ಸೆನ್ಸೆಕ್ಸ್‌ 593 ಅಂಕ ನೆಗೆತ: ಮೊದಲ ಬಾರಿ 55 ಸಾವಿರದ ಮೈಲಿಗಲ್ಲು

By Kannadaprabha NewsFirst Published Aug 14, 2021, 11:58 AM IST
Highlights
  • ಸೆನ್ಸೆಕ್ಸ್‌ 55 ಸಾವಿರದ ಮೈಲಿಗಲ್ಲು
  • 593 ಅಂಕ ನೆಗೆತ, 55437ಕ್ಕೆ ಅಂತ್ಯ
  • ನಿಫ್ಟಿಕೂಡ 16543 ಅಂಕಕ್ಕೆ ಏರಿ ದಾಖಲೆ
  • ಹೂಡಿಕೆದಾರರ ಸಂಪತ್ತು 3.48 ಲಕ್ಷ ಕೋಟಿ ರು. ವೃದ್ಧಿ

ಮುಂಬೈ(ಆ.14): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ‘ಸೆನ್ಸೆಕ್ಸ್‌’ ಶುಕ್ರವಾರ ಮೊಟ್ಟಮೊದಲ ಬಾರಿಗೆ ಭರ್ಜರಿ 55,000 ಅಂಕಗಳ ಗಡಿ ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಇದರೊಂದಿಗೆ ಹೂಡಿಕೆದಾರರ ಸಂಪತ್ತು ಒಂದೇ ದಿನ 3.48 ಲಕ್ಷ ಕೋಟಿ ರು.ನಷ್ಟುವೃದ್ಧಿಸಿದೆ.

ಶುಕ್ರವಾರ ಭರ್ಜರಿ 593.31 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್‌ ದಿನದಂತ್ಯಕ್ಕೆ 55,437.29 ಅಂಕಗಳೊಂದಿಗೆ ಅಂತ್ಯಗೊಂಡಿತು. ಸೆನ್ಸೆಕ್ಸ್‌ ಒಂದು ಹಂತದಲ್ಲಿ ದಿನದ ಗರಿಷ್ಠ 55,487.79 ಅಂಕದವರೆಗೆ ಮೇಲೇರಿತ್ತು. ಆದರೆ ಆ ನಂತರ ಕೆಲ ಅಂಕಗಳ ಕುಸಿತ ಕಂಡಿತು.

ಷೇರುಪೇಟೆ ಮೌಲ್ಯವೀಗ 219 ಲಕ್ಷ ಕೋಟಿ ರು.!

ಇನ್ನು ಅದೇ ರೀತಿ ರಾಷ್ಟ್ರೀಯ ಸಂವೇದಿ ಸೂಚ್ಯಂಕವಾದ ನಿಫ್ಟಿ164.70 ಅಂಕಗಳ ಏರಿಕೆಯೊಂದಿಗೆ 16,543.60 ಅಂಕಗಳಿಗೆ ಜಿಗಿತ ಕಂಡಿತು. ಇದರೊಂದಿಗೆ ಇದೇ ಮೊದಲ ಬಾರಿಗೆ ನಿಫ್ಟಿ16,500 ಅಂಕಗಳ ಗಡಿ ದಾಟಿದಂತಾಯಿತು. ಶುಕ್ರವಾರ ನಿಫ್ಟಿಒಂದು ಹಂತದಲ್ಲಿ 16,543.60ಕ್ಕೆ ಏರಿಕೆಯಾಗಿ, ಬಳಿಕ ಕೊಂಚ ಕುಸಿತ ದಾಖಲಿಸಿತ್ತು.

ವಿದೇಶೀ ಷೇರುಪೇಟೆಗಳ ಚೇತರಿಕೆಯೇ ಭಾರತದ ಷೇರುಪೇಟೆ ಜಿಗಿತಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದರಿಂದಾಗಿ ಬಾಂಬೆ ಷೇರುಪೇಟೆಯಲ್ಲಿ ನೋಂದಾಯಿತವಾದ ಕಂಪನಿಗಳ ಸಂಪತ್ತು 3.48 ಲಕ್ಷ ಕೋಟಿ ರು. ವೃದ್ಧಿಯಾಗಿದ್ದು, ಈವರೆಗಿನ ಗರಿಷ್ಠ 2,40,23,280.14 ಕೋಟಿ ರು.ಗೆ ಜಿಗಿದಿದೆ.

ಸೆನ್ಸೆಕ್ಸ್‌ ಸಾಗಿ ಬಂದ ಹಾದಿ
ದಿನಾಂಕ ಅಂಕದ ಮೈಲಿಗಲ್ಲು
ಜು.25, 1990 1000
ಅ.11, 1999 5000
ಫೆ.7, 2006 10000
ಡಿ.11, 2007 20000
ಮೇ 16, 2014 25000
ಮಾ.4, 2015 30000
ಮೇ 23, 2019 40000
ಡಿ.4, 2020 45000
ಜ.22, 2021 50000
ಜು.13, 2021 55000

 

click me!