Service Charge: ಹೋಟೆಲ್ ನಲ್ಲಿ ಸರ್ವಿಸ್ ಚಾರ್ಜ್ ಕೇಳಿದ್ರೆ ದೂರು ನೀಡಿ; ಹೊಸ ಮಾರ್ಗಸೂಚಿ ಹೊರಡಿಸಿದ ಸಿಸಿಪಿಎ

By Suvarna News  |  First Published Jul 5, 2022, 4:33 PM IST

ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ಆಹಾರದ ಬಿಲ್ ನಲ್ಲಿ ಸೇವಾ ಶುಲ್ಕ ಸೇರಿಸಬಾರದೆಂದು ಕೇಂದ್ರ ಸರ್ಕಾರ ತಿಂಗಳ ಹಿಂದೆ ಹೋಟೆಲ್ ಸಂಘಟನೆಗಳಿಗೆ ತಿಳಿಸಿತ್ತು. ಇದೀಗ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರ ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರ ಅನ್ವಯ ಸೇವಾ ಶುಲ್ಕ ವಿಧಿಸುವ ಹೋಟೆಲ್ ಅಥವಾ ರೆಸ್ಟೋರೆಂಟ್ ವಿರುದ್ಧ ಗ್ರಾಹಕ ದೂರು ನೀಡಬಹುದು. 


ನವದೆಹಲಿ (ಜು.5): ಹೋಟೆಲ್ ಗಳು (Hotels) ಹಾಗೂ ರೆಸ್ಟೋರೆಂಟ್ ಗಳು (Restaurants) ಆಹಾರದ ಬಿಲ್ ನಲ್ಲಿ (Food Bill) ಸೇವಾ ಶುಲ್ಕ (Service charge) ಸೇರ್ಪಡೆಗೊಳಿಸದಂತೆ ಸೂಚಿಸಿ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರ (CCPA) ಮಾರ್ಗಸೂಚಿಗಳನ್ನು (Guidelines) ಹೊರಡಿಸಿದೆ. ಅನ್ಯಾಯದ ವ್ಯಾಪಾರ ಅಭ್ಯಾಸಗಳ ತಡೆ ಹಾಗೂ ಗ್ರಾಹಕರ ಹಕ್ಕುಗಳ (Consumer rights) ಉಲ್ಲಂಘನೆ ದೃಷ್ಟಿಯಿಂದ ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್ ಗಳು ಸೇವಾ ಶುಲ್ಕವನ್ನು ವಿಧಿಸದಂತೆ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸಿಸಿಪಿಎ ಮಾರ್ಗಸೂಚಿಗಳಲ್ಲಿ ಏನಿದೆ?
-ಸಿಸಿಪಿಎ ಮಾರ್ಗಸೂಚಿಗಳ ಪ್ರಕಾರ ಹೋಟೆಲ್ ಗಳು (Hotels) ಹಾಗೂ ರೆಸ್ಟೋರೆಂಟ್ ಗಳು (Restaurants) ಆಹಾರ  ಬಿಲ್ ನಲ್ಲಿ ಸ್ವಯಂಪ್ರೇರಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ. 
*ಬೇರೆ ಯಾವುದೇ ಹೆಸರಿನಲ್ಲಿ ಸೇವಾ ಶುಲ್ಕ ಸಂಗ್ರಹಿಸಬಾರದು. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕನ (Consumer) ಮೇಲೆ ಒತ್ತಡ ಹೇರುವಂತಿಲ್ಲ. ಅಲ್ಲದೆ, ಸೇವಾ ಶುಲ್ಕ ಪಾವತಿಸೋದು ಬಿಡೋದು ಗ್ರಾಹಕರ ಸ್ವಯಂ ನಿರ್ಧಾರ ಅಥವಾ ಆಯ್ಕೆಯಾಗಿದೆ ಎಂದು ಅವರಿಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು.
*ಸೇವಾ ಶುಲ್ಕ ಸಂಗ್ರಹದ ಆಧಾರದಲ್ಲಿ ಗ್ರಾಹಕರ ಪ್ರವೇಶಕ್ಕೆ ನಿರ್ಬಂಧ ಅಥವಾ ಸೇವೆಗಳ ಪೂರೈಕೆಯಲ್ಲಿ ವ್ಯತ್ಯಾಸ ಮಾಡುವಂತಿಲ್ಲ.
*ಆಹಾರ ಬಿಲ್ (Food Bill) ಜೊತೆಗೆ ಸೇರಿಸಿ ಹಾಗೂ ಒಟ್ಟು ಮೊತ್ತಕ್ಕೆ ಜಿಎಸ್ ಟಿ (GST) ವಿಧಿಸಿ ಸೇವಾ ಶುಲ್ಕ ಸಂಗ್ರಹಿಸುವಂತಿಲ್ಲ.

Tap to resize

Latest Videos

ITR: ನೀವು ವಿದೇಶದಲ್ಲಿ ಆಸ್ತಿ ಹೊಂದಿದ್ದೀರಾ? ಹಾಗಾದ್ರೆ ತಪ್ಪದೇ ಐಟಿಆರ್ ಸಲ್ಲಿಕೆ ಮಾಡಿ

ಆನ್ ಲೈನ್ ನಲ್ಲಿ ದೂರು ನೀಡಬಹುದು
ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ನಲ್ಲಿ ಸೇವಾ ಶುಲ್ಕ ವಿಧಿಸಿದರೆ ಗ್ರಾಹಕ (Consumer) ದೂರು (Complaint) ದಾಖಲಿಸಬಹುದು ಎಂದು ಸಿಸಿಪಿಎ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕಗಳನ್ನು ವಿಧಿಸೋದು ಕಂಡುಬಂದರೆ ಗ್ರಾಹಕ ಹೋಟೆಲ್ ಅಥವಾ ರೆಸ್ಟೋರೆಂಟ್ ಮಾಲೀಕರಿಗೆ ಸೇವಾ ಶುಲ್ಕವನ್ನು ಬಿಲ್ ಮೊತ್ತದಿಂದ ತೆಗೆಯುವಂತೆ ಮನವಿ ಮಾಡಬಹುದು.ಅಲ್ಲದೆ, ಗ್ರಾಹಕ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಯಲ್ಲಿ  (NCH) ದೂರು ದಾಖಲಿಸಬಹುದು.  1915 ಸಂಖ್ಯೆಗೆ ಕರೆ ಮಾಡಿ ಅಥವಾ ಎನ್ ಸಿಎಚ್ ಮೊಬೈಲ್ ಅಪ್ಲಿಕೇಷನ್ (NCH mobile app) ಮೂಲಕ ದೂರು (Complaint) ದಾಖಲಿಸಬಹುದು.

ಇ-ಕಂಪ್ಲೇಂಟ್ ದಾಖಲಿಸಬಹುದು
ಗ್ರಾಹಕ ಅನ್ಯಾಯದ ವ್ಯಾಪಾರ ಅಭ್ಯಾಸಗಳ ವಿರುದ್ಧ ಗ್ರಾಹಕರ ಆಯೋಗಕ್ಕೆ (Consumer Commission) ದೂರು ದಾಖಲಿಸಲು ಅವಕಾಶವಿದೆ. ಇ-ದಾಖಿಲ್ ಪೋರ್ಟಲ್ www.e-daakhil.nic.in ನಲ್ಲಿ ಇ-ದೂರು ದಾಖಲಿಸಬಹುದು. ಇದ್ರಿಂದ ತ್ವರಿತ ವಿಚಾರಣೆ ಹಾಗೂ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ, ಜಿಲ್ಲಾಧಿಕಾರಿಗೆ ಕೂಡ ಈ ಬಗ್ಗೆ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಬಹುದು. ಇನ್ನು ಸಿಸಿಪಿಎಗೆ ನೇರವಾಗಿ (com-ccpa@nic.in.) ಇ-ಮೇಲ್ ಮಾಡುವ ಮೂಲಕ ದೂರು ನೀಡಬಹುದು. 

ಉಡುಪಿ: ಬಣ್ಣದ ಬಲೆಗಳೇ ಮೀನುಗಾರರಿಗೆ ಮಳೆಗಾಲದ ಬದುಕು..!

ಸರ್ಕಾರದ ಸಭೆಯ ತಿಂಗಳ ಬಳಿಕ ನಿರ್ಧಾರ
ರೆಸ್ಟೋರೆಂಟ್ ಗಳು (Restaurants) ಗ್ರಾಹಕರಿಗೆ (Customers) ಸೇವಾ ಶುಲ್ಕ (Service Charge) ವಿಧಿಸುತ್ತಿರುವುದು ಕಾನೂನುಬಾಹಿರವಾಗಿದ್ದು, ಇದನ್ನು ತಕ್ಷಣ ನಿಲ್ಲಿಸುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ (Consumer Affairs Department) ಜೂನ್ ಮೊದಲ ವಾರ ಹೋಟೆಲ್ ಗಳು  (Hotels) ಹಾಗೂ ರೆಸ್ಟೋರೆಂಟ್ಗಳ (Restaurants) ಸಂಘಟನೆಗಳಿಗೆ ಸೂಚಿಸಿತ್ತು. ಈ ಸಂಬಂಧ ಸರ್ಕಾರದ ಪ್ರತಿನಿಧಿಗಳು ಹಾಗೂ ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್ ಗಳ ಸಂಘಟನೆಗಳ ಸಭೆ ನಡೆದಿತ್ತು. 

click me!