
ನವದೆಹಲಿ(ಮಾ:23): ಮುಂದಿನ ವಾರ ಹಲವು ರಜೆಗಳು ಮತ್ತು ಬ್ಯಾಂಕ್ ನೌಕರರ ಮುಷ್ಕರ ಇರುವುದರಿಂದ ಬ್ಯಾಂಕು ಸೇವೆ ಕೇವಲ 2 ಮಾತ್ರ ದೊರೆಯಲಿದೆ. ಮಾ.27ರಂದು ಭಾನುವಾರ ಪ್ರಯುಕ್ತ ಬ್ಯಾಂಕ್ ಇರುವುದಿಲ್ಲ. ಮಾ.28 ಮತ್ತು 29ರಂದು ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾ.30 ಮತ್ತು 31ರಂದು ಮಾತ್ರ ಕಾರ್ಯನಿರ್ವಹಿಸಲಿದೆ. ಏ.1ರಂದು ಹಣಕಾಸು ವರ್ಷದ ಅರಂಭವಾದ್ದರಿಂದ ಬ್ಯಾಂಕ್ ತೆರೆದಿದ್ದರೂ ಸೇವೆ ಇರುವುದಿಲ್ಲ. ಏ.2 ಯುಗಾದಿ ಹಬ್ಬದ ಪ್ರಯುಕ್ತ ಬ್ಯಾಂಕ್‌ಗೆ ರಜೆ ಇರಲಿದೆ. ಏ.3 ಮತ್ತೆ ಭಾನುವಾರ. ಹೀಗೆ ಮುಂದಿನ 8 ದಿನಗಳಲ್ಲಿ 6 ದಿನಗಳು ರಜೆ ಇರಲಿದ್ದು, ಗ್ರಾಹಕರ ಸೇವೆಗೆ ಲಭ್ಯವಿರುವುದಿಲ್ಲ.
ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ಬ್ಯಾಂಕ್ ನೌಕರರು 2 ದಿಗಳ ಮುಷ್ಕರಕ್ಕೆ ಕರೆ ನೀಡಿದ್ದಾರೆ. 11 ಬ್ಯಾಂಕಿಂಗ್ ಒಕ್ಕೂಟಗಳ ಪೈಕಿ ಸಿಪಿಐ ಮತ್ತು ಸಿಪಿಐಎಂ ಬೆಂಬಲಿತೆ ಒಕ್ಕೂಟಗಳು ಮುಷ್ಕರ ನಡೆಸಲಿವೆ. ಇದರೊಂದಿಗೆ ಎಐಬಿಇಎ, ಎಐಬಿಒಎ, ಬಿಇಎಫ್‌ಇ, ಐಎನ್‌ಬಿಇಎಸ್ ಸಂಘಟನೆಗಳೂ ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಹಾಗಾಗಿ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳು ಮುಂದಿನ ವಾರ ವ್ಯತ್ಯಯವಾಗಲಿದೆ.
ಎಚ್‌ಡಿಎಫ್‌ಸಿಗೆ ಕರ್ನಾಟಕದ ನಂ.1 ಖಾಸಗಿ ಬ್ಯಾಂಕ್ ಪಟ್ಟ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಹಿವಾಟು ಕರ್ನಾಟಕದಲ್ಲಿ 2 ಲಕ್ಷ ಕೋಟಿ ರು. ದಾಟಿದೆ. ಇದರಿಂದಾಗಿ ಒಟ್ಟಾರೆ ವಹಿವಾಟಿನಲ್ಲಿ ಕರ್ನಾಟಕದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಂ.1 ಬ್ಯಾಂಕ್ ಆಗಿ ಎಚ್‌ಡಿಎಫ್‌ಸಿ ಹೊರಹೊಮ್ಮಿದೆ ಎಂದು ಬಾಂಕ್ ಮಂಗಳವಾರ ಹೇಳಿದೆ.
ಚಿಲ್ಲರೆ ವ್ಯಾಪಾರಿಗಳು, ಕಾರ್ಪೊರೇಟ್ ಕಂಪನಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸೇರಿದಂತೆ 2021ರ ಸೆ.30ರವರೆಗೆ ಬ್ಯಾಂಕ್ 73.65 ಸಾವಿರ ಕೋಟಿ ಸಾಲ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಸಾಲ ನೀಡಿಕೆಯಲ್ಲಿ ಶೇ.9ರಷ್ಟುಪಾಲನ್ನು ಹೊಂದಿದೆ. ‘ನಮ್ಮ ಬ್ಯಾಂಕ್‌ನ ಆಯಕಟ್ಟಿನ ವಹಿವಾಟಿನ ಪ್ರಮುಖ ಮಾರುಕಟ್ಟೆಯಾಗಿ ಕರ್ನಾಟಕ ಮುಂದುವರೆದಿದೆ. ಇದು ನಮ್ಮ ವ್ಯವಹಾರವನ್ನು ಮತ್ತಷ್ಟುಹೆಚ್ಚಿಸಲು ಸಹಕಾರಿಯಾಗಿದೆ. ಸಾಂಕ್ರಾಮಿಕದ ಸಮಯದಲ್ಲೂ ನಾವೂ ಸ್ಥಳೀಯ ವ್ಯವಹಾರಗಳನ್ನು ಪ್ರೋತ್ಸಾಹಿಸಿದ್ದೇವೆ ಎಂದು ಬ್ಯಾಂಕ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಅಹ್ಮದ್ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.