದಾರರು 12 AM ನಿಂದ 12 PM ಅನಿಯಮಿತವಾಗಿ ಇಂಟರ್‌ನೆಟ್ ಬಳಸಬಹುದಾಗಿದೆ. ವೊಡಾಫೋನ್ ಐಡಿಯಾ 3,599 ರೂಪಾಯಿ, 3,699 ರೂಪಾಯಿ ಮತ್ತು 3,799 ರೂಪಾಯಿ ಬೆಲೆಯ ಮೂರು ವಾರ್ಷಿಕ ಪ್ಲಾನ್‌ಗಳನ್ನು ಹೊಂದಿದೆ. 

ಜನವರಿ 13, 2025ರಂದು ವೊಡಾಫೋನ್ ಐಡಿಯಾ ನಾನ್‌ಸ್ಟಾಪ್ ಹೀರೋ ಪ್ಲಾನ್‌ಗಳನ್ನು ಪರಿಚಯಿಸಿದೆ. ಇಂಟರ್‌ನೆಟ್ ಬಳಕೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಪ್ಲಾನ್‌ಗಳನ್ನು ತರಲಾಗಿದೆ.  ಈ ಪ್ಲಾನ್‌ಗಳು ಸದ್ಯ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ರಾಜಸ್ಥಾನ , ಮಧ್ಯ ಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ. ಈ  ರೀಚಾರ್ಜ್‌ಗಳು ಪ್ರತ್ಯೇಕ ಬೆನಿಫಿಟ್‌ಗಳನ್ನು ಹೊಂದಿವೆ.

ನಾನ್‌ಸ್ಟಾಪ್ ಹೀರೋ ಪ್ಲಾನ್‌ಗಳು 
ವೊಡಾಫೋನ್ ಐಡಿಯಾ ಹಲವು ಬೆಲೆಯಲ್ಲಿ ನಾನ್‌ಸ್ಟಾಪ್  ಹೀರೋ ಪ್ಲಾನ್‌ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. Rs 365, Rs 379, Rs 407, Rs 408, and Rs 449 Rs 469, Rs 649, Rs 979, Rs 994, Rs 996, Rs 997, Rs 998, ಮತ್ತು Rs 1,198.

ಇದನ್ನೂ ಓದಿ: ₹3,800 ಕೋಟಿ ಆಸ್ತಿಯ ರತನ್ ಟಾಟಾ ಬಳಿ ಇದಿದ್ದು ಒಂದು ಮೊಬೈಲ್ 34 ವಾಚ್ ಜೊತೆ ಸೀಕ್ರೆಟ್ ವೆಪನ್

ಸೂಪರ್ ಹೀರೋ ಪ್ರಿಪೇಯ್ಡ್ ಪ್ಲಾನ್
ನಾನ್‌ ಸ್ಟಾಪ್ ಹೀರೋ ಪ್ಲಾನ್ ಬಳಿಕ ವೊಡಾಫೋನ್ ಐಡಿಯಾ ಸೂಪರ್ ಹೀರೋ ಪ್ಲಾನ್‌ನ್ನು 7ನೇ ಫೆಬ್ರವರಿ 2025ರಂದು ಬಿಡುಗಡೆ ಮಾಡಿದೆ. ವೋಡಾಫೋನ್ ಐಡಿಯಾ ನೆಟ್‌ವರ್ಕ್‌ನಿಂದ ಹೊರಗೆ ಹೋಗುತ್ತಿರುವ ಬಳಕೆದಾರರನ್ನು ತಡೆಯುವ ಉದ್ದೇಶದಿಂದ ಈ ಪ್ಲಾನ್ ಪರಿಚಯಿಸಲಾಗಿತ್ತು. ಈ ಪ್ಲಾನ್‌ ಅಡಿಯಲ್ಲಿ ನಿಷ್ಕ್ರಿಯಗೊಳಿಸಿದ ಸಂಖ್ಯೆಗಳನ್ನು ಸ್ವಲ್ಪ ಸಮಯದವರೆಗೆ ಉಚಿತ ಡೇಟಾ ನೀಡಲಾಗುತ್ತದೆ. 5 ರಿಂದ 7 ದಿನಗಳವರೆಗೆ ದಿನಕ್ಕೆ 1GB ಡೇಟಾ ಸಿಗುತ್ತದೆ. ನಿಷ್ಕ್ರಿಯ ಸಿಮ್ ಕಾರ್ಡ್‌ಗಳನ್ನು ಪುನಃ ಸಕ್ರಿಯಗೊಳಿಸಲು ಮತ್ತು Vi ಸೇವೆಗಳನ್ನು ಬಳಸಿಕೊಂಡು ಪುನರಾರಂಭಿಸಲು ಗ್ರಾಹಕರಿಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: ಮೊದಲ ಬಾರಿಗೆ ಬಸ್‌ನಲ್ಲಿ ಕಚೇರಿಗೆ ತೆರಳಿದ ಬೆಂಗಳೂರು ಕಂಪನಿ ಸಿಇಒಗೆ ಅಚ್ಚರಿ ಮೇಲೆ ಅಚ್ಚರಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ